• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Madikeri: ಫೋನ್​ನಲ್ಲಿ ಮಾತಾಡ್ತಿದ್ದ ವಿವಾಹಿತೆಯನ್ನು ತೋಟಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ; ಓರ್ವ ಅರೆಸ್ಟ್

Madikeri: ಫೋನ್​ನಲ್ಲಿ ಮಾತಾಡ್ತಿದ್ದ ವಿವಾಹಿತೆಯನ್ನು ತೋಟಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ; ಓರ್ವ ಅರೆಸ್ಟ್

ಆರೋಪಿಗಳು

ಆರೋಪಿಗಳು

ಆರೋಪಿ ಫಾರೂಕ್ ಮಾದಾಪುರದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದಾನೆ. ಸದ್ಯ ಇಬ್ಬರು ಆರೋಪಿಗಳು ವಿದೇಶಕ್ಕೆ ಪಲಾಯಾನ ಆಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿಯೇ ಆರೋಪಿಗಳನ್ನ ಬಂಧಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

 • News18 Kannada
 • 3-MIN READ
 • Last Updated :
 • Kodagu, India
 • Share this:

ಮಡಿಕೇರಿ: ರಾತ್ರಿ ಸುಮಾರು 9.30ರ ವೇಳೆಗೆ ಫೋನ್​ನಲ್ಲಿ ಮಾತನಾಡುತ್ತಿದ್ದ ವಿವಾಹಿತೆ ಮಹಿಳೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಿಳಿಗೆರೆ (Biligere, Somavarapet) ಗ್ರಾಮದಲ್ಲಿ ನಡೆದಿದೆ. ಬಿಳಿಗೆರೆ ಗ್ರಾಮದ ನಿವಾಸಿಯಾಗಿರುವ 19 ವರ್ಷದ ವಿವಾಹಿತೆ (Married Woman) ಮನೆ ಮುಂದೆಯೇ ಫೋನ್​ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬಂದ ಮೂವರು ಆಗುಂತಕರು ವಿವಾಹಿತೆಯನ್ನು ಕಾಫಿತೋಟದೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ವಿವಾಹಿತೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಂಬಂಧಿಕರು ಹಿಂದೂ ಜಾಗರಣ ವೇದಿಕೆ (Hindu Jagarana Vedike) ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆರೋಪಿಗಳ ಮೂವರ ಪೈಕಿ ಓರ್ವರನ್ನು ಸೆರೆ ಹಿಡಿದು ಪೊಲೀಸರ (Police) ವಶಕ್ಕೆ ನೀಡಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.


ನಂದಿಮೊಟ್ಟೆಯ ರಾಜ, ಹಟ್ಟಿಹೊಳೆಯ ನೌಶದ್, ಇಗ್ಗೋಡ್ಲಿನ ಫಾರೂಕ್ ಮೂವರು ಆರೋಪಿಗಳು. ಮೂವರಲ್ಲಿ ನಂದಿಮೊಟ್ಟೆಯ ರಾಜ ಸೆರೆ ಸಿಕ್ಕಿದ್ದಾನೆ. ಆರೋಪಿಗಳು ತಂದಿದ್ದ ಎರಡು ಆಟೋಗಳು ಸಹ ನೌಶದ್ ಮತ್ತು ರಶೀದ್​​​ಗೆ ಸೇರಿದ್ದಾಗಿದೆ.


ಆರೋಪಿಗಳಿಬ್ಬರ ಬಂಧನಕ್ಕೆ ಆಗ್ರಹ


ಆರೋಪಿ ಫಾರೂಕ್ ಮಾದಾಪುರದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದಾನೆ. ಸದ್ಯ ಇಬ್ಬರು ಆರೋಪಿಗಳು ವಿದೇಶಕ್ಕೆ ಪಲಾಯಾನ ಆಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿಯೇ ಆರೋಪಿಗಳನ್ನ ಬಂಧಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಉಗ್ರ ಹೋರಾಟದ ಎಚ್ಚರಿಕೆ


ಓರ್ವ ಆರೋಪಿ ಹಾಗೂ ಎರಡೂ ಆಟೋಗಳನ್ನು ಹಿಂದೂ ಜಾಗರಣ ವೇದಿಕೆ ಸೋಮವಾರಪೇಟೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದ್ರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Crime News: ಅಪ್ರಾಪ್ತ ವಯಸ್ಸಿನ ಮಗಳನ್ನು ಮೊಬೈಲ್‌ ಚಾರ್ಜರ್‌ನಿಂದ ಕತ್ತು ಹಿಸುಕಿ ಕೊಂದ ಅಪ್ಪ! ಕಾರಣವೇನು?


ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ಬಲೆ ಬೀಸಿದ್ದಾರೆ .

top videos
  First published: