ಹಂಪಿ ಭದ್ರತೆಗೆ ಮಾಸ್ಟರ್​​ ಪ್ಲ್ಯಾನ್​​​: ಸ್ಮಾರಕಗಳ ಹಾನಿ ಹೆಚ್ಚಳ ಹಿನ್ನೆಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ

ನೇರ ಪ್ರಸಾರದ ವೀಕ್ಷಣೆಯ ವ್ಯವಸ್ಥೆಯನ್ನೂ ಜಿಲ್ಲಾ ಪೊಲೀಸ್ ಇಲಾಖೆ ಮಾಡಲಿದೆ. ದೇಶ-ವಿದೇಶಗಳಿಂದ ಹಂಪಿಗೆ ಭೇಟಿ ನೀಡಲಿರುವ ಪ್ರವಾಸಿಗರು ಸ್ಮಾರಕಗಳಿಗೆ ಯಾವುದೇ ರೀತಿಯ ಧಕ್ಕೆಯುಂಟು ಮಾಡದೇ ಇರೋದನ್ನು ತಡೆಯುವ ಸಲುವಾಗಿ ಈ ದಿಟ್ಟ ನಿರ್ಧಾರಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.

G Hareeshkumar | news18-kannada
Updated:October 11, 2019, 6:26 PM IST
ಹಂಪಿ ಭದ್ರತೆಗೆ ಮಾಸ್ಟರ್​​ ಪ್ಲ್ಯಾನ್​​​: ಸ್ಮಾರಕಗಳ ಹಾನಿ ಹೆಚ್ಚಳ ಹಿನ್ನೆಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ
ಹಂಪಿಯಲ್ಲಿ ಭದ್ರತೆ
  • Share this:
ಬಳ್ಳಾರಿ(ಅ.11) : ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು ವಿಜಯನಗರ ಸಾಮ್ರಾಜ್ಯವನ್ನ ನೆನಪಿಸುತ್ತಿವೆ. ಆದ್ರೆ ಕಳೆದ ಕೆಲ ವರ್ಷಗಳಿಂದ ಐತಿಹಾಸಿಕ ಸ್ಮಾರಕಗಳಿಗೆ ಸೂಕ್ತ ಇಲ್ಲದೆ ಸ್ಮಾರಕಗಳು ಹಾನಿಯಾಗುತ್ತಿವೆ. ಕಿಡಿಗೇಡಿಗಳು ಸ್ಮಾರಕಗಳ ಹಾನಿ ಮಾಡುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಂಪಿ ಸ್ಮಾರಕಗಳ ಭದ್ರತೆಗೆ ಮಾಸ್ಟರ್ ಪ್ಲ್ಯಾನ್​​​​​​​ ರೂಪಿಸಿದೆ.

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಸ್ಮಾರಕಗಳ ರಕ್ಷಣೆಯ ಕಣ್ಗಾವಲಿಗೆ ಅತ್ಯಾಧುನಿಕ ಸರ್ವೆಲೆನ್ಸ್ ಕ್ಯಾಮರಾಗಳನ್ನು ಅಳವಡಿಕೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಈ ಕ್ಯಾಮರಾಗಳ ಅಳವಡಿಕೆಗೆ ಟೆಂಡರ್ ಪ್ರತಿಕ್ರಿಯೆಯನ್ನು ಕರೆಯಲಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಸಲಹೆ, ಸೂಚನೆ ಮೇರೆಗೆ ಈ ಕ್ಯಾಮರಾಗಳ ಕಣ್ಗಾವಲು ಕಾರ್ಯಾರಂಭ ಮಾಡಲಾಗುತ್ತಿದೆ. ಐತಿಹಾಸಿಕ ಹಂಪಿಯ ಪ್ರಮುಖವಾದ ಹದಿನೆಂಟು ಸ್ಮಾರಕಗಳ ಬಳಿ ಈ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಮೊದಲ ಅವಕಾಶದಲ್ಲೇ ಸದನದಲ್ಲಿ ಸದ್ದು ಮಾಡಿದ ಆನಂದ್ ನ್ಯಾಮಗೌಡ; ಉತ್ತಮ ಸಂಸದೀಯ ಪಟುವಾಗುವ ಭರವಸೆ

ನೇರ ಪ್ರಸಾರದ ವೀಕ್ಷಣೆಯ ವ್ಯವಸ್ಥೆಯನ್ನೂ ಜಿಲ್ಲಾ ಪೊಲೀಸ್ ಇಲಾಖೆ ಮಾಡಲಿದೆ. ದೇಶ-ವಿದೇಶಗಳಿಂದ ಹಂಪಿಗೆ ಭೇಟಿ ನೀಡಲಿರುವ ಪ್ರವಾಸಿಗರು ಸ್ಮಾರಕಗಳಿಗೆ ಯಾವುದೇ ರೀತಿಯ ಧಕ್ಕೆಯುಂಟು ಮಾಡದೇ ಇರೋದನ್ನು ತಡೆಯುವ ಸಲುವಾಗಿ ಈ ದಿಟ್ಟ ನಿರ್ಧಾರಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಈಗಾಗಲೇ ಕಳೆದ ಕೆಲ ವರ್ಷಗಳಿಂದ ಹಂಪಿಯ ಸ್ಮಾರಕಗಳ ಬಳಿ ಸಿಸಿ ಕ್ಯಾಮರಾ ಆಳವಡಿಕೆ ಮಾಡಿದ್ರೂ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಕ್ಯಾಮರಾಗಳು ಹಾಳಾಗಿದ್ದವು. ಆದರೆ ಈಗ ಸಮರ್ಪಕವಾಗಿ ನಿರ್ವಹಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆ ಮೂಲಕ ಹಂಪಿಯ ಪ್ರತಿಯೊಂದು ಸ್ಮಾರಕಗಳ ರಕ್ಷಣೆಗೆ ಕಣ್ಗಾವಲು ಇಡಲಿದೆ.

ಹಂಪಿಗೆ ಬರೋ ಪ್ರವಾಸಿಗರು ಸ್ಮಾರಕಗಳ ಬಳಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಸ್ಮಾರಕಗಳನ್ನ ಕೆಡವಿದ ಘಟನೆಗಳು ನಡೆದಿದ್ದವು. ಇದರಿಂದಾಗಿ ಸ್ಮಾರಕಗಳ ಕಂಬಗಳು ನೆಲಕ್ಕುರಿಳಿ ಈ ಸಂಬಂಧ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ನಿಧಿಚೋರರು ಕೂಡ ನಿಧಿಗಾಗಿ ಸ್ಮಾರಕಗಳನ್ನ ಧ್ವಂಸ ಮಾಡುತ್ತಲೇ ಇದ್ದಾರೆ. ಹಂಪಿಯಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದರಿಂದ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ ಎಷ್ಟೇ ಭದ್ರತಾ ಸಿಬ್ಬಂದಿಗಳನ್ನ ನಿಯೋಜನೆ ಮಾಡಿದ್ರೂ ಕಿಡಿಗೇಡಿಗಳು ಮಾತ್ರ ಸ್ಮಾರಕಗಳಿಗೆ ಹಾನಿ ಮಾಡುತ್ತಲೇ ಇದ್ದಾರೆ.

ಇದನ್ನೂ ಓದಿ : ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾತನಾಡುವಾಗ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿ -ಸಚಿವರಿಗೆ ಸಿಎಂ ಯಡಿಯೂರಪ್ಪ ಸೂಚನೆ

ಹಂಪಿ ವಿಶ್ವ ಪಾರಂಪರಿಕ ತಾಣವಾಗಿದ್ದರಿಂದ ಹಂಪಿಯ ಪ್ರತಿಯೊಂದು ಸ್ಮಾರಕಗಳ ರಕ್ಷಣೆ ಅತ್ಯವಶ್ಯಕ. ಹೀಗಾಗಿ ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮುಂದಾಗಿದೆ. ಈ ಕಾರಣಕ್ಕಾಗಿಯೇ ಹಂಪಿಯಲ್ಲಿ ಅಧುನಿಕ ಸಿಸಿ ಕ್ಯಾಮರಾಗಳನ್ನ ಆಳವಡಿಸಲು ನಿರ್ಧರಿಸಲಾಗಿದೆ. ಹಗಲು-ರಾತ್ರಿ ವೇಳೆ ಎರಡು ಸಂದರ್ಭದಲ್ಲಿ ಸ್ಪಷ್ಟವಾಗಿ ಚಿತ್ರೀಕರಿಸುವ ಕ್ಯಾಮರಾ ಆಳವಡಿಸಲಾಗುತ್ತಿದೆ.ವಿಶ್ವವಿಖ್ಯಾತ ಹಂಪಿ ಸಾಕಷ್ಟು ವಿಸ್ತಾರವಾಗಿದ್ದರಿಂದ ಪುರಾತತ್ವ ಇಲಾಖೆ ಆಗಲಿ ಪೊಲೀಸ್ ಇಲಾಖೆಯಿಂದಾಲೀ ಸ್ಮಾರಕಗಳಿಗೆ ದಿನದ 24 ಗಂಟೆ ಭದ್ರತೆ ಕೊಡಲು ಸಾಧ್ಯ ಆಗುತ್ತಿಲ್ಲ. ಹೀಗಾಗಿ ಈಗ ಆಧುನಿಕ ಸಿಸಿ ಕ್ಯಾಮರಾಗಳ ಆಳವಡಿಸುವುದರಿಂದ ಸ್ಮಾರಕಗಳ ರಕ್ಷಣೆ ಮಾಡಬಹುದು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ.

 ವರದಿ : ಶರಣು ಹಂಪಿ

First published: October 11, 2019, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading