• Home
  • »
  • News
  • »
  • state
  • »
  • Tippu Nija Kanasugalu: ಪುತ್ತೂರಿನಲ್ಲಿ ಇಂದು ವಿವಾದಿತ 'ಟಿಪ್ಪು ನಿಜ ಕನಸುಗಳು' ನಾಟಕ; ಎಸ್​ಡಿಪಿಐನಿಂದ ವಿರೋಧ

Tippu Nija Kanasugalu: ಪುತ್ತೂರಿನಲ್ಲಿ ಇಂದು ವಿವಾದಿತ 'ಟಿಪ್ಪು ನಿಜ ಕನಸುಗಳು' ನಾಟಕ; ಎಸ್​ಡಿಪಿಐನಿಂದ ವಿರೋಧ

ಟಿಪ್ಪು ನಿಜಕನಸುಗಳು

ಟಿಪ್ಪು ನಿಜಕನಸುಗಳು

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪ್ರದರ್ಶನಗೊಳ್ಳಲಿದೆ. ವಿವೇಕಾನಂದ ಕಾಲೇಜಿನಲ್ಲಿ ನಾಟಕ ಪ್ರದರ್ಶನಗೊಳ್ಳಲಿದ್ದು, ಈ ನಡುವೆಯೇ ನಾಟಕ ಪ್ರದರ್ಶನ ಮಾಡಬಾರದು ಎಂದು ಎಸ್​ಡಿಪಿಎಫ್ ವಿರೋಧ ವ್ಯಕ್ತಪಡಿಸಿದೆ.

  • Share this:

ಮಂಗಳೂರು: ರಂಗಾಯಣ ಸಂಸ್ಥೆ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda C Karyappa ) ಅವರ ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆಯ ಸಂದರ್ಭದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಕೃತಿಯ ಆಧಾರವಾಗಿ ಬಳಿಕ ರಂಗಪ್ರದರ್ಶವನ್ನು ಏರ್ಪಡಿಸಲಾಗಿತ್ತು. ಸದ್ಯ ರಾಜ್ಯದಲ್ಲಿ ಇದುವರೆಗೂ 20 ಕಡೆಗಳಲ್ಲಿ ಪ್ರದರ್ಶನಗೊಂಡಿರುವ ಟಿಪ್ಪು ನಿಜ ಕನಸುಗಳು ನಾಟಕ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ(Dakshina Kannada, Puttur) ಪ್ರದರ್ಶನಗೊಳ್ಳಲಿದೆ. ವಿವೇಕಾನಂದ ಕಾಲೇಜಿನಲ್ಲಿ (Vivekananda College) ನಾಟಕ ಪ್ರದರ್ಶನಗೊಳ್ಳಲಿದ್ದು, ಈ ನಡುವೆಯೇ ನಾಟಕ ಪ್ರದರ್ಶನ ಮಾಡಬಾರದು ಎಂದು ಎಸ್​ಡಿಪಿಎಫ್ (SDPI)​ ವಿರೋಧ ವ್ಯಕ್ತಪಡಿಸಿದೆ. ಆದರೆ ಇದು ಸತ್ಯ ಇತಿಹಾಸ, ಅದಕ್ಕೆ ಸಾಕ್ಷಿಗಳನ್ನು ಕೊಡಬಲ್ಲೆವು. ಈಗಾಗಲೇ ರಾಜ್ಯದ ಹಲವು ಕಡೆ ನಾಟಕ ಪ್ರದರ್ಶನ ಮಾಡಿದ್ದು, ಸಂಜೆ 6 ಗಂಟೆಗೆ ವಿವೇಕಾನಂದ ಕಾಲೇಜು ವಠಾರದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಕಾರ್ಯಪ್ಪ ಮಾಹಿತಿ ನೀಡಿದ್ದಾರೆ.


ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಅಡ್ಡಂಡ ಸಿ.ಕಾರ್ಯಪ್ಪ ಅವರು, ಟಿಪ್ಪು ಸುಲ್ತಾನ್ ಚರಿತ್ರೆ ಕುರಿತು ಸತ್ಯದ ಅನಾವರಣ ಮಾಡುವುದು. ಟಿಪ್ಪುವಿನ ಇನ್ನೊಂದು ಮುಖವನ್ನು ಜನತೆಗೆ ಪರಿಚಯ ಮಾಡುವುದು ಟಿಪ್ಪು ನಿಜ ಕನಸುಗಳು ನಾಟಕದ ಉದ್ದೇಶವಾಗಿದೆ. ಆದರೆ ಇದನ್ನು ಕೆಲವರಿ ವಿರೋಧ ಮಾಡ್ತಿದ್ದಾರೆ. ಕೆಲವರಿ ನ್ಯಾಯಾಲಯಕ್ಕೂ ಹೋಗಿದ್ದಾರೆ. ಏನಾದರೂ ಮಾಡಿಕೊಳ್ಳಿ, ಆದರೆ ನಾನು ಹೇಳಿದ್ದು ಎಲ್ಲಾ ಸತ್ಯ. ಈ ನಾಟಕ ರಂಗಭೂಮಿಯಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: Siddu Nija Kanasugalu: ಇಂದು ಬಿಜೆಪಿಯಿಂದ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ; ಕಾಂಗ್ರೆಸ್​ನಿಂದ ದೂರು ದಾಖಲು


ಟಿಪ್ಪುವನ್ನು ವೈಭವೀಕರಿಸಲಾಗಿದೆ


ಇತಿಹಾಸದಲ್ಲಿ ಟಿಪ್ಪುವನ್ನು ವೈಭವೀಕರಿಸಿ ಹೇಳಿದ್ದಾರೆ. ಶಾಲೆಯ ಪಠ್ಯದಲ್ಲಿ ಕಾರಣ ನಾವು ಅದನ್ನು ಓದಲೇ ಬೇಕಾಯ್ತು. ಆದರೆ ಈ ನಾಟಕ ಟಿಪ್ಪು ವಿಚಾರದ ಸತ್ಯ ಅಂಶಗಳ ಅನಾವರಣವಾಗಿದೆ. ವೈಭವೀಕರಣವನ್ನು ದೂರ ಮಾಡಿ ಸತ್ಯವನ್ನು ತಿಳಿಸುವುದೇ ನಾಟಕ ಉದ್ದೇಶವಾಗಿದೆ. ಟಿಪ್ಪು ಪರ ಹಾಗೂ ವಿರೋಧದ ಪುಸ್ತಕಗಳನ್ನು ಅಧ್ಯಯನ ಮಾಡಿ ಹಾಗೂ ಟಿಪ್ಪು ಬರೆದ ಪತ್ರಗಳನ್ನು ಆಧರಿಸಿ ನಾಟಕವನ್ನು ರಚಿಸಿದ್ದೇನೆ. ಮೂರು ಗಂಟೆಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ. ರಂಗಾಯಣದ 40 ಮಂದಿಯ ತಂಡ ಟಿಪ್ಪು ಚರಿತ್ರೆ ಸತ್ಯವನ್ನು ಸಾರುವ ನಾಟಕವನ್ನು ಪ್ರದರ್ಶನ ಮಾಡಲಿದೆ ಎಂದು ತಿಳಿಸಿದ್ದಾರೆ.


ನಾಟಕ ಪ್ರದರ್ಶನಕ್ಕೆ ಎಸ್​ಡಿಪಿಐ ವಿರೋಧ


ಇನ್ನು, ವಿವಾದಿತ ಟಿಪ್ಪು ಸುಲ್ತಾನ್ ನಾಟಕ ಪ್ರದರ್ಶನಕ್ಕೆ ಎಸ್​ಡಿಪಿಐ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದೆ.


ಇದನ್ನೂ ಓದಿ: Siddaramaiah: ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ; ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ


ಈ ಕುರಿತಂತೆ ಮಾತನಾಡಿರುವ ಎಸ್​ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್​​ ಕಡಂಬು, ದಕ್ಷಿಣ ಕನ್ನಡ ಈಗಷ್ಟೇ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಇಂತಹ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸವ ಯಾವುದೇ ವಿಚಾರಕ್ಕೂ ಅವಕಾಶ ನೀಡಬಾರದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಟಿಪ್ಪುವನ್ನು ಅವಹೇಳನ ಮಾಡಿರುವ ನಾಟಕವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರದರ್ಶನ ಮಾಡಲು ಅವಕಾಶ ಕೊಡಬಾರದು. ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುವಿಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.


'ಟಿಪ್ಪುವಿನ ನಿಜ ಕನಸುಗಳು' ನಾಟಕ ಪ್ರದರ್ಶಿಸದಂತೆ ತಡೆ ನೀಡಬೇಕು


ಈ ಬಗ್ಗೆ ಟ್ವೀಟ್ ಮಾಡಿರುವ  ರಿಯಾಝ್​​ ಕಡಂಬು ಅವರು, ದೇಶಪ್ರೇಮಿ ಟಿಪ್ಪು ಸುಲ್ತಾನ್ ವಿರುದ್ಧ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜ ಕನಸುಗಳು ಎಂಬ ವಿವಾದಿತ ನಾಟಕವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಯುತ್ತಿದೆ. ಅದನ್ನು ಪ್ರದರ್ಶಿಸದಂತೆ ತಡೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.


ಟಿಪ್ಪು ನಿಜಕನಸುಗಳು


ಇನ್ನು, ರಂಗಾಯಣದ ಭೂಮಿಗೀತಾ ಸಭಾಂಗಣದಲ್ಲಿ ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ಮಾತನಾಡಿದ್ದ ರಾಷ್ಟ್ರೋಜ ಹಿರಿಯ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ಅವರು, ಒಡೆಯರ್ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು. ಆದರೆ ಟಿಪ್ಪು ಸುಲ್ತಾನ್ ಆಡಳಿತ ಭಾಷೆ ಪರ್ಷಿಯನ್ ಆಗಿತ್ತು.


ಕಂದಾಯ ಇಲಾಖೆಗೆ ಸಂಬಂಧಪಟ್ಟ ಪದಗಳನ್ನು ಖಾತೆ, ಕಿರ್ದಿ, ತರಿ, ಖುಷ್ಕಿ, ತಹಸೀಲ್ದಾರ್, ಶಿರಸ್ತೇದಾರ್ ಅಂತ ಬದಲಿಸಿದ್ದ. ಬ್ರಹ್ಮಪುರಿ- ಸುಲ್ತಾನ್ ಪೇಟ್​, ಕಾಳಿಕೋಟೆ (ಕಲ್ಲಿಕೋಟೆ)- ಫೂರಕಬಾದ್, ದೇವನಹಳ್ಳಿ- ಯೂಸುಫಾಖಾನ್, ಮೈಸೂರು- ನಜರ್‌ಬಾದ್, ಸಂಕ್ರೀದುರ್ಗ- ಮುಜರಾಬಾದ್, ಸಕಲೇಶಪುರ- ಮಂಜರಾಬಾದ್ ಆಗಿ ಬದಲಾಗಿದೆ ಇದೆಲ್ಲವೂ ಟಿಪ್ಪುವಿನ ಅನ್ಯಮತ ಸಹಿಷ್ಣುತೆಯನ್ನು ತೋರಿಸುತ್ತವೆ ಎಂದು ಭೈರಪ್ಪ ಹೇಳಿದ್ದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು