Assaulting: ಸರ್ಕಾರಿ ಬಸ್ ಕಂಡಕ್ಟರ್​​ನನ್ನು ಅಪಹರಿಸಿ ಹಲ್ಲೆ ನಡೆಸಿದ ಕಿಡಿಗೇಡಿಗಳು!

ಭಾನುವಾರ ರಾತ್ರಿ ವೃದ್ದಾಚಲಂನಲ್ಲಿ ತಮಿಳುನಾಡು ರಾಜ್ಯ ಸಾರಿಗೆ ನಿಗಮದ (ಟಿಎನ್ಎಸ್‌ಟಿಸಿ) ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಘಟನೆ ನಡೆದಿತ್ತು. ಈಗಾಗಲೇ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಪಿಎಂಕೆಗೆ ಸೇರಿದ ಮುನ್ಸಿಪಲ್ ಕೌನ್ಸಿಲರ್ ಸೇರಿದಂತೆ ಘಟನೆಯಲ್ಲಿ ಭಾಗಿಯಾಗಿರುವ ಇತರ ಮೂವರನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
ಕೆಲವು ಅಪರಾಧಗಳು ಏಕೆ ನಡೆದಿವೆ ಅಂತ ತಿಳಿದುಕೊಂಡರೆ, ಆ ಕಾರಣಗಳು ನಮಗೆ ತುಂಬಾನೇ ಚಿಕ್ಕ ಪುಟ್ಟ ವಿಷಯಗಳು (Little things) ಎಂದೆನಿಸುತ್ತವೆ. ಈ ಚಿಕ್ಕ ಪುಟ್ಟ ವಿಷಯಗಳಿಗಾಗಿ ನಡೆದ ಮಾತಿನ ಚಕಮಕಿಯು ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ ಎಂಬುದಕ್ಕೆ ಈ ಘಟನೆಯೇ ಜ್ವಲಂತ ಸಾಕ್ಷಿ (Evidence) ಎಂದು ಹೇಳಬಹುದು. ಭಾನುವಾರ ರಾತ್ರಿ ವೃದ್ದಾಚಲಂನಲ್ಲಿ (Vriddhachalam) ತಮಿಳುನಾಡು (Tamil Nadu) ರಾಜ್ಯ ಸಾರಿಗೆ ನಿಗಮದ (ಟಿಎನ್ಎಸ್‌ಟಿಸಿ) ಬಸ್ ಕಂಡಕ್ಟರ್ (Bus Conductor) ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಘಟನೆ ನಡೆದಿತ್ತು. ಈಗಾಗಲೇ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಪಿಎಂಕೆಗೆ (PMK) ಸೇರಿದ ಮುನ್ಸಿಪಲ್ ಕೌನ್ಸಿಲರ್ (Municipal Councilor) ಸೇರಿದಂತೆ ಘಟನೆಯಲ್ಲಿ ಭಾಗಿಯಾಗಿರುವ ಇತರ ಮೂವರನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಪ್ರಯಾಣಿಕಳ ನಡುವೆ ವಾಗ್ವಾದ
29 ವರ್ಷ ವಯಸ್ಸಿನ ಬಸ್ ಕಂಡಕ್ಟರ್ ಅವರನ್ನು ಎ ಮಣಿಕಂದನ್ ಎಂದು ಗುರುತಿಸಲಾಗಿದ್ದು, ಅವರು ಭಾನುವಾರ ಸಂಜೆ ಚಿದಂಬರಂನಿಂದ ವೃದ್ದಾಚಲಂಗೆ ತೆರಳುತ್ತಿದ್ದ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಅವರ ಮತ್ತು ರಾಮಚಂದ್ರನ್‌ಪೆಟ್ಟಾಯ್ ನಿಂದ ಬಂದ ಎಸ್ ಭವಾನಿ ಎಂಬ ಪ್ರಯಾಣಿಕಳ ನಡುವೆ ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಭವಾನಿ ಅವರು ಮಣಿಕಂದನ್ ಅವರಿಗೆ ಟಿಕೆಟ್ ಖರೀದಿಸಲು 500 ರೂಪಾಯಿಗಳನ್ನು ನೀಡಿದರು. ಮಣಿಕಂದನ್ ಅವರಿಗೆ ಚಿಲ್ಲರೆ ಕೊಡುವಂತೆ ಕೇಳಿದಾಗ ಈ ವಿವಾದವು ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಮಹಿಳೆ ತನ್ನ ಸಂಬಂಧಿ ಪಿಎಂಕೆ ಸದಸ್ಯ ಮತ್ತು ವೃದ್ದಾಚಲಂ ಪುರಸಭೆಯ ವಾರ್ಡ್ 27ರ ಕೌನ್ಸಿಲರ್ ಎಸ್ ಸಿಂಗರವೇಲ್ ಅವರಿಗೆ ಕೂಡಲೇ ಮಾಹಿತಿ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.

ಮಣಿಕಂದನ್ ಅವರನ್ನು ಹೊರಗೆ ಎಳೆದೊಯ್ದ ಕಿಡಿಗೇಡಿಗಳು
"ಸಿಂಗರವೇಲ್ ಮತ್ತು ಅವರ ಬೆಂಬಲಿಗರು ವೃದ್ದಾಚಲಂ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು ಮತ್ತು ಬಸ್ ಅಲ್ಲಿಗೆ ತಲುಪಿದಾಗ, ಅವರು ಮಣಿಕಂದನ್ ಅವರನ್ನು ಹೊರಗೆ ಎಳೆದುಕೊಂಡು ಹೋಗಿ, ಅವರ ಮೇಲೆ ಹಲ್ಲೆ ನಡೆಸಿದರು ಮತ್ತು ಬಸ್ಸಿನ ಕಿಟಕಿಗಳನ್ನು ಹಾನಿಗೊಳಿಸಿದರು. ಕಂಡಕ್ಟರ್ ಗೆ ಸಹಾಯ ಮಾಡಲು ಪ್ರಯತ್ನಿಸಿದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ನಂತರ, ಇತರ ಬಸ್ ಚಾಲಕರು ಮತ್ತು ನಿರ್ವಾಹಕರು ಅವನನ್ನು ರಕ್ಷಿಸಲು ಪ್ರಯತ್ನಿಸಿದರೂ ಅವರು ಅವನನ್ನು ಆಟೋರಿಕ್ಷಾದಲ್ಲಿ ಕರೆದೊಯ್ದರು" ಎಂದು ವೃದ್ದಾಚಲಂನ ಮೂಲಗಳು ತಿಳಿಸಿವೆ.

ಇದನ್ನೂ ಓದಿ:  Assam Floods: ಅಸ್ಸಾಂನಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ, ರಕ್ಷಣಾ ಕಾರ್ಯಕ್ಕೆ ಬಂದ ಸೇನಾ ಹೆಲಿಕಾಪ್ಟರ್

ಟಿಎನ್ಎಸ್‌ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ತಕ್ಷಣವೇ ತಮ್ಮ ಕೆಲಸವನ್ನು ಬಹಿಷ್ಕರಿಸಿದರು ಮತ್ತು ಬಸ್ ನಿಲ್ದಾಣದ ಬಳಿ ವೃದ್ದಾಚಲಂನಿಂದ ಉಳಂದೂರುಪೇಟೆ ರಸ್ತೆಯನ್ನು ತಡೆದು ಪ್ರತಿಭಟಿಸಿದರು. ಖಾಸಗಿ ಬಸ್ ಗಳು ಬಸ್ ನಿಲ್ದಾಣದಿಂದ ಹೊರ ಹೋಗದಂತೆ ತಡೆದ ಅವರು, ಕಂಡಕ್ಟರ್ ನನ್ನು ಕೂಡಲೇ ರಕ್ಷಿಸುವಂತೆ ಒತ್ತಾಯಿಸಿದರು.

ಹಲ್ಲೆಗೊಳಗಾದ ಮಣಿಕಂದನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು
ಪೊಲೀಸ್ ಸಿಬ್ಬಂದಿಯ ಒಂದು ತಂಡವು ಸ್ಥಳಕ್ಕೆ ತಲುಪಿ ಪ್ರತಿಭಟನಾನಿರತ ಕಾರ್ಮಿಕರನ್ನು ಸಮಾಧಾನಪಡಿಸಿದರೆ, ಮತ್ತೊಂದು ತಂಡವು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದ ಮಣಿಕಂದನ್ ಅವರನ್ನು ಪತ್ತೆ ಹಚ್ಚಿ ಅವರನ್ನು ಚಿಕಿತ್ಸೆಗಾಗಿ ವೃದ್ದಾಚಲಂನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಈ ವಿಷಯ ತಿಳಿದು, ಮೂರು ಗಂಟೆಗಳ ಸುದೀರ್ಘ ರಸ್ತೆ ತಡೆ ಕೊನೆಗೊಂಡಿತು, ಆದರೆ ಟಿಎನ್ಎಸ್‌ಟಿಸಿ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವವರೆಗೂ ಬಸ್ ಗಳನ್ನು ಓಡಿಸಲು ನಿರಾಕರಿಸಿದರು.

ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಅಂತಿಮವಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ ನಂತರ ರಾತ್ರಿ 10 ಗಂಟೆಗೆ ಅವರು ಕರ್ತವ್ಯವನ್ನು ಪುನರಾರಂಭಿಸಿದರು. ಪ್ರತಿಭಟನೆಯಿಂದಾಗಿ, ವೃದ್ದಾಚಲಂನಿಂದ ಕಡಲೂರು, ಸೇಲಂ, ಉಳಂದೂರುಪೇಟೆ ಮತ್ತು ತಿರುಚ್ಚಿ ಹೆದ್ದಾರಿಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಿತು. ವೃದ್ದಾಚಲಂ ಬಸ್ ನಿಲ್ದಾಣದಲ್ಲಿ ಬಸ್ ಸೇವೆಗಳು ಸಂಪೂರ್ಣವಾಗಿ ಪುನರಾರಂಭಗೊಳ್ಳಲು ಅನೇಕ ಪ್ರಯಾಣಿಕರು ನಾಲ್ಕು ಗಂಟೆಗಳವರೆಗೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು.

ಇದನ್ನೂ ಓದಿ:  Hindu-Muslim: ಧರ್ಮ ದಂಗಲ್ ನಡುವೆ ಭಾವೈಕ್ಯತೆಯ ಜಾತ್ರೆ! ಫಕೀರೇಶ್ವರನಿಗೆ ಶರಣು ಎಂದ ಹಿಂದೂ-ಮುಸ್ಲಿಮರು

ಎಸ್.ಸಿಂಗರವೇಲ್, ಜಿ.ಗೋವಿಂದರಾಜು (20), ಟಿ.ಮೋಹನ್ ರಾಜ್ (40), ಎಂ.ವೆಂಗಟೆಸನ್, ಆರ್.ಆಶೋಕುಮಾರ್ (19) ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿಯ ಆರು ಸೆಕ್ಷನ್ ಗಳ ಅಡಿಯಲ್ಲಿ ವೃದ್ದಾಚಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published by:Ashwini Prabhu
First published: