• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Assembly Election: ಟಿಫಿನ್ ಬಾಕ್ಸ್‌ ಕೊಟ್ಟು ಮತದಾರರಿಗೆ ಗಾಳ, ವೋಟ್‌ಗಾಗಿ 'ಶ್ರೀನಿವಾಸ ಕಲ್ಯಾಣ'!

Assembly Election: ಟಿಫಿನ್ ಬಾಕ್ಸ್‌ ಕೊಟ್ಟು ಮತದಾರರಿಗೆ ಗಾಳ, ವೋಟ್‌ಗಾಗಿ 'ಶ್ರೀನಿವಾಸ ಕಲ್ಯಾಣ'!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮತದಾರರನ್ನು (Voters) ಸೆಳೆಯಲು ರಾಜಕಾರಣಿಗಳು (Politician) ಹಲವು ರೀತಿಯ ಕಸರತ್ತು ಆರಂಭಿಸಿದ್ದಾರೆ. ಬೆಳಗಾವಿ ಗ್ರಾಮೀಣ (Belagavi Rural) ಕ್ಷೇತ್ರದ ಕುದ್ರೆಮನೆ ಗ್ರಾಮದಲ್ಲಿ ಗಿಫ್ಟ್ ಕೊಟ್ಟು ಮತದಾರರನ್ನು ಆಕರ್ಷಿಸುವ ಯತ್ನ ಮಾಡಲಾಗಿದೆ. ಇತ್ತ ಚಿಕ್ಕಬಳ್ಳಾಪುರದಲ್ಲಿ (Chikakballapur) ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಲಾಗಿದೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Karnataka, India
 • Share this:

ಬೆಳಗಾವಿ/ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Assembly elections) ಇನ್ನೂ ಘೋಷಣೆಯಾಗಿಲ್ಲ, ಆದರೆ ಅಷ್ಟರಲ್ಲಾಗಲೇ ಜನಪ್ರತಿನಿಧಿಗಳ ಚುನಾವಣಾ ಅಬ್ಬರ ಜೋರಾಗುತ್ತಿದೆ. ಮತದಾರರನ್ನು (Voters) ಸೆಳೆಯಲು ರಾಜಕಾರಣಿಗಳು (Politician) ಹಲವು ರೀತಿಯ ಕಸರತ್ತು ಆರಂಭಿಸಿದ್ದಾರೆ. ಇನ್ನು ಬೆಳಗಾವಿ ಗ್ರಾಮೀಣ (Belagavi Rural) ಕ್ಷೇತ್ರದ ಕುದ್ರೆಮನೆ ಗ್ರಾಮದಲ್ಲಿ ಗಿಫ್ಟ್ ಕೊಟ್ಟು ಮತದಾರರನ್ನು ಆಕರ್ಷಿಸುವ ಯತ್ನ ಮಾಡಲಾಗಿದೆ. ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಟಿಫಿನ್ ಬಾಕ್ಸ್‌ಗಳ (Tiffin box) ಜಪ್ತಿ ಮಾಡಲಾಗಿದೆ. ಅತ್ತ ಚಿಕ್ಕಬಳ್ಳಾಪುರದಲ್ಲಿ (Chikakballapur) ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಲಾಗಿದೆ. ಈ ಪ್ರಯುಕ್ತ ಶ್ರೀನಿವಾಸ ಕಲ್ಯಾಣದ ಹೆಸರಲ್ಲಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಯತ್ನಿಸಿದ್ದಾರೆ.    


ಮತದಾರರಿಗೆ ಟಿಫನ್ ಬಾಕ್ಸ್ ಹಂಚಿಕೆ


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುದ್ರೆಮನಿ ಗ್ರಾಮದಲ್ಲಿ ಟಿಫಿನ್ ಬಾಕ್ಸ್ ಕೊಟ್ಟು ಮತದಾರರನ್ನು ಸೆಳೆಯಲು ಯತ್ನಿಸಲಾಗಿದೆ. ಮತದಾರರಿಗೆ ಗಿಪ್ಟ್ ಕೊಡಲು ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಟಿಫಿನ್ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಇರುವ ಟಿಫಿನ್ ಬಾಕ್ಸ್‌ಗಳು ಎನ್ನಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಸಾವಿರಾರು ಟಿಫಿನ್ ಬಾಕ್ಸ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.


ಶ್ರೀನಿವಾಸ ಕಲ್ಯಾಣ ಆಯೋಜನೆ


ಚುನಾವಣೆ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುಖಂಡರೊಬ್ಬರು ವೈಕುಂಠವನ್ನೇ ಧರೆಗಿಳಿಸಿದ್ದಾರೆ. ಶ್ರೀನಿವಾಸ ಕಲ್ಯಾಣ ಮೂಲಕ ಮತ ಬ್ಯಾಂಕ್ ಹೆಚ್ಚಳಕ್ಕೆ ನಾಯಕರು ಮುಂದಾಗುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ಹೆಸರಲ್ಲಿ ಭರ್ಜರಿ ಮತಬೇಟೆ‌ ನಡೆದಿದೆ.


ಇದನ್ನೂ ಓದಿ: Siddaramaiah: ಕೋಲಾರವೇನು ಕಬ್ಬಿಣದ ಕಡಲೆಯೇ? ಅಲ್ಲಿ ಬಿಟ್ಟು, ಇಲ್ಲಿ ಬಿಟ್ಟು, ನಿಲ್ಲೋದೆಲ್ಲಿಂದ ಸಿದ್ದು?


ಯಾರಿಂದ ಆಯೋಜನೆ?


ಚಿಂತಾಮಣಿ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಿ ಎನ್ ವೇಣುಗೋಪಾಲ್ ಎಂಬುವರು ಶ್ರೀನಿವಾಸ ಕಲ್ಯಾಣ ಆಯೋಜನೆ ಮಾಡಿದ್ದರು. ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಕಾಲೇಜನ ಬಳಿ ಕಲ್ಯಾಣೋತ್ಸವ ನಡೆಯಿತು. ತಿರುಪತಿ ಮಾದರಿಯಲ್ಲಿ ಸೆಟ್ ಹಾಕಿಸಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲಾಗಿದ್ದು, ಕಲ್ಯಾಣೋತ್ಸವದಲ್ಲಿ ಸಾವಿರಾರು ಜನರು ಭಾಗಿಯಾಗಿದ್ರು. ಇನ್ನು ಬಂದ ಭಕ್ತಾದಿಗಳಿಗೆ ತಿರುಪತಿಯಲ್ಲಿ ನೀಡುವ ಪುಳಿಯೋಗರಿ, ಪೊಂಗಲ್, ಮೊಸರನ್ನ, ಲಾಡು ವಿತರಣೆ ಮಾಡಲಾಯ್ತು.


ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ


ಅತ್ತ ಕಲಬುರಗಿ ಉತ್ತರ ಮತ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಶಾಸಕಿ‌ ಖನೀಜಾ ಫಾತೀಮಾ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಚಂದು ಪಾಟೀಲ್ ಬೆಂಬಲಿಗರ ನಡುವೆ ವಾಗ್ವಾದ, ಗಲಾಟೆ ನಡೆದಿದೆ.
ಪರಿಸ್ಥಿತಿ ಶಾಂತಗೊಳಿಸಿದ ಪೊಲೀಸರು

top videos


  ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ ವೇಳೆ ಗಲಾಟೆ ನಡೆದಿದೆ. ಗ್ಯಾರೆಂಟಿ ‌ಕಾರ್ಡ್ ಕೊಡ್ತಾ ಇದ್ದೀರಾ. ಆದ್ರೆ ಯಾವತ್ತು ಕೋಡ್ತಿರಾ ಎಂದು ದಿನಾಂಕ ಹಾಕಿ ಕೊಡಿ ಎಂದು ಬಿಜೆಪಿ ಕಾರ್ಯಕರ್ತರ ವಾದಿಸಿದ್ದಾರೆ. ತಮ್ಮ ತಮ್ಮ ನಾಯಕರಿಗೆ ಜೈಕಾರ ಕೂಗಿ ಶಕ್ತಿ ಪ್ರದರ್ಶಿಸಿದ್ದಾರೆ. ಹೀಗಾಗಿ ಕೆಲ‌ಕಾಲ ಸ್ಥಳ ದಲ್ಲಿ ಬಿಗುವಿನ ವಾತಾವರಣ ನಿರ್ಮಾಣಲಾಗಿತ್ತು. ಕೊನೆಗೆ ಸ್ಥಳದಲ್ಲಿದ್ದ ಪೊಲೀಸರ ಮದ್ಯಸ್ಥಿಕೆಯಲ್ಲಿ ಗಲಾಟೆ ಶಾಂತಗೊಂಡಿದೆ.

  First published: