Karnataka Politics: ಧಾರವಾಡ ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಸಿಗುತ್ತಾ ಶಾಕ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಧಾರವಾಡ (Dharwad) ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಟಿಕೆಟ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಧಾರವಾಡ-ಹುಬ್ಬಳ್ಳಿ ರಾಜಕೀಯ ಅಂಗಳದಲ್ಲಿ ಈ ಚರ್ಚೆಗಳು ಆರಂಭಗೊಂಡಿವೆ.

  • Share this:

ಧಾರವಾಡ: ವಿಧಾನಸಭಾ ಚುನಾವಣೆ ಘೋಷಣೆಗೂ (Assembly Elections) ಮುನ್ನವೇ ಟಿಕೆಟ್ ಘೋಷಣೆ ಮಾಡಲು ರಾಜಕೀಯ ಪಕ್ಷಗಳು (Political Party) ಮುಂದಾಗಿವೆ. ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್ (JDS) ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಬಹುತೇಕ ಹಾಲಿ ಶಾಸಕರಿಗೆ (MLAs) ಟಿಕೆಟ್ ನೀಡೋದು ಖಚಿತ ಎನ್ನಲಾಗಿದೆ. ಆದ್ರೆ ಧಾರವಾಡ (Dharwad) ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಟಿಕೆಟ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಧಾರವಾಡ-ಹುಬ್ಬಳ್ಳಿ ರಾಜಕೀಯ ಅಂಗಳದಲ್ಲಿ ಈ ಚರ್ಚೆಗಳು ಆರಂಭಗೊಂಡಿವೆ. ಇಬ್ಬರು ಬಿಜೆಪಿ ಮತ್ತು ಓರ್ವ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಸಿಗೋದು ಡೌಟ್ ಎಂಬ ಮಾತುಗಳು ಧಾರವಾಡ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.


ಯಾರಿಗೆಲ್ಲಾ ಟಿಕೆಟ್​ ಡೌಟ್?


ಹುಬ್ಬಳ್ಳಿ - ಧಾರವಾಡ ಸೆಂಟ್ರಲ್, ಕಲಘಟಗಿ ಹಾಗೂ ಕುಂದಗೋಳ ಕ್ಷೇತ್ರದ ಶಾಸಕರು ಡೇಂಜರ್ ಝೋನ್ ನಲ್ಲಿದ್ದಾರಂತೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagdish Shettar), ಕಲಘಟಗಿ ಶಾಸಕ ಸಿ.ಎಂ.ನಿಂಬೆಣ್ಣನವರ (MLA CM Nimbennavar), ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿಗೆ (Kusumavati Shivalli) ಟಿಕೆಟ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.


ticket will miss for these 3 mla s from dharwad mrq
ಸಿಎಂ ನಿಂಬೆಣ್ಣವರ್, ಶಾಸಕ


ಈ ಮೂವರ ಬದಲಾಗಿ ಹೊಸಬರನ್ನು ಅಖಾಡಕ್ಕಿಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿದ್ದು, ಈ ಬಗ್ಗೆ ಆಂತರಿಕವಾಗಿಯೂ ಚರ್ಚೆಗಳು ನಡೆದಿವೆಯಂತೆ. ಸತತ ಆರು ಬಾರಿ ಶಾಸಕರು, ಒಮ್ಮೆ ಸಿಎಂ ಆಗಿರುವ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಲು ಕಮಲ ಪಾಳಯದಲ್ಲಿಯೇ ಯತ್ನ ನಡೆದಿದೆಯಂತೆ. ಈ ಮಾತುಗಳಿಗೆ ಪೂರಕ ಎಂಬಂತೆ ಇತ್ತೀಚೆಗೆ ಜಗದೀಶ್ ಶೆಟ್ಟರ್ ಅವರನ್ನು ಸೈಡ್​ ಲೈನ್​ ಮಾಡುತ್ತಿರೋದು ಬಹಿರಂಗವಾಗಿತ್ತು.


ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಹುಬ್ಬಳ್ಳಿಗೆ ಆಗಮಿಸಿದ್ದ ವೇಳೆ ಜಗದೀಶ್ ಶೆಟ್ಟರ್ ಹೆಸರನ್ನ ಅತಿಥಿಗಳ ಪಟ್ಟಿಯಿಂದ ಕೈ ಬಿಡಲಾಗಿತ್ತು. ಅಂತಿಮ ಕ್ಷಣದಲ್ಲಿ ಹೆಸರನ್ನು ಸೇರಿಸಲಾಗಿತ್ತು.


ticket will miss for these 3 mla s from dharwad mrq
ಜಗದೀಶ್ ಶೆಟ್ಟರ್, ಮಾಜಿ ಸಿಎಂ


ಶಕ್ತಿ ಪ್ರದರ್ಶನ ಮಾಡಿದ್ದ ಶೆಟ್ಟರ್


ಇನ್ನು ಜಗದೀಶ್ ಶೆಟ್ಟರ್ ಹುಟ್ಟುಹಬ್ಬ ಆಚರಿಸಿಕೊಳ್ಳುವ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿ ವಿರೋಧಿಗಳು ಟಾಂಗ್ ನೀಡಿದ್ದರು. ಈ ಸಮಯದಲ್ಲಿ ಆಗಮಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ರಹಸ್ಯ ಚರ್ಚೆ ನಡೆಸಿದ್ದರು.




ಕುಂದುಗೋಳ ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕುಸುಮಾವತಿ ಶಿವಳ್ಳಿ ಅವರಿಗೂ ಟಿಕೆಟ್ ಸಿಗಲ್ಲ ಎನ್ನಲಾಗುತ್ತಿದೆ. ಕುಂದಗೋಳದಲ್ಲಿ ಹಾಲಿ ಶಾಸಕರ ಜೊತೆ ಎಂಟು ಜನರು ಅರ್ಜಿ ಸಲ್ಲಿಸಿದ್ದಾರೆ.


12ಕ್ಕೂ ಅಧಿಕ ಜನ ಟಿಕೆಟ್ ಆಕಾಂಕ್ಷಿಗಳು


ಇನ್ನು ಕೊನೆಯ ಎಲೆಕ್ಷನ್​ನಲ್ಲಿ ಅಂತಿಮ ಗಳಿಗೆಯಲ್ಲಿ ಟಿಕೆಟ್ ಪಡೆದು ಗೆದ್ದು ಕಲಘಟಗಿಯ ಶಾಸಕರಾಗಿರುವ ಸಿ.ಎಂ.ನಿಂಬೆಣ್ಣವರಿಗೂ ಟಿಕೆಟ್ ತಪ್ಪುವ ಆತಂಕ ಎದುರಾಗಿದೆ. ಕಲಘಟಗಿಯಲ್ಲಿ ಹಾಲಿ ಶಾಸಕರ ಪುತ್ರ ಸೇರಿದಂತೆ 12 ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.


ticket will miss for these 3 mla s from dharwad
ಕುಸುಮಾ ಶಿವಳ್ಳಿ, ಶಾಸಕಿ


ಹು - ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಮಹೇಶ್ ಟೆಂಗಿನಕಾಯಿ ಮತ್ತಿತರರು ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ ಅಖಾಡದಿಂದ ಹಿಂದೆ ಸರಿಯೋಕೆ ಮೂವರಿಗೂ ಒಲ್ಲದ ಮನಸ್ಸು. ನಾನೇ ಸ್ಪರ್ಧಿಸೋದಾಗಿ ಶೆಟ್ಟರ್ ಪದೇ ಪದೇ ಹೇಳುತ್ತಿದ್ದಾರೆ.


ಇದನ್ನೂ ಓದಿ:  PM Modi: ರಾಜಧಾನಿಗೆ ಮೋದಿ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಹೊಸ ಮಾರ್ಗ ಹೀಗಿದೆ


ಮೂವರ ಮುಂದಿನ ನಡೆ ಏನು?


ನಾನೂ ಚುಮಾವಣಾ ಅಖಾಡ ಸಿದ್ಧಪಡಿಸಿಕೊಳ್ತಿರೋದಾಗಿ ಕುಸುಮಾವತಿ ಶಿವಳ್ಳಿ ಹೇಳುತ್ತಿದ್ದಾರೆ. ಟಿಕೆಟ್ ಸಿಗದಿದ್ದಾಗ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎನ್ನುತ್ತಿದ್ದಾರೆ. ಇತ್ತ ಸಿ.ಎಂ.ನಿಂಬೆಣ್ಣನವರ ಮೌನಕ್ಕೆ ಜಾರಿದ್ದಾರೆ. ಸದ್ಯ ಮೂವರ ನಡೆ ಏನು ಎಂಬುವುದು ತೀವ್ರ ಕುತೂಹಲ ಕೆರಳಿಸಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು