• Home
  • »
  • News
  • »
  • state
  • »
  • Crime News: ಹೆಂಡ್ತಿ, ಮಕ್ಕಳಿದ್ದ ಮನೆಗೆ ಕೊಳ್ಳಿ ಇಟ್ಟ ನೀಚ; ಇತ್ತ ನೀರಲ್ಲಿ ಮುಳುಗಿ ತಂದೆ-ಮಗ ಸಾವು

Crime News: ಹೆಂಡ್ತಿ, ಮಕ್ಕಳಿದ್ದ ಮನೆಗೆ ಕೊಳ್ಳಿ ಇಟ್ಟ ನೀಚ; ಇತ್ತ ನೀರಲ್ಲಿ ಮುಳುಗಿ ತಂದೆ-ಮಗ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾಲ್ಕು ತಿಂಗಳಿನಿಂದ ಪತಿಯಿಂದ ಪ್ರತ್ಯೇಕವಾಗಿದ್ದ ಪತ್ನಿ, ಮಕ್ಕಳು ದೊಡ್ಡಬೀಕನಹಳ್ಳಿಯಲ್ಲಿದ್ದರು. ರಂಗಸ್ವಾಮಿ ಆಗಾಗ್ಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದನು.

  • Share this:

ಮಕ್ಕಳನ್ನು (Children) ನೋಡಲು ಬಿಡದಿದ್ದಕ್ಕೆ ಪಾಪಿ ಪತಿಯೊಬ್ಬ ಮಡದಿ (Wife) ಮಕ್ಕಳನ್ನೂ ಸೇರಿಸಿ ಮನೆಗೇ ಬೆಂಕಿ ಹಚ್ಚಿದ ಘಟನೆ ಹಾಸನದಲ್ಲಿ (Hassan) ನಡೆದಿದೆ. ಮನೆಯೊಳಗಿದ್ದ ಪತ್ನಿ, ಇಬ್ಬರು ಗಂಡು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ರಂಗಸ್ವಾಮಿ ಮನೆಗೆ ಬೆಂಕಿ ಹಚ್ಚಿದ ನೀಚ. ಜಮೀನು ವಿಚಾರಕ್ಕೆ ರಂಗಸ್ವಾಮಿ ಹಾಗೂ ಪತ್ನಿ ಗೀತಾ ನಡುವೆ ಜಗಳವಾಗಿದ್ದು, ಗೊರೂರು ಠಾಣೆಯಲ್ಲಿ (Goruru Police Station) ಪ್ರಕರಣ ಕೂಡ ದಾಖಲಾಗಿತ್ತು. ನಾಲ್ಕು ತಿಂಗಳಿನಿಂದ ಪತಿಯಿಂದ ಪ್ರತ್ಯೇಕವಾಗಿದ್ದ ಪತ್ನಿ, ಮಕ್ಕಳು ದೊಡ್ಡಬೀಕನಹಳ್ಳಿಯಲ್ಲಿದ್ದರು. ರಂಗಸ್ವಾಮಿ ಆಗಾಗ್ಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದನು. ಶುಕ್ರವಾರ (ನವೆಂಬರ್ 19) ಮಕ್ಕಳನ್ನು ನೋಡಲು ಬಂದಾಗ ರಾಕ್ಷಸಿ ಕೃತ್ಯ ನಡೆಸಿದ್ದಾನೆ.


ಭೀಕರ ಅಪಘಾತ, ಇಬ್ಬರು ಸಾವು


ಚಾಲಕನ ಅಜಾಗರೂಕತೆಯಿಂದ ಕಾರ್​ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ‌ ಕದಿರನಾಯಕನಹಳ್ಳಿ-ಹೊಸಹಳ್ಳಿ ಮಾರ್ಗ ಮಧ್ಯೆ ಘಟನೆ ನಡೆದಿದೆ. ಬೆಂಗಳೂರಿನಿಂದ ಬರುವಾಗ ಭೀಕರ ಅಪಘಾತ ಸಂಭವಿಸಿದ್ದು, ಆಂಧ್ರ ಪ್ರದೇಶದ ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿವೆ.


ಹಾವಿಗೆ ಊದಿನಕಡ್ಡಿ ಬೆಳಗಿದ್ರು


ಮನೆಗೆ ಬಂದ ಹಾವು ವಾಪಸ್ ಹೋಗಲಿ ಅಂತ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಘಟನೆ ತುಮಕೂರಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಕೊತ್ತಗೇರಿಯಲ್ಲಿ ಮರಿಸ್ವಾಮಿ ಎಂಬವರ ಮನೆಗೆ ನಾಗರಹಾವು ಬಂದಿತ್ತು. ಹಾವು ಕಂಡ ತಕ್ಷಣ ಕುಟುಂಬಸ್ಥರು ಊದುಬತ್ತಿ ಕಡ್ಡಿ ಹಚ್ಚಿ ಪೂಜೆ ಮಾಡಿದ್ದಾರೆ. ಆದ್ರೆ ಹಾವು ಜಪ್ಪಯ್ಯ ಅಂದ್ರೂ ಹೋಗಿಲ್ಲ. ಕೊನೆಗೆ ಉರಗ ಸಂರಕ್ಷಕ ಮಾಂತೇಶ್ ನಾಗರಹಾವು ರಕ್ಚಿಸಿದ್ದಾರೆ.


ನೀರಲ್ಲಿ ಮುಳುಗಿ ತಂದೆ-ಮಗ ಸಾವು


ರಾಯಚೂರು ಜಿಲ್ಲೆಯ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಂದೆ ಮಗ ಸಾವನ್ನಪ್ಪಿದ್ದಾರೆ. ಪಲಗಲದಿನ್ನಿ ಗ್ರಾಮದ ರಮೇಶ್ ಕುಟುಂಬ ಸಮೇತ ಜಲಾಶಯಕ್ಕೆ ಹೋಗಿದ್ದರು.


ಈ ವೇಳೆ ಪತ್ನಿ ನದಿ ದಡದಲ್ಲಿದ್ದರೆ, ಮಗ ದಡದ ಸಮೀಪ ನೀರಿನಲ್ಲಿ ಆಟವಾಡುತ್ತಿದ್ದ. ತಂದೆ ರಮೇಶ್​ ತೆಪ್ಪದ‌ ಮೂಲಕ ಮೀನು ಹಿಡಿಯುತ್ತಿದ್ದರು. ಮಗ ಇದ್ದಕ್ಕಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗಲಾರಂಭಿಸಿದಾಗ ಮಗು ಕಾಪಾಡಲು ಹೋಗಿ ತಂದೆಯೂ ನೀರುಪಾಲಾಗಿದ್ದಾರೆ.


ಇದನ್ನೂ ಓದಿ:  Voters Data Steal: 1 ವೋಟರ್ ಐಡಿಗೆ 25 ರೂಪಾಯಿ; ಇತ್ತ ಸ್ಫೋಟಕ ಹೇಳಿಕೆ ನೀಡಿದ ಡಿಕೆಶಿ


‘ಸತ್ತೋಗು, ಸಾಲ ಮನ್ನಾ ಆಗುತ್ತೆ’


ಖಾಸಗಿ ಬ್ಯಾಂಕ್ ಸಿಬ್ಬಂದಿ ಧಮ್ಕಿ ಹಾಕಿರುವ ಪ್ರಕರಣವೊಂದು ಹುಣಸೂರಿನಲ್ಲಿ ನಡೆದಿದೆ. ಕೊಳಘಟ್ಟ ಗ್ರಾಮದ ಮಹಿಳೆಯಿಂದ ಸಾಲ ವಸೂಲಿ ಮಾಡಲು ಬಂದ ಖಾಸಗಿ ಬ್ಯಾಂಕ್ ಸಿಬ್ಬಂದಿ, ರಸ್ತೆ ಮಧ್ಯದಲ್ಲೇ ನಿಲ್ಲಿಸಿಕೊಂಡು ಒತ್ತಡ ಹೇರಿದ ವಿಡಿಯೋ ವೈರಲ್ ಆಗಿದೆ.


ಸಾಲ ಹಿಂದಿರುಗಿಸಲು ಗಡುವು ಕೇಳಿದ ಮಹಿಳೆಯ ವಿರುದ್ಧ ಬ್ಯಾಂಕ್​ನ ಸಿಬ್ಬಂದಿ ಹರಿಹಾಯ್ದಿದ್ದಾನೆ. ನೀನು ಸತ್ತೋದ್ರೆ ಸಾಲ ಮನ್ನಾ ಆಗುತ್ತೆ ಸಾಯಿ ಎಂದು ಧಮ್ಕಿ ಹಾಕಿ ಸಾಲ ವಸೂಲಿಗೆ ನಿಂತಿದ್ದಾನೆ. ಕೇವಲ 500 ರೂಪಾಯಿ ಕಂತಿಗಾಗಿ ಮಹಿಳೆಗೆ ಸತ್ತೋಗು ಅಂತ ಧಮ್ಕಿ ಹಾಕಿದ್ದಾನೆ.


ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ!


ಹೆಂಡತಿ ದುಡ್ಡಿನಾಸೆಗೆ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಬೆಂಗಳೂರಿನ ಶ್ರೀನಗರ (Srinagar) ಬಳಿಯ ಅವಲಹಳ್ಳಿಯಲ್ಲಿ ವಾಸವಾಗಿದ್ದ ಅಣ್ಣಯ್ಯ (Annayya), ಬಾರ್​ನಲ್ಲಿ (Bar) ಕ್ಯಾಶಿಯರ್​ ಆಗಿ ಕೆಲಸ ಮಾಡ್ತಿದ್ರು.


ಇದನ್ನೂ ಓದಿ:  Explained: ಅಜಾನ್​ಗೆ ನೃತ್ಯ ಮಾಡಿದವರಲ್ಲಿ ಹಿಂದೂ ಮಕ್ಕಳು, ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಮತ್ತೊಂದು ವಿವಾದ


ಎಷ್ಟು ಗಂಟೆ ಕೆಲಸ (Work) ಮಾಡಿ ಮನೆಗೆ ಬಂದ್ರೂ ಹೆಂಡತಿ ನೀವು ಕೊಡುವ ದುಡ್ಡು ಸಾಲುತ್ತಿಲ್ಲ ಎಂದು ಜಗಳ ತೆಗೆಯುತ್ತಿದ್ದಳಂತೆ ಇದ್ರಿಂದ ಅಣ್ಣಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.

Published by:Mahmadrafik K
First published: