ಪಾದಚಾರಿಗಳ ಮೇಲೆ ಹರಿದ ವಾಹನ ; ಸ್ಥಳದಲ್ಲಿ ಮೂವರ ಸಾವು

ಮೃತರನ್ನು ಗುಡಸ ಗ್ರಾಮದ ಪ್ರೇಮಾ ರಾಜು ಬಂಗಾರಿ (38), ಜಯಶ್ರೀ ಯಲ್ಲಪ್ಪಾ ಮಾಲದಂಡಿ (40) ಹಾಗೂ ಸುಮಿತ್ರಾ ಭವಾನಿ(45) ಎಂದು ಗುರುತಿಸಲಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಚಿಕ್ಕೋಡಿ(ಮಾ.28) : ರಸ್ತೆಯಲ್ಲಿ ಹೊಗುತ್ತಿದ್ದವರ ಮೇಲೆ ಬುಲೆರೋ ಪಿಕಪ್ ವಾಹನ ಹರಿದು ಸ್ಥಳದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ.

  ಇಂದು ಬೆಳಿಗ್ಗೆ ಗುಡಸ ಗ್ರಾಮದ 6 ಮಹಿಳೆಯರು ಹೊಲದಲ್ಲಿ ಕೆಲಸಕ್ಕೆಂದು ತೆರಳಿದ್ದರು ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಹುಕ್ಕೇರಿಕಡೆಯಿಂದ ಘಟಪ್ರಭಾಕ್ಕೆ ತೆರಳುತ್ತಿದ್ದ ಬುಲೆರೋ ಬಾಹನ ಹಿಂಬದಿಯಿಂದ ಹರಿದ ಪರಿಣಾಮ ಸ್ಥಳದಲ್ಲೆ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

  ಮೃತರನ್ನು ಗುಡಸ ಗ್ರಾಮದ ಪ್ರೇಮಾ ರಾಜು ಬಂಗಾರಿ (38), ಜಯಶ್ರೀ ಯಲ್ಲಪ್ಪಾ ಮಾಲದಂಡಿ (40) ಹಾಗೂ ಸುಮಿತ್ರಾ ಭವಾನಿ(45) ಎಂದು ಗುರುತಿಸಲಾಗಿದೆ. ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಇನ್ನು ಅಪಘಾತ ನಡೆಸಿದ ವಾಹನ ಚಾಲಕ ತಪ್ಪಿಸಿಕೊಳ್ಳಲು ವಾಹನದಲ್ಲಿ ಶವ ಸಿಲುಕಿದ್ದರು ಒಂದು ಕಿಲೋಮೀಟರ್ ವರೆಗೂ ವಾಹನ ಚಲಾಯಿಸಿ ಪರಾರಿಯಾಗಲು ಚಾಲಕ ಯತ್ನಿಸಿದ್ದಸಿದ್ದಾನೆ. ಒಂದು ಕಿಲೋಮೀಟರ್ ಬಳಿಕ ವಾಹನವನ್ನ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

  ಇದನ್ನೂ ಓದಿ : ವೈನ್​ ಶಾಪ್​ ಬಾಗಿಲು ತೆಗೆದು ಅಕ್ರಮ ಮದ್ಯ ಸಾಗಾಣ; ರೊಚ್ಚಿಗೆದ್ದು ಕೈಗೆ ಸಿಕ್ಕ ಬಾಟಲಿ ಹೊತ್ತೊಯ್ದ ಗ್ರಾಮಸ್ಥರು

  ಹುಕ್ಕೇರಿಯಿಂದ ಘಟಪ್ರಭಾಕ್ಕೆ ತರಕಾರಿ ತರಲು ವಾಹನ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು. ಶವಗಳನ್ನ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇನ್ನೂ ಘಟನೆ ಕುರಿತು ಹುಕ್ಕೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ಚಾಲಕ ಶೊದಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
  First published: