ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಪೊಲೀಸ್​ ಸರ್ಪಗಾವಲು; ಕುಡಿದು ಡ್ರೈವ್ ಮಾಡಿದರೆ ಕ್ರಿಮಿನಲ್ ಕೇಸ್!

ಡಿಸೆಂಬರ್​​ 31 ರ ರಾತ್ರಿ 10 ಗಂಟೆಯಿಂದ ನಗರದ ಎಲ್ಲಾ ಫ್ಲೈ ಓವರ್​​ಗಳು ಕ್ಲೋಸ್ ಆಗಲಿವೆ. ಅತೀ ವೇಗ ಸಂಚಾರ ಹಿನ್ನಲೆ ಏರ್ ಪೋರ್ಟ್ ಫ್ಲೈ ಓವರ್ ಕೂಡ ಕ್ಲೋಸ್ ಆಗಲಿದೆ. ಕೆ.ಆರ್.ಪುರಂ ಫ್ಲೈ ಓವರ್ ಕೆಳಗಡೆ ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಫ್ಲೈ ಓವರ್ ಕ್ಲೋಸ್ ಮಾಡುತ್ತಿಲ್ಲ.

ಹೊಸ ವರ್ಷಾಚರಣೆಯ ಸಾಂದರ್ಭಿಕ ಚಿತ್ರ

ಹೊಸ ವರ್ಷಾಚರಣೆಯ ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಡಿ.28): ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ಯುವಜನರು ಉತ್ಸುಕರಾಗಿದ್ದಾರೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ದುರ್ಘಟನೆಗಳು ನಡೆಯದಂತೆ ಪೊಲೀಸ್​ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಹೀಗಾಗಿ ಅಂದು ಬೆಂಗಳೂರು ನಗರದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್​ ಬಿಗಿ ಭದ್ರತೆ ಒದಗಿಸಲಾಗುತ್ತದೆ. ಡಿಸೆಂಬರ್  31ರಂದೇ ಬೆಂಗಳೂರಿನಾದ್ಯಂತ ಪೊಲೀಸ್​ ಸರ್ಪಗಾವಲು ಇರುತ್ತದೆ. ಹೊಸ ವರ್ಷದ ದಿನ ಬೆಳಗ್ಗೆ 8 ಗಂಟೆಯಿಂದಲೇ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಉನ್ನತ ಮಟ್ಟದ  ಪೊಲೀಸ್  ಬಂದೋ ಬಸ್ತ್ ಮಾಡಲಾಗುವುದು ಎಂದು ಭಾಸ್ಕರ್​ರಾವ್​ ತಿಳಿಸಿದರು.

‘ನಾನೋರ್ವ ಆಶಾವಾದಿ; ನನಗೂ ಮಂತ್ರಿಯಾಗುವ ಆಸೆ ಇದೆ‘: ಬಿಜೆಪಿ ಶಾಸಕ ಬಿ.ಸಿ ಪಾಟೀಲ್​​​

ನಗರದಲ್ಲಿ 11 ಡಿಸಿಪಿ, 70 ಎಸಿಪಿ, 230 ಇನ್ಸ್‌ಪೆಕ್ಟರ್ ಗಳು, 7 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎರಡು ಶಿಫ್ಟ್ ಗಳಲ್ಲಿ ಪೊಲೀಸರು ಕೆಲಸ ಮಾಡುತ್ತಾರೆ. ಮಧ್ಯಾಹ್ನದಿಂದ ರಾತ್ರಿ 2 ಗಂಟೆವರೆಗೂ ಒಂದು ಶಿಫ್ಟ್ ನಲ್ಲಿ ಕೆಲಸ ಮಾಡಿದರೆ, ರಾತ್ರಿ 2 ಗಂಟೆಯಿಂದ ಎರಡನೇ ಶಿಫ್ಟ್ ನಲ್ಲಿ ಪೊಲೀಸರು ಕೆಲಸ ನಿರ್ವಹಿಸುತ್ತಾರೆ. ನಗರದಲ್ಲಿ 270 ಹೊಯ್ಸಳ ಪೊಲೀಸ್​ ವಾಹನಗಳ ಸೌಲಭ್ಯ ಇವೆ. ಯಾವುದೇ ಸಮಸ್ಯೆ, ತೊಂದರೆಯ ಕರೆ ಬಂದರೂ ಕೂಡಲೇ ತೆರಳುತ್ತೇವೆ ಎಂದು ಹೇಳಿದರು.

ವಾಚ್​ ಟವರ್​ ನಿರ್ಮಾಣ

ಸೂಕ್ಷ್ಮ ಹಾಗೂ ಪ್ರಮುಖ ಪ್ರದೇಶಗಳಾದ ಬ್ರಿಗೇಡ್ ರಸ್ತೆ, ಎಂಜಿ.ರೋಡ್ , ಕೋರಮಂಗಲದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಈಗಾಗಲೇ 1500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಬಾರಿ ಸಹ ವಾಚ್ ಟವರ್ ಗಳನ್ನು ನಿರ್ಮಾಣ ಮಾಡಲಾಗಿದೆ. ಅತಿ ಹೆಚ್ಚು ಕಡೆ ಲೈಟ್ ವ್ಯವಸ್ಥೆ ಮಾಡಲಾಗಿದೆ.

ರಾಯಚೂರು ಪ್ರವಾಹ ಸಂತ್ರಸ್ತರ ಬಗ್ಗೆ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ: ಒಂದೊತ್ತು ಊಟಕ್ಕೂ ಪರದಾಡುತ್ತಿರುವ ಜನ

ನಗರದ ಎಲ್ಲಾ ಫ್ಲೈ ಓವರ್ ಕ್ಲೋಸ್ 

ಡಿಸೆಂಬರ್​​ 31 ರ ರಾತ್ರಿ 10 ಗಂಟೆಯಿಂದ ನಗರದ ಎಲ್ಲಾ ಫ್ಲೈ ಓವರ್​​ಗಳು ಕ್ಲೋಸ್ ಆಗಲಿವೆ. ಅತೀ ವೇಗ ಸಂಚಾರ ಹಿನ್ನಲೆ ಏರ್ ಪೋರ್ಟ್ ಫ್ಲೈ ಓವರ್ ಕೂಡ ಕ್ಲೋಸ್ ಆಗಲಿದೆ. ಕೆ.ಆರ್.ಪುರಂ ಫ್ಲೈ ಓವರ್ ಕೆಳಗಡೆ ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಫ್ಲೈ ಓವರ್ ಕ್ಲೋಸ್ ಮಾಡುತ್ತಿಲ್ಲ.

ಮಧ್ಯರಾತ್ರಿ 2ರವರೆಗೆ ಮೆಟ್ರೋ, ಬಿಎಂಟಿಸಿ

ಈ ಬಾರಿ ಖಾಸಗಿ ಸೆಕ್ಯೂರಿಟಿಗಳನ್ನು ಭದ್ರತೆಗೆ ತೆಗೆದುಕೊಳ್ಳುತ್ತೇವೆ. ಬಿಎಂಟಿಸಿ ಹಾಗೂ ಮೆಟ್ರೋ ವ್ಯವಸ್ಥೆ 2 ಗಂಟೆವರೆಗೂ ಸಂಚಾರ ಇರುತ್ತದೆ.

ಮಧ್ಯರಾತ್ರಿ 2 ಗಂಟೆವರೆಗೆ ಬಾರ್, ರೆಸ್ಟೋರೆಂಟ್​ ಓಪನ್​

ಹೊಸ ವರ್ಷದ ದಿನ ಬಾರ್, ರೆಸ್ಟೋರೆಂಟ್ ಗಳು, ಪಬ್ ಹೋಟೆಲ್​​​ಗಳಲ್ಲಿ ಒಂದು ಗಂಟೆ ಅವಧಿ ವಿಸ್ತರಣೆ ಮಾಡಲಾಗುತ್ತದೆ. ಮಧ್ಯರಾತ್ರಿ ಎರಡು ಗಂಟೆಯ ತನಕ ಅವಧಿ ವಿಸ್ತರಣೆ ಮಾಡಲಾಗುತ್ತದೆ. ಪ್ರತಿದಿನ ರಾತ್ರಿ ಒಂದು ಗಂಟೆಗೆ ಮುಚ್ಚಲಾಗುತ್ತಿತ್ತು. ಹೊಸ ವರ್ಷದಂದು ಎರಡು ಗಂಟೆಯವರೆಗೆ ಕುಡಿದು ಎಂಜಾಯ್ ಮಾಡಲು ಅವಕಾಶ ನೀಡಲಾಗಿದೆ.

ತುಮಕೂರಿನ ಶಿರಾ ಬಳಿ ಬಸ್​ಗೆ ಲಾರಿ ಡಿಕ್ಕಿ; ಪ್ರಯಾಣಿಕನ ಹಠಕ್ಕೆ ಅಮಾಯಕ ಸಾವು, 10 ಜನರಿಗೆ ಗಾಯ

ಕುಡಿದು ವಾಹನ ಚಲಾಯಿಸಿದರೆ ಕ್ರಿಮಿನಲ್​ ಕೇಸ್ 

ಹೊಸ ವರ್ಷಾಚರಣೆ ದಿನ ಕುಡಿದು ವಾಹನ ಓಡಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಬೆಂಗಳೂರು ಸಂಚಾರ ವಿಭಾಗ ಜಂಟಿ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು,
ಡಿ. 31ರಂದು ರಾತ್ರಿ ಯಾರಾದರೂ ಮದ್ಯ ಕುಡಿದು ವಾಹನ ಚಲಾಯಿಸಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾವುದು, ಈ ಬಗ್ಗೆ ಸಂಚಾರಿ ಪೊಲೀಸರು ತೀರ್ಮಾನಿಸಿದ್ದಾರೆ. ಹೀಗಾಗಿ ಅಂದು ಕುಡಿದು ವಾಹನ ಚಲಾಯಿಸಬೇಡಿ. ಚಲಾಯಿಸಿ ಸಿಕ್ಕಿಬಿದ್ದರೆ ನಿರ್ಲಕ್ಷ್ಯ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಹೊಸ ವರ್ಷಾಚರಣೆಗೆ ಈ ಬಾರಿ 175 ಸ್ಥಳಗಳಲ್ಲಿ ಮದ್ಯ ತಪಾಸಣೆ ನಡೆಸಲಾಗುವುದು. ಕುಡಿದು ಹೆಣ್ಣು ಮಕ್ಕಳ ಮೇಲೆ ಬೀಳುವುದನ್ನೆಲ್ಲಾ ಸಹಿಸುವುದಿಲ್ಲ. ಅಂತಹವರನ್ನು ಕೂಡಲೇ ವಶಕ್ಕೆ ಪಡೆಯುತ್ತೇವೆ ಎಂದರು.

ಹಿಡನ್​ ಕ್ಯಾಮೆರಾ ಅಳವಡಿಕೆ

ಮಂಗಳೂರು ಗಲಭೆಯಲ್ಲಿ ಸಿಸಿಟಿವಿಗೆ  ಜಖಂ ಹಿನ್ನಲೆ, ಬೆಂಗಳೂರು ಪೊಲೀಸರು ರಹಸ್ಯ ಕ್ಯಾಮೆರಾಗಳ(ಹಿಡನ್​ ಕ್ಯಾಮೆರಾ) ಮೊರೆ ಹೋಗಿದ್ದಾರೆ. ಇವು ಸಾರ್ವಜನಿಕರಿಗೆ ತಿಳಿಯದ ರೀತಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಡ್ರಗ್ಸ್ ಹಾಗೂ ಮಾದಕ ವಸ್ತುಗಳು ಸರಬರಾಜು ಆಗುವ ಹಿನ್ನಲೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇಂದಿನಿಂದ ಮಿನಿ ವಾಹನ ಸಂಚಾರಕ್ಕೆ ಚಾರ್ಮಾಡಿ ಘಾಟ್​ ಮುಕ್ತ; ಘನ ವಾಹನಗಳಿಗೆ ನಿಷೇಧ

ಮಹಿಳೆಯರಿಗೆ ಎಚ್ಚರಿಕೆ

ನಗರದ ಪತ್ರಿಷ್ಠಿತ ಹೋಟೆಲ್ ಗಳಲ್ಲಿ ಶ್ವಾನ ದಳ ಮುಖಾಂತರ ಪರಿಶೀಲನೆ ಮಾಡಲಾಗುವುದು ಎಂದರು. ಇದೇ ವೇಳೆ ಪಾರ್ಟಿ, ಹೋಟೆಲ್ ಗಳಿಗೆ ಹೋಗುವ ಮಹಿಳೆಯರಿಗೆ ನಗರ ಪೊಲೀಸರು ಆಯುಕ್ತ ಮನವಿ ಮಾಡಿದರು. ಯಾರೇ ಅಪರಿಚಿತ ವ್ಯಕ್ತಿ ಏನೇ ಕೊಟ್ಟರೂ ತೆಗೆದುಕೊಳ್ಳಬೇಡಿ. ಹೋಟೆಲ್​​​ ನಲ್ಲಿ ಜ್ಯೂಸ್, ಡ್ರಿಂಕ್ಸ್ ನಲ್ಲಿ ಮತ್ತು ಬರುವ ಅಂಶವನ್ನು ಬೆರೆಸಲಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಹೇಳಿದರು.

ಕ್ಯಾಬ್​ ಚಾಲಕರಿಗೆ ಎಚ್ಚರಿಕೆ

ಓಲಾ, ಉಬರ್ ಚಾಲಕರಿಗೂ ಸಹ ಪೊಲೀಸ್​ ಆಯುಕ್ತರು ಎಚ್ಚರಿಕೆ ನೀಡಿದರು. ಓಲಾ, ಉಬರ್​​ ಚಾಲಕರು ಕುಡಿದು ಚಾಲನೆ ಮಾಡಬೇಡಿ. ಯಾವ ಚಾಲಕರೂ ಸಹ ಒಬ್ಬರೇ ಮಹಿಳೆಯರು ಹೋಗುತ್ತಿದ್ದರೆ, ಅವರನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಒಂದು ವೇಳೆ ಹೀಗೆ ಮಾಡಿರೆ ಕಂಪನಿಗಳು‌ ಮತ್ತು ಚಾಲಕರ ವಿರುದ್ದ ಸಹ ಕ್ರಮ ಕೈಗೊಳ್ಳಲಾಗುತ್ತದೆ.  ಎಲ್ಲೇ ಮಾದಕ ವಸ್ತುಗಳನ್ನು ಇಟ್ಟಿದ್ದರೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನೂ ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡದ ರಾಜ್ಯ ಸರ್ಕಾರ; ಸಚಿವ ಜಗದೀಶ್​​ ಶೆಟ್ಟರ್​​​ ಸಭೆಗೆ ರೈತರ ಮುತ್ತಿಗೆ

 
Published by:Latha CG
First published: