ಶಿವಮೊಗ್ಗ: ನಗರದಲ್ಲಿ ವೀರ್ ಸಾವರ್ಕರ್ (Veer Savarkar) ಫೋಟೋ ವಿವಾದ ಜಿಲ್ಲೆಯಲ್ಲಿ ಶಾಂತಿ ಕದಡಲು ಕಾರಣವಾಗಿತ್ತು. ಇನ್ನಷ್ಟೇ ಪರಿಸ್ಥಿತಿ ಶಾಂತವಾಗುತ್ತಿದೆ ಎಂದುಕೊಳ್ಳುತ್ತಿರುವ ವೇಳೆಯೇ ಟಿಪ್ಪು ಫೋಟೋ (Tipu Sultan) ವಿವಾದ ಮುನ್ನೆಲೆಗೆ ಬಂದಿದೆ. ಮಹಾನಗರ ಪಾಲಿಕೆಯ 25ನೇ ವಾರ್ಡ್ ಸದಸ್ಯೆ ಮೆಹಕ್ ಶರೀಫ್ ಪಾಲಿಕೆ ತಮ್ಮ ಕೊಠಡಿಯಲ್ಲಿ ಫೋಟೋ ಅಳವಡಿಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದರು. ನಿನ್ನೆಯಷ್ಟೇ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಮೆಹಕ್, ಪದಗ್ರಹಣ ಮಾಡಿದ್ದರು. ಸಮಾರಂಭದ ನಂತರ ಮೆಹಕ್ ಪತಿ ಎಂ.ಡಿ ಶರೀಫ್ ಹಾಗೂ ಆತನ ಸ್ನೇಹಿತರು ಕೊಡುಗೆಯಾಗಿ ನೀಡಿದ ಟಿಪ್ಪು ಸುಲ್ತಾನ್ ಫೋಟೋವನ್ನು ತಮ್ಮ ಚೇಂಬರ್ ನಲ್ಲಿ ಗಾಂಧೀಜಿ (Mahatma Gandhi), ಅಂಬೇಡ್ಕರ್ (BR Ambedkar) ಭಾವಚಿತ್ರದ ಅನತಿ ದೂರದಲ್ಲಿ ಹಾಕಿದ್ದರು.
ಟಿಪ್ಪು ಫೋಟೋ ಅಳವಡಿಕೆ ಮಾಡಿದ್ದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದವು. ಇದರಿಂದ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು ಇಂದು ಟಿಪ್ಪು ಸುಲ್ತಾನ್ ಫೋಟೋವನ್ನು ತೆರವು ಮಾಡಿದ್ದಾರೆ.
ಇದನ್ನೂ ಓದಿ: Midday Meal: 'ಬಾಳೆಹಣ್ಣು, ಚಿಕ್ಕಿ ಬೇಡ ಮೊಟ್ಟೆ ಬೇಕು'- ಶಿಕ್ಷಣ ಇಲಾಖೆಯ ಸರ್ವೆಯಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಬಹಿರಂಗ!
ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ
ಪಾಲಿಕೆ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಅಳವಡಿಕೆ ವಿಚಾರವಾಗಿ ಇಂದು ಪ್ರತಿಭಟನೆ ನಡೆಸಿದ ಬಜರಂಗದಳ ಕಾರ್ಯಕರ್ತರು, ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ್ದರು. ಜಿಹಾದಿಗಳು ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆಂದು ಘೋಷಣೆ ಕೂಗಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಕೋಮುವಾದಿಗಳಿಗೆ, ಜಿಹಾದಿಗಳಿಗೆ ಜೈಲಿಗಟ್ಟಲು ಆಗ್ರಹಿಸಿದರು.
ಹಿಂದೂ ವಿರೋಧಿ, ಮತಾಂಧ, ಕನ್ನಡ ವಿರೋಧಿ ಟಿಪ್ಪು ಭಾವಚಿತ್ರ ಅಳವಡಿಕೆ ಮಾಡಿದ್ದಾರೆ. ಆ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಗರದಲ್ಲಿ ಮೆಹೆಕ್ ಪತಿ ಶರೀಫ್ ಅಶಾಂತಿ ಉಂಟಾಗಲು ಕಾರಣನಾಗಿದ್ದ. ಆ ವೇಳೆ ಶರೀಫ್ ಜೈಲುಪಾಲಾಗಿದ್ದ.
ಈಗ ಮತ್ತೆ ಶಾಂತಿ ಕದಡಲು ಟಿಪ್ಪು ಭಾವಚಿತ್ರ ಅಳವಡಿಕೆಗೆ ಕಾರಣನಾಗಿದ್ದಾನೆ. ನಗರದಲ್ಲಿ ಕೋಮು ದಳ್ಳುರಿ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾನೆ. ಈಗ ಜಾಮೀನಿನ ಮೇರೆಗೆ ಹೊರ ಬಂದಿರುವ ಆತ ಮತ್ತೆ ಕೋಮು ದಳ್ಳುರಿ ಉಂಟು ಮಾಡಲು ಮುಂದಾಗಿದ್ದಾನೆ. ಹೀಗಾಗಿ ಶರೀಫ್ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ ಜೈಲಿಗಟ್ಟಬೇಕು ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
Handed over the Chadar which would be offered on the Urs of Khwaja Moinuddin Chishti at the Ajmer Sharif Dargah. pic.twitter.com/dlLgPKxDWd
— Narendra Modi (@narendramodi) January 24, 2023
ಅಜ್ಮೀರ್ ದರ್ಗಾದಲ್ಲಿ (Ajmer Dargah) 811ನೇ ಉರುಸ್ ಪ್ರಾರಂಭವಾಗಿದೆ. ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್ (Khwaja Moinuddin Chishti) ಸಂದರ್ಭದಲ್ಲಿ ಅರ್ಪಿಸಲು ಚಾದರ್ವೊಂದನ್ನ (Chadar) ಪ್ರತಿಬಾರಿಯಂತೆ ಈ ಬಾರಿ ಕೂಡ ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ (Smriti Irani ) ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದೀಖಿ (Jamal Siddiqui), ಸಂಪ್ರದಾಯದಂತೆ ಚಾದರ್ ಸ್ವೀಕಾರ ಮಾಡಿದ್ದಾರೆ. ಚಾದರ್ ಹಸ್ತಾಂತರಿಸಿರುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ