ಟಿಕ್​ಟಾಕ್​ ತಂದ ಆಪತ್ತು: ಜೀವಕ್ಕೆ ಕುತ್ತು ತಂದು ಕೊಂಡ ಯುವಕ

ಇತ್ತೀಚೆಗಷ್ಟೆ ಟಿಕ್​ ಟಾಕ್​ ಮಾಡಲು ಗಂಡ ಬಿಡುತ್ತಿಲ್ಲ ಎಂದು ಟಿಕ್​ ಟಾಕ್​ ಮಾಡುತ್ತಲೇ ತಮಿಳುನಾಡು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಮಾಸುವ ಮುನ್ನವೇ ತುಮಕೂರಿನ ಯುವಕನೊಬ್ಬ ಜೀವಕ್ಕೆ ಆಪತ್ತು ತಂದುಕೊಂಡಿದ್ದಾನೆ.

Seema.R
Updated:June 18, 2019, 2:17 PM IST
ಟಿಕ್​ಟಾಕ್​ ತಂದ ಆಪತ್ತು: ಜೀವಕ್ಕೆ ಕುತ್ತು ತಂದು ಕೊಂಡ ಯುವಕ
ಟಿಕ್​ ಟಾಕ್​ ಮಾಡಲು ಸಾಹಸ ಮಾಡಿದ ಯುವಕ
Seema.R
Updated: June 18, 2019, 2:17 PM IST
ಟಿಕ್​ ಟಾಪ್​ ಆ್ಯಪ್​ ಮೂಲಕ ವಿಡಿಯೋ ಮಾಡಿದರೆ ಸಾಕು ಬೇಗ ಜನಮನ್ನಣೆ ಪಡೆದು ಸ್ಟಾರ್​ ಆಗಬಹುದು ಎಂಬ ಭ್ರಾಂತಿ ಯುವಜನತೆಯಲ್ಲಿ ಮನೆ ಮಾಡಿದೆ. ಕೇವಲ ಯುವ ಜನರು ಮಾತ್ರವಲ್ಲದೇ ಎಲ್ಲ ವಯೋಮಾನದವರು ಈ ಟಿಕ್​ಟಾಕ್​ ಮೋಹಕ್ಕೆ ಒಳಗಾಗುತ್ತಿದ್ದು, ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೆ ಟಿಕ್​ ಟಾಕ್​ ಮಾಡಲು ಗಂಡ ಬಿಡುತ್ತಿಲ್ಲ ಎಂದು ಟಿಕ್​ ಟಾಕ್​ ಮಾಡುತ್ತಲೇ ತಮಿಳುನಾಡು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಮಾಸುವ ಮುನ್ನವೇ ತುಮಕೂರಿನ ಯುವಕನೊಬ್ಬ ಜೀವಕ್ಕೆ ಆಪತ್ತು ತಂದುಕೊಂಡಿದ್ದಾನೆ.

ತುಮಕೂರು ಜಿಲ್ಲೆ ಗೋಡೆಕೆರೆಯಲ್ಲಿ ಕುಮಾರ್​ (23) ಎಂಬ ಯುವಕ ಟಿಕ್​ ಟಾಕ್​ ಮಾಡುವ ವೇಳೆ ಎಡವಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಆರ್ಕೇಸ್ಟ್ರಾದಲ್ಲಿ ಡ್ಯಾನ್ಸರ್ ಕಮ್ ಸಿಂಗರ್ ಅಗಿ ಕೆಲಸ ಮಾಡುತ್ತಿದ್ದ ಈತ ಟಿಕ್​ಟಾಕ್​ ವಿಡಯೋ ಮಾಡುತ್ತಾ ಜಂಪ್​ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆಯಾತಪ್ಪಿ ಎಡವಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಆತನ  ಕತ್ತುಮೂಳೆ, ಬೆನ್ನುಮೂಳೆ ಮುರಿದಿದ್ದು, ಆತನ  ಸ್ಥಿತಿ ಗಂಭೀರವಾಗಿದೆ.

ಇದನ್ನು ಓದಿ: ಟಿಕ್​ಟಾಕ್​ಗೆ ಗೃಹಿಣಿ ಬಲಿ; ತಾನು ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಸತ್ತ ಮಹಿಳೆ!

ಕಳೆದ ಶನಿವಾರ ನಡೆದಿರುವ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಮಾರ್​ಗೆ ಚಿಕಿತ್ಸೆ ಕೊಡಿಸಲಾರದೆ ಅವರ ಬಡ ಕುಟುಂಬ ಒದ್ದಾಡುತ್ತಿದೆ.
Loading...

ಬಡ ಕುಟುಂಬಕ್ಕೆ ಕುಮಾರ್​ ಆಸರೆಯಾಗಿದ್ದು, ಆತನೇ ಕಳೆದ ಎಂಟು ವರ್ಷಗಳಿಂದ ಆರ್ಕೆಸ್ಟಾಗಳಲ್ಲಿ ಹಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಈಗ ಈ ಅವಘಡದಿಂದ ಕುಟುಂಬದ ಆಧಾರ ಸ್ತಂಭ ಮುರಿದಿದ್ದು, ಕುಟುಂಬಸ್ಥರು ಚಿಕಿತ್ಸೆಗಾಗಿ ದುಡ್ಡಿಲ್ಲದೇ ಪರಿತಪಿಸುತ್ತಿದ್ದಾರೆ.

ಟಿಕ್​ಟಾಪ್​ ದುರುಪಯೋಗವಾಗುತ್ತಿರುವ ಹಿನ್ನೆಲೆ ಅದನ್ನು ಬ್ಯಾನ್​ ಮಾಡಿ ಮದ್ರಾಸ್​ ಹೈ ಕೋರ್ಟ್​ ತೀರ್ಪು ನೀಡಿತ್ತು. ಆದರೆ ಜನಪ್ರಿಯವಾಗಿರುವ ಈ ಆ್ಯಪ್​ನ್ನು ಯಾವುದೇ ಕಾರಣಕ್ಕೂ ನಿಷೇಧಿಸದಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಕೆಲವರು ಅರ್ಜಿ ಸಲ್ಲಿಸಿದರು. ಇದಾದ ಬಳಿಕ ಅದರ ಮೇಲಿದ್ದ ನಿಷೇಧವನ್ನು ತೆರವುಗೊಳಿಸಲಾಯಿತು.

First published:June 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...