• Home
  • »
  • News
  • »
  • state
  • »
  • Accident: ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರ ದುರ್ಮರಣ

Accident: ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರ ದುರ್ಮರಣ

ಪಿಎಸ್ಐ ಸೇರಿ ಮೂವರ ದುರ್ಮರಣ

ಪಿಎಸ್ಐ ಸೇರಿ ಮೂವರ ದುರ್ಮರಣ

ಶಿವಾಜಿನಗರ ಠಾಣೆ ಪೊಲೀಸರ (Shivajinagar Police Station) ವಾಹನ ಆಂಧ್ರ ಪ್ರದೇಶದ(Andhra Pradesh) ಚಿತ್ತೂರು (Chittor) ಬಳಿ ಭೀಕರ ಅಪಘಾತಕ್ಕೆ (Accident) ಒಳಗಾಗಿದೆ. ಪರಿಣಾಮ ಶಿವಾಜಿನಗರ ಠಾಣೆ ಪಿಎಸ್ಐ (PSI), ಕಾನ್ಸ್‌ಟೇಬಲ್ (Constable) ಹಾಗೂ ವಾಹನ ಚಾಲಕ (Driver) ಮೃತಪಟ್ಟಿದ್ದಾರೆ.

ಮುಂದೆ ಓದಿ ...
  • Share this:

ಚಿತ್ತೂರು, ಆಂಧ್ರ: ಗಾಂಜಾ ಪ್ರಕರಣ (Ganja Case) ಸಂಬಂಧ ಅಪರಾಧಿಗಳನ್ನು ಹಿಡಿಯಲು ಹೋಗಿದ್ದ ಬೆಂಗಳೂರಿನ (Bengaluru) ಶಿವಾಜಿನಗರ ಠಾಣೆ ಪೊಲೀಸರ (Shivajinagar Police Station) ವಾಹನ ಆಂಧ್ರ ಪ್ರದೇಶದ(Andhra Pradesh) ಚಿತ್ತೂರು (Chittoor) ಬಳಿ ಭೀಕರ ಅಪಘಾತಕ್ಕೆ (Accident) ಒಳಗಾಗಿದೆ. ಪರಿಣಾಮ ಶಿವಾಜಿನಗರ ಠಾಣೆ ಪಿಎಸ್ಐ (PSI), ಕಾನ್ಸ್‌ಟೇಬಲ್ (Constable) ಹಾಗೂ ವಾಹನ ಚಾಲಕ (Driver) ಮೃತಪಟ್ಟಿದ್ದಾರೆ. ಗಾಂಜಾ ಕೇಸ್‌ ಆರೋಪಿಗಳನ್ನು ಬಂಧಿಸಲು ಶಿವಾಜಿನಗರ ಠಾಣೆ ಪೊಲೀಸರು ಖಾಸಗಿ ಇನೋವಾ ಕಾರು ಬಾಡಿಗೆಗೆ ಪಡೆದು, ಓರ್ವ ಪಿಎಸ್ಐ ಸೇರಿ ಆರು ಮಂದಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಚಿತ್ತೂರು ಬಳಿಯ ಪೂತಲಪಟ್ಟು ಮಂಡಲ, ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಅಪಘಾತವಾಗಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ.


ಪಿಎಸ್ಐ ಅವಿನಾಶ್


ಪಿಎಸ್ಐ ಸೇರಿ ಮೂವರು ಸಾವು, ಹಲವರಿಗೆ ಗಾಯ


ಘಟನೆಯಲ್ಲಿ ಶಿವಾಜಿನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಕಾನ್ಸ್‌ಟೇಬಲ್ ಅನಿಲ್ ಹಾಗೂ ಕಾರು ಚಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ. ಇನ್ನು ಅಪಘಾತದಲ್ಲಿ ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಕಾನ್ಸ್‌ಟೇಬಲ್ ಶರಣಬಸವ ಎಂಬುವರಿಗೆ ಗಂಭೀರ ಗಾಯವಾಗಿದೆ. ಅವರನ್ನು ವೆಲ್ಲೂರಿನ ಸಿಎಂಸಿ ಅಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫ್ಟ್ ಮಾಡಲಾಗಿದೆ.
ಗಾಂಜಾ ಆರೋಪಿಗಳನ್ನು ಹಿಡಿಯು ಹೊರಟಿದ್ದ ಪೊಲೀಸರು


ಗಾಂಜಾ ಆರೋಪಿಗಳನ್ನು ಹಿಡಿಯಲು ಬೆಂಗಳೂರಿನಿಂದ ಆಂಧ್ರಕ್ಕೆ ಹೊರಟಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಶಿವಾಜಿನಗರ ಪೊಲೀಸರ ತಂಡ ತೆರಳಿತ್ತು. ಖಾಸಗಿ ಟ್ರಾವೆಲ್ ನಿಂದ ಇನೋವಾ ಕಾರು ಪಡೆದು ತೆರಳಿದ್ದರು. ಆರೋಪಿಗಳು ಚಿತ್ತೂರಿನಲ್ಲಿ ಇಲ್ಲ ಬೇರೆ ಕಡೆ ಇದ್ದಾರೆ ಎಂಬ ಮಾಹಿತಿ ಬಂದಿತ್ತು. ಆಗ ಚಿತ್ತೂರಿನಿಂದ ಬೇರೆ ಕಡೆ ತೆರಳಲು ಮುಂದಾದರು. ಈ ವೇಳೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿತ್ತೂರು ಬಳಿ ಕಾರು ಅಪಘಾತ ನಡೆದಿದೆ. ಚಿತ್ತೂರಿನಿಂದ ತಿರುಪತಿ ಕಡೆಗೆ ಇನ್ನೋವಾದಲ್ಲಿ ಹೋಗುತ್ತಿದ್ದಾಗ ಅವಘಡವಾಗಿದೆ.


ಕಾನ್ಸ್‌ಟೇಬಲ್ ಅನಿಲ್


ಇದನ್ನೂ ಓದಿ: Accident: ಬರ್ತ್‌ ಡೇ ಪಾರ್ಟಿಗೆ ಹೋದವರಿಗಾಗಿ ಕಾದಿದ್ದ ಜವರಾಯ! ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು


ಡಿವೈಡರ್‌ಗೆ ಡಿಕ್ಕಿ ಹೊಡೆದು, 30 ಅಡಿ ದೂರಕ್ಕೆ ಬಿದ್ದ ಕಾರು


ಶಿವಾಜಿನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಅವಿನಾಶ್ ನೇತೃತ್ವದಲ್ಲಿ ಪೊಲೀಸರ ತಂಡ ತೆರಳಿತ್ತು. ಇದರಲ್ಲಿ ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಪಿಸಿ ಅನಿಲ್, ಬಾಗಲಕೋಟೆ ಮೂಲದ ಪಿಸಿ ಅನಿಲ್ ಮುಲ್ಲಿಕ್ ಮತ್ತಿತರರು ಇದ್ದರು. ಬೆಳಗಿನ ಜಾವ ಡಿವೈಡರ್‌ಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು, ಸುಮಾರು 30 ಅಡಿ ದೂರದ ಮತ್ತೊಂದು ರಸ್ತೆಗೆ ಹಾರಿ ಬಿದ್ದಿದೆ. ಪರಿಣಾಮ ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಕಾನ್ಸ್‌ಟೇಬಲ್ ಅನಿಲ್, ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಕಾನ್ಸ್‌ಟೇಬಲ್ ಶರಣಬಸವ ಎಂಬುವರಿಗೆ ಗಂಭೀರ ಗಾಯವಾಗಿದೆ. ಅವರನ್ನು ವೆಲ್ಲೂರಿನ ಸಿಎಂಸಿ ಅಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫ್ಟ್ ಮಾಡಲಾಗಿದೆ.


ಗಾಯಾಳು ಪ್ರೊಬೆಷನರಿ ಪಿಎಸ್ಐ ದೀಕ್ಷಿತ್


ಗೃಹಸಚಿವ ಆರಗ ಜ್ಞಾನೇಂದ್ರ ಕಂಬನಿ


ಅಪಘಾತ ದಲ್ಲಿ ಪೊಲೀಸ್ ಸಿಬ್ಬಂದಿಗಳ ಸಾವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಕ್ರಕೈಗೊಳ್ಳುವಂತೆ ಸೂಚಿಸಿದ್ದಾರೆ. ಗಾಯಗೊಂಡ ಸಿಬ್ಬಂದಿಗಳ ನೆರವಿಗೆ ಧಾವಿಸಿ,  ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಎಲ್ಲಾ ಅಗತ್ಯ ಕ್ರಮ ಜರುಗಿಸಬೇಕು ಎಂದೂ ಸೂಚಿಸಿದ್ದಾರೆ. ಸಾರ್ವಜನಿಕರ ಪ್ರಾಣ ಹಾಗೂ ಆಸ್ತಪಾಸ್ತಿಗಳ ರಕ್ಷಿಸುವ ಕಾರ್ಯದಲ್ಲಿ, ಪೊಲೀಸ್ ಸಿಬ್ಬಂದಿ ಮೃತ ಪಟ್ಟಿರುವುದು ಅತ್ಯಂತ ನೋವು ತಂದಿದೆ, ಎಂದೂ ಸಚಿವರು ಹೇಳಿದ್ದಾರೆ.


ಇದನ್ನೂ ಓದಿ: Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!


 ಶಿವಾಜಿನಗರ ಠಾಣೆಯಲ್ಲಿ ನೀರವ ಮೌನ


ಇನ್ನು ತಮ್ಮ ಸಹೋದ್ಯೋಗಿಗಳ ದಾರುಣ ಸಾವು ಹಿನ್ನಲೆಯಲ್ಲಿ ಶಿವಾಜಿನಗರ ಠಾಣೆ ಬಳಿ ನೀರವ ಮೌನ ನೆಲೆಸಿದೆ. ತಮ್ಮ ಸಹೋದ್ಯೋಗಿಗಳನ್ನು ನೆನೆದು ಪೊಲೀಸ್ ಸಿಬ್ಬಂದಿ ಕಣ್ಣೀರು ಹಾಕುತ್ತಿದ್ದಾರೆ.

Published by:Annappa Achari
First published: