• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yadagiri: ವಾಸಕ್ಕೆ ಮನೆಯಿಲ್ಲದೇ ಮದುವೆಯೂ ಇಲ್ಲ! ರಾತ್ರಿ ನಿದ್ರಿಸೋಕೆ 6 ಕಿಮೀ ಅಲೆದಾಟ

Yadagiri: ವಾಸಕ್ಕೆ ಮನೆಯಿಲ್ಲದೇ ಮದುವೆಯೂ ಇಲ್ಲ! ರಾತ್ರಿ ನಿದ್ರಿಸೋಕೆ 6 ಕಿಮೀ ಅಲೆದಾಟ

ಮುರುಕಲು ಕೋಣೆಯಲ್ಲಿ ವಾಸ

ಮುರುಕಲು ಕೋಣೆಯಲ್ಲಿ ವಾಸ

ವಾಸಕ್ಕೆ ಮನೆಯಿಲ್ಲದೇ (Homeless) ಆ ಮೂವರು ಮದುವೆಯಾಗದೇ (Marriage) ನರಕಯಾತನೆ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆಸರಕಾರದ ಆಶ್ರಯ ಮನೆ ಸೌಲಭ್ಯದಿಂದ ವಂಚಿತರಾಗಿದ್ದಾರೆ.

  • Share this:

ಯಾದಗಿರಿ(ಜು.13): ಬಡತನವೆಂಬ ಶಾಪದಿಂದ ವಾಸಕ್ಕೆ ಮನೆಯಿಲ್ಲದೇ (Homeless) ಆ ಮೂವರು ಮದುವೆಯಾಗದೇ (Marriage) ನರಕಯಾತನೆ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆಸರಕಾರದ ಆಶ್ರಯ ಮನೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಯಾದಗಿರಿ  (Yadagiri) ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ದೇವಿಂದ್ರಮ್ಮ ತನ್ನ ಇಬ್ಬರು ಸಹೋದರರಾದ ಚೆನ್ನಪ್ಪ ಹಾಗೂ ಯಲ್ಲಪ್ಪ ಅವರ ಜೊತೆ ಸಂಕಷ್ಟದ ನಡುವೆ ವಾಸವಾಗಿದ್ದಾಳೆ. ಮೂವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.


ಪರಿಹಾರ ಹಣ ನೀಡದ ಸರಕಾರ!


ದೇವಿಂದ್ರಮ್ಮ ಹಾಗೂ ಇಬ್ಬರು ಸಹೋದರರು ವಾಸವಿರುವ ಮನೆಯು 15 ವರ್ಷದ ಹಿಂದೆ ಭಾರಿ ಮಳೆಗೆ ಕುಸಿದಿದೆ. ಆದರೆ, ಸರಕಾರದಿಂದ ಒಂದು ರೂಪಾಯಿ ಪರಿಹಾರದ ಪಾವತಿಯಾಗಿಲ್ಲ. ಹೀಗಾಗಿ ಮನೆ ಕುಸಿದಿದ್ದ ಮುಂಭಾಗದ ಚಿಕ್ಕದಾದ ಕೋಣೆಯಲ್ಲಿ ಮೂವರು ವಾಸವಾಗಿದ್ದಾರೆ.


ಸೋರುತಿಹದು ಕೋಣೆ!


ಕಳೆದ ಐದು ವರ್ಷದಿಂದ ಚಿಕ್ಕದಾದ ಕೋಣೆಯಲ್ಲಿ ಸಹೋದರಿ ದೇವಿಂದ್ರಮ್ಮ ತನ್ನ ಇಬ್ಬರು ಸಹೋದರರ ಜೊತೆ ವಾಸವಾಗಿದ್ದಾಳೆ.ಆದರೆ,ಪತ್ರಾಸ್ ಗಳಲ್ಲಿ ರಂಧ್ರ ಬಿದ್ದ ಹಿನ್ನೆಲೆ ಮಳೆ ಬಂದಾಗ ಕೊಣೆಯು ಸೋರುತ್ತದೆ.




ಚಿಕ್ಕದಾದ ಕೋಣೆಯಲ್ಲಿ ಅಗತ್ಯ ವಸ್ತುಗಳು ಇಡುವ ಅಲ್ಲಿಯೇ ಅಡುಗೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.ಕುಳಿತು ಕೊಳ್ಳಲು ಮಾತ್ರ ಜಾಗವಿದ್ದು ಆದರೆ,ಮೂವರು ವಾಸಕ್ಕೆ ಜಾಗದ ಕೊರತೆ ಇದೆ. ಮನೆ ದುರಸ್ತಿ ಮಾಡಿಕೊಳ್ಳಬೇಕೆಂದರೇ ಕೈಯಲ್ಲಿ ಹಣವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ.


ಮಳೆ ಬಂದರೆ ಕೋಣೆಯು ಸೋರುತ್ತದೆ. ಕೊಣೆಯು ನೀರಿನಿಂದ ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ನರಕಯಾತನೆ ಜೀವನ ನಡೆಸುತ್ತಿದ್ದಾರೆ.


ಹೆಣ್ಣು ಕೊಡಲು ಹಿಂದೇಟು!


ವಾಸಕ್ಕೆ ಮನೆಯಿಲ್ಲದೇ ದೇವಿಂದ್ರಮ್ಮ ಕೂಡ ಮದುವೆಯಾಗಿಲ್ಲ.ಚೆನ್ನಪ್ಪ ಹಾಗೂ ಯಲ್ಲಪ್ಪ ಸಹೋದರರು ಮದುವೆಯಾಗಿ ಉತ್ತಮ ಜೀವನ ನಡೆಸಬೇಕೆಂದರೇ ಕಿತ್ತು ಹೋದ ಚಿಕ್ಕದಾದ ಕೋಣೆಯಲ್ಲಿ ವಾಸಮಾಡುವದನ್ನು ಅರಿತು ಹೆಣ್ಣು ಮಕ್ಕಳ ಪೋಷಕರು ನಿಮಗೆ ಮನೆಯಿಲ್ಲ‌ ನೀವು ಕಟ್ಟಿಸಿಕೊಳ್ಳಿ ಎಂದು ಹೆಣ್ಣು ಕೊಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಮದುವೆ ಭಾಗ್ಯದಿಂದ ಸಹೋದರರು ವಂಚಿತರಾಗಿದ್ದಾರೆ.


ಇದನ್ನೂ ಓದಿ: ದಲಿತ, ಹಿಂದುಳಿದ ಮಠಾಧೀಶರ ಜೊತೆ RSS ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ!


ರಾತ್ರಿಯಾದರೇ ವಡಗೇರಾದಲ್ಲಿ ವಾಸ!


ಬೇಸಿಗೆ ಕಾಲದಲ್ಲಿ ಮನೆ ಹೊರಗಡೆ ಮಲಗುತ್ತಾರೆ. ಆದರೆ ಮಳೆಗಾಲದಲ್ಲಿ ಕೋಣೆ ಸೋರುವ ಹಿನ್ನೆಲೆ ರಾತ್ರಿ ವೇಳೆ 6 ಕಿಮೀ ದೂರದ ತಾಲೂಕಾ ಕೇಂದ್ರ ವಡಗೇರಾಗೆ ತೆರಳಿ ಆಸ್ಪತ್ರೆ ಜಾಗದಲ್ಲಿ ಮಲಗುತ್ತಾರೆ. ನಿತ್ಯವೂ 6 ಕಿಮೀ ಅಲೆದಾಡುವದು ಅನಿವಾರ್ಯವಾಗಿದೆ.




ಹಾವು ಚೆಳುಗಳ ಕಾಟ!


ಕೋಣೆಗೊಳಗೆ ಕೆಲವೊಮ್ಮೆ ಹಾವು ಹಾಗೂ ಚೆಳುಗಳು ಬರುತ್ತಿದ್ದು ಇದರಿಂದ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇದರಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಸರಕಾರದಿಂದ ಯಾವುದೇ ಸೌಲಭ್ಯ ಸಿಗದೇ ದೇವಿಂದ್ರಮ್ಮ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ತನ್ನ ಇಬ್ಬರು ಸಹೋದರರ ಪಾಲಿಗೆ ತಾಯಿಯಂತೆ ಅಡುಗೆ ‌ಮಾಡಿ ಇಬ್ಬರ ಕಾಳಜಿ ನೋಡಿಕೊಳ್ಳುತ್ತಿದ್ದಾರೆ. ಯಾರು ಸಹಾಯ ಮಾಡದಕ್ಕೆ ದೇವಿಂದ್ರಮ್ಮ ಕಣ್ಣೀರು ಹಾಕಿದರು.


ಇದನ್ನೂ ಓದಿ: Idgah Maidana: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ವಿಗ್ರಹ ಅಂಗಡಿ ತೆರೆಯಲು ಚಿಂತನೆ


ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ದೇವಿಂದ್ರಮ್ಮ ಮಾತನಾಡಿ,  ಐದು ವರ್ಷದಿಂದ ಚಿಕ್ಕದಾದ ಕೋಣೆಯಲ್ಲಿ ವಾಸ ಮಾಡುತ್ತಿದ್ದೇವೆ. ಕೋಣೆಯು ಸೋರುತ್ತದೆ. ಜಾಗವಿಲ್ಲ, ಹಾವು ಚೇಳುಗಳು ಬರುತ್ತವೆ. ಹಗಲು ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು ಕೂಲಿ ಕೆಲಸ ಮಾಡಿ ರಾತ್ರಿ ನಾವು ವಡಗೇರಾದಲ್ಲಿ ಮಲಗುತ್ತೇವೆ. ಸರಕಾರ ಇಲ್ಲವೇ ಯಾರಾದರೂ ಸಹಾಯ ಮಾಡಿ ನಮಗೆ ಆಶ್ರಯವಾಗಬೇಕೆಂದು ದೇವಿಂದ್ರಮ್ಮ ಸಹಾಯಕ್ಕಾಗಿ ಕಣ್ಣೀರು ಹಾಕುತ್ತಾ ಅಂಗಲಾಚಿದ್ದಾರೆ.


ಈಗಲಾದರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಡ ಕುಟುಂಬಸ್ಥರಿಗೆ ಆಶ್ರಯ ಮನೆ ಸೌಲಭ್ಯ ನೀಡಿ ಆಶ್ರಯವಾಗಬೇಕಿದೆ.

Published by:Divya D
First published: