Kodagu: ಗಣವೇಷಧಾರಿಯಾಗಿ ರಂಜನ್ ಜೊತೆಗೆ ತರಬೇತಿ ಪಡೆದಿರುವ ಸಂಪತ್ ಯಾವ ಪಕ್ಷ?

ಇದೆಲ್ಲವನ್ನೂ ಖಂಡಿಸಿ ಕಾಂಗ್ರೆಸ್ ಆಗಸ್ಟ್ 26 ರಂದು ಕೊಡಗು ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ಲಾನ್ ರೂಪಪಿಸುತ್ತಿದ್ದಂತೆ ಬಿಜೆಪಿ ಕೂಡ ಅದೇ ದಿನದಂದು ಬೃಹತ್ ಜನಜಾಗೃತಿ ಸಮಾವೇಶ ಮಾಡುವುದಾಗಿ ಘೋಷಿಸಿದೆ.

ಸಂಪತ್

ಸಂಪತ್

  • Share this:
ಕೊಡಗು: ಮಳೆಹಾನಿ ಪರಿಶೀಲನೆ ನಡೆಸಲು ಕೊಡಗಿಗೆ (Kodagu) ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ ಕಾರಿಗೆ ಮೊಟ್ಟೆ (Egg) ಹೊಡೆದ ಯುವಕ ನಿಜವಾಗಲೂ ಯಾವ ಪಕ್ಷದವನ್ನು ಎನ್ನುವ ವಿಚಾರ ಎರಡು ಪಕ್ಷಗಳ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದರೆ, ಶನಿವಾರ ಬಂಧನಕ್ಕೆ ಒಳಗಾಗಿರುವ ಆರೋಪಿ ಸಂಪತ್ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೇ (Congress Activist) ಎಂದು ಹೇಳುವ ಮೂಲಕ ಮತ್ತಷ್ಟು ಗೊಂದಲ ಮೂಡಿಸಿದ್ದಾನೆ. ಆಗಸ್ಟ್ 18 ರಂದು ಕುಶಾಲನಗರದ (Kushalanagara) ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯನವರ ಕಾರು ಆಗಮಿಸುತ್ತಿದ್ದಂತೆ ಅವರ ಕಾರಿಗೆ ಆರೋಪಿ ಸಂಪತ್ ಮೊಟ್ಟೆಯಿಂದ ಹೊಡೆದಿದ್ದ. ಮೊಟ್ಟೆ ಹೊಡೆಯುತ್ತಿದ್ದಂತೆ ಸ್ಥಳದಲ್ಲಿಯೇ ಇದ್ದ ಪಿಎಸ್‍ಐ ಚಂದ್ರಶೇಖರ್ ಆರೋಪಿಯನ್ನು ಬಂಧಿಸಿದ್ದರು.

ಮೊಟ್ಟೆ ಹೊಡೆದಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೊಟ್ಟೆ ಹೊಡೆದ ಕಿಡಿಗೇಡಿ ಕಾಂಗ್ರೆಸ್ ಕಾರ್ಯಕರ್ತನೇ ಎಂದು ಬಿಜೆಪಿಯ ಹಲವರು, ಆರೋಪಿ ಸಂಪತ್ ಕಾಂಗ್ರೆಸ್ ಬಾವುಟ ಹಿಡಿದಿರುವ ಫೋಟೋ ಬಿಡುಗಡೆ ಮಾಡಿದ್ದರು. ಆದರೆ ಶನಿವಾರ ಬೆಳಿಗ್ಗೆ ಮಡಿಕೇರಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ಮೊಟ್ಟೆ ಹೊಡೆದ ಕಿಡಿಗೇಡಿ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಸಂಪತ್ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದರು.

throwing eggs at Siddaramaiahs car arrested man which party rsk mrq
ಅಪ್ಪಚ್ಚು ರಂಜನ್ ಜೊತೆ ಸಂಪತ್


ಅವನ ಪರಿಚಯ ಇಲ್ಲ

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಈತ ಯಾರು ಎನ್ನುವುದೇ ಗೊತ್ತಿಲ್ಲ, ಆತನ ಪರಿಚಯವೂ ಇಲ್ಲ. ಆದರೆ ಕಾರ್ಯಕರ್ತರನ್ನು ವಿಚಾರಿಸಿದಾಗ ಅವನು ರಾಮನವಮಿಯಲ್ಲಿ ನಿಮ್ಮೊಂದಿಗೆ ಕೇಸರಿ ಶಲ್ಯ ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದ ಎಂಬ ಮಾಹಿತಿಯನ್ನು ಹೇಳಿದ್ದಾರೆ ಎಂದರು.

ಇದನ್ನೂ ಓದಿ:  MLA Raju Gowda: ನಿಷೇಧದ ನಡುವೆಯೂ ಡ್ಯಾಂ ಬಳಿ ನಿಂತು ಪೋಸ್! ಶಾಸಕ ರಾಜುಗೌಡ ಪುತ್ರನಿಗಿದೆಯಾ ಬೇರೆ ರೂಲ್ಸ್?

ಈ ನಡುವೆ ಬುಧವಾರ ರಾತ್ರಿ ನಾಪತ್ತೆಯಾಗಿದ್ದ ಸಂಪತ್ ಶನಿವಾರ ಕುಶಾಲನಗರದಲ್ಲಿ ಪ್ರತ್ಯಕ್ಷನಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ. ನಾನು ಹಿಂದೆ ಜೆಡಿಎಸ್ ನಲ್ಲಿ ಇದ್ದೆ. ಮಾಜಿ ಸಚಿವ ಜಿ ವಿಜಯ ಅವರು ಕಾಂಗ್ರೆಸ್‍ಗೆ ಬಂದಿದ್ದರಿಂದ ನಾನೂ ಕಾಂಗ್ರೆಸ್‍ಗೆ ಬಂದಿದ್ದೇನೆ. ನಾನು ಕಾಂಗ್ರೆಸ್ ಕಾರ್ಯಕರ್ತನೇ ಎಂದು ಹೇಳಿದ. ಅಷ್ಟರಲ್ಲೇ ಸ್ಥಳಕ್ಕೆ ಬಂದ ಕುಶಾಲನಗರ ಗ್ರಾಮಾಂತರ ಠಾಣೆ ಎಸ್‍ಐ ಚಂದ್ರಶೇಖರ್ ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಗಣವೇಷಧಾರಿಯಾದ ಫೋಟೋ ವೈರಲ್

ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್ ಆರೋಪಿ ಸಂಪತ್ ಗಣವೇಷಧಾರಿಯಾಗಿ ಶಾಸಕ ಅಪ್ಪಚ್ಚು ರಂಜನ್ ಅವರ ಜೊತೆಗೆ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆರ್‍ಎಸ್‍ಎಸ್ ಪ್ರಶಿಕ್ಷಾ ವರ್ಗದಲ್ಲಿ ಭಾಗವಹಿಸಿರುವ ಮತ್ತಷ್ಟು ಫೋಟೋಗಳನ್ನು ಬಿಡುಗಡೆ ಮಾಡಿದೆ.

ಈ ಕುರಿತು ಮಾತನಾಡಿರುವ ಮಿಥುನ್ ಗೌಡ, ಸಂಪತ್ ಬಿಜೆಪಿಯವನು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿಗಳು ಬೇಕೇ. ಬಿಜೆಪಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದು ಕಾಂಗ್ರೆಸ್‍ನವರೇ ಹೊಡೆದಿದ್ದಾರೆ ಎಂದು ಇಲ್ಲದ ಸುಳ್ಳುಗಳನ್ನು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಅದು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.

throwing eggs at Siddaramaiahs car arrested man which party rsk mrq
ಕಾಂಗ್ರೆಸ್ ಧ್ವಜ ಹಿಡಿದು ನಿಂತಿರುವ ಸಂಪತ್


ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಪ್ಲಾನ್

ಇದೆಲ್ಲವನ್ನೂ ಖಂಡಿಸಿ ಕಾಂಗ್ರೆಸ್ ಆಗಸ್ಟ್ 26 ರಂದು ಕೊಡಗು ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ಲಾನ್ ರೂಪಪಿಸುತ್ತಿದ್ದಂತೆ ಬಿಜೆಪಿ ಕೂಡ ಅದೇ ದಿನದಂದು ಬೃಹತ್ ಜನಜಾಗೃತಿ ಸಮಾವೇಶ ಮಾಡುವುದಾಗಿ ಘೋಷಿಸಿದೆ.

ಈ ಕುರಿತು ಶಾಸಕದ್ವಯರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಆಗಸ್ಟ್ 26 ರಂದು ಪ್ರತೀ ಬೂತ್ ಮಟ್ಟದಿಂದಲೂ ಕಾರ್ಯಕರ್ತರನ್ನು ಕರೆಸಿ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಮಾವೇಶ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ:  Siddaramaiah Tweet: ಮೊಟ್ಟೆ ಎಸೆದವ ಕಾಂಗ್ರೆಸ್‌ನವನಾಗಿದ್ರೆ ಜೈಲಿಗೆ ಕಳಿಸಿ! ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್

ಅಂದು ಕನಿಷ್ಠ ಒಂದು ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡುವುದಾಗಿ ಹೇಳಿದರು. ಹೀಗಾಗಿ ಜಿಲ್ಲೆಯಲ್ಲಿ ಮೊಟ್ಟೆ ಪ್ರಕರಣ ದಿನದಿಂದ ರಾಜಕೀಯ ಬಲಾಬಲದ ಹಂತಕ್ಕೆ ಬಂದು ನಿಂತಿದ್ದು ಯಾವ ಸ್ಥಿತಿ ತಲುಪುತ್ತೋ ಗೊತ್ತಿಲ್ಲ.
Published by:Mahmadrafik K
First published: