News18 India World Cup 2019

ಟಿಕೆಟ್ ವಾರ್; ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್​ ಮೂವರು ಮುಖಂಡರ ನಡುವೆ ಬಿಗ್ ಫೈಟ್

ಜಾತಿ ಲೆಕ್ಕಾಚಾರದಲ್ಲೂ ಕಾಂಗ್ರೆಸ್ ಗೆ ಕ್ಷೇತ್ರ ವರವಾಗುತ್ತದೆ ಎನ್ನಲಾಗಿದೆ. ಅದರಲ್ಲೂ ಜೆಡಿಎಸ್ ಜೊತೆ ಮೈತ್ರಿಯಾದರೆ ಕಾಂಗ್ರೆಸ್ ಗೆ ಗೆಲವು ಸುಲಭವಾಗಲಿದೆ ಎನ್ನುವುದು ಈ ಮೂವರು ಅಭ್ಯರ್ಥಿಗಳ ನಂಬಿಕೆಯಾಗಿದೆ. ಅದಕ್ಕಾಗಿ ಮೂವರು ಕೈ ನಾಯಕರು ಸ್ಪರ್ಧೆಗಾಗಿ ಫೈಪೋಟಿ ನಡೆಸಿದ್ದಾರೆ.

G Hareeshkumar | news18
Updated:January 11, 2019, 2:40 PM IST
ಟಿಕೆಟ್ ವಾರ್; ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್​ ಮೂವರು ಮುಖಂಡರ ನಡುವೆ ಬಿಗ್ ಫೈಟ್
ಸಾಂದರ್ಭಿಕ ಚಿತ್ರ
G Hareeshkumar | news18
Updated: January 11, 2019, 2:40 PM IST
 - ಶ್ರೀನಿವಾಸ ಹಳಕಟ್ಟಿ

ಬೆಂಗಳೂರು ( ಜ.11) : ಲೋಕಸಭಾ ಚುನಾವಣೆ ಸಮೀಪಿಸುತ್ತಿದಂತೆ ಕಾಂಗ್ರೆಸ್​ ನಲ್ಲಿ ಟಿಕೆಟ್​ಗಾಗಿ ಲಾಬಿ ಶುರುವಾಗಿದೆ. ಬೆಂಗಳೂರು ಸೆಂಟ್ರಲ್​​ನಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್​ ನಲ್ಲಿ ಅಭ್ಯರ್ಥಿಯಾಗಲು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ರೋಷನ್ ಬೇಗ್ ಹಾಗೂ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರ ನಡುವೆ ಪೈಪೋಟಿ ನಡೆಸುತ್ತಿದ್ದಾರೆ.

ಬೆಂಗಳೂರು ಸೆಂಟ್ರಲ್ ಗ ಲೋಕಸಭಾ ಕ್ಷೇತ್ರಕ್ಕೆ ಸರ್ವಜ್ಞನಗರ, ಶಿವಾಜಿನಗರ, ಸಿ ವಿ ರಾಮನನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ ಸರ್ವಜ್ಞ ನಗರ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ  ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇವುಗಳಲ್ಲಿ ಐದು ಕಾಂಗ್ರೆಸ್ ಹಾಗೂ ಬಿಜೆಪಿಯ ಮೂವರು ಶಾಸಕರಿದ್ದಾರೆ.

ಇದನ್ನೂ ಓದಿ :   ‘ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ’: ಮೇಲ್ಜಾತಿಗೆ ಮೀಸಲಾತಿ ವಿಚಾರ ಕೇವಲ ಚುನಾವಣೆ ಗಿಮಿಕ್​​; ಸಿದ್ದರಾಮಯ್ಯ!

ರಾಜ್ಯಸಭಾ ಸದಸ್ಯ ಬಿ. ಕೆ ಹರಿಪ್ರಸಾದ್ ಅವರ, ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಮೂಲಕ ಟಿಕೆಟ್​​ಗಾಗಿ ಲಾಬಿ ಮಾಡುತ್ತಿದ್ದಾರೆ. ಈ ಮೊದಲು ಇವರು ಉತ್ತರ ಕನ್ನಡದಿಂದ ಸ್ಪರ್ಧೆ ಬಯಸಿದ್ದರು. ಆದರೆ ಅಲ್ಲಿ ಸೋಲುವ ಭೀತಿಯಿಂದ ಬೆಂಗಳೂರು ಸೆಂಟ್ರಲ್​ನತ್ತ ಮುಖ ಮಾಡಿದ್ದಾರೆ. ಹರಿಪ್ರಸಾದ್ ಗುಜರಾತ್​ ವಿಧಾನಸಭಾ ಚುನಾವಣೆ ಸಮಯದಲ್ಲಿ ಉಸ್ತುವಾರಿಯಾಗಿದ್ದರು. ಹಾಗಾಗಿ ತನಗೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿ ಇದ್ದಾರೆ ಎನ್ನಲಾಗಿದೆ. 

ಇನ್ನೂ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಈ ಬಾರಿಯೂ ಸ್ಪರ್ಧೆ ಮಾಡಲು ಉತ್ಸುಕದಲ್ಲಿದ್ದು, ಸಚಿವ ಕೃಷ್ಣ ಬೈರೇಗೌಡ ಮೂಲಕ ಟಿಕೆಟ್​ ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಿಜ್ವಾನ್ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇನ್ನೂ ಶಾಸಕ ರೋಷನ್ ಬೇಗ್ ಕೂಡ ರಾಜ್ಯಸಭಾ ಸದಸ್ಯ ಗುಲಾಬ್ ನಬೀ ಆಜಾದ್ ಮೂಲಕ ಲಾಬಿ ನಡೆಸುತ್ತಿದ್ದು,ಇದಕ್ಕೆ  ಸಚಿವ ಜಮೀರ್ ಅಹಮದ್ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ​
Loading...

ಇದನ್ನು ಓದಿ :  ರಾಹುಲ್ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪಗೆ ಇಲ್ಲ - ಬಿ.ಕೆ.ಹರಿಪ್ರಸಾದ್

ಜಾತಿ ಲೆಕ್ಕಾಚಾರದಲ್ಲೂ ಕಾಂಗ್ರೆಸ್ ಗೆ ಕ್ಷೇತ್ರ ವರವಾಗುತ್ತದೆ ಎನ್ನಲಾಗಿದೆ. ಅದರಲ್ಲೂ ಜೆಡಿಎಸ್ ಜೊತೆ ಮೈತ್ರಿಯಾದರೆ ಕಾಂಗ್ರೆಸ್ ಗೆ ಗೆಲವು ಸುಲಭವಾಗಲಿದೆ ಎನ್ನುವುದು ಈ ಮೂವರು ಅಭ್ಯರ್ಥಿಗಳ ನಂಬಿಕೆಯಾಗಿದೆ. ಅದಕ್ಕಾಗಿ ಮೂವರು ಕೈ ನಾಯಕರು ಸ್ಪರ್ಧೆಗಾಗಿ ಫೈಪೋಟಿ ನಡೆಸಿದ್ದಾರೆ.

ಕಳೆದ ಬಾರಿ ರಿಜ್ವಾನ್ ಕೈ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಪಿ.ಸಿ.ಮೋಹನ್ ವಿರುದ್ದ ಸೋತಿದ್ದರು.

ಐದು ಕ್ಷೇತ್ರದ ಜೊತೆಗೆ ದಲಿತ, ಹಿಂದುಳಿದ,ತಮಿಳು, ತೆಲುಗು, ಜೊತೆಗೆ ಅಲ್ಪಸಂಖ್ಯಾತರ ಮತಗಳೇ ಹೆಚ್ಚಿವೆ. ಇವೆಲ್ಲವೂ ಕಾಂಗ್ರೆಸ್ ಮತಗಳೇ ಆಗಿವೆ. ಇದರ ಜೊತೆಗೆ ಜೆಡಿಎಸ್ ಸಪೋರ್ಟ್ ಮಾಡಿದ್ರೆ ಒಕ್ಕಲಿಗ ಮತ ಪಡೆಯುವ ಮೂಲಕ ಗೆಲುವು ಪಡೆಯಬಹುದು ಎನ್ನುವುದು ಅಭ್ಯರ್ಥಿಗಳ ಲೆಕ್ಕಚಾರ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...