• Home
  • »
  • News
  • »
  • state
  • »
  • Bengaluru: ಒಂದೇ ಫ್ಯಾಮಿಲಿಯ ಮೂವರು ಆತ್ಮಹತ್ಯೆ; ಸೀಮೆಎಣ್ಣೆ ಸುರಿದುಕೊಂಡು ಸಾವಿಗೆ ಶರಣಾದ ಕುಟುಂಬ

Bengaluru: ಒಂದೇ ಫ್ಯಾಮಿಲಿಯ ಮೂವರು ಆತ್ಮಹತ್ಯೆ; ಸೀಮೆಎಣ್ಣೆ ಸುರಿದುಕೊಂಡು ಸಾವಿಗೆ ಶರಣಾದ ಕುಟುಂಬ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂತೋಷ್​ ಹಾಗೂ ಆತನ ಪತ್ನಿ, ಮಗಳು ಮೃತ ದುರ್ದೈವಿಯಾಗಿದ್ದಾರೆ. ಹಣಕಾಸಿನ ಸಮಸ್ಯೆ ಹಿನ್ನೆಲೆ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

  • News18 Kannada
  • Last Updated :
  • Karnataka, India
  • Share this:

ಒಂದೇ ಕುಟುಂಬದ ಮೂವರು ಸದಸ್ಯರು (3 Members) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೆಚ್​​ಎಸ್​ಆರ್​ ಲೇಔಟ್ (HSR Police Station Area) ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ​ ಕುಟುಂಬದ ಮೂವರು ಸೀಮೆಎಣ್ಣೆ (Kerosene Oil) ಸುರಿದುಕೊಂಡು ಸಾವಿಗೆ  ಶರಣಾಗಿದ್ದಾರೆ. ಸಂತೋಷ್​ ಹಾಗೂ ಆತನ ಪತ್ನಿ, ಮಗಳು ಮೃತ ದುರ್ದೈವಿಯಾಗಿದ್ದಾರೆ. ಹಣಕಾಸಿನ ಸಮಸ್ಯೆ (Financial Problem) ಹಿನ್ನೆಲೆ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್​ ತನಿಖೆಯಿಂದ ಸತ್ಯಾ ಸತ್ಯತೆ ಹೊರಬರಬೇಕಿದೆ. 


ಕುಟುಂಬದ ಸಾವಿಗೆ ಕಾರಣ ಏನು?


ಇಂದು ಬೆಳಗ್ಗೆ ಸಂತೋಷ್​ ಫ್ಯಾಮಿಲಿ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲದಿನಗಳಿಂದ ಸಂತೋಷ್​ಗೆ ಹಣಕಾಸಿನ ಸಮಸ್ಯೆ ಉಂಟಾಗಿತ್ತು ಎಂದು ಅನೇಕರು ಹೇಳಿದ್ದಾರೆ. ಇಡೀ ಕುಟುಂಬವೇ ಸಾವಿಗೆ ಶರಣಾಗಿದ್ದು, ನಿಜಕ್ಕೂ ದುರಾದೃಷ್ಟಕರವಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.


ಹಿಂದೆ ದಾವಣಗೆರೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು


ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿತ್ತು. ದಾವಣಗೆರೆಯ ಭರತ್ ಕಾಲೋನಿಯ ಶೇಖರಪ್ಪ ಬಿ ಬ್ಲಾಕ್ ನಲ್ಲಿ 35 ವರ್ಷದ ಕೃಷ್ಣಾ ನಾಯ್ಕ್, ಪತ್ನಿ ಸುಮಾ ಮತ್ತು ಆರು ವರ್ಷದ ಮಗು ಧ್ರುವ ಆತ್ಮಹತ್ಯೆಗೆ ಶರಣಾಗಿದ್ದರು. ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ಅವರ ಅಕ್ರಂದನ ಮುಗಿಲು ಮುಟ್ಟಿತ್ತು.


ಇದನ್ನೂ ಓದಿ: Honour Killing: ಇಬ್ಬರನ್ನ ಒಂದು ಮಾಡ್ತೀವಿ ಬನ್ನಿ ಅಂತ ಕರೆಸಿ ಕೊಲೆ; ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ


ಮಗು ಮತ್ತು ತನ್ನ ಪತ್ನಿಗೆ ವಿಷ ಕುಡಿಸಿ ಬಳಿಕ ಕೃಷ್ಣಾ ನಾಯ್ಕ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಎಂಆರ್ ಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೃಷ್ಣಾ ನಾಯ್ಕ್ ಅವರು ಲಾರಿ ಚಾಲಕರಾಗಿದ್ದರು. ಪತ್ನಿ ಸುಮಾ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಆಸ್ಪತ್ರೆಗೆ ಅಲೆದಾಡುತ್ತಿದ್ದರು. ಅಲ್ಲದೇ, ಖರ್ಚು ವೆಚ್ಚವು ಹೆಚ್ಚಾಗಿತ್ತು. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.


ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ


ಶಾಲೆಗೆ (School) ಚಕ್ಕರ್ ಹಾಕಿದ್ದಕ್ಕೆ ತಾಯಿ (mother) ಬೈದು, ಒಂದೆರಡು ಏಟು ಕೊಟ್ಟಿದ್ದಕ್ಕೆ 14 ವರ್ಷದ ಬಾಲಕನೋರ್ವ (Boy Death) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೃಥ್ವಿರಾಜ್ ನೇಣಿಗೆ ಕೊರಳೊಡ್ಡಿದ ಬಾಲಕ. ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ (Kadabagere) ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಪೃಥ್ವಿರಾಜ್ ಶಾಲೆಗೆ ಗೈರಾಗುತ್ತಿದ್ದನು. ಕಡಬಗೆರೆ ನಿವಾಸಿ ವಿಜಯ್ ಕುಮಾರ್ ಮತ್ತು ಸವಿತಾ ದಂಪತಿಯ ಮಗ. ಈ ಹಿನ್ನೆಲೆ ತಾಯಿ ಸವಿತಾ ಬೈದು, ಒಂದೆರಡು ಏಟು ನೀಡಿ ತಿಳಿ ಹೇಳಿದ್ದರು. ಪೃಥ್ವಿರಾಜ್ ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.


ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು‌ ಪೃಥ್ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಶವ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


ಇದನ್ನೂ ಓದಿ: Thief: ಕದ್ದ ಹಣದಲ್ಲಿ ದೇವಸ್ಥಾನ, ಚರ್ಚ್​ ಹುಂಡಿಗೆ ಹಣ ಹಾಕ್ತಿದ್ದ ಕಳ್ಳ ಅರೆಸ್ಟ್

 ಜೈಲಿನಲ್ಲಿ ಕೈದಿ ಆರೋಪಿ ಆತ್ಮಹತ್ಯೆ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಅಕ್ಟೋಬರ್​ 14 ರಂದು ಮಹಿಳೆ ಹತ್ಯೆಗೈದು ಜೈಲು ಸೇರಿದ್ದ ಆರೋಪಿ ಆನಂದ್​ ದುಧನಿ ಆತ್ಮಹತ್ಯೆಗೆ ಶರಣಾಗಿದ್ದಾನೆ.


ಧಾರವಾಡದ ಜಿಲ್ಲಾಸ್ಪತ್ರೆ ಎದುರು ಸವಿತಾ ಕಿತ್ತೂರು ಎನ್ನುವ ಮಹಿಳೆಯನ್ನ ಹತ್ಯೆಗೈದಿದ್ದನು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಆನಂದ್​​ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದೀಗ ಕೇಂದ್ರ ಕಾರಾಗೃಹದಲ್ಲಿ ಬೆಡ್ ಶೀಟ್ ಹರಿದು ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published by:ಪಾವನ ಎಚ್ ಎಸ್
First published: