• Home
  • »
  • News
  • »
  • state
  • »
  • Bengaluru VV Meeting: ಬೆಂಗಳೂರು ವಿವಿ ಕ್ಯಾಂಪಸ್​ನಲ್ಲಿ ವಾಹನ ಸಂಚಾರಕ್ಕೆ ಬೀಳಲಿದೆ ಬ್ರೇಕ್​! ಓಡಾಟಕ್ಕೆ ಸಮಯ ನಿಗದಿ ಫಿಕ್ಸ್​!

Bengaluru VV Meeting: ಬೆಂಗಳೂರು ವಿವಿ ಕ್ಯಾಂಪಸ್​ನಲ್ಲಿ ವಾಹನ ಸಂಚಾರಕ್ಕೆ ಬೀಳಲಿದೆ ಬ್ರೇಕ್​! ಓಡಾಟಕ್ಕೆ ಸಮಯ ನಿಗದಿ ಫಿಕ್ಸ್​!

ಬೆಂಗಳೂರು ವಿವಿ ರಸ್ತೆ

ಬೆಂಗಳೂರು ವಿವಿ ರಸ್ತೆ

ಸಭೆಯಲ್ಲಿ ಇನ್ನು ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ವಾಹನಗಳ ಸ್ಪೀಡ್ ಕಂಟ್ರೋಲ್‌ಗೆ ಕ್ಯಾಂಪಸ್‌‌ನಲ್ಲಿ 100 ಬ್ಯಾರಿಕೇಟ್ ಅಳವಡಿಕೆ ಹಾಗೂ ಎಂಟ್ರಿ ಹಾಗೂ ಎಕ್ಸಿಟ್ ಗೇಟ್‌ಗಳಲ್ಲಿ ಸೆನ್ಸಾರ್ ಕ್ಯಾಮರಾಗಳ ಅಳವಡಿಕೆ ನಿರ್ಧಾರ ಮಾಡಲಾಗಿದೆ. 

  • News18 Kannada
  • Last Updated :
  • Karnataka, India
  • Share this:

ಇನ್ಮುಂದೆ ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ (Bengaluru VV) ಖಾಸಗಿ ವಾಹನಗಳ ಓಡಾಟಕ್ಕೆ ಸಮಯ ನಿಗದಿ ಮಾಡಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಮಾತ್ರ ಖಾಸಗಿ ವಾಹನಗಳ ಓಡಾಟಕ್ಕೆ (Private Vehicle) ಅನುಮತಿ ನೀಡುವ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ (Green Signal) ಸಿಕ್ಕ ತಕ್ಷಣವೇ ಜಾರಿಗೆ ಬರಲಿದೆ ಹೊಸ ರೂಲ್ಸ್ ಜಾರಿಗೆ ಬರಲಿದೆ. ಸಭೆಯಲ್ಲಿ ಇನ್ನು ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ವಾಹನಗಳ ಸ್ಪೀಡ್ ಕಂಟ್ರೋಲ್‌ಗೆ ಕ್ಯಾಂಪಸ್‌‌ನಲ್ಲಿ 100 ಬ್ಯಾರಿಕೇಟ್ ಅಳವಡಿಕೆ ಹಾಗೂ ಎಂಟ್ರಿ ಹಾಗೂ ಎಕ್ಸಿಟ್ ಗೇಟ್‌ಗಳಲ್ಲಿ ಸೆನ್ಸಾರ್ ಕ್ಯಾಮರಾಗಳ ಅಳವಡಿಕೆ ನಿರ್ಧಾರ ಮಾಡಲಾಗಿದೆ. 


ಬೆಂಗಳೂರು ವಿವಿ ಚೇಂಬರ್​ನಲ್ಲಿ ಸಭೆ


ಬೆಂಗಳೂರು ವಿವಿ ಕ್ಯಾಂಪಸ್​ ರಸ್ತೆಯಲ್ಲಿ ಸಾಲು ಸಾಲು ಅಪಘಾತಗಳ ಹಿನ್ನೆಲೆ ಬೆಂಗಳೂರು ವಿವಿ ಚೇಂಬರ್​ನಲ್ಲಿ ಇಂದು ಸಭೆ ನಡೆಸಲಾಯ್ತು. ಬೆಂಗಳೂರು ವಿವಿ ಕ್ಯಾಂಪಸ್ ಒಳಗೆ ಖಾಸಗಿ ವಾಹನಗಳನ್ನು ಬ್ಯಾನ್ ಮಾಡುವ ವಿಚಾರದ ಬಗ್ಗೆ  ಚರ್ಚೆಯಲ್ಲಿ ಚರ್ಚೆ ನಡೆದಿದೆ. ಸಭೆಯಲ್ಲಿ ವಿವಿ ಕುಲಪತಿ ಜಯಕರ್,  ಬಿಬಿಎಂಪಿ ಜಂಟಿ ಆಯುಕ್ತ  ನಾಗರಾಜ್ , ಬಿಎಂಟಿಸಿ ಡಿವಿಜನಲ್ ಕಂಟ್ರೋಲರ್ ಶ್ರೀನಾಥ್,  ವಿದ್ಯಾರ್ಥಿ ಮುಖಂಡರು,  ವೆಸ್ಟ್ ಟ್ರಾಫಿಕ್ ಡಿಸಿಪಿ ಕುಲದೀಪ್ ಕುಮಾರ್ ಜೈನ್, ವೆಸ್ಟ್ ಲಾ ಅಂಡ್ ಆರ್ಡರ್ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ,  ವಿವಿ ಪ್ರಾಧ್ಯಾಪಕ ಸಂಘ ಸೇರಿದಂತೆ ಹಲವರು ಭಾಗಿಯಾಗಿದ್ದರು.


Timing of private vehicles traffic in Bengaluru VV campus pvn
ಬೆಂಗಳೂರು ವಿವಿ ರಸ್ತೆ


ವಿದ್ಯಾರ್ಥಿಗಳ ಪ್ರತಿಭಟನೆ


ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪ ಮೇಲೆ ಬಿಎಂಟಿಸಿ (BMTC) ಬಸ್​ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಇಂದು ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಬಿಯುಟಿಸಿ ಶಿಕ್ಷಕರ ಪರಿಷತ್​ ಬೆಂಬಲ ಸೂಚಿಸಿದೆ. ಶಿಕ್ಷಕರ ಪರಿಷತ್ತಿನ ಅಧ್ಯಕ್ಷ ಪ್ರೊ. ಮುರುಳಿದರ್ ಮಾತನಾಡಿ ವಿದ್ಯಾರ್ಥಿಗಳ ನಡೆಸುತ್ತಿರುವ ಧರಣಿಗೆ ನಮ್ಮ ಬೆಂಬಲ ಇದೆ. ನಿನ್ನೆ ನಡೆದಂತಹ ಘಟನೆ ಮತ್ತೆ ಮರುಕಳಿಸಬಾರದು. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಇದನ್ನೂ ಓದಿ: Pratap Simha: ಉದ್ದೇಶಪೂರ್ವಕವಾಗಿ ಟಿಪ್ಪು ಹೆಸರನ್ನು ತೆಗೆಸಿದ್ದೇನೆ- ಸಂಸದ ಪ್ರತಾಪ್ ಸಿಂಹ


ಖಾಸಗಿ ವಾಹನ ಸಂಚಾರಕ್ಕೆ ಬ್ರೇಕ್​ ಹಾಕಿ


ಖಾಸಗಿ ವಾಹನಗಳು ಓಡಾಟದಿಂದಾಗಿ ನಮಗೆ ಸರಿಯಾಗಿ ಕ್ಲಾಸ್​ಗಳನ್ನು ಮಾಡುವುದಕ್ಕೆ ಆಗುತ್ತಿಲ್ಲ. ರಜಾದಿನಗಳಲ್ಲಿ ರಸ್ತೆಗಳಲ್ಲಿ ಓಡಾಡುವುದಕ್ಕೆ ಆಗುವುದಿಲ್ಲ. ಅಷ್ಟೊಂದು ವಾಹನಗಳು ಓಡಾಡುತ್ತಿರುತ್ತವೆ. ಹೀಗಿರುವಾಗ ವಿಧ್ಯಾರ್ಥಿನಿಯರು ಹೇಗೆ ಹಾಸ್ಟೇಲ್​ಗಳಿಗೆ ಹೋಗುತ್ತಾರೆ. ಕಾಲೇಜು ಬಿಟ್ಟಂತಹ ಸಂದರ್ಭದಲ್ಲಿ ರಸ್ತೆ ದಾಟುವುದಕ್ಕೆ ಹರಸಾಹಸ ಪಡುತ್ತಾರೆ. ಖಾಸಗಿ ವಾಹನಗಳ ಓಡಾಡಟಕ್ಕೆ ನಮ್ಮ ವಿರೋಧವು ಇದೆ ಎಂದು ಪ್ರೊ. ಮುರುಳಿಧರ್ ಹೇಳಿದರು.


ವಿದ್ಯಾರ್ಥಿನಿ ಶಿಲ್ಪಾ ಸ್ಥಿತಿ ಗಂಭೀರವಾಗಿದೆ


ವಿದ್ಯಾರ್ಥಿನಿ ಶಿಲ್ಪಾ ಸ್ಥಿತಿ ಗಂಭೀರವಾಗಿದೆ. ಶಿಲ್ಪಾಗೆ ರಕ್ತ ನೀಡಲು ಹಲವು ವಿದ್ಯಾರ್ಥಿಗಳು ಹೋಗಿದ್ದಾರೆ. ನಿನ್ನೆಯಿಂದ ಧರಣಿ ನಡೆಸುತ್ತಿದ್ದರು ಯಾವುದೇ ಸಚಿವರು ಬಂದಿಲ್ಲ. ಸ್ಥಳಕ್ಕೆ ಶಿಕ್ಷಣ ಸಚಿವರು, ಸಾರಿಗೆ ಸಚಿವರು ಬರಬೇಕು. ಸಚಿವರು ಬರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ. ವಿವಿ ರಸ್ತೆಯಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಬೇಕು. ನಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಜ್ಞಾನಭಾರತಿ ವಿವಿಯಲ್ಲಿ ವಿದ್ಯಾರ್ಥಿನಿ ಹೇಳಿದ್ದಾರೆ.


ಇದನ್ನೂ ಓದಿ: H D Devegowda: ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿ


ಬೆಂಗಳೂರು ವಿವಿ ವಿಧ್ಯಾರ್ಥಿಗಳ ಪ್ರತಿಭಟನ ಸ್ಥಳಕ್ಕೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು ಸಿಎಂ ಬೊಮ್ಮಾಯಿ  ಕಾಲ್ ಮಾಡಿದ್ದರು. ಸೋಮಣ್ಣ ಮತ್ತೆ ನೀವು ವಿವಿಗೆ ಭೇಟಿ ಮಾಹಿತಿ ಕೊಡಿ ಎಂದಿದ್ದರು. ನಾನು ಬರುವುದು ಸ್ವಲ್ಪ ತಡವಾಗಿದೆ. ಈಗಾಗಲೇ ಸೋಮಣ್ಣ ಅವರು ನಿಮ್ಮ ಬಳಿ ಮಾತನಾಡಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಸೋ ಭರವಸೆ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: