• Home
  • »
  • News
  • »
  • state
  • »
  • Tipu Jayanti: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ; ಪ್ರಮೋದ್ ಮುತಾಲಿಕ್ ಸೇರಿ ಅನೇಕರ ಬಂಧನ

Tipu Jayanti: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ; ಪ್ರಮೋದ್ ಮುತಾಲಿಕ್ ಸೇರಿ ಅನೇಕರ ಬಂಧನ

ಟಿಪ್ಪು ಜಯಂತಿ ಆಚರಣೆ

ಟಿಪ್ಪು ಜಯಂತಿ ಆಚರಣೆ

ಪರ -ವಿರೋಧದ ನಡುವೆಯೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಜಯಂತಿಗೆ ಅಡ್ಡಿಪಡಿಸಲು ಯತ್ನಿಸಿದ ಮುತಾಲಿಕ್ ಮತ್ತಿತರರನ್ನು ಬಂಧಿಸಲಾಯಿತು. ನಾಳೆ ಕನಕ ಹಾಗೂ ಒನಕೆ ಓಬವ್ವ ಜಯಂತಿ ಆಚರಿಸಲು ಅನುಮತಿ ನೀಡಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.10): ಗಣೇಶ ಚತುರ್ಥಿಯ ನಂತರ ಟಿಪ್ಪು ಜಯಂತಿ ವಿವಾದದಿಂದ ಹುಬ್ಬಳ್ಳಿಯ ಈದ್ಗಾ ಮೈದಾನ (Hubballi Idgah Maidan) ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಪರ-ವಿರುದ್ಧದ ನಡುವೆಯೇ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲಾಗಿದ್ದು, ನಾಳೆ ಕನಕ ಹಾಗೂ ಒನಕೆ ಓಬವ್ವ ಜಯಂತಿಗಳಿಗೂ ಅನುಮತಿ ನೀಡಲಾಗಿದೆ. ಈ ನಡುವೆ ಟಿಪ್ಪು ಜಯಂತಿಗೆ ಅಡ್ಡಿಪಡಿಸಲು ಮುದಾದ ಪ್ರಮೋದ್ ಮುತಾಲಿಕ್ (Pramod Mutalik) ಮತ್ತಿತರರನ್ನು ಬಂಧಿಸಲಾಗಿದೆ.


ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ


ಪರ ವಿರೋಧದ ನಡುವೆಯೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಎ ಐ ಎಂ ಐ ಎಂ ಜಿಲ್ಲಾ ಕಾರ್ಯದರ್ಶಿ ವಿಜಯ್ ನೇತೃತ್ವದಲ್ಲಿ ಜಯಂತಿ ಆಚರಣೆ ಮಾಡಲಾಯಿತು. ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಜಯಘೋಷ ಹಾಕಲಾಯಿತು. ಸಿಹಿ ಹಂಚಿ ಸಂಭ್ರಮಿಸಲಾಯಿತು. ಸಮತಾ ಸೈನಿಕ ಸಂಘಟನೆಯ ಮುಖಂಡರು ಜಯಂತಿಯಲ್ಲಿ ಬಾಗಿಯಾಗಿದ್ದರು.


ಟಿಪ್ಪು ಅಪ್ರತಿಮ ಸ್ವಾತಂತ್ರ್ಯ ಸೇನಾನಿ


ನಂತರ ಮಾತನಾಡಿದ ವಿಜಯ ಗುಂಟ್ರಾಳ, ಜಯಂತಿ ಆಚರಣೆಯಲ್ಲಿ ಯಾವುದೇ ರಾಜಕೀಯವಿಲ್ಲ. ಟಿಪ್ಪು ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ಟಿಪ್ಪು ಜಯಂತಿಯನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು. ಆದರೆ ಇಂತಹ ಜಯಂತಿಗೆ ಪ್ರಮೋದ್ ಮುತಾಲಿಕ್ ವಿರೋಧ ಸರಿಯಲ್ಲ. ಗಣೇಶ ಚತುರ್ಥಿಗೆ ಅನುಮತಿ ಕೊಟ್ಟಾಗ ನಾವು ಸುಮ್ಮನಿದ್ದೆವು. ಆದ್ರೆ ಟಿಪ್ಪು ಜಯಂತಿಗೆ ಅನುಮತಿ ಕೊಟ್ಟಾಗ ವಿರೋಧ ಮಾಡ್ತಿದ್ದಾರೆ. ಪ್ರಮೋದ್ ಮುತಾಲಿಕ್ ಓರ್ವ ಮತಾಂಧ ಎಂದು ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ್ ಗುಂಟ್ರಾಳ್ ಕಿಡಿಕಾರಿದರು. ಎಂಐಎಂ ಮುಖಂಡರ ವಿರುದ್ಧವೂ ಗುಂಟ್ರಾಳ ಹರಿಹಾಯ್ದರು.


ಇದನ್ನೂ ಓದಿ: Shivaramegowda: ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಹೆಸರು ದುರ್ಬಳಕೆ; ಕೋಟಿ ಕೋಟಿ ಗುಳುಂ!?


ಈ ಕುರಿತು ಚರ್ಚೆ ಮಾಡಿದಾಗ ಎಲ್ಲರೂ ಸಮ್ಮತಿ ನೀಡಿದ್ರು. ಆದರೆ ಪಾಲಿಕೆ ಅನುಮತಿ ಕೊಟ್ಟ ನಂತರ ಮುಖಂಡರು ವಿರೋಧ ಮಾಡಿದ್ದಾರೆ. ನನ್ನ ತೇಜೋವಧೆ ಮಾಡಲೆಂದೇ ಈ ರೀತಿ ಮಾಡಿದ್ದಾರೆ. ಯಾರು ಏನೇ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ. ನನ್ನ ಬಗ್ಗೆ ಎಂಐಎಂ ಹಿರಿಯ ಮುಖಂಡರಿಗೆ ಗೊತ್ತಿದೆ. ಹೀಗಾಗಿ ಶಿಸ್ತುಕ್ರಮ ಕೈಗೊಳ್ಳಲ್ಲ ಅಂತ ವಿಶ್ವಾಸವಿದೆ ಎಂದರು.


Tipu Jayanti celebration at Hubli Eidgah Maidan; Arrest of Pramod Muthalik and others


ಮುತಾಲಿಕ್ ರನ್ನು ವಶಕ್ಕೆ ಪಡೆದ ಪೊಲೀಸರು


ಹುಬ್ಬಳ್ಳಿಯ ಈದ್ಗಾ‌ ಮೈದಾನದಲ್ಲಿ ಟಿಪ್ಪು ಜಯಂತಿ ಅವಕಾಶ ನೀಡಿರೋದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ಶ್ರೀರಾಮ ಸೇನಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟಿಪ್ಪು ಜಯಂತಿಗೆ ಅಡ್ಡಿಪಡಿಸಲೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈದ್ಗಾ ಮೈದಾನದ ಕಡೆ ಬರುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. ಪ್ರಮೋದ್ ಮುತಾಲಿಕ್‌ ಮತ್ತು ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.


ಪ್ರಮೋದ್ ಮುತಾಲಿಕ್ ಆಕ್ರೋಶ


ಇದಕ್ಕೂ ಮುನ್ನ ಮಾತನಾಡಿದ ಪ್ರಮೋದ್ ಮುತಾಲಿಕ್, ಟಿಪ್ಪು ಜಯಂತಿಗೆ ಅವಕಾಶ ಮಾಡಿಕೊಟ್ಟಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ದು ತಪ್ಪು. ಮಹಾನಗರ ಪಾಲಿಕೆ ದ್ವಂದ್ವ ನಿಲುವು ತಾಳಿದೆ, ಬಿಜೆಪಿ ಸರ್ಕಾರವೇ ಟಿಪ್ಪು ಜಯಂತಿ ರದ್ದು ಮಾಡಿದೆ. ಹಾಗಿರುವಾಗ ಈಗ ಈದ್ಗಾ ಮೈದಾನದಲ್ಲಿ ಬಿಜೆಪಿಯವರೇ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಟಿಪ್ಪು ಜಯಂತಿ ಹೆಸರಲ್ಲಿ ಕೆಳಮಟ್ಟದ ರಾಜಕೀಯ ಮಾಡ್ತಿದ್ದಾರೆ.


ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್​ ನ್ಯೂಸ್​; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ


ಟಿಪ್ಪು ಜಯಂತಿ ಆಚರಣೆ ನಾವು ಸಹಿಸಲ್ಲ. ಬೇರೆ ಮಹಾಪುರುಷರ ಜೊತೆಗಿನ ಹೋಲಿಕೆ ಸರಿಯಲ್ಲ. ಟಿಪ್ಪು ಒಬ್ಬ ಮತಾಂದ, ದೇಶ ದ್ರೋಹಿ. ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ. ಕನಕ ಜಯಂತಿ ಆಚರಣೆಗೆ ನಾವೇ ಮನವಿ‌ ಕೇಳಿದ್ದೇವೆ. ನಾವೇ ಖುದ್ದು ಆಚರಣೆ ಮಾಡ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

Published by:ಪಾವನ ಎಚ್ ಎಸ್
First published: