• Home
  • »
  • News
  • »
  • state
  • »
  • New Year Celebrations: ಗೋವಾದಲ್ಲಿ ಹೊಸ ವರ್ಷಾಚರಣೆ ಸಂಭ್ರಮಿಸಿ ವಾಪಸ್​​ ಆಗ್ತಿದ್ದ ವೇಳೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರು ಸಾವು

New Year Celebrations: ಗೋವಾದಲ್ಲಿ ಹೊಸ ವರ್ಷಾಚರಣೆ ಸಂಭ್ರಮಿಸಿ ವಾಪಸ್​​ ಆಗ್ತಿದ್ದ ವೇಳೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರು ಸಾವು

ಭೀಕರ ಅಪಘಾತ ದೃಶ್ಯ

ಭೀಕರ ಅಪಘಾತ ದೃಶ್ಯ

ಹೊಸ ವರ್ಷಕ್ಕೆಂದು ಗೋವಾ ತೆರಳಿ ಸಂಭ್ರಮಾಚರಣೆ ಬಳಿಕ ಊರಿಗೆ ವಾಪಸ್​ ಆಗುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ.

  • News18 Kannada
  • Last Updated :
  • Uttara Kannada, India
  • Share this:

ಕಾರವಾರ: ರಾತ್ರಿ ಗಡಿಯಾರದ ಮುಳ್ಳು 12 ಗಂಟೆ ಬಾರಿಸುತ್ತಿದ್ದಂತೆ ಯುವ ಜನತೆ ಹಾಡು, ಕುಣಿತದೊಂದಿಗೆ ಸ್ವಾಗತಕೋರಿದ್ದಾರೆ (New Year Celebrations). ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗದ (Covid 19) ಕಾರಣ ನ್ಯೂ ಇಯರ್ ಸಂಭ್ರಮಕ್ಕೆ ಬ್ರೇಕ್​ ಬಿದ್ದಿತ್ತು. ಈ ವರ್ಷ ಯಾವುದೇ ನಿರ್ಬಂಧಗಳು ಇಲ್ಲದ ಕಾರಣ ನೂರಾರು ಮಂದಿ ತಮ್ಮ ನೆಚ್ಚಿನ ಸ್ಥಳಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರಲು ತೆರಳಿದ್ದರು. ಹೀಗೆ ಹೊಸ ವರ್ಷಕ್ಕೆಂದು ಗೋವಾ (Goa) ತೆರಳಿ ಸಂಭ್ರಮಾಚರಣೆ ಬಳಿಕ ಊರಿಗೆ ವಾಪಸ್​ ಆಗುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ (Road Accident) ಮೂವರು ಯುವಕರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬಾಳೆಗುಳಿ ಬಳಿಯ ಯಲ್ಲಾಪುರ-ಅಂಕೋಲ ಹೆದ್ದಾರಿಯಲ್ಲಿ ಘಟನೆ ನಡೆದಿದೆ.


ಗೋವಾಗೆ ತೆರಳಿ ವಾಪಸ್​ ಆಗುತ್ತಿದ್ದ ವೇಳೆ ಕಾರು ಸರ್ಕಾರಿ ಬಸ್ಸಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್​ ಹುಬ್ಬಳ್ಳಿ ಕಡೆಯಿಂದ ಗೋಕರ್ಣಕ್ಕೆ ಹೋಗುತ್ತಿತ್ತು. ಅಂಕೋಲ ಭಾಗದಿಂದ ಯಲ್ಲಾಪುರ ಕಡೆಗೆ ವೇಗವಾಗಿ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಸ್ಸಿಗೆ ಡಿಕ್ಕಿ ಹೊಡೆದಿದೆ.


ಇದನ್ನೂ ಓದಿ: New Year Celebrations: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಿಸ್​ ಫೈರ್​​; ಗುಂಡು ಹಾರಿಸಿದವ ಹೃದಯಾಘಾತಕ್ಕೆ ಬಲಿ, ಗುಂಡೇಟು ತಿಂದವ ಇಂದು ಸಾವು


ಮೃತ ಪ್ರವಾಸಿಗರ ಮಾಹಿತಿ ತಿಳಿದು ಬರಬೇಕಿದೆ. ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರೆಲ್ಲರೂ ಕೂಡ ತಮಿಳುನಾಡು ಮೂಲದ ನಿವಾಸಿಗಳು ಎನ್ನಲಾಗಿದೆ. ರಸ್ತೆ ನಡುವಿನ ಡಿವೈಡರ್ ದಾಟಿ ಬಸ್​​ಗೆ ಡಿಕ್ಕಿ ಹೊಡೆದಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆಯಲ್ಲಿ ನಜ್ಜುಗುಜ್ಜಾಗಿ ನಿಂತಿದ್ದ ಕಾರು ಹಾಗೂ ಬಸ್​​ಅನ್ನು ತೆರವು ಮಾಡಿದ್ದಾರೆ.


ಟ್ರಾಫಿಕ್ ಜಾಮ್


ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಫುಲ್ ಟ್ರಾಫಿಕ್ ಜಾಮ್


ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಪ್ರೇಕ್ಷಣಿಯ ಸ್ಥಳಿಗೆ ಭೇಟಿ ನೀಡುತ್ತಿದ್ದಾರೆ. ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರಕ್ಕೂ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಪರಿಣಾಮ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.


ಇನ್ನು, ನೂರಾರು ಪ್ರವಾಸಿಗರು ಇಯರ್ ಎಂಡ್ ಸೆಲೆಬ್ರೇಷನ್ ಮುಗಿಸಿ ವಾಪಸ್ ಹೊರಟ್ಟಿದ್ದಾರೆ. ಹೋಂ ಸ್ಟೇ, ರೆಸಾರ್ಟ್ ಚೆಕೌಟ್ ಮಾಡಿ ಹೊರಟ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿವೆ.


ಇದನ್ನೂ ಓದಿ: Panchamasali Reservation: 'ಏನ್​ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ' -ಅಭಿನಯ ಮಾಡಿ ಸಿಎಂ ಬೊಮ್ಮಾಯಿ ಬಗ್ಗೆ ಡಿಕೆಶಿ ವ್ಯಂಗ್ಯ


ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು


ನಡುರಸ್ತೆಯಲ್ಲೇ ಹೊತ್ತಿ ಉರಿದ ಪ್ರವಾಸಿಗರ ಕಾರು


ಹೊಸ ವರ್ಷಾಚರಣೆಗೆ ಕೇರಳದಿಂದ ಬಂದಿದ್ದ ಪ್ರವಾಸಿಗರ ಕಾರು ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕು ಗೋಪಾಲಪುರ ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಏಳು ಜನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬಂಡೀಪುರದ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದಾಗ ಘಟನೆ ನಡೆದಿದ್ದು, ರಸ್ತೆಯಲ್ಲಿ ಹರಡಿದ್ದ ಹುರುಳಿ ಸೊಪ್ಪು ಕಾರಿನಡಿ ಸಿಲುಕಿ ಇಂಜಿನ್ ಗೆ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು