Accident Case| ಬೆಂಗಳೂರಿನಲ್ಲಿ ಡೆಡ್ಲಿ ಆಕ್ಸಿಡೆಂಟ್; ಕಾರು ಡಿಕ್ಕಿ ರಭಸಕ್ಕೆ ಫ್ಲೈ ಓವರ್ ಮೇಲಿಂದ ಬಿದ್ದು ಮೂವರ ಸಾವು !

ಕಾರು ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ಮೆಲ್ಸೇತುವೆಯಿಂದ 30 ಅಡಿ ಕೆಳಗಿನ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು (ಸೆಪ್ಟೆಂಬರ್​ 15); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Banglore) ಮತ್ತೊಂದು ಭೀಕರ ಅಪಘಾತ (Accident) ಸಂಭವಿಸಿದೆ. ಕೋರಮಂಗಲ (Koramangala) ಕಾರು ಅಪಘಾತ (Car Accident) ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿ (Electronic City Flyover) ಮೆಲ್ಸೇತುವೆಯಲ್ಲಿ ಕಾರು ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ಮೆಲ್ಸೇತುವೆಯಿಂದ 30 ಅಡಿ ಕೆಳಗಿನ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ವ್ಯಕ್ತಿಯೂ ಮೃತಪಟ್ಟಿದ್ದು, ಮತ್ತೋರ್ವ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ನಿನ್ನೆ ರಾತ್ರಿ 9:20 ರ ಸುಮಾರಿಗೆ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್‌ನಲ್ಲಿ ಅಂದಾಜು 39ವರ್ಷದ ವ್ಯಕ್ತಿ ಹಾಗೂ ಮಹಿಳೆ ಇದ್ದರು ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಹೊಸೂರು ಮಾರ್ಗವಾಗಿ ಹೋಗುತ್ತಿದ್ದ ಬುಲೆಟ್ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಮೇಲೆ ಬಂದಾಗ ಹಿಂಬದಿಯಿಂದ ಬಂದ ಬೊಲೆನೋ ಕಾರು ಸುಮಾರು 140-150 ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಮೇಲ್ಸೇತುವೆಯಿಂದ ಅಂದಾಜು 150 ಅಡಿಯಷ್ಟು ಮುಂದಕ್ಕೆ ಹಾರಿ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ಇಬ್ಬರು ಇಬ್ಬರ ದೇಹಗಳು ಛಿದ್ರವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಬೈಕ್‌ನ ಎಲ್ಲ ಬಿಡಿ ಭಾಗಗಳೂ ಹಾನಿಯಾಗಿ ರಸ್ತೆಗೆ ಬಿದ್ದಿವೆ.

ತಮಿಳುನಾಡು ನೋಂದಣಿಯ ಬುಲೆಟ್ ಬೈಕ್ ಆಗಿದ್ದು, ಬೆಲೆನೋ ಕಾರು ಕರ್ನಾಟಕ ರಾಜ್ಯದ್ದಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರ ಮೃತದೇಹಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗ  ರವಾನೆ ಮಾಡಿದ್ದಾರೆ. ಆದ್ರೆ ಸಾವನ್ನಪ್ಪಿದ್ದೋರು ಯಾರು ಅವರ ಹಿನ್ನೆಲೆ, ಹೆಸರು, ಎಲ್ಲಿಗೆ ಹೋಗುತ್ತಿದ್ದರು, ದುರ್ಘಟನೆಗೆ ನಿಖರ ಕಾರಣವೇನು ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರಿನಲ್ಲಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹಿಂದಿನಿಂದ ಅತೀ ವೇಗವಾಗಿ ಬಂದ ಕಾರು ಬುಲೆಟ್ ಬೈಕ್‌ನ್ನು ಹಿಂದಿಕ್ಕುವ ಭರದಲ್ಲಿ ಡಿಕ್ಕಿ ಹೊಡೆದಿರುವ ಸಾಧ್ಯತೆಗಳಿವೆ. ಕಾರು ಗುದ್ದಿದ ರಭಸಕ್ಕೆ ಪ್ಲೈ ಓವರ್ ಮೇಲೆ  ಅಳವಡಿಸಿದ್ದ ಬ್ಯಾರಿಕೇಡ್ ಸಮೇತ 30 ಅಡಿ ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಆದರೆ, ಬುಲೆಟ್ ಮಾತ್ರ ಮೇಲ್ಸೇತುವೆಯಲ್ಲೇ ಇತ್ತು. ಬೆಲೆನೋ ಕಾರು ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ದುರ್ಘಟನೆಗೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಪಘಾತಕ್ಕೆ ಅತಿ ವೇಗವೇ ಕಾರಣ ಎನ್ನಲಾಗಿದೆ. ಬಿಎಂಎಸ್ ಕಾಲೇಜ್ ಇಂಜಿನಿಯರಿಂಗ್‌ ವಿದ್ಯಾರ್ಥಿ ನಿತೀಶ್​ ಕಾರು ಚಾಲಕ ಎಂದು ತಿಳಿದುಬಂದಿದೆ. ಈತ ನಿನ್ನೆ ಕ್ರಿಕೆಟ್ ಆಟವನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಾರನ್ನು ಅತಿ ವೇಗದಲ್ಲಿ ಓಡಿಸಿ ಅಪಘಾತ ಮಾಡಿದ್ದಾರೆ, ಈ ಅಪಘಾತದಲ್ಲಿ ಬ್ಯಾಂಕ್ ಉದ್ಯೋಗಿ ಜೆಪಿ ನಗರ ನಿವಾಸಿ ಪ್ರೀತಮ್ ಕುಮಾರ್ (30) ಮತ್ತು ಐಟಿ ಉದ್ಯೋಗಿ ಚೆನ್ನೈ ಮೂಲದ ನಿವಾಸಿ ಕೃತಿಕಾ ರಾಮನ್ (28) ಮೃತಪಟ್ಟಿದ್ದಾರೆ. ಪ್ರೀತಮ್ ಹಾಗೂ ಕೃತಿಕಾ ಸುಮಾರು ಐದು ವರ್ಷದಿಂದ ಪರಿಚಯವಿತ್ತು. ಆದರೆ, ಇದೀಗ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿರುವುದು ಕುಟುಂಬಸ್ಥರ ಆಕ್ರಂಧನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: D-company: ನಮ್ಮ ಮೇಲೆ ಪಾಕಿಸ್ತಾನದ ಯಾವುದೇ ಒತ್ತಡವಿಲ್ಲ; ಎಲ್ಲಾ ಸುಳ್ಳು ಎಂದ ಗ್ಯಾಂಗ್​ಸ್ಟರ್​  ಛೋಟಾ ಶಕೀಲ್

ಈ ಹಿಂದೆಯೂ ರಸ್ತೆ ಅಪಘಾತ: 

ಎರಡು ವರ್ಷಗಳ ಹಿಂದೆಯೂ ಈ ಮೇಲ್ಸೇತುವೆಯಲ್ಲಿ ಇದೇ ಮಾದರಿಯಲ್ಲಿ ಸ್ಕೂಟರ್ ಸಮೇತ ಸವಾರರು ಬಿದ್ದಿದ್ದರು. ಇತ್ತೀಚೆಗೆ ಕೋರಮಂಗಲದಲ್ಲಿ 7 ಮಂದಿಯನ್ನು ಬಲಿ ಪಡೆದ ರಸ್ತೆ ಅಪಘಾತ ಪ್ರಕರಣ ಮಾಸುವ ಮುನ್ನವೇ ಅದೇ ಪ್ರದೇಶದ ಆಸು-ಪಾಸಿನಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.
Published by:MAshok Kumar
First published: