TikTok Ban: ಮಾನಸಿಕ ಖಿನ್ನತೆಯಿಂದ 18 ವರ್ಷದ ಟಿಕ್​ಟಾಕ್​ ಸ್ಟಾರ್ ಆತ್ಮಹತ್ಯೆ

TikTok App: 18 ವರ್ಷದ ದೆಹಲಿಯ ಟಿಕ್​ಟಾಕ್​ ಸ್ಟಾರ್​ ಆತ್ಮಹತ್ಯೆಗೆ ಶರಣಾದಾಕೆ. 2 ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆಕೆ ಯಾವುದೇ ಸೂಸೈಡ್​ ನೋಟ್ ಬರೆದಿಟ್ಟಿಲ್ಲ.

news18-kannada
Updated:July 7, 2020, 2:09 PM IST
TikTok Ban: ಮಾನಸಿಕ ಖಿನ್ನತೆಯಿಂದ 18 ವರ್ಷದ ಟಿಕ್​ಟಾಕ್​ ಸ್ಟಾರ್ ಆತ್ಮಹತ್ಯೆ
ಟಿಕ್​​ಟಾಕ್​
  • Share this:
ನವದೆಹಲಿ (ಜು. 7): ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ ಬಳಿಕ ಭಾರತ ಸರ್ಕಾರ ಚೀನಾದ ಮೊಬೈಲ್ ಆ್ಯಪ್​ಗಳನ್ನು ಬ್ಯಾನ್ ಮಾಡಿತ್ತು. ಅದರಲ್ಲಿ ಟಿಕ್​ಟಾಕ್​ ಆ್ಯಪ್ ಕೂಡ ಸೇರಿತ್ತು. ಟಿಕ್​ಟಾಕ್​ನಲ್ಲಿ ಭಾರೀ ಅಭಿಮಾನಿಗಳನ್ನು ಹೊಂದಿದ್ದ ದೆಹಲಿಯ ವಿದ್ಯಾರ್ಥಿನಿ ಸರ್ಕಾರದ ಈ ಆದೇಶದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ 16 ವರ್ಷದ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಟಿಕ್ ಟಾಕ್ ವಿಡಿಯೋಗಳ ಮೂಲಕ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದರು. ದೆಹಲಿಯ ಸಿಯಾ ಕಕ್ಕರ್ ಟಿಕ್​ಟಾಕ್​ನಲ್ಲಿ ಅಪಾರ ಫಾಲೋವರ್ಸ್ ಹೊಂದಿದ್ದಳು. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಆಕೆಯ ಸಾವಿಗೆ ಖಚಿತ ಕಾರಣ ತಿಳಿದುಬಂದಿರಲಿಲ್ಲ. ಇದೀಗ ದೆಹಲಿಯ ಇನ್ನೋರ್ವ ಟಿಕ್​ಟಾಕ್​ ಸ್ಟಾರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Murder News: ಕಸದ ರಾಶಿಯಲ್ಲಿ ಬಿದ್ದಿತ್ತು 14 ವರ್ಷದ ಬಾಲಕಿಯ ಸುಟ್ಟ ಮೃತದೇಹ!

18 ವರ್ಷದ ದೆಹಲಿಯ ಯೂನಿವರ್ಸಿಟಿಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದಾಕೆ. 2 ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.  ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆಕೆ ಯಾವುದೇ ಸೂಸೈಡ್​ ನೋಟ್ ಬರೆದಿಟ್ಟಿಲ್ಲ. ಆದರೆ, ಟಿಕ್​ಟಾಕ್​ ಬ್ಯಾನ್ ಮಾಡಿದ್ದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
Published by: Sushma Chakre
First published: July 7, 2020, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading