• Home
 • »
 • News
 • »
 • state
 • »
 • Tipu Jayanti: ಪರ ವಿರೋಧದ ನಡುವೆಯೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ

Tipu Jayanti: ಪರ ವಿರೋಧದ ನಡುವೆಯೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ

ಟಿಪ್ಪು ಜಯಂತಿ ಆಚರಣೆಯ ದೃಶ್ಯ

ಟಿಪ್ಪು ಜಯಂತಿ ಆಚರಣೆಯ ದೃಶ್ಯ

ಗಣೇಶ ಚತುರ್ಥಿಗೆ ಅನುಮತಿ ಕೊಟ್ಟಾಗ ನಾವು ಸುಮ್ಮನಿದ್ದೆವು. ಆದರೆ ಟಿಪ್ಪು ಜಯಂತಿಗೆ ಅನುಮತಿ ಕೊಟ್ಟಾಗ ವಿರೋಧ ಮಾಡ್ತಿದ್ದಾರೆ ಎಂದು ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ್ ಗುಂಟ್ರಾಳ್ ಕಿಡಿಕಾರಿದ್ದಾರೆ.

 • News18 Kannada
 • Last Updated :
 • Hubli-Dharwad (Hubli), India
 • Share this:

  ಹುಬ್ಬಳ್ಳಿ: ಪರ ವಿರೋಧದ ನಡುವೆಯೇ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Hubballi Idgah Maidan) ಟಿಪ್ಪು ಜಯಂತಿ ಆಚರಣೆ (Tipu Jayanti) ಮಾಡಲಾಗಿದೆ. ಎಐಎಂಐಎಂ ಜಿಲ್ಲಾ ಕಾರ್ಯದರ್ಶಿ ವಿಜಯ್ ನೇತೃತ್ವದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಜಯಂತಿ ಆಚರಣೆ ಮಾಡಲಾಗಿದೆ. ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಜಯಘೋಷ ಕೂಗಲಾಗಿದೆ.  ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಲಾಗಿದ್ದು ಸಮತಾ ಸೈನಿಕ ಸಂಘಟನೆಯಿಂದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಬೆಂಬಲ ವ್ಯಕ್ತವಾಗಿದೆ.   


  ಜಯಂತಿ ಆಚರಣೆಯಲ್ಲಿ ಯಾವುದೇ ರಾಜಕೀಯವಿಲ್ಲ. ಟಿಪ್ಪು ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ಟಿಪ್ಪು ಜಯಂತಿಯನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು. ಆದರೆ ಇಂತಹ ಜಯಂತಿಗೆ ಪ್ರಮೋದ್ ಮುತಾಲಿಕ್ ವಿರೋಧ ಸರಿಯಲ್ಲ ಎಂದು ಆಚರಣೆ ವೇಳೆ ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ್ ಗುಂಟ್ರಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.


  ಗಣೇಶ ಚತುರ್ಥಿಗೆ ಅನುಮತಿ, ಟಿಪ್ಪು ಜಯಂತಿಗೆ ಏಕಿಲ್ಲ?
  ಗಣೇಶ ಚತುರ್ಥಿಗೆ ಅನುಮತಿ ಕೊಟ್ಟಾಗ ನಾವು ಸುಮ್ಮನಿದ್ದೆವು. ಆದರೆ ಟಿಪ್ಪು ಜಯಂತಿಗೆ ಅನುಮತಿ ಕೊಟ್ಟಾಗ ವಿರೋಧ ಮಾಡ್ತಿದ್ದಾರೆ. ಪ್ರಮೋದ್ ಮುತಾಲಿಕ್ ಓರ್ವ ಮತಾಂಧ ಎಂದು ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ್ ಗುಂಟ್ರಾಳ್ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವೇಳೆ ಕಿಡಿಕಾರಿದ್ದಾರೆ.


  ಇದನ್ನೂ ಓದಿ: Heart Attack Research: ಹಾರ್ಟ್ ಅಟ್ಯಾಕ್ ಹೆಚ್ಚಳ; ಸಂಶೋಧನೆಗೆ ಮುಂದಾದ ಜಯದೇವ ಆಸ್ಪತ್ರೆ


  ಯಾರು ಏನೇ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ
  ಎಂಐಎಂ ಮುಖಂಡರ ವಿರುದ್ಧವೂ ಹರಿಹಾಯ್ದ ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ್ ಗುಂಟ್ರಾಳ್, ಈ ಕುರಿತು ಚರ್ಚೆ ಮಾಡಿದಾಗ ಎಲ್ಲರೂ ಸಮ್ಮತಿ ನೀಡಿದ್ದರು. ಆದರೆ ಪಾಲಿಕೆ ಅನುಮತಿ ಕೊಟ್ಟ ನಂತರ ಮುಖಂಡರು ವಿರೋಧ ಮಾಡಿದ್ದಾರೆ. ನನ್ನ ತೇಜೋವಧೆ ಮಾಡಲೆಂದೇ ಈ ರೀತಿ ಮಾಡಿದ್ದಾರೆ. ಯಾರು ಏನೇ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ. ನನ್ನ ಬಗ್ಗೆ ಎಂಐಎಂ ಹಿರಿಯ ಮುಖಂಡರಿಗೆ ಗೊತ್ತಿದೆ. ಹೀಗಾಗಿ ಶಿಸ್ತುಕ್ರಮ ಕೈಗೊಳ್ಳಲ್ಲ ಅಂತ ವಿಶ್ವಾಸವಿದೆ ಎಂದು ಟಿಪ್ಪು ಜಯಂತಿ ನಂತರ ವಿಜಯ್ ಗುಂಟ್ರಾಳ್ ಹೇಳಿಕೆ ನೀಡಿದ್ದಾರೆ.


  ಹಿಂದೂಪರ ಸಂಘಟನೆಯ ಮುಖಂಡ ಕುಟ್ಟಪ್ಪ ಹೆಸರಲ್ಲಿ ಅರ್ಚನೆ
  2018 ರ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ ವೇಳೆ ಹಿಂದೂಪರ ಸಂಘಟನೆಯ ಮುಖಂಡ ಕುಟ್ಟಪ್ಪ ಎಂಬುವರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಕುಟ್ಟಪ್ಪ ಹೆಸರಿನಲ್ಲಿ ವಿಶೇಷ ಅರ್ಚನೆ ನಡೆಸಲಾಗಿದೆ. ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಗಿದೆ. ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಗಳಿಂದ ವಿಶೇಷ ಪೂಜೆ ನಡೆಸಲಾಗಿದೆ. ದುಷ್ಟಶಕ್ತಿಗಳು ನಾಶವಾಗಲಿ, ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಗಳ ನಾಯಕರು ಅರ್ಚನೆ ಮಾಡಿಸಿದ್ದಾರೆ.


  ಇದನ್ನೂ ಓದಿ: Voting List: 17 ವರ್ಷಕ್ಕೇ ವೋಟರ್​ ಲಿಸ್ಟ್​ಗೆ ಸೇರಿ! ರಾಜ್ಯದ ಒಟ್ಟು ಮತದಾರರ ವಿವರ ಇಲ್ಲಿದೆ ನೋಡಿ


  ಹುಬ್ಬಳ್ಳಿ - ಹುಬ್ಬಳ್ಳಿಯ ಈದ್ಗಾ ಮೈದಾನ ಸದಾ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ವರ್ಷದ ಎರಡು ಬಾರಿ ಮುಸ್ಲಿಮರಿಗೆ ಸಾಮೂಹಿಕ ಪ್ರಾರ್ಥನೆಗೆ  ಅವಕಾಶ, ಜನವರಿ 26 ಹಾಗೂ ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣಕ್ಕೆ  ಮಾತ್ರ ಅವಕಾಶವಿತ್ತು. ಆದ್ರೆ ಹಿಂದೂಪರ ಸಂಘಟನೆಗಳ ಪಟ್ಟಿನಿಂದಾಗಿ ಪಾಲಿಕೆ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದೇ ಈಗ ಮಹಾನಗರ ಪಾಲಿಕೆ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುವಂತೆ ಮಾಡಿದೆ. ಒಂದೆಡೆ ಟಿಪ್ಪು ಜಯಂತಿ ಮತ್ತೊಂದೆಡೆ ಕನಕ ಜಯಂತಿಗೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿತ್ತು.

  Published by:ಗುರುಗಣೇಶ ಡಬ್ಗುಳಿ
  First published: