ಬಂಡೀಪುರ ಹುಲಿ ದಾಳಿ ಪ್ರಕರಣ : ಹುಲಿಯ ಮೂಲಸ್ಥಾನ ಪತ್ತೆ ಹಚ್ಚಿದ ಅರಣ್ಯ ಇಲಾಖೆ

2018ರ ಮಾರ್ಚ್‌ ಹಾಗೂ ಏಪ್ರಿಲ್​ನಲ್ಲಿ ನಾಗರಹೊಳೆಯ ಅಂತರಸಂತೆ ಬಳಿಯ ಕ್ಯಾಮರಾದಲ್ಲಿ ಹುಲಿಯ ದೃಶ್ಯ ಸೆರೆಯಾಗಿದೆ. ಹೀಗಾಗಿ 100 ಕಿ.ಮೀ. ದೂರದಿಂದ ಬಂಡೀಪುರಕ್ಕೆ ಹುಲಿ ವಲಸೆ ಬಂದಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

G Hareeshkumar | news18-kannada
Updated:October 12, 2019, 9:33 AM IST
ಬಂಡೀಪುರ ಹುಲಿ ದಾಳಿ ಪ್ರಕರಣ : ಹುಲಿಯ ಮೂಲಸ್ಥಾನ ಪತ್ತೆ ಹಚ್ಚಿದ ಅರಣ್ಯ ಇಲಾಖೆ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ಅ.12) : ರೈತರೊಬ್ಬರ ಮೇಲೆ ಇತ್ತೀಚೆಗೆ‌ ದಾಳಿ ಮಾಡಿದ್ದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದ್ದು, ನರಭಕ್ಷಕ ಹುಲಿಯ ಮೂಲ ಸ್ಥಾನವನ್ನು ಅರಣ್ಯ ಇಲಾಖೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ನರಭಕ್ಷಕ ಹುಲಿಯು ನಾಗರಹೊಳೆಯಿಂದ ಬಂಡೀಪುರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

2018ರ ಮಾರ್ಚ್‌ ಹಾಗೂ ಏಪ್ರಿಲ್​ನಲ್ಲಿ ನಾಗರಹೊಳೆಯ ಅಂತರಸಂತೆ ಬಳಿಯ ಕ್ಯಾಮರಾದಲ್ಲಿ ಹುಲಿಯ ದೃಶ್ಯ ಸೆರೆಯಾಗಿದೆ. ಹೀಗಾಗಿ 100 ಕಿ.ಮೀ. ದೂರದಿಂದ ಬಂಡೀಪುರಕ್ಕೆ ಹುಲಿ ವಲಸೆ ಬಂದಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ತಾಯಿಯಿಂದ ಬೇರ್ಪಟ್ಟು ತನ್ನದೇ ಆದ ವಲಯ ಗುರುತಿಕೊಳ್ಳಲು ಹುಲಿ ಬಂಡೀಪುರಕ್ಕೆ ಬಂದಿದೆ. ಗುಂಡ್ಲುಪೇಟೆಯ ಬಫರ್ ಝೋನ್​ ಕ್ಯಾಮೆರಾದಲ್ಲೂ ಹುಲಿ ಸೆರೆಯಾಗಿದೆ. ನಾಗರಹೊಳೆ ಹಾಗೂ ಬಂಡೀಪುರ ಎರಡೂ ಕಡೆ ಕ್ಯಾಮರಾದಲ್ಲಿ ಸೆರೆಯಾಗಿರುವುದು ಒಂದೇ ಹುಲಿ. ಹುಲಿಯ ಮೈಮೇಲಿನ ಪಟ್ಟೆ, ವಯಸ್ಸು ದೇಹರಚನೆಯಿಂದ ವೈಜ್ಞಾನಿಕವಾಗಿ ಸಾಬೀತಾಗಿದೆ. ಬಂಡೀಪುರದ ಕಾಡಂಚಿನಲ್ಲಿ ಜನ-ಜಾನುವಾರುಗಳನ್ನು ಕೊಂದಿರುವುದು ಇದೇ ಹುಲಿಯಾಗಿದೆ.

ಇದನ್ನೂ ಓದಿ : ಹಂಪಿ ಭದ್ರತೆಗೆ ಮಾಸ್ಟರ್​​ ಪ್ಲ್ಯಾನ್​​​: ಸ್ಮಾರಕಗಳ ಹಾನಿ ಹೆಚ್ಚಳ ಹಿನ್ನೆಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ

ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಮತ್ತು ಹಂಡೀಪುರದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಇಬ್ಬರು ರೈತರು ನರಭಕ್ಷಕ ಹುಲಿಗೆ ಆಹಾರವಾಗಿದ್ದರು. ಹುಲಿ ದಾಳಿಯಿಂದ ಕಂಗೆಟ್ಟಿರುವ ಗ್ರಾಮಸ್ಥರು ಜಮೀನು ಬಳಿ ತೆರಳಲು ಹೆದರುತ್ತಿದ್ದಾರೆ. ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದರು. ಶೀಘ್ರದಲ್ಲೇ ಹುಲಿ ಸೆರೆ ಹಿಡಿಯುವುದಾಗಿ ಅಧಿಕಾರಿಗಳು ಭರವಸೆಯನ್ನೂ ನೀಡಿದ್ದರು. ಇದೀಗ ಚೌಡಹಳ್ಳಿ ಜೊತೆಗೆ ಇದೇ ವ್ಯಾಪ್ತಿಯಲ್ಲಿ ಮತ್ತೆ ನಾಲ್ಕು ಹುಲಿಗಳು ಕಾಣಿಸಿಕೊಂಡಿದ್ದವು.

First published: October 12, 2019, 9:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading