• Home
  • »
  • News
  • »
  • state
  • »
  • Book Launch: ಟಿಪ್ಪು ಕ್ರೂರಿ, ಆತನ ಜಯಂತಿ ಯಾಕೆ ಮಾಡ್ಬೇಕು? ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ಮಾಡಿ S L ಭೈರಪ್ಪ ಭಾಷಣ

Book Launch: ಟಿಪ್ಪು ಕ್ರೂರಿ, ಆತನ ಜಯಂತಿ ಯಾಕೆ ಮಾಡ್ಬೇಕು? ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ಮಾಡಿ S L ಭೈರಪ್ಪ ಭಾಷಣ

ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆ

ನಂದಿ ಬೆಟ್ಟದಲ್ಲಿ ಟಿಪ್ಪು ಡ್ರಾಪ್ ಅಂತ ಜಾಗ ಇದೆ. ಅಲ್ಲಿಂದ ಜನರ ಕೈ ಕಾಲು, ಗೋಣಿ ಚೀಲಕ್ಕೆ ಕಟ್ಟಿ ಬೆಟ್ಟದಿಂದ ಎಸೆಯುತ್ತಿದ್ದರು. ಟಿಪ್ಪು ಎಷ್ಟು ಕ್ರೂರಿ ಎಂದು ನೀವು ಅರ್ಥ ಮಾಡಿಕೊಳ್ಳಿ ಎಂದು ಟಿಪ್ಪು ವಿರುದ್ಧ ಭೈರಪ್ಪ ಕಿಡಿಕಾರಿದ್ರು.

  • News18 Kannada
  • Last Updated :
  • Karnataka, India
  • Share this:

ಮೈಸೂರು (ನ.13) : ರಂಗಾಯಣದ ಭೂಮಿಗೀತಾ ಸಭಾಂಗಣದಲ್ಲಿ ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ (Book Launch) ಕಾರ್ಯಕ್ರಮ ನಡೆಯಿತು. ರಾಷ್ಟ್ರೋಜ ಹಿರಿಯ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ (SL Bhairappa) ಕೃತಿ ಬಿಡುಗಡೆ ಮಾಡಿದ್ರು. ಈ ವೇಳೆ  ಸಂಸದ ಪ್ರತಾಪ್ ಸಿಂಹ, ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಸಾಮಾಜಿಕ ಚಿಂತಕ ವಾದಿರಾಜ್ ಉಪಸ್ಥಿತರಿದ್ರು. ಪುಸ್ತಕ ಬಿಡುಗಡೆ ಬಳಿಕ ಮಾತಾಡಿದ ಭೈರಪ್ಪ, ಪ್ರತಾಪ್ ಸಿಂಹ ಬಗ್ಗೆ ಕೊಂಡಾಡಿದ್ದಾರೆ. ಪ್ರತಾಪ್ ಸಿಂಹ (Pratap Simha) ಅತ್ಯುತ್ತಮ ಸಂಸದ. ಅವರಂತೆ ಕೆಲಸ ಮಾಡುವ ಬೇರೆಯವರನ್ನು ನಾನು ನೋಡಿಲ್ಲ ಎಂದಿದ್ದಾರೆ.


ಟಿಪ್ಪು ಕನ್ನಡ ವಿರೋಧಿ


ಟಿಪ್ಪು ಬಗ್ಗೆ ಚರ್ಚೆ ಶುರುವಾಗಿದ್ದು ಮಾಜಿ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ ಅವರ ಹೇಳಿಕೆಯ ನಂತರ, ಟಿಪ್ಪು ಕನ್ನಡ ವಿರೋಧಿ ಆಗಿದ್ದ ಅಂತ ಡಿ.ಎಚ್. ಶಂಕರಮೂರ್ತಿ ಹೇಳಿದ್ದರು. ಒಡೆಯರ್ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು. ಆದರೆ ಟಿಪ್ಪು ಸುಲ್ತಾನ್ ಆಡಳಿತ ಭಾಷೆ ಪರ್ಷಿಯನ್ ಆಗಿತ್ತು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಪದಗಳನ್ನು ಖಾತೆ, ಕಿರ್ದಿ, ತರಿ, ಖುಷ್ಕಿ, ತಹಸೀಲ್ದಾರ್, ಶಿರಸ್ತೇದಾರ್ ಅಂತ ಬದಲಿಸಿದ ಎಂದು ಭೈರಪ್ಪ ಹೇಳಿದ್ದಾರೆ.


ಅನೇಕ ಸ್ಥಳಗಳ ಹೆಸರು ಬದಲಿಸಿದ್ದ ಟಿಪ್ಪು


ಬ್ರಹ್ಮಪುರಿ- ಸುಲ್ತಾನ್ ಪೇಟ್​, ಕಾಳಿಕೋಟೆ (ಕಲ್ಲಿಕೋಟೆ)- ಫೂರಕಬಾದ್, ದೇವನಹಳ್ಳಿ- ಯೂಸುಫಾಖಾನ್, ಮೈಸೂರು- ನಜರ್‌ಬಾದ್
ಸಂಕ್ರೀದುರ್ಗ- ಮುಜರಾಬಾದ್ , ಸಕಲೇಶಪುರ- ಮಂಜರಾಬಾದ್ ಆಗಿ ಬದಲಾಗಿದೆ ಇದೆಲ್ಲವೂ ಟಿಪ್ಪುವಿನ ಅನ್ಯಮತ ಸಹಿಷ್ಣುತೆಯನ್ನು ತೋರಿಸುತ್ತವೆ ಎಂದು ಭೈರಪ್ಪ ಹೇಳಿದ್ದಾರೆ.


ಬಿಡುಗಡೆ


ಊರಿನ ಹೆಸರು ಆ ಊರಿನ ನಂಬಿಕೆಯನ್ನು ತೋರಿಸುತ್ತದೆ.
ಶ್ರೀರಂಗನ ಕಾರಣಕ್ಕೆ, ಅಲ್ಲಿನ ಸಂಸ್ಕೃತಿಗೆ ಶ್ರೀರಂಗಪಟ್ಟಣ ಅಂತ ಹೆಸರು ಬಂದಿದೆ. ಹೊಸ ಹೆಸರು ಇಟ್ಟರೆ ಹೊಸ ನಂಬಿಕೆ, ಧರ್ಮ ಸ್ಥಾಪನೆ ಮಾಡಿದಂತೆ ಎಂದು ಹೇಳಿದ್ರು.


ಇದು ಕನ್ನಡಕ್ಕೆ ಮಾತ್ರ ಸಮಸ್ಯೆಯಲ್ಲ


ಇದು ಕನ್ನಡಕ್ಕೆ ಮಾತ್ರವಲ್ಲ, ಭಾರತಕ್ಕೆ ಎದುರಾಗಿರುವ ಸಮಸ್ಯೆ
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದ ಮೇಲೆ ಸಂಸತ್ತಿನಲ್ಲಿ ಭಾಷಣ ಮಾಡಿದರು. ನಾವು ಬರೆದ ಸಂವಿಧಾನವನ್ನು ಯಾರು, ಹೇಗೆ ಜಾರಿಗೆ ತರುತ್ತಾರೆ ಎಂಬುದರ ಮೇಲೆ ನಿಂತಿದೆ ಅಂತ ಹೇಳಿದ್ದರು.


ಹಿಂದೂಗಳು ರಾಷ್ಟ್ರ ಎಂದರೆ ಮಾತೃಭೂಮಿ ಅಂತಾರೆ. ಮುಸಲ್ಮಾನರ ರಾಷ್ಟ್ರದ ಪರಿಕಲ್ಪನೆ ಎಂಥದ್ದು ಎಂದು ಡಾ.ಅಂಬೇಡ್ಕರ್ ಭಾಷಣ ಮಾಡಿದ್ದರು. ಪಾಕಿಸ್ತಾನ ಕೊಟ್ಟು ಬಿಡುವುದು ಸರಿ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ನಾಯಕತ್ವದಲ್ಲಿ ದೇವರು ಒಬ್ಬನೆ ಎಂಬ ಆದರ್ಶದ ಕಲ್ಪನೆಯಲ್ಲಿ ನಾವು ವಿಭಜನೆ ಮಾಡಿಕೊಂಡೆವು ಎಂದು ಭೈರಪ್ಪ ಹೇಳಿದ್ದಾರೆ.


ಮುಸಲ್ಮಾನರ ಮನಸ್ಥಿತಿ ಬದಲಾಗಿಲ್ಲ


ನಮ್ಮಲ್ಲಿ ಇರುವ ಮುಸಲ್ಮಾನರ ಮನಸ್ಥಿತಿ ಬದಲಾಗಿಲ್ಲ. ಬಾಬ್ರಿ ಮಸೀದಿ, ಬನಾರಸ್ ವಿಚಾರದಲ್ಲಿ ಯಾಕೆ ವಿರೋಧ ಮಾಡುತ್ತಾರೆ? ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ ಅಂತ ಯಾಕೆ ಹೆಸರು ಇಟ್ಟರು.‌ ಈಗ ತೆಗೆದಾಗ ಯಾಕೆ ವಿರೋಧ ಮಾಡುತ್ತಿದ್ದಾರೆ? ಅಬ್ದುಲ್ ಕಲಾಂ ಹೆಸರು ಇಟ್ಟಿದ್ದರೆ ವಿರೋಧ ಮಾಡುತ್ತಿರಲಿಲ್ಲ. ಕಲಾಂ ಹೆಸರು ಇಡಲು ಅವರಿಗೆ ಇಷ್ಟ ಆಗುತ್ತಿರಲಿಲ್ಲ,
ಟಿಪ್ಪು ನಮ್ಮ ಹೀರೋ ಅಂತ ಹೇಳ್ತಾರೆ. ಈ ಮಾನಸಿಕತೆ ಬದಲಾಗಿಲ್ಲ ಎಂಬುದಕ್ಕೆ ಇದು ಉದಾಹರಣೆ ಅಷ್ಟೆ ಎಂದು ಹೇಳಿದ್ರು.


ಟಿಪ್ಪು ಮಾಡಿದ ಕೆಲಸ ನೆನೆದ್ರೆ ಭಯವಾಗುತ್ತೆ?


ಕೆಂಪೇಗೌಡರ 108 ಅಡಿಯ ಪ್ರತಿಮೆ ಮಾಡಿದ್ರು, ಕೆಂಪೇಗೌಡರು ಸಣ್ಣ ರಾಜ್ಯವಾದರೂ ದೊಡ್ಡ ನಗರ ಆಗುತ್ತೆ ಅಂತ ಬೆಂಗಳೂರು ಬೆಳೆಸಿದರು. ಅವರದ್ದು ಮಾಡಿದ್ದಾರಲ್ಲ 'ಅಮಾರ' ಅಂತ ಅಷ್ಟೆ. ಟಿಪ್ಪು ಸುಲ್ತಾನ್ 100 ಅಡಿ ಪ್ರತಿಮೆ ಮಾಡುತ್ತೇವೆ ಅಂತಾರೆ. ಇವರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಟಿಪ್ಪು ಸುಲ್ತಾನ್ ಆನೆ ಕಾಲಿಗೆ ಕಟ್ಟಿ ಜನರನ್ನು ಎಳೆದುಕೊಂಡ ಬಂದ ಅಂತ ನೆನಪಿಸಿಕೊಂಡರೆ ಭಯ ಆಗುತ್ತೆ.


ಇದನ್ನೂ ಓದಿ:Murder: ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ಎದೆಗೆ ಚಾಕು ಚುಚ್ಚಿ ಕೊಂದ ರೌಡಿ!


ನಂದಿ ಬೆಟ್ಟದಲ್ಲಿ ಟಿಪ್ಪು ಡ್ರಾಪ್ ಅಂತ ಜಾಗ ಇದೆ. ಅಲ್ಲಿಂದ ಜನರ ಕೈ ಕಾಲು, ಗೋಣಿ ಚೀಲಕ್ಕೆ ಕಟ್ಟಿ ಬೆಟ್ಟದಿಂದ ಎಸೆಯುತ್ತಿದ್ದರು. ಟಿಪ್ಪು ಎಷ್ಟು ಕ್ರೂರಿ ಎಂದು ನೀವು ಅರ್ಥ ಮಾಡಿಕೊಳ್ಳಿ ಎಂದು ಟಿಪ್ಪು ವಿರುದ್ಧ ಕಿಡಿಕಾರಿದ್ರು. ಪ್ರಜಾಪ್ರಭುತ್ವ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದರೆ ವೋಟಿಗಾಗಿ ಹೆತ್ತ ತಾಯಿಯನ್ನು ಜುಟ್ಟು ಹಿಡಿದುಕೊಂಡು ಒಪ್ಪಿಸಿ ಬಿಡುವಂತಾಗಿದೆ ಎಂದು ಭೈರಪ್ಪ ಕಿಡಿಕಾರಿದ್ರು.

Published by:ಪಾವನ ಎಚ್ ಎಸ್
First published: