PM Modi- Mamata Banerjee: ಟೈಮ್ಸ್​ 100 ಜನ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ- ಮಮತಾ

"ಮಮತಾ ಬ್ಯಾನರ್ಜಿ, ಬಿಳಿ ಸೀರೆಯು ಭಾರತೀಯ ರಾಜಕೀಯದಲ್ಲಿ ಅತ್ಯಂತ ಉಗ್ರ ಹಾಗೂ ಆಕ್ರಮಣಕಾರಿ ವ್ಯಕ್ತಿತ್ವ" ಎಂದು ಪತ್ರಕರ್ತೆ ಬರ್ಖಾ ದತ್ ಬ್ಯಾನರ್ಜಿ ಕುರಿತು ತಮ್ಮ ಲೇಖನದಲ್ಲಿ ಹೇಳಿದ್ದಾರೆ. "ಭಾರತೀಯ ರಾಜಕೀಯದಲ್ಲಿ ಇತರ ಮಹಿಳೆಯರಿಗಿಂತ ಭಿನ್ನವಾಗಿ ಈ ಮಹಿಳೆ ಎದ್ದು ಕಾಣುತ್ತಾಳೆ.

ಮಮತಾ ಬ್ಯಾನರ್ಜಿ- ಪ್ರಧಾನಿ ಮೋದಿ

ಮಮತಾ ಬ್ಯಾನರ್ಜಿ- ಪ್ರಧಾನಿ ಮೋದಿ

 • Share this:
  ಪ್ರಧಾನ ಮಂತ್ರಿ ನರೇಂದ್ರ ಮೋದಿ(Prime Minister Narendra Modi ), ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Mamata Banerjee,, ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್​ ಪೂನವಾಲ ಅವರನ್ನು ಟೈಮ್ ನಿಯತಕಾಲಿಕೆಯ 2021 ರ 100 ಜನ ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಂದು ಹೆಸರಿಸಲಾಗಿದೆ. ಮೋದಿ ಮತ್ತು ಮಮತಾ ಬ್ಯಾನರ್ಜಿ ಅವರನ್ನು 'ಪ್ರಭಾವಿ ನಾಯಕರು' ವರ್ಗದಲ್ಲಿ ಪಟ್ಟಿ ಮಾಡಲಾಗಿದೆ, ಪೂನಾವಾಲಾ ಅವರನ್ನು 'ಉದ್ಯಮಿ' ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ, ಇತರೆ  ವರ್ಗಗಳಲ್ಲಿ 'ಐಕಾನ್‌ಗಳು', 'ಟೈಟಾನ್ಸ್', 'ಕಲಾವಿದರು' ಮತ್ತು 'ಇನ್ನೋವೇಟರ್‌ಗಳ’ನ್ನು ಸಹ ಗುರುತಿಸಲಾಗಿದೆ.

  ನರೇಂದ್ರ ಮೋದಿ

  ಭಾರತೀಯ-ಅಮೇರಿಕನ್ ಪತ್ರಕರ್ತ ಫರೀದ್ ಜಕಾರಿಯಾ ಅವರು ಟೈಮ್ ನಿಯತಕಾಲಿಕದಲ್ಲಿ ಪಿಎಂ ಮೋದಿಯವರ ಬಗ್ಗೆ ಬರೆದ ಲೇಖನದಲ್ಲಿ ನರೇಂದ್ರ ಮೋದಿ ಅವರಿಗೆ ಅನುಮೋದಿಸಿರುವ ರೇಟಿಂಗ್ " ಜನಪ್ರಿಯತೆ ಕುಸಿದರು ಗಗನಕ್ಕೇರಿದೆ ಶೇ 71 ರಷ್ಟಿದೆ" ಎಂದು ಬರೆದಿದ್ದಾರೆ.

  ಟೈಮ್ ನಿಯತಕಾಲಿಕವು 2019 ರಲ್ಲಿ ಒಂದು ಲೇಖನವನ್ನು ಪ್ರಕಟಿಸಿತ್ತು, ಪ್ರಧಾನಿ ಮೋದಿ ಅವರು ದಶಕಗಳಲ್ಲಿ ಭಾರತವನ್ನು ಒಗ್ಗೂಡಿಸಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಕೆಲವು ದಿನಗಳ ನಂತರ ಇದು. 'ದಶಕಗಳಲ್ಲಿ ಮೋದಿಯವರು ಯಾವುದೇ ಪ್ರಧಾನಿ ಹೊಂದಿಲ್ಲದ  ಯುನೈಟೆಡ್ ಇಂಡಿಯಾವನ್ನು ಹೊಂದಿದ್ದಾರೆ' ಎಂದು ಶೀರ್ಷಿಕೆಯ ಈ ಲೇಖನವು ಹೇಳಿತ್ತು: "ಮೋದಿಯವರ ಮೊದಲ ಅವಧಿಯ ಸಮಯದಲ್ಲಿ ಅವರು ತಂದ ನೀತಿಗಳ ಮೇಲೆ ಬಲವಾದ ಮತ್ತು ನ್ಯಾಯಸಮ್ಮತವಲ್ಲದ ಟೀಕೆಗಳು ಇದ್ದರೂ, ಯಾವುದೇ ಪ್ರಧಾನ ಮಂತ್ರಿಯೂ ಸುಮಾರು ಐದು ದಶಕಗಳಲ್ಲಿ ಇಷ್ಟರ ಮಟ್ಟಿಗೆ ಭಾರತೀಯ ಮತದಾರರನ್ನು ಒಗ್ಗೂಡಿಸಿರಲಿಲ್ಲ’’.

  ಮಮತಾ ಬ್ಯಾನರ್ಜಿ

  "ಮಮತಾ ಬ್ಯಾನರ್ಜಿ, ಬಿಳಿ ಸೀರೆ ಉಟ್ಟ ಈ ಮಹಿಳೆ ಭಾರತೀಯ ರಾಜಕೀಯದಲ್ಲಿ ಅತ್ಯಂತ ಉಗ್ರ ಹಾಗೂ ಆಕ್ರಮಣಕಾರಿ ವ್ಯಕ್ತಿತ್ವ" ಎಂದು ಪತ್ರಕರ್ತೆ ಬರ್ಖಾ ದತ್ ಬ್ಯಾನರ್ಜಿ ಕುರಿತು ತಮ್ಮ ಲೇಖನದಲ್ಲಿ ಹೇಳಿದ್ದಾರೆ. "ಭಾರತೀಯ ರಾಜಕೀಯದಲ್ಲಿ ಇತರ ಮಹಿಳೆಯರಿಗಿಂತ ಭಿನ್ನವಾಗಿ ಈ ಮಹಿಳೆ ಎದ್ದು ಕಾಣುತ್ತಾಳೆ. ಮಮತಾ ಬ್ಯಾನರ್ಜಿ ಯಾರೊಬ್ಬರ ಹೆಂಡತಿ, ತಾಯಿ, ಮಗಳು ಅಥವಾ ಸಂಗಾತಿಯಾಗಿ ರೂಪುಗೊಂಡ ನಾಯಕಿಯಲ್ಲ. ಇವರು ಕಡು ಬಡತನದಿಂದ ಮೇಲಕ್ಕೆ ಏರಿದ ವ್ಯಕ್ತಿತ್ವ-ಒಮ್ಮೆ ತನ್ನ ಕುಟುಂಬವನ್ನು ನಿರ್ವಹಿಸಲು ಸ್ಟೆನೋಗ್ರಾಫರ್ ಮತ್ತು ಹಾಲು ಮಾರಾಟಗಾರಳಾಗಿ ಕೆಲಸ ಮಾಡಿದ್ದರು ಮಮತಾ. ಬ್ಯಾನರ್ಜಿಯವರ ಪ್ರಕಾರ, ಅವರು ತಮ್ಮ ಪಕ್ಷವಾದ ತೃಣಮೂಲ ಕಾಂಗ್ರೆಸ್ ಅನ್ನು ಮುನ್ನಡೆಸುವುದಿಲ್ಲ ಜನರೇ ಅದನ್ನು ಮುನ್ನಡೆಸುತ್ತಿದ್ದಾರೆ. ಬೀದಿ-ಹೋರಾಟದ ಮನೋಭಾವ ಮತ್ತು ಪಿತೃಪ್ರಧಾನ ಸಂಸ್ಕೃತಿಯಲ್ಲಿ ಸ್ವಯಂ ನಿರ್ಮಿಸಿಕೊಂಡಿರುವ ಇವರ ಜೀವನವು ಭಾರತದ ರಾಜಕೀಯ ಇತಿಹಾಸದಲ್ಲಿ ಇವರನ್ನು ಬೇರೆಯದೇ ಆದ ಸ್ಥಾನದಲ್ಲಿ ನಿಲ್ಲಿಸುತ್ತದೆ"ಎಂದು ದತ್ ಬರೆದಿದ್ದಾರೆ.

  ಆದಾರ್​ ಪೂನವಾಲ

  ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಆದಾರ್​ ಪೂನವಾಲ ಹೆಸರು ಪ್ರತಿಕ್ಷಣವು ಕೇಳಿಬರುತ್ತಿದೆ. 2021 ರ ಅಂತ್ಯದ ವೇಳೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ 1.1 ಬಿಲಿಯನ್ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡುವುದಾಗಿ ಭರವಸೆ ನೀಡಿದಾಗ ಇವರ ಹೆಸರು ಇಡೀ ಪ್ರಪಂಚದಲ್ಲೇ ದೊಡ್ಡ ಮಟ್ಟಕ್ಕೆ ಬೆಳೆಯಿತು.

  ಅವರ ಕಂಪನಿಯಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈಗಾಗಲೇ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾಗಿದೆ ಎಂದು ಪತ್ರಕರ್ತ ಅಭಿಶ್ಯಾಂತ್ ಕಿಡಂಗೂರ್ TIME ನಲ್ಲಿ ಬರೆದಿದ್ದಾರೆ.

  "ಸೀರಮ್ ಇನ್ಸ್ಟಿಟ್ಯೂಟ್ ಮೇ ತಿಂಗಳಿನಿಂದ ಕೋವಿಡ್ -19 ಲಸಿಕೆಗಳ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ನೊವಾವಾಕ್ಸ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಸೇರಿದಂತೆ ಹೊಸ ಲಸಿಕೆಗಳನ್ನು ಭಾರತದಲ್ಲಿ ತಯಾರಿಸುತ್ತದೆ. ಪೂನವಾಲ ಈ ಬಾರಿ ಹಡಗನ್ನು ಸರಿಯಾಗಿ ಮುನ್ನಡೆಸುತ್ತಾರೆಯೇ ಎಂಬುದು ಈಗ ಬಹು ಚರ್ಚಿತ ವಿಷಯ. ಅವರು ಇತಿಹಾಸದ ಯಾವ ಬದಿಯಲ್ಲಿ ಬೀಳುತ್ತಾರೆ ಎಂಬುದನ್ನು ಕಾಲ ನಿರ್ಧರಿಸುತ್ತದೆ ಮತ್ತು ಮುಖ್ಯವಾಗಿ, ಸಾಂಕ್ರಾಮಿಕ ರೋಗದಿಂದ ಜಗತ್ತು ಎಷ್ಟು ಬೇಗನೆ ಹೊರಬರಲಿದೆ ಎಂಬುದರ ಬಗ್ಗೆ ಕಿಡಂಗೂರ್ ಬರೆದಿದ್ದಾರೆ.


  ಮಂಜುಷಾ ಪಿ.ಕುಲಕರ್ಣಿ

  ಈ ಪಟ್ಟಿಯಲ್ಲಿರುವ ಇನ್ನೊಬ್ಬ ಭಾರತೀಯ ಮಂಜುಜಾ ಪಿ.ಕುಲಕರ್ಣಿ, ಎನ್‌ಆರ್‌ಐ ಆದ ಇವರು ಅವರು ಏಷ್ಯನ್ ಪೆಸಿಫಿಕ್ ನೀತಿ ಮತ್ತು ಯೋಜನಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ರಸೆಲ್ ಜೆಯುಂಗ್ ಮತ್ತು ಹಿರಿಯ ಕಾರ್ಯಕರ್ತೆ ಸಿಂಥಿಯಾ ಚೋಯಿ ಅವರನ್ನು 'ಐಕಾನ್ಸ್' ವರ್ಗದಲ್ಲಿ ಪಟ್ಟಿ ಮಾಡಲಾಗಿದೆ. ಒಟ್ಟಾಗಿ, ಇವರು ಸ್ಟಾಪ್ ಎಎಪಿಐ ಹೇಟ್ AAPI Hate ಎಂಬ ಹೆಸರಿನ ವೇದಿಕೆಯನ್ನು ನಡೆಸುತ್ತಾರೆ, ಇದು ಏಷ್ಯನ್-ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪವಾಸಿಗಳು ತಾವು ಅನುಭವಿಸಿದ ವರ್ಣಭೇದ ನೀತಿಯನ್ನು ನೇರವಾಗಿ ದಾಖಲಿಸಲು ಈ ವೇದಿಕೆ ಸಾಕಷ್ಟು ಅವಕಾಶ ನಿರ್ಮಿಸಿಕೊಟ್ಟಿದೆ.

  ಇದನ್ನು ಓದಿ: Afghanistan: ತಾಲಿಬಾನಿಗಳಿಗೆ ಕೆಲಸ ಮಾಡಲು ಎಲ್ಲರು ಪ್ರೋತ್ಸಾಹ ನೀಡಿ ಎಂದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

  ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಯುಎಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಕೂಡ ಟೈಮ್ ಪಟ್ಟಿಯಲ್ಲಿ ಪ್ರಮುಖ ವ್ಯಕ್ತಿಗಳಾಗಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: