Shivamogga: ವಿಧ್ವಂಸಕ ಕೃತ್ಯಕ್ಕೆ ಐಸಿಸ್‌ ಜೊತೆ ಸೇರಿ ಸಂಚು ; ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಇಬ್ಬರು ಶಂಕಿತರ ಬಂಧನ

ಶಂಕಿತ ಉಗ್ರರು ತುಂಗಾ ನದಿ ಬಳಿ ಬಾಂಬ್‌ ಸ್ಫೋಟದ ಪರೀಕ್ಷೆ ನಡೆಿಸಿದ್ರಂತೆ. ಹೀಗಾಗಿ FSL ತಂಡದೊಂದಿಗೆ ಪೊಲೀಸರು ಹಳೆ ಗುರುಪುರ ತುಂಗಾ ನದಿ ದಂಡೆ ಮೇಲೆ ಮಹಜರ್ ಮಾಡಿದ್ರು.

ಬಂಧಿತ ಶಂಕಿತ ಉಗ್ರರು

ಬಂಧಿತ ಶಂಕಿತ ಉಗ್ರರು

 • Share this:
  ಮೂವರು ಶಂಕಿತ ಉಗ್ರರನ್ನು (Suspected Terrorist) ಶಿವಮೊಗ್ಗ ಜಿಲ್ಲಾ ಪೊಲೀಸರು (Shivamogga Police) ಬಂಧಿಸಿದ್ದಾರೆ. ಶಿವಮೊಗ್ಗ ಸಿದ್ದೇಶ್ವರ ನಗರದ ಯಾಸೀನ್,  ತೀರ್ಥಹಳ್ಳಿಯ ಶಾರಿಕ್​ ಮಸೀದ್, ಮಂಗಳೂರಿನ ಮಾಜ್‌ನನ್ನು ಸೇರಿ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ. ಶಂಕಿತ ಉಗ್ರರಿಗೆ ಐಸಿಸ್ ಉಗ್ರರ ಜೊತೆ ಸಂಪರ್ಕ ಇರುವ ಮಾಹಿತಿ ಸಿಕ್ಕಿದ ಹಿನ್ನೆಲೆ ಶಿವಮೊಗ್ಗ ಪೊಲೀಸರು ತನಿಖೆಯನ್ನು (Investigation) ಮತ್ತಷ್ಟು ಚುರುಕುಗೊಳಿಸಿದ್ದಾರೆ. ಮಂಗಳವಾರ ಯಾಸಿನ್‌ನನ್ನು ಪೊಲೀಸರು ಶಿವಮೊಗ್ಗದ ಸಿದ್ದೇಶ್ವರ ನಗರದಲ್ಲಿರುವ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ರು. ಬಳಿಕ ಅಲ್ಲಿಂದ ಯಾಸಿನ್‌ನನ್ನು ತುಂಗಾನದಿ ತೀರಕ್ಕೆ  ಕರೆ ತಂದ ಪೊಲೀಸರು ಮಹಜರು ನಡೆಸಿದ್ರು. ಶಂಕಿತ ಉಗ್ರರು ತುಂಗಾ ನದಿ ಬಳಿ ಬಾಂಬ್‌ ಸ್ಫೋಟದ ಪರೀಕ್ಷೆ ನಡೆಿಸಿದ್ರಂತೆ. ಹೀಗಾಗಿ FSL ತಂಡದೊಂದಿಗೆ ಪೊಲೀಸರು ಹಳೆ ಗುರುಪುರ ತುಂಗಾ ನದಿ ದಂಡೆ ಮೇಲೆ ಮಹಜರ್ ಮಾಡಿದ್ರು.

  ಶಂಕಿತ ಉಗ್ರ ಯಾಸಿನ್ ಸಮ್ಮುಖದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಮಹಜರ್ ಪ್ರಕ್ರಿಯೆ ನಡೀತು. ಇನ್ನು ಯಾಸಿನ್ ಅಜ್ಜ, ಶಾಮೀರ್ ಖಾನ್ ಮಾತನಾಡಿದ್ದು, ನನ್ನ ಮೊಮ್ಮಗ ಇಲ್ಲೇ ಹುಟ್ಟಿ, ಇಲ್ಲೇ ಬೆಳೆದಿದ್ದಾನೆ, ಅವನು ಮುಗ್ಧ, 16 ದಿನಗಳ ಹಿಂದೆ ಯಾಸಿನ್ ಟೂರ್‌ಗೆ ಹೋಗಿದ್ದ. ಬಳಿಕ ಮನೆಗೇ ಬಂದಿಲ್ಲ, ಅವನನ್ನು ಪೊಲೀಸರು ಬಂಧಿಸಿದ್ದಾರೆ ಅಂತ ಹೇಳಿದ್ರು.

  ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದ ಶಂಕಿತ ಉಗ್ರನ ತಂದೆಗೆ ದಂಡ

  ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮಾಜ್ ತಂದೆ ಮುನೀರ್ ಅಹ್ಮದ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಮಗನನ್ನು ಪೊಲೀಸರು ಕರೆದೊಯ್ದಿರುವ ವಿಚಾರ ತಿಳಿದಿದ್ದರೂ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದಕ್ಕೆ ನ್ಯಾಯಾಲಯ ದಂಡ ಹಾಕಿದೆ.ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಬಿ.ವೀರಪ್ಪ ನೇತ್ರತ್ವದ ವಿಭಾಗೀಯ ಪೀಠ, ಮೊದಲಿಗೆ ಒಂದು ಲಕ್ಷ ದಂಡ ವಿಧಿಸಿತ್ತು. ನಂತರ ಅರ್ಜಿದಾರರ ಮನವಿ ಪರಿಗಣಿಸಿ ದಂಡದ ಮೊತ್ತ 10 ಸಾವಿರಕ್ಕೆ ಇಳಿಕೆ ಮಾಡಲಾಯ್ತು.

  ಮುನೀರ್ ಅಹ್ಮದ್ ನನ್ನ ಮಗ ಸೆ.14ರಿಂದ ನಾಪತ್ತೆಯಾಗಿದ್ದಾನೆಂದು‌ ದೂರು ಸಲ್ಲಿಸಿದ್ದರು. ಮಧ್ಯಾಹ್ನ 1:30 ಕ್ಕೆ ಕರೆ ಮಾಡಿದ ಅಪರಿಚಿತರು ಮನೆ ಕೆಳಗೆ ಬಂದು ಪಾರ್ಸೆಲ್ ಸಂಗ್ರಹಿಸಿಕೊಳ್ಳುವಂತೆ ತಿಳಿಸಿದ್ದರು. ಪಾರ್ಸೆಲ್ ಪಡೆಯಲು ಮನೆಯಿಂದ ತೆರಳಿದ್ದ ಮಗ ಹಿಂದಿರುಗಿಲ್ಲ ಎಂದು ಸೆ.17 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದರು. ಸೆ.19ರಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಮಗನನ್ನು ಪತ್ತೆ ಮಾಡಿ ಕೋರ್ಟ್ ಗೆ ಹಾಜರುಪಡಿಸುವಂತೆ ಆರೋಪಿಯ ತಂದೆ ಮನವಿ ಮಾಡಿದ್ದರು.

  ತುಂಗಾ ನದಿ ದಂಡೆಯ ಮೇಲೆ ಟ್ರಯಲ್

  ಶಂಕಿತ ಉಗ್ರ ಯಾಸಿನ್ ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಳೆ ಗುರುಪುರದ ಎಸ್.ಟಿ.ಪಿ. ಪ್ಲ್ಯಾಂಟ್ ಹಿಂಭಾಗದಲ್ಲಿರುವ ತುಂಗಾ ನದಿ ದಂಡೆಯ ಮೇಲೆಯೇ ಶಂಕಿತ  ಉಗ್ರ ಟ್ರಯಲ್ ಬಾಂಬ್ ಸ್ಫೋಟಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಜಾಗದಲ್ಲೇ ನಿನ್ನೆ ರಾತ್ರಿ ಪೊಲೀಸರು ಮಹಜರು ನಡೆಸಿದೆ. ಎಫ್​​ಎಸ್​​ಎಲ್ ಸ್ಥಳದಲ್ಲಿ ಪತ್ತೆಯಾದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  ದೇಶದ್ರೋಹಿ ಕೆಲಸ ಮಾಡೋರಿಗೆ ಎಚ್ಚರಿಕೆ

  ಇಬ್ಬರು ಶಂಕಿತ ಉಗ್ರರ ಬಂಧನ‌ ಪ್ರಕರಣದ ಕುರಿತು ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯ ಕೇಳಿ ಎಲ್ಲರೂ ದಿಗ್ಬ್ರಮೆ ಆಗಿದೆ. ಮಂಗಳೂರಿನ ಗೋಡೆ ಬರಹದಲ್ಲಿ ಸಹ ಅವರ ಕೈವಾಡ ಇತ್ತು. ಐಸಿಸ್ ಜೊತೆ ಲಿಂಕ್ ಇತ್ತು ಎಂಬ ವಿಷಯ ಹೊರಗೆ ಬರುತ್ತಿದೆ. ಇದೊಂದು ಎಲ್ಲರೂ ಗಾಬರಿಯಾಗುವ ವಿಷಯ. ದೇಶದ್ರೋಹಿ ಕೆಲಸ ಮಾಡುತ್ತಿರುವ ಯುವ ಶಕ್ತಿ ಎಚ್ಚರಿಕೆಯಿಂದ ಇರಬೇಕು. ಸರಕಾರ ದಿಟ್ಟವಾದ ಕ್ರಮ ಕೈಗೊಂಡಿದೆ. ಯಾರು ಕೂಡಾ ಗಾಬರಿಯಾಗುವ ಅವಶ್ಯಕತೆ ಇಲ್ಲ. ಈ ರೀತಿಯ ಉಗ್ರರು ಎಲ್ಲೆಲ್ಲಿ ಇದ್ದಾರೋ ಅವರನ್ನು ಹುಡುಕಿ ತೆಗೆಯುವಂತಹ ಕೆಲಸ ಆಗ್ತಿದೆ ಎಂದು ಹೇಳಿದರು.

  ಇದನ್ನೂ ಓದಿ:  Dalit Family: ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ದಂಡ; ಪ್ರಕರಣ ದಾಖಲು

  ಯಾರು ಈ ಶಂಕಿತ ಉಗ್ರರು?

  ಹೆಸರು : ಶಾರಿಕ್​@ಶಾರಿಕ್​ ಮಸೀದ್​ (A1)

  ಊರು : ಸೊಪ್ಪುಗುಡ್ಡೆ, ತೀರ್ಥಹಳ್ಳಿ, ಶಿವಮೊಗ್ಗ

  ಆರೋಪ : ಲಷ್ಕರ್​ ಉಗ್ರ ಸಂಘಟನೆ ಬೆಂಬಲಿಸಿ ಬರಹ

  ಉಗ್ರ ನಂಟು : ಐಸಿಸ್​- ಲಷ್ಕರ್​​ ಉಗ್ರ ಸಂಘಟನೆ ಸಂಪರ್ಕ

  ಹೆಸರು : ಮಾಝ್​@ ಮಾಝ್​ ಅಹ್ಮದ್ ಮುನೀರ್​ ​(A2)

  ಊರು : ಮಂಗಳೂರು, ದಕ್ಷಿಣ ಕನ್ನಡ

  ಆರೋಪ: ಲಷ್ಕರ್​ ಉಗ್ರ ಸಂಘಟನೆ ಬೆಂಬಲಿಸಿ ಬರಹ

  ಉಗ್ರ ನಂಟು : ಐಸಿಸ್​- ಲಷ್ಕರ್​​ ಉಗ್ರ ಸಂಘಟನೆ ಸಂಪರ್ಕ

  ಹೆಸರು : ಸೈಯದ್​ ಯಾಸಿನ್​​@ಬೈಲು(A3)

  ಊರು : ಸಿದ್ದೇಶ್ವರ ನಗರ, ಶಿವಮೊಗ್ಗ ಸಿಟಿ

  ಆರೋಪ : ಯುವಕರಿಗೆ ಬಾಂಬ್​​ ತಯಾರಿಕೆ ತರಬೇತಿ

  ಉಗ್ರ ನಂಟು : ಐಸಿಸ್​ ಉಗ್ರ ಸಂಘಟನೆ ಸಂಪರ್ಕ

  ಹೆಸರು : ಅನ್ಸರ್​​, ವಶಕ್ಕೆ ಪಡೆದು ವಿಚಾರಣೆ

  ಊರು : ಮಂಗಳೂರು, ದಕ್ಷಿಣ ಕನ್ನಡ

  ಆರೋಪ : ಶಂಕಿತರ ಜೊತೆ ಸೇರಿ ದುಷ್ಕೃತ್ಯಕ್ಕೆ ಸಂಚು

  ಉಗ್ರ ನಂಟು : ಬಂಧಿತ ಶಂಕಿತ ಉಗ್ರರ ಗೆಳೆಯ

  ಇದನ್ನೂ ಓದಿ:  Bengaluru Airport: ಕುಡಿದ ಮತ್ತಲ್ಲಿ ಸೇನಾಧಿಕಾರಿಗಳ ಗಲಾಟೆ; ಸೆಕ್ಯೂರಿಟಿಗೆ ಕಾಲಿನಿಂದ ಒದ್ದು ಹಲ್ಲೆ!

  ಶಂಕಿತ ಉಗ್ರರ ಪ್ಲ್ಯಾನ್​ ಏನಿತ್ತು?

  ದೇಶದ ಐಕ್ಯತೆ, ಭದ್ರತಾ ವ್ಯವಸ್ಥೆಗೆ ಧಕ್ಕೆ ಆಗಬೇಕು. ಸಾರ್ವಜನಿಕರ ಆಸ್ತಿ-ಪ್ರಾಣಹಾನಿ ಆಗಬೇಕು. ಹೆಚ್ಚು ಯುವಕರನ್ನ ಉಗ್ರ ಸಂಘಟನೆಗೆ ಸೇರಿಸಬೇಕು. ಇದಕ್ಕಾಗಿ ಕರ್ನಾಟಕದಲ್ಲಿ ಬಾಂಬ್​ ಸ್ಫೋಟಿಸುವುದು? ಎಲ್ಲೆಲ್ಲಿ ಬಾಂಬ್​ ಸ್ಫೋಟಿಸಬಹುದು ಅಂತ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ.
  Published by:Mahmadrafik K
  First published: