• Home
  • »
  • News
  • »
  • state
  • »
  • Crime News: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ಛಿದ್ರ ಛಿದ್ರವಾಯ್ತು ದೇಹ

Crime News: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ಛಿದ್ರ ಛಿದ್ರವಾಯ್ತು ದೇಹ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾಯಿ ಬಳಿ ರೈಲ್ವೆ ಹಳಿಯ ಬಳಿ ಘಟನೆ ನಡೆದಿದೆ. ರೈಲು ದೇಹದ ಮೇಲೆ ಹರಿದ ಪರಿಣಾಮ ಮೂವರ ದೇಹಗಳು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Chikkaballapura (Chik Ballapur), India
  • Share this:

ಚಿಕ್ಕಬಳ್ಳಾಪುರ: ಚಲಿಸುವ ರೈಲಿಗೆ ಸಿಲುಕಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಶವಂತಪುರ (Yeshwanthpur) ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Railway Police) ನಡೆದಿದ್ದು, ಮೃತರನ್ನು ಗೌರಿಬಿದನೂರು (Gauribidanur) ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ಚಿಕ್ಕಬಳ್ಳಾಪುರ (Chikkaballaura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾಯಿ ಬಳಿ ರೈಲ್ವೆ ಹಳಿಯ ಬಳಿ ಘಟನೆ ನಡೆದಿದೆ. ರೈಲು ದೇಹದ ಮೇಲೆ ಹರಿದ ಪರಿಣಾಮ ಮೂವರ ದೇಹಗಳು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಮೃತ ವ್ಯಕ್ತಿಯ ಶರ್ಟ್​ ಮೇಲೆ ವಿನಾಯಕ ಟೈಲರ್ ಗೌರಿಬಿದನೂರು ಸ್ಟೀಕರ್ ಲಭ್ಯವಾಗಿದ್ದು, ಅಪರಿಚಿತ ಶವಗಳ ವಿಳಾಸ ಪತ್ತೆ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ. ಮಾಡುತ್ತಿರುವ ಪೊಲೀಸರು. ಇನ್ನು ಆತ್ಮಹತ್ಯೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ವಯಸ್ಸು ಸುಮಾರು 50 ವರ್ಷ, ಮಹಿಳೆಗೆ 45 ವರ್ಷ ಹಾಗೂ ಮಗಳಿಗೆ 20 ವರ್ಷ ಎಂದು ಅಂದಾಜು ಮಾಡಲಾಗಿದೆ. ಬೆಳಗ್ಗೆ 8 ಗಂಟೆ ಸಮಯದಲ್ಲಿ ದುರ್ಘಟನೆ ನಡೆದಿದ್ದು, ರೈಲು ಬರುವವರೆಗೂ ಕಾದು ಕುಳಿತು, ಏಕಾಏಕಿ ಮೂವರು ಎದುರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.


ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನ


ಶಿವಮೊಗ್ಗದ (Shivamogga) ಜಿಲ್ಲೆಯಲ್ಲಿ ಹರ್ಷ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿ ನಡೆದಿದೆ. ಈ ಬಾರಿಯೂ ಭಜರಂಗದಳ (Bajrang Dal)ಕಾರ್ಯಕರ್ತನ ಮೇಲೆ ಸಮೀರ್ ಎಂಬ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ ಕೊಲ್ಲಲು ಯತ್ನಿಸಿದ್ದಾನೆ.


ಸುನಿಲ್, ಭಜರಂಗದಳದ ಕಾರ್ಯಕರ್ತ


ಶಿವಮೊಗ್ಗ ಜಿಲ್ಲೆಯ ಸಾಗರದ ಬಿ.ಎಚ್ ರಸ್ತೆಯಲ್ಲಿ ನಿನ್ನೆ ಶೌರ್ಯ ಸಂಚಲನ ಕಾರ್ಯಕ್ರಮ ನಡೆದಿತ್ತು. ಆಗ ಸುನೀಲ್​ಗಾಗಿ ಕಾದು ಕುಳಿತಿದ್ದ ಸಮೀರ್, ಪ್ರವೀಣ್ ನೆಟ್ಟಾರು ಹತ್ಯೆ ರೀತಿಯಲ್ಲೇ ಕೊಲೆ ಮಾಡಲು ಸ್ಕೆಚ್​ ಹಾಕಿದ್ದ. ಅದೃಷ್ಟವಶಾತ್ ಸುನೀಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಮೀರ್​ಗಾಗಿ ಪೊಲೀಸರು ಹುಡುಕಾಡ್ತಿದ್ದಾರೆ. ಇನ್ನು ಆರೋಪಿ ಸಮೀರ್​ನನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.


ಇದನ್ನೂ ಓದಿ: HD Kumaraswamy: ಅಧಿಕಾರಕ್ಕೆ ಬಂದರೆ ಈ ಬಾರಿಯೂ ರೈತರ ಸಾಲ ಮನ್ನಾ; ಪಂಚರತ್ನ ಯಾತ್ರೆಯಲ್ಲಿ ಹೆಚ್​​ಡಿಕೆ ಭರವಸೆ


‘ಬಲಿಜ’ ಮೀಸಲಾತಿ ಸಮರ


ಬೆಂಗಳೂರು ಬಲಿಜ ಜನಾಂಗಕ್ಕೆ (Balija Community) 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ (Freedom Park) ಪ್ರತಿಭಟನೆ ಮಾಡಲಾಯ್ತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಜನರು, ಬಳೆ, ಎಲೆ ಅಡಿಕೆ, ಹೂಗಳನ್ನ ಬುಟ್ಟಿಯಲ್ಲಿಟ್ಟು ಪ್ರತಿಭಟಿಸಿದರು.


ಬಲಿಜ ಜನಾಂಗ ಪ್ರತಿಭಟನೆ


ಇದನ್ನೂ ಓದಿ: Siddu Nijakanasugalu: ‘ಸಿದ್ದು ನಿಜಕನಸುಗಳು’ ಪುಸ್ತಕಕ್ಕೆ ತಡೆ; ಕೈ-ಕಮಲ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ


ಕಳೆದ 28 ವರ್ಷಗಳಿಂದ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸರ್ಕಾರಕ್ಕೆ ನಮ್ಮ ಜನಾಂಗದ ಕೂಗು ಕೇಳಿಸ್ತಿಲ್ಲ. ಆದ್ದರಿಂದ ಸರ್ಕಾರಕ್ಕೆ 10 ದಿನಗಳ ಗಡುವು ಕೊಡ್ತೀವಿ. ಜನವರಿ 19ರವರೆಗೆ ಮೀಸಲಾತಿ ನೀಡದಿದ್ರೆ ಪ್ರತಿ ಕ್ಷೇತ್ರದಿಂದ ನಮ್ಮ ಜನಾಂಗದವರೇ ಸ್ಪರ್ಧಿಸುತ್ತಾರೆ. ಈ ಮೂಲಕ ಬಲಿಜ ಜನಾಂಗದ ಒಗ್ಗಟ್ಟು ಪ್ರದರ್ಶಿಸುತ್ತೇವೆ ಎಂದು ಸಮುದಾಯದ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ಎಚ್ಚರಿಕೆ ನೀಡಿದ್ರು.


ನಾಯಿ ಮೇಲೆ ಹರಿದ ಕಾರ್


ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಮುತ್ತುರಾಯನಗರದ (Mutharayana Nagar) ಸಪ್ತಗಿರಿ ರೆಸಿಡೆನ್ಸಿ ಮುಂದೆ ನಾಯಿಯೊಂದರ (Dog) ಮೇಲೆ ಕಾರ್ ಹರಿಸಲಾಗಿದೆ.


ನಾಯಿ ಮೇಲೆ ಹರಿದ ಕಾರ್


ಕಾರು ಮೈಮೇಲೆ ಹತ್ತುತ್ತಿದ್ದಂತೆ ನಡು ರಸ್ತೆಯಲ್ಲೇ ಶ್ವಾನ ಒದ್ದಾಡಿ ಪ್ರಾಣಬಿಟ್ಟಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Gnana Bharathi) ಸ್ಥಳೀಯರು ದೂರು ನೀಡಿದ್ದಾರೆ. ಕಾರು ಚಾಲಕನಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.

Published by:Sumanth SN
First published: