ನಿವೃತ್ತಿ ಬಳಿಕವೂ ನಿಸ್ವಾರ್ಥ ಸೇವೆ - ಯುವಕರನ್ನು ಸೇನೆಗೆ ಸೇರಿಸಲು ಉಚಿತ ತರಬೇತಿ ನೀಡುತ್ತಿರುವ ಮಾಜಿ ಯೋಧರು

ಇವರಲ್ಲಿರುವ ದೇಶಭಕ್ತಿ ಮಾತ್ರ ಮಾಸುವುದಿಲ್ಲ ಎನ್ನುವುದಕ್ಕೆ ಈ ಮೂವರು ಯೋಧರು ಮಾಡುತ್ತಿರುವ ಕೆಲಸವೇ ಸಾಕ್ಷಿ. ಸೇನೆಯಲ್ಲಿ ಸೇವೆ ಮುಗಿಸಿ ಬಂದ ಬಳಿಕ ಮತ್ತಿನ್ಯಾವುದೋ ಕೆಲಸಕ್ಕೆ ಟ್ರೈ ಮಾಡುವವರ ಮಧ್ಯೆ ಈ ಮೂವರು ಯೋಧರು ಮಾಡುತ್ತಿರುವ ಕೆಲಸ ಮಾತ್ರ ಮೆಚ್ಚುವಂತದ್ದು.

ಯುವಕರಿಗೆ ತರಬೇತಿ ನೀಡಿದ ಸೈನಿಕರು

ಯುವಕರಿಗೆ ತರಬೇತಿ ನೀಡಿದ ಸೈನಿಕರು

  • Share this:
ಚಿಕ್ಕೋಡಿ(ಸೆ.29): ಒಬ್ಬ ಯೋಧ ಗಡಿಯಲ್ಲಿದ್ದರೂ ಒಂದೇ, ಊರಿಗೆ ಬಂದು ಗುಡಿಸಲಲ್ಲಿದ್ದರೂ ಒಂದೇ. ಆತನಲ್ಲಿರುವ ದೇಶಭಕ್ತಿ ಮಾತ್ರ ಮಾಸುವುದಿಲ್ಲ ಎನ್ನುವುದಕ್ಕೆ ಈ ಮೂವರು ಯೋಧರು ಮಾಡುತ್ತಿರುವ ಕೆಲಸವೇ ಸಾಕ್ಷಿ. ಸೇನೆಯಲ್ಲಿ ಸೇವೆ ಮುಗಿಸಿ ಬಂದ ಬಳಿಕ ಮತ್ತಿನ್ಯಾವುದೋ ಕೆಲಸಕ್ಕೆ ಟ್ರೈ ಮಾಡುವವರ ಮಧ್ಯೆ ಈ ಮೂವರು ಯೋಧರು ಮಾಡುತ್ತಿರುವ ಕೆಲಸ ಮಾತ್ರ ಮೆಚ್ಚುವಂತದ್ದು. ಹೀಗೆ ಪರಿಕ್ಷೇಗೆ ತಯಾರಾಗುತ್ತಿರು ಯುವಕರು ಇವರೆಲ್ಲ ನಮ್ಮ ದೇಶ ಕಾಯೋ ಯೋಧರಾಗೋ ಕನಸು ಕಾಣ್ತಿರೋ ಯುವಕರು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಸದ್ಯ ಈ ಯುವಕರಿಗೆ ಸೇನೆಯ ಮಾದರಿಯಲ್ಲೆ ಟ್ರೈನಿಂಗ್ ನೀಡಲಾಗ್ತಿದೆ. ಸೇನೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ 20 ವರ್ಷ ಸೇವೆ ಸಲ್ಲಿಸಿ ಮರಳಿ ಗ್ರಾಮಕ್ಕೆ ಬಂದಿರೋ ಮಾಜಿ ಸೈನಿಕರಾದ ಮಾರುತಿ ಮಣ್ಣೀಕೇರಿ, ಭೀಮಶಿ ಮಡಿವಾಳರ್, ಹಾಗೂ ಸೋಮಶೇಖರ್ ತೆಗ್ಗಿ ಎಂಬ  ಯೋಧರು ಗ್ರಾಮದ 100ಕ್ಕೂ ಹೆಚ್ಚು ಯುವಕರಿಗೆ ಆರ್ಮಿ ಮಾದರಿಯಲ್ಲೆ ಟ್ರೈನಿಂಗ್ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಮಾಜಿ ಯೋಧ ಮಾರುತಿ ಮಣ್ಣಿಕೇರಿ ಮುಂತಾಳತ್ವವಹಿಸಿ ಇನ್ನುಳಿದ ಯೋದರನ್ನು ತಮ್ಮ ಜೋತೆಗೆ ಸೇರಿಸಿಕೊಂಡು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಾರುತಿ ಮಣ್ಣಿಕೇರಿ 2001ರಲ್ಲಿ ಭಾರತೀಯ ಸೇನೆಗೆ ಭರ್ತಿಯಾದವರು. ಲಕ್ನೋದಲ್ಲಿ ಆರ್ಮಿ ಮೆಡಿಕಲ್​ ಕೋರ್​ ವಿಂಗ್​​ನಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸಿ 2019 ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿ ತಮ್ಮೂರಿಗೆ ವಾಪಸ್‌ ಆಗಿದ್ದಾರೆ. ಇನ್ನು ಇವರ ಜೋತೆಗೆ ಇರುವ ಭೀಮಶಿ ಮಡಿವಾಳ ಅವರು 2001ರಲ್ಲಿ ನಾಸಿಕ್​​ನಲ್ಲಿರುವ ಆರ್​ಸಿ ಸೆಂಟರ್​​​ ಯುದ್ದ ತೋಪುಗಳ ನಿರ್ವಹಣಾ ಘಟಕದಲ್ಲಿ ಕೆಲಸ ಮಾಡಿ 2019ರಲ್ಲಿ ನಿವೃತ್ತಿ ಹೊಂದಿದ್ದಾರೆ. ಇನ್ನು ಸೋಮಶೇಖರ್ ತೆಗ್ಗಿ ಅವರು ಸಹ 2001ರಲ್ಲಿ ಬೆಳಗಾವಿಯ ಮರಾಠಾ ಲೈಟ್ ಬೈಟ್ರಾಂ ಟರಿಯಲ್ಲಿ ರೆಜಿಮೆಂಟ್ ಮೂಲಕ ಸೇನೆಗೆ ದೇಶದ ಮೂಲೆ ಮೂಲೆಗಳಲ್ಲಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತಿ ಹೊಂದಿದ್ದಾರೆ.

ಸದ್ಯ ಮೂವರು ಯೋಧರು ಸಹ ಒಟ್ಟುಗೂಡಿಕೊಂಡು ಕುಲಗೋಡ ಗ್ರಾಮದಲ್ಲಿ ತರಬೇತಿ ನೀಡುವ ಮೂಲಕ ಸೇನೆ ಸೇರುವ ಯುವಕರಿಗೆ ಅನೂಕಲವಾಗಿದ್ದಾರೆ. ಸೈನಿಕ ತರಬೇತಿ ಕೇಂದ್ರಗಳ ಹೆಸರಲ್ಲಿ ಸೇನೆಗೆ ಸೇರುವ ಯುವಕರಿಗೆ ಊಟ ವಸತಿ ಮೂಲಕ ಟ್ರೈನಿಂಗ್ ನೀಡ್ತೀವಿ. ಆಮೇಲೆ ಅವರನ್ನ ನಾವೇ ಸೇನೆಗೆ ಸೇರಿಸ್ತಿವಿ ಅಂತ ಯುವಕರ ಬಳಿ ಹಣ ಪೀಕಿ ಹೈರಾಣು ಮಾಡುವ ಎಷ್ಟೋ ಜನರ ನಡುವೆ ಯುವಕರಿಗೆ ಉಚಿತವಾಗಿ ಯಾವುದೇ ಲಾಭದ ಉದ್ದೇಶವಿಲ್ಲದೆ ಕೇವಲ ದೇಶ ಸೇವೆಯ ಧ್ಯೇಯವನ್ನಿಟ್ಟಿಕೊಂಡು ಈ ಮೂವರು ಯೋಧರು ಟ್ರೈನಿಂಗ್ ನೀಡುತ್ತಿದ್ದಾರೆ.

ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ಯುವಕರಿಗೆ ಫಿಸಿಕಲ್ ಫಿಟ್ನೆಸ್ ಜತೆ ಜತೆಗೆ ಸೇನೆಯಲ್ಲಿ ನಡೆಸಲಾಗುವ ಪರೀಕ್ಷೆಯ ರೀತಿಯಲ್ಲಿ ಗ್ರಾಮದ ಯುವಕರಿಗೆ ಪರೀಕ್ಷೆ ನಡೆಸಲಾಗುತ್ತೆ. ಗ್ರಾಮದ ಪ್ರೌಢ ಶಾಲೆ ಹಾಗೂ ಬೇರೆ ಕಡೆ ಕೆಲಸ ಮಾಡುತ್ತಿರುವ ಪಧವಿ ಕಾಲೇಜಿನ ಶಿಕ್ಷಕರಿಂದ ಪ್ರಶ್ನೆ ಪತ್ರಿಕೆ ರೆಡಿ ಮಾಡಿಸಿ. ಈ ಹಿಂದೆ ಸೇನೆಯಲ್ಲಿ ನಡೆಸಲಾಗಿದ್ದ ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನ ತರಿಸಿ ಅವುಗಳ ಮೂಲಕ ಪರೀಕ್ಷೆ ನಡೆಸಲಾಗುತ್ತೆ. ಇಂತಹ ಟ್ರೈನಿಂಗ್​​ನಿಂದಾಗಿ ನಮಗೆ ಸಾಕಷ್ಟು ಅನುಕೂಲ ಆಗಿದೆ ಅಂತಾರೆ ಇಲ್ಲಿನ ಯುವಕರು.
Published by:Ganesh Nachikethu
First published: