ಚಿನ್ನ ಕದಿಯಲು ಕೆಜಿಎಫ್‌ ಗಣಿಯಲ್ಲಿ ಇಳಿದ ಮೂವರ ದುರ್ಮರಣ; ಘಟನೆಗೆ ಭದ್ರತಾಲೋಪವೇ ಕಾರಣ

ಬುಧವಾರ ಮಧ್ಯರಾತ್ರಿ ಚಿನ್ನ ಕದಿಯಲು ಹೋದವರು ಗುಂಡಿಯಲ್ಲಿ ಇಳಿಯುವಾಗ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರ ಶವವನ್ನು ಹೊರತೆಗೆಯಲಾಗಿದ್ದು ಮೂರನೇ ಶವಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಮೃತರ ದೇಹವನ್ನು ಹೊರ ತೆಗೆಯುತ್ತಿರುವ ರಕ್ಷಣಾ ಸಿಬ್ಬಂದಿಗಳು.

ಮೃತರ ದೇಹವನ್ನು ಹೊರ ತೆಗೆಯುತ್ತಿರುವ ರಕ್ಷಣಾ ಸಿಬ್ಬಂದಿಗಳು.

  • Share this:
ಕೋಲಾರಾ (ಮೇ 15); ಕೊರೋನಾ ಲಾಕ್ ಡೌನ್ ಮದ್ಯೆ ರಾತ್ರೋ ರಾತ್ರಿ ಚಿನ್ನ ಕದ್ದು ಹಣ ಸಂಪಾದನೆ ಮಾಡಬೇಕೆಂದು ಕೆಜಿಎಫ್‌ ಚಿನ್ನದ ಗಣಿಗೆ ಇಳಿದ ಐವರ ಪೈಕಿ ಮೂವರು ಬಾರದ ಲೋಕಕ್ಕೆ ತೆರಳಿರುವ ಘಟನೆ ಗುರುವಾರ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಕೆಜಿಎಪ್ ಚಿನ್ನದಗಣಿ ದೇಶದಲ್ಲೆ ಅತಿ ಆಳವಾದ, ವಿಸ್ತಾರವಾದ ಚಿನ್ನದಗಣಿ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ, ಕಳೆದ ಹಲವು ವರ್ಷಗಳಿಂದ ‌ಅತಿಯಾದ ನಷ್ಟದ ಸಮಸ್ಯೆಗೆ ಸಿಲುಕಿ ಕೇಂದ್ರ ಸರ್ಕಾರ ಈ ಚಿನ್ನದ ಗಣಿಯನ್ನ ಮುಚ್ಚಿದೆ. ಆದರೂ, ಈ ಗಣಿ ಪುನರಾರಂಭಕ್ಕೆ ಸಾಕಷ್ಟು ಪ್ರಯತ್ನಗಳೂ ನಡೆದಿವೆ. ಈ ನಡುವೆ ಕಳೆದ ಒಂದು ದಶಕದಲ್ಲಿ ಈ ಗಣಿಯಲ್ಲಿ ಚಿನ್ನದ ಕಳ್ಳತನಕ್ಕೆ ಮುಂದಾದವರ ಸಂಖ್ಯೆ ಒಂದೆರಡಲ್ಲ.

ಹೀಗೆ ಬುಧವಾರ ಮಧ್ಯರಾತ್ರಿ ಚಿನ್ನ ಕದಿಯಲು ಹೋದವರು ಗುಂಡಿಯಲ್ಲಿ ಇಳಿಯುವಾಗ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರ ಶವವನ್ನು ಹೊರತೆಗೆಯಲಾಗಿದ್ದು ಮೂರನೇ ಶವಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಮೃತರನ್ನು ಬಿ-ಶಾಪ್ ನ ದೊಡ್ಡಿಯ ನಿವಾಸಿಗಳಾದ ಸಂತೋಷ್ ಅಲಿಯಾಸ್ ಪಡಿಯಪ್ಪ, ಜೊಸೆಫ್ ಮತ್ತು ಕಂದ ಮೃತರಾದವರು. ವಿಕ್ಟರ್ ಹಾಗೂ ಕಾರ್ತಿಕ್ ಎಂಬುವರು ಪ್ರಾಣ ಅಪಾಯದಿಂದ ಪಾರಾಗಿದ್ದು ಇಬ್ಬರನ್ನ ಪೊಲೀಸರು ಬಂದಿಸಿ ಚಿಕಿತ್ಸೆಗೆಂದು ಕೆಜಿಎಪ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ತಳಕ್ಕೆ ಭೇಟಿ ನೀಡಿದ ಕೆಜಿಎಪ್ ಎಸ್‌ಪಿ ಮೊಹಮ್ಮದ್ ಸುಜೀತಾ ಅವರು  ಸೂಕ್ತ ತನಿಖೆ ನಡೆಸಿ ಸೂಕ್ತ  ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಚಿನ್ನದಗಣಿಯಲ್ಲಿ ಭದ್ರತಾಲೋಪವೇ ಈ ದುರ್ಘಟನೆಗೆ ಕಾರಣ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ : World Bank Loan: ಕೊರೋನಾ ವಿರುದ್ಧದ ಹೋರಾಟ; ಭಾರತಕ್ಕೆ ಮತ್ತೊಮ್ಮೆ 1 ಬಿಲಿಯನ್ ಡಾಲರ್‌ ಆರ್ಥಿಕ ನೆರವು ನೀಡಿದ ವಿಶ್ವಬ್ಯಾಂಕ್
First published: