ಅಂಗನವಾಡಿಯಲ್ಲಿ ನರ್ಸ್ ನೀಡಿದ ಇಂಜೆಕ್ಷನ್​ಗೆ ಮೂರು ತಿಂಗಳ ಮಗು ಸಾವು; ಬೆಳಗಾವಿಯಲ್ಲೊಂದು ದಾರುಣ ಘಟನೆ

ಚುಚ್ಚುಮದ್ದು ನೀಡಿ ಸ್ವಲ್ಪ ಸಮಯದಲ್ಲೇ ಮಗು ಅಸ್ವಸ್ಥಗೊಂಡಿದೆ. ಕೂಡಲೇ ಮಗುವನ್ನು ಗೋಕಾಕ್​ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಮಗುವಿನ ಸಾವಿಗೆ ನರ್ಸ್​ ನೀಡಿದ ಚುಚ್ಚುಮದ್ದೇ ಕಾರಣ ಎಂದು ಆರೋಪಿಸಿದ್ದಾರೆ.

news18-kannada
Updated:January 11, 2020, 3:20 PM IST
ಅಂಗನವಾಡಿಯಲ್ಲಿ ನರ್ಸ್ ನೀಡಿದ ಇಂಜೆಕ್ಷನ್​ಗೆ ಮೂರು ತಿಂಗಳ ಮಗು ಸಾವು; ಬೆಳಗಾವಿಯಲ್ಲೊಂದು ದಾರುಣ ಘಟನೆ
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ (ಜನವರಿ 11); ಸಾಂಕ್ರಾಮಿಕ ರೋಗ ಹರಡದಿರಲಿ ಎಂಬ ಕಾರಣಕ್ಕೆ ಮಗುವಿಗೆ ಅಂಗನವಾಡಿ ನರ್ಸ್ ಚುಚ್ಚುಮದ್ದು (ಇಂಜೆಕ್ಷನ್​) ನೀಡಿದ್ದು ಪರಿಣಾಮ ಮೂರು ತಿಂಗಳ ಮಗು ಮೃತಪಟ್ಟಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ. ಸಮರ್ಥ ಸಾಯಿ ಮೃತಪಟ್ಟ ಮಗು.

ಇದೇ ಗ್ರಾಮಕ್ಕೆ ಸೇರಿದ ಆರ್​.ಆರ್​. ಹಾಲಬಾವಿ ಎಂಬ ನರ್ಸ್​ ಗ್ರಾಮದಲ್ಲಿ ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುವ ಸಲುವಾಗಿ ಎಲ್ಲರಿಗೂ ಪೆಂಟಾಪಸ್ಟ್​ ಚುಚ್ಚುಮದ್ದು ನೀಡಿದ್ದಾರೆ. ಇದೇ ರೀತಿ ಮೃತ ಮಗು ಸಮರ್ಥಸಾಯಿಗೂ ಸಹ ಚುಚ್ಚುಮದ್ದು ನೀಡಿದ್ದಾರೆ. ಆದರೆ, ಜ್ವರ ಇದ್ದ ಮಕ್ಕಳಿಗೆ ಪೆಂಟಾಪಸ್ಟ್​ ಚುಚ್ಚುಮದ್ದು ನೀಡಬಾರದು. ಇದು ತಿಳಿದಿದ್ದರೂ ಸಹ ಮಗುವಿಗೆ ಈ ಚುಚ್ಚುಮದ್ದನ್ನು ನೀಡಿದ ಕಾರಣದಿಂದಾಗಿಯೇ ಮಗು ಮೃತಪಟ್ಟಿದೆ ಎನ್ನಲಾಗುತ್ತಿದೆ.

ಚುಚ್ಚುಮದ್ದು ನೀಡಿ ಸ್ವಲ್ಪ ಸಮಯದಲ್ಲೇ ಮಗು ಅಸ್ವಸ್ಥಗೊಂಡಿದೆ. ಕೂಡಲೇ ಮಗುವನ್ನು ಗೋಕಾಕ್​ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಮಗುವಿನ ಸಾವಿಗೆ ನರ್ಸ್​ ನೀಡಿದ ಚುಚ್ಚುಮದ್ದೇ ಕಾರಣ ಎಂದು ಆರೋಪಿಸಿದ್ದಾರೆ. ಗೋಕಾಕ್​ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ : ಸುಳ್ಳು ಸುದ್ದಿ - ಏಪ್ರಿಲ್​ನಲ್ಲಿ ಪಂಚಾಯತ್ ಚುನಾವಣೆ ಇಲ್ಲ: ಗೆಜೆಟ್ ನೋಟಿಫಿಕೇಶನ್ ನಕಲಿ - ಆಂತರಿಕ ತನಿಖೆಗೆ ಆದೇಶ
Published by: MAshok Kumar
First published: January 11, 2020, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading