• Home
  • »
  • News
  • »
  • state
  • »
  • Kodagu: ಎರಡು ವರ್ಷಗಳ ಬಳಿಕ ಓಪನ್ ಆದ 'ಟಿಬೆಟಿಯನ್ ಧರ್ಮಶಾಲಾ' ಬಾಗಿಲು, ನೀವು ಬನ್ನಿ ಪ್ರವಾಸಕ್ಕೆ

Kodagu: ಎರಡು ವರ್ಷಗಳ ಬಳಿಕ ಓಪನ್ ಆದ 'ಟಿಬೆಟಿಯನ್ ಧರ್ಮಶಾಲಾ' ಬಾಗಿಲು, ನೀವು ಬನ್ನಿ ಪ್ರವಾಸಕ್ಕೆ

ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಪ್ರಾರ್ಥನಾಲಯ

ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಪ್ರಾರ್ಥನಾಲಯ

ಈಗ ಬರುತ್ತಿರುವ ಪ್ರವಾಸಿಗರು ಮೊನಾಸರಿಯ ಒಳಗೆ, ಒಳ ಆವರಣ ಇಲ್ಲೆಲ್ಲ ಸ್ವಚ್ಚಂದವಾಗಿ ಓಡಾಡಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

  • Share this:

ಕೊಡಗು: ಚೀನಾದಲ್ಲಿ (Chine) ಹುಟ್ಟಿ ಜಗತ್ತಿಗೆ ಹರಡಿದ ಕೋವಿಡ್ (Covid) ಸೋಂಕು ಭಾರತ (India) ದೇಶದಲ್ಲೂ ಆರ್ಭಟಿಸುತ್ತಿದ್ದಂತೆ 2019ರ ಡಿಸೆಂಬರ್ ನಲ್ಲಿ ದೇಶವೇ ಲಾಕ್ಡೌನ್ (Lockdown) ಆಗಿತ್ತು. ಈ ವೇಳೆ ಕೊಡಗು (Kodagu) ಜಿಲ್ಲೆ ಕುಶಾಲನಗರ (Kushalanagara) ಸಮೀಪದ ಬೈಲುಕುಪ್ಪೆಯಲ್ಲಿರುವ (Bailukuppe) ಟಿಬೆಟಿಯನ್ ಕ್ಯಾಂಪಿನ ಧರ್ಮ ಶಾಲಾ ಕೂಡ ಬಂದ್ ಆಗಿತ್ತು. ಅಂದು ಬಂದ್ ಆಗಿದ್ದ ಧರ್ಮಶಾಲಾ ಮೊನಾಸರಿ ಆ ನಂತರ ಎರಡು ವರ್ಷಗಳ ಕಾಲ ತೆರೆಯಲೇ ಇಲ್ಲ. ಆದರೆ ಶನಿವಾರದಿಂದ ಮತ್ತೆ ಓಪನ್ (Open) ಆಗಿದ್ದು ನಿಧಾನವಾಗಿ ಹಿಂದಿನ ವೈಭವಕ್ಕೆ ತಿರುಗುತ್ತಿದೆ. ನಿಧಾನಕ್ಕೆ ಪ್ರವಾಸಿಗರು (Tourist) ಇತ್ತ ಬರುತ್ತಿದ್ದಾರೆ. ಬುದ್ಧನಿಗೆ ಪ್ರಾರ್ಥನೆ ಸಲ್ಲಿಸಿ, ಇಲ್ಲಿನ ಪ್ರಕೃತಿ (Nature) ಸೌಂದರ್ಯ ನೋಡಿ ಮೈಮರೆಯುತ್ತಿದ್ದಾರೆ.


2 ವರ್ಷಗಳಿಂದ ಬಂದ್ ಆಗಿದ್ದ ಧರ್ಮಶಾಲಾ


ದೇಶದ ಎಲ್ಲೆಡೆ ಕೋವಿಡ್ ಸೋಂಕು ಹರಡಿ ಆ ಮಹಾಮಾರಿಗೆ ಸಾವಿರಾರು ಜನರು ಬಲಿಯಾಗಿದ್ದರು. ಇದರಿಂದ ಆತಂಕಗೊಂಡ ಟಿಬೆಟಿಯನ್ ಧರ್ಮ ಗುರುಗಳು ಧರ್ಮಶಾಲಾ ಮೊನಾಸರಿಯನ್ನು ಸಂಪೂರ್ಣ ಬಂದ್ ಮಾಡಿದ್ದರು. ಮೊನಾಸರಿಯಲ್ಲಿ ಇಂದಿಗೂ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಕಲಿಯುತ್ತಿದ್ದಾರೆ.


ಪ್ರವಾಸಿಗರಿಂದಲೇ ಉಂಟಾಗಿದ್ದ ಆತಂಕ


ಹೊರಗಿನಿಂದ ಬರುವ ಎಲ್ಲಾ ಪ್ರವಾಸಿಗರಿಗೂ ಮೊನಾಸರಿಯ ಒಳಗೆ ಹೋಗಿ ಬರಲು ಮುಕ್ತ ಅವಕಾಶ ನೀಡಿದರೆ ಮೊನಾಸರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೋವಿಡ್ ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಒಂದು ವೇಳೆ ಕೋವಿಡ್ ಸೋಂಕು ಧರ್ಮಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹರಡಿದ್ದೇ ಆದಲ್ಲಿ ಊಹೆಗೂ ಮೀರಿದ ಸಾವು ನೋವುಗಳ ಎದುರಾಗಬಹುದು ಎಂಬ ಆತಂಕವಿತ್ತು. ಹೀಗಾಗಿಯೇ ಮೊನಾಸರಿಗೆ ಸಾರ್ವಜನಿಕರ ಸಂಪರ್ಕವನ್ನು ಎರಡು ವರ್ಷಗಳಿಂದ ನಿಷೇಧಿಸಲಾಗಿತ್ತು.


ಇದನ್ನೂ ಓದಿ: Farmer: ರೈತರಿಗೆ ಮರು ‘JIVA‘ ಕೊಡಲು ಮುಂದಾದ ವಿಜ್ಞಾನಿ! ಅವರು ಸಂಶೋಧಿಸಿದ ಯಂತ್ರದಿಂದ ಕೃಷಿಕರಿಗೆ ಖುಷಿ!


 ಪ್ರವಾಸಿಗರಿಲ್ಲದೇ ವ್ಯಾಪಾರಿಗಳಿಗೂ ಸಂಕಷ್ಟ


ಧರ್ಮಶಾಲಾ ಮೊನಾಸರಿಯನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಈ ಪ್ರವಾಸಿಗರನ್ನು ನಂಬಿದ್ದ ನೂರಾರು ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದರು. ಆದರೆ ಲಾಕ್ಡೌನ್ ಸಂದರ್ಭ ಬಂದ್ ಆಗಿದ್ದ ಮೊನಾಸರಿ ಎರಡು ವರ್ಷಗಳ ಕಾಲ ತೆರೆಯದೇ ಇದ್ದಿದ್ದರಿಂದ ಪ್ರವಾಸಿಗರು ಸಂಪೂರ್ಣ ಬರುವುದನ್ನು ನಿಲ್ಲಿಸಿದರು. ಹೀಗಾಗಿ ಪ್ರವಾಸಿಗರನ್ನೇ ನಂಬಿದ್ದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸಿದ್ದರು.


ಮತ್ತೆ ಧರ್ಮಶಾಲೆಯತ್ತ ಬರುತ್ತಿರುವ ಪ್ರವಾಸಿಗರು


ತಮ್ಮ ಅಂಗಡಿ ಮಳಿಗಳ ಬಾಡಿಗೆಯನ್ನು ಕಟ್ಟಲು ಸಾಧ್ಯವಾಗದೆ ತಮ್ಮ ವ್ಯಾಪಾರ ವಹಿವಾಟುಗಳನ್ನೇ ಬಿಡುವ ಪರಿಸ್ಥಿತಿಗೆ ತಲುಪಿದ್ದರು. ಸದ್ಯ ನಿನ್ನೆಯಿಂದ ಮೊನಾಸರಿಯನ್ನು ತೆರೆದು ಎಲ್ಲಾ ಪ್ರವಾಸಿಗರಿಗೆ ಪ್ರವೇಶ ಮುಕ್ತಗೊಳಿಸಿರುವುದರಿಂದ ಒಂದಷ್ಟು ಪ್ರಮಾಣದ ಪ್ರವಾಸಿಗರು ಮತ್ತೆ ಬರಲಾರಂಭಿಸಿದ್ದಾರೆ.


ಪ್ರವಾಸಿಗರಿಗೆ ಸಂತಸ


ಬರುತ್ತಿರುವ ಪ್ರವಾಸಿಗರು ಮೊನಾಸರಿಯ ಒಳಗೆ, ಒಳ ಆವರಣ ಇಲ್ಲೆಲ್ಲ ಸ್ವಚ್ಚಂದವಾಗಿ ಓಡಾಡಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಮೊನಾಸರಿ ನೋಡಬೇಕೆಂದು ಬರಲು ಪ್ರಯತ್ನಿಸಿದರೂ ತೆರೆಯದ ಕಾರಣ ಸಾಧ್ಯವಾಗಿರಲಿಲ್ಲ. ಈಗ ತೆರೆದಿರುವುದು ತುಂಬಾ ಖುಷಿಯಾಗಿದೆ ಎಂದು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗ ಈಶ್ವರ್ ಸಂತರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Haunted Places in Karnataka: ದೆವ್ವಗಳಿರೋ ಅನುಭವವಾಗಲು ಕರ್ನಾಟಕದ ಈ ಜಾಗಗಳಿಗೆ ಭೇಟಿ ನೀಡಬಹುದಂತೆ!


ಮತ್ತೊಬ್ಬ ಪ್ರವಾಸಿ ಅನಿತಾ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರು ಒಂದಷ್ಟು ಪ್ರಮಾಣದಲ್ಲಿ ಬರುತ್ತಿರುವುದರಿಂದ ಮತ್ತೆ ವ್ಯಾಪಾರ ವಹಿವಾಟುಗಳು ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಸ್ಥಳೀಯ ವ್ಯಾಪಾರಿ ಅಫ್ರಿದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Published by:Annappa Achari
First published: