• Home
  • »
  • News
  • »
  • state
  • »
  •  Tippu Express ಇನ್ಮುಂದೆ ಒಡೆಯರ್ ಎಕ್ಸ್​ಪ್ರೆಸ್; ಹೆಸರು ಬದಲಾವಣೆಗೆ ಯಾರು, ಏನು ಹೇಳಿದ್ರು?

 Tippu Express ಇನ್ಮುಂದೆ ಒಡೆಯರ್ ಎಕ್ಸ್​ಪ್ರೆಸ್; ಹೆಸರು ಬದಲಾವಣೆಗೆ ಯಾರು, ಏನು ಹೇಳಿದ್ರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ ಮಾಡಿದ್ದ. ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದ್ದ ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟವನು ಟಿಪ್ಪು ಅಂತ ವಾಟಾಳ್ ನಾಗರಾಜ್ ಎಂದಿದ್ದಾರೆ.

  • Share this:

ಮೈಸೂರು-ಬೆಂಗಳೂರು ನಡುವಿನ ಟಿಪ್ಪು ಎಕ್ಸ್​ಪ್ರೆಸ್​ (Tippu Express Railway) ರೈಲಿನ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಒಡೆಯರ್​ ಎಕ್ಸ್​ಪ್ರೆಸ್​ (Wodeyar Express) ಎಂದು ಮರುನಾಮಕರಣ ಮಾಡಲಾಗಿದೆ. ಇನ್ನು ತಾಳಗುಪ್ಪ ಎಕ್ಸ್​ಪ್ರೆಸ್​ ರೈಲಿನ ಹೆಸರನ್ನು ಕುವೆಂಪು ಎಕ್ಸ್​ಪ್ರೆಸ್ (Kuvempu Express)​ ಎಂದು ನಾಮಕರಣ ಮಾಡಿ ರೈಲ್ವೆ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ. ಮೈಸೂರು-ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿಗೆ ಮರುನಾಮಕರಣ ಮಾಡಿದ್ದಕ್ಕೆ ಮೈಸೂರು ಕೊಡಗು ಸಂಸದ ಪ್ರತಾಪ್​ ಸಿಂಹ (MP Prarap Simha) ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲನ್ನು ಒಡೆಯರ್​ ರೈಲು ಎಂದು ಹಾಗು ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಹೆಸರನ್ನು ಕುವೆಂಪು ಎಕ್ಸ್‌ಪ್ರೆಸ್ ಎಂದು ಮರು ನಾಮಕರಣೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಜುಲೈ 25ರಂದು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ರಿಗೆ (Union Minister Ashwini Vaishnav) ಮನವಿ ಮಾಡಲಾಗಿತ್ತು.


ರೈಲ್ವೆ ಸಚಿವಾಲಯ ಆದೇಶ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಂಸದ ಪ್ರತಾಪಸಿಂಹ, ಇನ್ನು ಮುಂದೆ ಟಿಪ್ಪು ಎಕ್ಸ್‌ಪ್ರೆಸ್ ಬದಲು ಒಡೆಯರ್ ಎಕ್ಸ್‌ಪ್ರೆಸ್ ನಿಮಗೆ ಸೇವೆ ಒದಗಿಸಲಿದೆ. ಜತೆಗೆ, ಮೈಸೂರು-ತಾಳಗುಪ್ಪ ಬದಲು ಕುವೆಂಪು ಎಕ್ಸ್‌ಪ್ರೆಸ್ ಆಗಿ ಬದಲಾಗಲಿದೆ. ಇದಕ್ಕೆ ಕಾರಣರಾದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಸಚಿವ ಪ್ರಲ್ಹಾದ ಜೋಶಿ ಹಾಗೂ ಕುವೆಂಪು ಹೆಸರು ಸೂಚಿಸಿದ ಡಿ.ಪಿ.ಸತೀಶ್‌ ಅವರಿಗೆ ಧನ್ಯವಾದ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.


ಧರ್ಮ ರಾಜಕೀಯ


ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನ ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾಯಿಸಿದ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕಿಡಿಕಾರಿದ್ದಾರೆ.


ಬಿಜೆಪಿ ಸರ್ಕಾರ ಬಿಜೆಪಿಯವರು ಬರಿ ಧರ್ಮ ರಾಜಕೀಯ ಮಾಡ್ತಾರೆ. ಒಡೆಯರ್ ಹೆಸರು ಇಡಲಿ ಪರ್ವಾಗಿಲ್ಲ ಆದ್ರೆ ಬೇರೆ ರೈಲುಗಳು ಇರ್ಲೇ ಇಲ್ವಾ. ಯಾವಾಗ್ಲು ಜಾತಿ ಜಾತಿಗಳ ನಡುವೆ ಧರ್ಮಗಳ ನಡುವೆ ಬೆಂಕಿ ಹಚ್ಚೊ ಕೆಲಸ ಮಾಡ್ತಾರೆ. ಬರಿ ದ್ವೇಷ ಹುಟ್ಟಾಕುವ ಕೆಲಸ ಮಾಡ್ತಾರೆ ಎಂದಿದ್ದಾರೆ.


ಇದು ಕೇಂದ್ರ ಸರ್ಕಾರದ ಸಣ್ಣತನ


ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj)​​ ಕಿಡಿ ಕಾರಿದ್ದಾರೆ. ಟಿಪ್ಪು ಸುಲ್ತಾನ್ ಎಕ್ಸ್​​​ಪ್ರೆಸ್ ಹೆಸರು ಬದಲಾಯಿಸಿದ್ದು ಸರಿಯಲ್ಲ, ಟಿಪ್ಪು ಹೆಸರು ಬದಲಿಸಿ ಸಣ್ಣತನಕ್ಕೆ ಕೇಂದ್ರ ಸರ್ಕಾರ ಕೈ ಹಾಕಬಾರದಿತ್ತು. ಇದು ತೀವ್ರ ಖಂಡನೆಯ ವಿಚಾರ ಎಂದು ಅಸಮಾಧಾನ ಹೊರ ಹಾಕಿದ್ದಾರೆ.


ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ ಮಾಡಿದ್ದ. ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದ್ದ ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟವನು ಟಿಪ್ಪು ಎಂದಿದ್ದಾರೆ.


ಜನರ ಭಾವನೆಯೊಂದಿಗೆ ಆಟ ಆಡುವುದಕ್ಕಷ್ಟೇ ಸೀಮಿತ


ಇನ್ನು ಈ ಬಗ್ಗೆ ಜೆಡಿಎಸ್ ವಕ್ತಾರೆ ನಜ್ಮಾ ಚಿಕ್ಕನೇರಳೆ (JDS Spoke person Nazma Chikkanerale) ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:  CM Basavaraj Bommai: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ತುಟ್ಟಿ ಭತ್ಯೆ ಹೆಚ್ಚಳ


ಪ್ರತಾಪ್ ಸಿಂಹರವರೇ, ತಮಗೆ ನಿಜವಾಗಿಯೂ ಒಡೆಯರ್ ರವರ ಬಗ್ಗೆ ಗೌರವ ಇರುತ್ತಿದ್ದರೆ ಹೊಸದೊಂದು ರೈಲು ವ್ಯವಸ್ಥೆ ಮಾಡಿ ಅದಕ್ಕೆ ಒಡೆಯರ್ ಎಕ್ಸ್​​ಪ್ರೆಸ್ ಎಂದು ಹೆಸರಿಡಬಹುದಾಗಿತ್ತು ಆದರೆ ತಮ್ಮ ಯೋಗ್ಯತೆ ಹೊಸ ರೈಲು ನೀಡುವಷ್ಟು ಇಲ್ಲ ಕೇವಲ ಹೆಸರು ಬದಲಾಯಿಸಿ ಜನರ ಭಾವನೆಯೊಂದಿಗೆ ಆಟ ಆಡುವುದಕ್ಕಷ್ಟೇ ಸೀಮಿತ ಎಂಬುದು ಜನರಿಗೆ ಅರ್ಥವಾಗಿದೆ.


ಒಡೆಯರ್ ರಾಜ ಕುಟುಂಬವು ಟಿಪ್ಪು ಸುಲ್ತಾನರ ಬಗ್ಗೆ ಗೌರವವನ್ನು ಹೊಂದಿತ್ತು ಆದರೆ ತಾವು ಇಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹನೀಯ  ''ಒಡೆಯರ್'' ಹೆಸರನ್ನು ಬಳಸಿರುವುದು ತಮ್ಮ ನಿರ್ಲಜ್ಜೆಯನ್ನು ತೋರುತ್ತದೆ.


ಇದನ್ನೂ ಓದಿ:  CM Bommai ಅವರೇ ಯಡಿಯೂರಪ್ಪರನ್ನ ಕರ್ಕೊಂಡು ತಿರುಗಾಡಿದ್ರೆ ಲಗಾ ಒಗ್ತೀರಿ; ಯತ್ನಾಳ್


ತಮ್ಮ ಕೀಳು ಮಟ್ಟದ ರಾಜಕೀಯದಾಟಕ್ಕೆ ಒಡೆಯರ್ ಕುಟುಂಬದ ಹೆಸರನ್ನು ಬಳಸುತ್ತಿರುವುದಕ್ಕೆ ಮೈಸೂರಿಗಳಾಗಿ ನನ್ನ ವಿರೋಧವಿದೆ. ತಮಗೆ ನಿಜವಾಗಿಯೂ ಒಡೆಯರ್ ಕುಟುಂಬದ ಬಗ್ಗೆ ಗೌರವವಿದ್ದರೆ ನೂತನ ರೈಲಿಗೆ ಒಡೆಯರ್ ಹೆಸರಿಡಿ ಎಂದು ಸವಾಲು ಹಾಕಿದ್ದಾರೆ.

Published by:Mahmadrafik K
First published: