ನಕಲಿ ನೋಟು ಜಾಲ ಬಗೆದಷ್ಟು ಆಳ: ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಆರೋಪಿಗಳು ಅಂದರ್

ನಕಲಿ ನೋಟುಗಳ ಜಾಲ ಪತ್ತೆಗೆ ಕಾರಣರಾದ ಹಾಗೂ ಸಾಮಾಜಿಕ ಪ್ರಜ್ಞೆ ಮೆರೆದ ಆಟೋ ಚಾಲಕ ಮಂಜುನಾಥ್ ಅವರಿಗೆ 10000 ರೂಪಾಯಿ ನಗದು ಬಹುಮಾನವನ್ನು  ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಅನುಚೇತ್ ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಓರ್ವ ವ್ಯಕ್ತಿ ಆಟೋದಲ್ಲಿ ಸಿಟಿ ಮಾರ್ಕೆಟ್ ನಿಂದ ಶಾಂತಿನಗರಕ್ಕೆ ಬಂದಿದ್ದ. ಈ ವೇಳೆ ಆಟೋ ಡ್ರೈವರ್ ಗೆ ಜಮಾಲ್  100ರೂ. ಹಣ ನೀಡಿದ್ದ. ಆಟೋ ಚಾಲಕನಿಗೆ ನೋಟ್ ಗೆ ಬಗ್ಗೆ ಅನುಮಾನ ಬಂದಿದೆ. ಕೂಡಲೇ  ಮಂಜುನಾಥ್ ಆತನನ್ನು ಸ್ಟೇಷನ್ ಗೆ ಕರೆತಂದು ಒಪ್ಪಿಸಿದ್ದಾರೆ‌.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು; ನಕಲಿ‌ ನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸಿ ಅರ್ಥವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುತ್ತಿದ್ದ ಮೂವರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರದ ಶಾಮಣ್ಣ ಗಾರ್ಡನ್ ನಿವಾಸಿಗಳಾದ ಮೊಹಮ್ಮದ್ ಇಮ್ರಾನ್, ಜಮಾಲ್ ಅಖ್ತರ್ ಹಾಗೂ ಗಂಗೊಂಡನಹಳ್ಳಿಯ ಮುಬಾರಕ್ ಬಂಧಿತ ಆರೋಪಿಗಳು. ಬಂಧಿತರಿಂದ 100 ರೂಪಾಯಿ ಮುಖಬೆಲೆಯ 198 ನೋಟುಗಳು, 2 ಪ್ರಿಂಟಿಂಗ್ ಸ್ಕ್ರೀನ್ ಗಳು, ಒಂದು ಕಂಪ್ಯೂಟರ್ ‌ಕೀ ಪ್ಯಾಡ್, ಹೆಚ್​ಸಿಎಲ್  ಕಂಪೆನಿಯ ‌ಸಿಪಿಯು, ವಿವಿಧ ಬಣ್ಣದ ಇಂಕ್ ಡಬ್ಬಗಳು, 500 ಹಾಗೂ 200 ಮುಖಬೆಲೆಯ ಸ್ಕ್ರೀನ್ ಹಾಳೆಗಳು, ಪೆನ್ ಡ್ರೈವ್ ಸೇರಿದಂತೆ ವಿವಿಧ ರೀತಿಯ ಉಪಕರಣಗಳನ್ನು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ‌.

ಆರೋಪಿಗಳ ಪೈಕಿ ಜಮಾಲ್ ಕೆಲಸ ನಿಮಿತ್ತ ನಿನ್ನೆ ಮಧ್ಯಾಹ್ನ ಸಿ.ಟಿ.‌ ಮಾರ್ಕೆಟ್​ನಿಂದ ಶಾಂತಿ ನಗರಕ್ಕೆ ಹೋಗಲು ಮಂಜುನಾಥ್ ಎಂಬುವರ ಆಟೋ‌ ಹತ್ತಿದ್ದಾನೆ. ಶಾಂತಿನಗರದಲ್ಲಿ ಇಳಿದು 100 ರೂಪಾಯಿ ನೀಡಿದ್ದಾನೆ. ಹಣ ಪಡೆದ ಚಾಲಕ ಮಂಜುನಾಥ್ ಖೋಟಾನೋಟು ಎಂದು ಮನದಲ್ಲಿ‌ ಖಾತ್ರಿಪಡಿಸಿಕೊಂಡು‌ ಚಿಲ್ಲರೆ ಹಣ ನೀಡುವುದಾಗಿ ಹೇಳಿ ನೇರವಾಗಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ‌‌‌‌‌‌. ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಖೋಟಾನೋಟಿನ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಚಿಕ್ಕ ಮ‌ನೆಯಲ್ಲೇ ಖೋಟಾನೋಟು ಮುದ್ರಣ..!

ಹಲವು ವರ್ಷಗಳಿಂದ ಪಾದರಾಯನಪುರ ಶಾಮಣ್ಣ ಗಾರ್ಡನ್ ನಲ್ಲಿರುವ ಇಮ್ರಾನ್ ಮನೆಯಲ್ಲಿ‌ ಖೋಟಾನೋಟು ಮುದ್ರಣವಾಗುತಿತ್ತು. ಸ್ಕ್ರೀನ್ ಪ್ರಿಂಟಿಂಗ್ ಕೆಲಸ ಅನುಭವ ಹೊಂದಿದ್ದ ಎರಡನೇ ಆರೋಪಿ ಮುಬಾರಕ್ ಸಹಾಯದಿಂದ ಅಸಲಿ‌ ನೋಟುಗಳಂತೆ ಕಾಣುವ ಹಾಗೇ ನೋಟುಗಳನ್ನು‌ ಪ್ರಿಂಟ್ ಮಾಡುತ್ತಿದ್ದರು. ಪ್ರಕರಣದ ಮೂರನೇ ಆರೋಪಿಯಾದ ಜಮಾಲ್ ನಕಲಿ ನೋಟುಗಳ ಚಲಾವಣೆ ಜವಾಬ್ದಾರಿ ಹೊತ್ತುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ವಿಚಾರ: ಮುಂದುವರಿದ ಐಪಿಎಸ್ ಅಧಿಕಾರಿಗಳ ಲೆಟರ್ ವಾರ್

ಕಮೀಷನ್ ಆಸೆಗೆ ಬಿದ್ದು ನಕಲಿ ನೋಟು ಚಲಾವಣೆ

ನಕಲಿ ನೋಟುಗಳ ಚಲಾವಣೆ ಮಾಡುತ್ತಿದ್ದ ಜಮಾಲ್, ಇಮ್ರಾನ್​ನಿಂದ ನೀಡುವ ಕಮೀಷನ್ ಪಡೆದು ಅವ್ಯವಹಾರ ನಡೆಸುತ್ತಿದ್ದ. ಚಲಾವಣೆಗೊಂಡ ಮುಖಬೆಲೆಯ ಶೇ.10ರಷ್ಟು  ಕಮೀಷನ್ ಪಡೆದುಕೊಳ್ಳುತ್ತಿದ್ದ.‌ ಸದ್ಯ ಮೂವರನ್ನು‌ 12 ದಿನಗಳ‌ ಕಾಲ‌ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಕಲಿ ನೋಟುಗಳ ಜಾಲ ಪತ್ತೆಗೆ ಕಾರಣರಾದ ಹಾಗೂ ಸಾಮಾಜಿಕ ಪ್ರಜ್ಞೆ ಮೆರೆದ ಆಟೋ ಚಾಲಕ ಮಂಜುನಾಥ್ ಅವರಿಗೆ 10000 ರೂಪಾಯಿ ನಗದು ಬಹುಮಾನವನ್ನು  ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಅನುಚೇತ್ ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಓರ್ವ ವ್ಯಕ್ತಿ ಆಟೋದಲ್ಲಿ ಸಿಟಿ ಮಾರ್ಕೆಟ್ ನಿಂದ ಶಾಂತಿನಗರಕ್ಕೆ ಬಂದಿದ್ದ. ಈ ವೇಳೆ ಆಟೋ ಡ್ರೈವರ್ ಗೆ ಜಮಾಲ್  100ರೂ. ಹಣ ನೀಡಿದ್ದ. ಆಟೋ ಚಾಲಕನಿಗೆ ನೋಟ್ ಗೆ ಬಗ್ಗೆ ಅನುಮಾನ ಬಂದಿದೆ. ಕೂಡಲೇ  ಮಂಜುನಾಥ್ ಆತನನ್ನು ಸ್ಟೇಷನ್ ಗೆ ಕರೆತಂದು ಒಪ್ಪಿಸಿದ್ದಾರೆ‌. ಈತ ನೀಡಿದ ಮಾಹಿತಿ ಮೇರೆಗೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಸದ್ಯದವರೆಗೂ ಹಾಲಿ ಶಾಸಕರ ವಿಚಾರವಾಗಿ ಯಾವುದೇ ವಿಚಾರ ಇಲ್ಲ. ಪ್ರಕರಣದ ತನಿಖೆ ಮುಂದುವರೆದಿದೆ ಅಂತ ಡಿಸಿಪಿ ಅನುಚೇತ್ ಮಾಹಿತಿ ನೀಡಿದ್ದಾರೆ.
Published by:HR Ramesh
First published: