• Home
  • »
  • News
  • »
  • state
  • »
  • Karnataka Politics: ಕಾಂಗ್ರೆಸ್​ನಲ್ಲಿ ಡಿಕೆಶಿ-ಸಿದ್ದು ಟಿಕೆಟ್​ ಫೈಟ್​! ಅಭ್ಯರ್ಥಿ ಘೋಷಿಸುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ ಎಂದ್ರು ಕೆಪಿಸಿಸಿ ಅಧ್ಯಕ್ಷ

Karnataka Politics: ಕಾಂಗ್ರೆಸ್​ನಲ್ಲಿ ಡಿಕೆಶಿ-ಸಿದ್ದು ಟಿಕೆಟ್​ ಫೈಟ್​! ಅಭ್ಯರ್ಥಿ ಘೋಷಿಸುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ ಎಂದ್ರು ಕೆಪಿಸಿಸಿ ಅಧ್ಯಕ್ಷ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ

ಟಿಕೆಟ್ ನೀಡುವ ಮೊದಲೇ ತಮ್ಮ ಆಪ್ತರಿಗೆ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿಕೊಂಡಿರುವ ಸಿದ್ದರಾಮಯ್ಯಗೆ ಪರೋಕ್ಷವಾಗಿ ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.21) : ಚುನಾವಣೆ (Election) ಹತ್ತಿರ ಬರ್ತಿದ್ದಂತೆ ಎಲ್ಲಾ ಪಕ್ಷಗಳು (All Party) ಭರ್ಜರಿ ತಯಾರಿ ನಡೆಸುತ್ತಿದೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ (D K Shivakumar)​ ಬಣಗಳು ಭರ್ಜರಿಯಾಗಿ ಸದ್ದು ಮಾಡ್ತಿದೆ. ಕ್ಷೇತ್ರಗಳ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್​ ನಾಯಕರು ಆಪ್ತರಿಗೆ ಟಿಕೆಟ್ ಕುರಿತು ಭರವಸೆಗಳನ್ನು ನೀಡ್ತಿದ್ದಾರೆ. ಕೊಪ್ಪಳದಲ್ಲಿ ಸಿದ್ದರಾಮಯ್ಯ ನಮ್ಮ ಅಭ್ಯರ್ಥಿಯನ್ನು (Candidate) ಗೆಲ್ಲಿಸಿ ಎಂದಿದ್ದಾರೆ. ಟಿಕೆಟ್ (Ticket) ನೀಡುವ ಮೊದಲೇ ತಮ್ಮ ಆಪ್ತರಿಗೆ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿಕೊಳ್ಳುವ ಮೂಲಕ  ಸಿದ್ದರಾಮಯ್ಯ ಅವರು ಡಿಕೆಶಿಗೆ ಟಾಂಗ್​ ಕೊಟ್ಟಿದ್ರು. ಇದೀಗ ಡಿಕೆ ಶಿವಕುಮಾರ್​ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. 


ಹೈಕಮಾಂಡ್​ ಮಾತ್ರ ಇದೆ ಅಭ್ಯ ರ್ಥಿ ಘೋಷಿಸುವ ಅಧಿಕಾರ 


ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಉಮೇದುವಾರರನ್ನು ಸಿದ್ದರಾಮಯ್ಯ ಘೋಷಿಸಿರುವ ಸಂದರ್ಭದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಾಂಗ್ರೆಸ್ ಟಿಕೆಟ್​ಗೆ ಅರ್ಜಿ ಹಾಕಲು ಇಂದು ಕೊನೆಯ ದಿನ. ಬಹುಶಃ ಹಿರಿಯರಿಗೆ ಪ್ರೋತ್ಸಾಹ ನೀಡಲು ಅವರು ಹೀಗೆ ಮಾತನಾಡಿರಬಹುದು. ಆದರೆ ಅಭ್ಯರ್ಥಿಗಳನ್ನು ಘೋಷಿಸುವ ಅಧಿಕಾರವು ಹೈಕಮಾಂಡ್​ಗೆ ಮಾತ್ರವೇ ಇದೆ. ಹೈಕಮಾಂಡ್​ ಎಂದರೆ ಖರ್ಗೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


Ticket fight in Congress d k Shivakumar said Siddaramaiah has no right to announce candidate pvn
ಡಿಕೆ ಶಿವಕುಮಾರ್, ಸಿದ್ದರಾಮಯ್ಯ


ಡಿಕೆಶಿಗೆ ಟಾಂಗ್ ಕೊಟ್ರಾ ಸಿದ್ದರಾಮಯ್ಯ?

 ಇದೇ ರೀತಿ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಪಡೆಯಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ಆಕಾಂಕ್ಷಿಗಳು ಪೈಪೋಟಿಯಲ್ಲಿದ್ದಾರೆ. ಇತ್ತ ಟಿಕೆಟ್ ನೀಡುವ ಮೊದಲೇ ತಮ್ಮ ಆಪ್ತರಿಗೆ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿಕೊಂಡಿರುವ ಸಿದ್ದರಾಮಯ್ಯಗೆ ಪರೋಕ್ಷವಾಗಿ ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಬಲಿಗರ ಪರವಾಗಿ ಸಿದ್ದರಾಮಯ್ಯ ಮನವಿ


ಕೊಪ್ಪಳದ ಮದುವೆ ಮಂಟಪದಲ್ಲೇ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಪರ ಮತಯಾಚಿಸಿದ್ದಾರೆ. ತಮ್ಮ ಬೆಂಬಲಿಗರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡದಿದ್ರೂ ಸಿದ್ದರಾಮಯ್ಯನವರೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ರಾ ಅನ್ನೋ ಪ್ರಶ್ನೆ ಮೂಡಿದೆ.


ಕಾಂಗ್ರೆಸ್ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇನ್ನು ಟಿಕೆಟ್​ಗೆ ಅರ್ಜಿ ಸಲ್ಲಿಸಿಲ್ಲ. ಕೆಪಿಸಿಸಿ ಅಧ್ಯಕ್ಯ ಡಿಕೆ ಶಿವಕುಮಾರ್​ ಕೂಡ ಅರ್ಜಿ ಸಲ್ಲಿಸಿದ್ದಾರೆ.ವೋಟ್​ಗಳನ್ನು ಮಾರುತ್ತಿದ್ದಾರೆ


ಮತ ಪರಿಷ್ಕರಣೆ ಅವ್ಯವಹಾರ ಕುರಿತು ಪ್ರತಿಕ್ರಿಯಿಸಿದ ಅವರು, ವೋಟ್​ಗಳನ್ನು ಮಾರುತ್ತಿದ್ದಾರೆ. ಈ ಹಗರಣದಲ್ಲಿ ಸಾಕಷ್ಟು ಜನರು ಇದ್ದಾರೆ. ಮತಗಳ ಖರೀದಿಗೆ, ಮಾರ್ಪಡಿಸಲು ಎಷ್ಟು ದರ ನಿಗದಿಯಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಇದು ಸಾರ್ವಜನಿಕ ಆಸ್ತಿ. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಮಾಧ್ಯಮದವರು ಧೈರ್ಯದಿಂದ ವರದಿ ಮಾಡಿ ಹಗರಣವನ್ನು ಬೆಳಕಿಗೆ ತಂದಿದ್ದಾರೆ ಎಂದು ಡಿಕೆಶಿ ಹೇಳಿದರು.


ಇದನ್ನೂ ಓದಿ: Karnataka Assembly Elections: ಕಾಂಗ್ರೆಸ್​, ಜೆಡಿಎಸ್​ ಭದ್ರಕೋಟೆ ಭದ್ರಾವತಿ ವಶಪಡಿಸಿಕೊಳ್ಳಲು ಬಿಜೆಪಿ ರಹಸ್ಯ ನಡೆ!


 ನಾಳೆ ದೆಹಲಿಗೆ ರಾಜ್ಯ ಕೈ ನಾಯಕರು


ಚಿಲುಮೆ ವೋಟರ್ ಐಡಿ ಹಗರಣ ದೆಹಲಿ ಮಟ್ಟದಲ್ಲಿ ಪ್ರತಿ ಧ್ವನಿಸಲಿದೆ. ನಾಳೆ ದೆಹಲಿಗೆ ತೆರಳಲಿರುವ ರಾಜ್ಯ ಕಾಂಗ್ರೆಸ್ ನಾಯಕರು, ಕೇಂದ್ರ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಳೆ ದೆಹಲಿಗೆ ತೆರಳಲಿದ್ದಾರೆ. ನ. 23 ರಂದು ಈ ಕುರಿತು ಕಾಂಗ್ರೆಸ್ ನಾಯಕರು ದೂರು ಕೊಡಲಿದ್ದಾರೆ. ಜೊತೆಗೆ ಅಂದೇ ಇಡಿ ವಿಚಾರಣೆಗೂ ಡಿಕೆ ಶಿವಕುಮಾರ್​ ಹಾಜರಾಗುವ ಸಾಧ್ಯತೆ

Published by:ಪಾವನ ಎಚ್ ಎಸ್
First published: