ಮೌಲ್ವಿ ವಿಚಾರಣೆ ಬಳಿಕ ವಿಧ್ವಂಸಕ ಕೃತ್ಯದ ಭೀತಿ; ಚಾಮರಾಜನಗರ ಗಡಿಯಲ್ಲಿ ಪೊಲೀಸರ ಹದ್ದಿನ ಕಣ್ಣು

ಶಂಕಿತರ ಮೇಲೆ ನಿಗಾ ವಹಿಸಲು ಅಂತರರಾಜ್ಯ  ಚೆಕ್ ಪೋಸ್ಟ್​​​ಗಳಲ್ಲಿ  ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಮಸೀದಿ ಮಂದಿರಗಳಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳ ನಿಗಾ ಇಡಲು  ಪೊಲೀಸ್ ಇಲಾಖೆ ಮುಂದಾಗಿದೆ.

news18-kannada
Updated:January 16, 2020, 10:41 AM IST
ಮೌಲ್ವಿ ವಿಚಾರಣೆ ಬಳಿಕ ವಿಧ್ವಂಸಕ ಕೃತ್ಯದ ಭೀತಿ; ಚಾಮರಾಜನಗರ ಗಡಿಯಲ್ಲಿ ಪೊಲೀಸರ ಹದ್ದಿನ ಕಣ್ಣು
ಶಂಕಿತರ ಮೇಲೆ ನಿಗಾ ವಹಿಸಲು ಅಂತರರಾಜ್ಯ  ಚೆಕ್ ಪೋಸ್ಟ್​​​ಗಳಲ್ಲಿ  ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಮಸೀದಿ ಮಂದಿರಗಳಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳ ನಿಗಾ ಇಡಲು  ಪೊಲೀಸ್ ಇಲಾಖೆ ಮುಂದಾಗಿದೆ.
  • Share this:
ಚಾಮರಾಜನಗರ(ಜ.16): ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ಗುಂಡ್ಲುಪೇಟೆ ಉಗ್ರರ ಅಡಗು ತಾಣವಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಅಪರಿಚಿತ ಮತ್ತು ಅನುಮಾನಸ್ಪದ ವ್ಯಕ್ತಿಗಳು ಮಂದಿರ ಮಸೀದಿಗಳಿಗೆ ಬಂದು ಹೋಗುತ್ತಿದ್ದಾರಾ?  ವಿಧ್ವಂಸಕ ಕೃತ್ಯ ಎಸಗಲು ಸ್ಥಳೀಯರ ಮನಪರಿವರ್ತನೆ ಮಾಡುತ್ತಿದ್ದಾರಾ? ಎಂಬ ಅಚ್ಚರಿಗೆ ಚಾಮರಾಜನಗರ ಎಸ್ಪಿ ಹೇಳಿಕೆ ಕಾರಣವಾಗಿದೆ.  

ಅಪರಿಚಿತ ವ್ಯಕ್ತಿಗಳು ಬಂದು ವಿಧ್ವಂಸಕ ಕೃತ್ಯ ಎಸಗಲು ಸ್ಥಳೀಯರನ್ನು ಮನಪರಿವರ್ತನೆ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ಮಾಡಿ‌ ಬಿಡುಗಡೆ ಮಾಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಮದರಸ, ಮಸೀದಿಗಳಿಗೆ ಬಂದು ಹೋಗುವ ಸಾಧ್ಯತೆಗಳಿರುತ್ತವೆ. ಪ್ರಾರ್ಥನೆ ಮಾಡುವ ನೆಪದಲ್ಲಿ ಬಂದು ಸ್ಥಳೀಯರ ಸಹಾಯ ಪಡೆದು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು  ಚಾಮರಾಜನಗರ ಎಸ್ಪಿ ಆನಂದಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಹಳಿ ತಪ್ಪಿದ ಮುಂಬೈ-ಭುವನೇಶ್ವರ ಎಕ್ಸ್​ಪ್ರೆಸ್​ ರೈಲು; 20 ಪ್ರಯಾಣಿಕರಿಗೆ ಗಾಯ

ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಮೌಲ್ವಿ ವಿಚಾರಣೆ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಅಂತರರಾಜ್ಯ ಚೆಕ್ ಪೋಸ್ಟ್ ಗಳಲ್ಲಿ ತೀರ್ವ ತಪಾಸಣೆ ನಡೆಸಲಾಗುತ್ತದೆ. ಹೊರ ರಾಜ್ಯದಿಂದ ಬರುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಶಂಕಿತರ ಮೇಲೆ ನಿಗಾ ವಹಿಸಲು ಅಂತರರಾಜ್ಯ  ಚೆಕ್ ಪೋಸ್ಟ್​​​ಗಳಲ್ಲಿ  ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಮಸೀದಿ ಮಂದಿರಗಳಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳ ನಿಗಾ ಇಡಲು  ಪೊಲೀಸ್ ಇಲಾಖೆ ಮುಂದಾಗಿದೆ.

ಹಿಮದಲ್ಲಿ ಹೂತುಹೋಗಿದ್ದವನ ರಕ್ಷಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್

First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading