• Home
  • »
  • News
  • »
  • state
  • »
  • ವಿಜಯಪುರದಲ್ಲಿ ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ವಿಜಯಪುರದಲ್ಲಿ ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಜಾವ ಕೊಲ್ಹಾರ-ಕೊರ್ತಿ ಸೇತುವೆಯ ಮೇಲಿಂದ ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆ. 19 ರಂದು ಒಂದು ಮಹಿಳೆಯ ಶವ ಪತ್ತೆಯಾಗಿದ್ದು, ಮತ್ತೆರಡು ಶವಗಳು ಫೆ. 25 ರಂದು ಪತ್ತೆಯಾಗಿವೆ

  • Share this:

ವಿಜಯಪುರ(ಫೆ. 27): ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನಗರದ ಗ್ಯಾಂಗಬಾವಡಿ ಪ್ರದೇಶದ ನೆಹರು ನಗರದ 45 ವರ್ಷದ ರೇಣುಕಾ ಅಶೋಕ ಹವಾಲ್ದಾರ, 23 ವರ್ಷದ ಐಶ್ವರ್ಯಾ ಅಶೋಕ ಹವಾಲ್ದಾರ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ 19 ವರ್ಷದ ಅಖಿಲೇಶ ಹವಾಲ್ದಾರ ಎಂದು ಗುರುತಿಸಲಾಗಿದೆ.


ಫೆ. 16 ರಂದು ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಮೂರು ಜನ ಅದೇ ದಿನ ಬೆಳಗಿನ ಜಾವ ಕೊಲ್ಹಾರ-ಕೊರ್ತಿ ಸೇತುವೆಯ ಮೇಲಿಂದ ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆ. 19 ರಂದು ಒಂದು ಮಹಿಳೆಯ ಶವ ಪತ್ತೆಯಾಗಿದ್ದು, ಮತ್ತೆರಡು ಶವಗಳು ಫೆ. 25 ರಂದು ಪತ್ತೆಯಾಗಿವೆ. ಕೊಳೆತ ಸ್ಥಿತಿಯಲ್ಲಿದ್ದರಿಂದ ಪೊಲೀಸರು ಅನಾಥ ಶವಗಳೆಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.


ಇದಕ್ಕೂ ಮುಂಚೆ ಮೂರು ಜನ ನಾಪತ್ತೆಯಾದ ಬಗ್ಗೆ ಹವಾಲ್ದಾರ್ ಕುಟುಂಬದವರು ವಿಜಯಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಫೆ. 26 ರಂದು ಪೊಲೀಸರು ಶವಗಳ ಫೋಟೋಗಳನ್ನು ತೋರಿಸಿದ್ದಾರೆ. ಆಗ ಹವಾಲ್ದಾರ ಕುಟುಂಬಸ್ಥರು ಕೊಲ್ಹಾರಕ್ಕೆ ಹೋಗಿ ನೋಡಿದಾಗ ಪೊಲೀಸರ ಬಳಿಯಿದ್ದ ಬಟ್ಟೆಯಿಂದ ಮೂರು ಜನರನ್ನು ಗುರುತಿಸಿದ್ದಾರೆ.


ವಿಜಯಪುರದ ಸಹೋದರಿಯರಾದ ಉಷಾ ಮತ್ತು ರೇಣುಕಾ ಅವರನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದ ನಾರಾಯಣ ಮತ್ತು ಅಶೋಕ ಸಹೋದರರಿಗೆ ಮದುವೆ ಮಾಡಿ ಕೊಡಲಾಗಿತ್ತು. ಸುಮಾರು 12 ವರ್ಷಗಳ ಹಿಂದೆ ಉಷಾ ಅವರಿಗೆ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೇಣುಕಾ ತನ್ನ ಅಕ್ಕ ಹಾಗೂ ಆಕೆಯ ಏಕೈಕ ಮಗಳು ದೀಪಾ ಉಸ್ತುವಾರಿಗಾಗಿ ವಿಜಯಪುರಕ್ಕೆ ಬಂದು ನೆಲೆಸಿದ್ದರು. 10 ವರ್ಷಗಳ ಹಿಂದೆ ಉಷಾ ಮತ್ತು 7 ವರ್ಷಗಳ ಹಿಂದೆ ಆಕೆಯ ಪತಿ ನಾರಾಯಣ ಸಾವಿಗೀಡಾಗಿದ್ದರು. ಆಗ ರೇಣುಕಾ ತನ್ನ ಮಕ್ಕಳಾದ ಐಶ್ವರ್ಯಾ ಮತ್ತು ಅಖಿಲೇಶ್ ಜೊತೆ ವಿಜಯಪುರದಲ್ಲಿಯೇ ವಾಸವಾಗಿದ್ದರು.


ಇದನ್ನೂ ಓದಿ :  ಬಿಜೆಪಿಯಲ್ಲಿ ಅನುವಂಶಿಕವಾಗಿ ಉತ್ತರಾಧಿಕಾರಿ ನೇಮಕವಾಗಲ್ಲ; ನಮಗೆ ಯಡಿಯೂರಪ್ಪ ಮಾತ್ರ ಸಿಎಂ: ಯತ್ನಾಳ್


ಆದರೆ, ತನಗೆ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ನಿಮ್ಮ ಜೊತೆ ಇರಲು ಆಗೊಲ್ಲ ಎಂದು ದೀಪಾ ತನ್ನ ಚಿಕ್ಕಮ್ಮ ರೇಣುಕಾ ಹಾಗೂ ಆಕೆಯ ಮಕ್ಕಳಿಗೆ ಹೇಳಿದ್ದಳೆನ್ನಲಾಗಿದೆ.  ಇದರಿಂದ ಮಾನಸಿಕವಾಗಿ ನೊಂದ ರೇಣುಕಾ ಹಾಗೂ ಆಕೆಯ ಇಬ್ಬರು ಮಕ್ಕಳು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಣುಕಾ ಪತಿ ಅಶೋಕ ಮಳಲಿಯಲ್ಲಿಯೇ ತೋಟ ಮಾಡಿಕೊಂಡಿದ್ದರು.  ಈಗ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಳೆದು ಕೊಂಡಿರುವ ಅಶೋಕ ತೀವ್ರ ಅಘಾತಕ್ಕೊಳಗಾಗಿದ್ದಾರೆ.

Published by:G Hareeshkumar
First published: