Girls Missing: ಒಂದೇ ಶಾಲೆಯ ಮೂವರು ಬಾಲಕಿಯರು ನಾಪತ್ತೆ; ಪತ್ರ ಬರೆದಿಟ್ಟು ಮನೆ ಬಿಟ್ಟ ಮಕ್ಕಳು

ಶಕ್ತೇಶ್ವರಿ, ವರುಣಿಕಾ, ನಂದಿನಿ ಮೂವರು ಬಾಲಕಿಯರು ನಾಪತ್ತೆಯಾಗಿದ್ದಾರೆ. ಕಾಣೆಯಾಗಿ 9 ದಿನಗಳಾದರೂ ಇನ್ನೂ ಬಾಲಕಿಯರು ಪತ್ತೆಯಾಗಿಲ್ಲ. ಮಕ್ಕಳ ಬಗ್ಗೆ ಕೇಳಿದರೆ ಆಡಳಿತ ಮಂಡಳಿಯವರು ಸಹ ಸರಿಯಾಗಿ ಹೇಳುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಸೆ.14): ನಗರದಲ್ಲಿ ಮೂವರು ಬಾಲಕಿಯರು (Girls) ನಾಪತ್ತೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಪುಲಕೇಶಿನಗರ (Pulakeshinagar) ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 3 ವಿದ್ಯಾರ್ಥಿನಿಯರು (Student) ನಾಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 6 ರಂದು ಮೂವರು ಬಾಲಕಿಯರು ನಾಪತ್ತೆಯಾಗಿದ್ದು, ಈ ಸಂಬಂಧ ಪೋಷಕರು (Parents) ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

9  ದಿನಗಳಾದ್ರೂ ಪತ್ತೆಯಾಗಿಲ್ಲ ಬಾಲಕಿ

ಶಕ್ತೇಶ್ವರಿ, ವರುಣಿಕಾ, ನಂದಿನಿ ಮೂವರು ಬಾಲಕಿಯರು ನಾಪತ್ತೆಯಾಗಿದ್ದಾರೆ. ಕಾಣೆಯಾಗಿ 9 ದಿನಗಳಾದರೂ ಇನ್ನೂ ಬಾಲಕಿಯರು ಪತ್ತೆಯಾಗಿಲ್ಲ. ಮಕ್ಕಳ ಬಗ್ಗೆ ಕೇಳಿದರೆ ಆಡಳಿತ ಮಂಡಳಿಯವರು ಸಹ ಸರಿಯಾಗಿ ಹೇಳುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ.

ಪತ್ರ ಬರೆದಿಟ್ಟು ಮನೆಬಿಟ್ಟ ಬಾಲಕಿಯರು 

ಬಾಲಕಿಯರು ಮನೆಬಿಟ್ಟು ಹೋಗುವ ಮುನ್ನ ಮನೆಯಲ್ಲಿ ಸಮಸ್ಯೆಇದೆ ಹಾಗಾಗಿ, ಮನೆ ಬಿಟ್ಟು ಹೋಗ್ತಿದ್ದೀವಿ. ಓದಲು ಇಷ್ಟವಿಲ್ಲ ಎಂದು ಪತ್ರ ಬರೆದಿದ್ದಿಟ್ಟು ಹೋಗಿದ್ದಾರೆ . ಶಕ್ತೇಶ್ವರಿ 9ನೇ ತರಗತಿ, ವರುಣಿಕಾ 10ನೇ ತರಗತಿ, ನಂದಿನಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಹಿಂದೆ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿದ್ರು

ರಾಯಚೂರು ನಗರದ  ಸರ್ಕಾರಿ ಪಿಯು ಕಾಲೇಜಿನ (PU College) ನಾಲ್ವರು ವಿದ್ಯಾರ್ಥಿನಿಯರು (Students) ಕಾಣೆಯಾಗಿದ್ದರು. ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರನ್ನು ಪೊಲೀಸರು ಪತ್ತೆ ಹಚ್ಚಿದ್ದರು. ನಂದಿನಿ ಹಾಗೂ ಭಾಗ್ಯಶ್ರಿ  ಪತ್ತೆಯಾದ ವಿದ್ಯಾರ್ಥಿನಿಯರಾಗಿದ್ದಾರೆ. ಇನ್ನಿಬ್ಬರ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದು, ಸಂಜೆಯೊಳಗೆ ಪತ್ತೆ ಹಚ್ಚುವ ಸಾಧ್ಯತೆ ಇದೆ. ವಿದ್ಯಾರ್ಥಿನಿಯರು ಒಟ್ಟಾಗಿ ಗೋವಾಗೆ (Goa) ತೆರಳಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿನಿಯರು ಮಾತ್ರ ಹೋಗಿದ್ದರಾ ಅಥವಾ ಯಾರಾದ್ರೂ ಇವರನ್ನ ಕರೆದೊಯ್ದಿದ್ದರಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮಕ್ಕಳು ಕಾಣದೆ ಪೋಷಕರು ಕಂಗಾಲು

ಶನಿವಾರ ಕಾಲೇಜಿಗೆ ತೆರಳೋದಾಗಿ ಹೇಳಿ ಹೊರಟ ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗಿಲ್ಲ. 2 ದಿನಗಳಿಂದ ಪೋಷಕರು ಮಕ್ಕಳನ್ನು ಹುಡುಕುತ್ತಿದ್ದರು. ಈ ಸಂಬಂಧ ವಿದ್ಯಾರ್ಥಿನಿಯರ ಪೋಷಕರು ರಾಯಚೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮತ್ತಿಬ್ಬರು ವಿದ್ಯಾರ್ಥಿನಿಯರ ಪತ್ತೆಗೆ ಹುಡುಕಾಟ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಕಾಲೇಜಿಗೆ DySP ವೆಂಕಟೇಶ್, ಪೊಲೀಸ್ ಇನ್​ಸ್ಪೆಕ್ಟರ್ ಗುಂಡೂರಾವ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ಪ್ರಾಂಶುಪಾಲರನ್ನು ಭೇಟಿಯಾಗಿರುವ ಪೊಲೀಸರು ವಿದ್ಯಾರ್ಥಿಗಳ ಹಾಜರಾತಿ ಮತ್ತು ದಾಖಲಾತಿ ಕುರಿತು ದಾಖಲೆಗಳನ್ನು ಪಡೆದುಕೊಂಡಿದ್ದು, ಮತ್ತಿಬ್ಬರು ವಿದ್ಯಾರ್ಥಿನಿಯರ ಪತ್ತೆಗೆ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ: Student Missing Case: ಖಾಕಿ ಕೈಗೆ ಸಿಕ್ಕಿದ್ರು ನಾಪತ್ತೆಯಾದ ಇಬ್ಬರು ವಿದ್ಯಾರ್ಥಿನಿಯರು; ಮತ್ತಿಬ್ಬರು ಗೋವಾಗೆ ಹೋಗಿರೋ ಶಂಕೆ

232 ನಾಪತ್ತೆ ಪ್ರಕರಣಗಳು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಂದೀಚಿಗೆ ನಾಪತ್ತೆ ಪ್ರಕರಣಗಳು (Missing Cases on rise) ಹೆಚ್ಚಾಗ ತೊಡಗಿವೆ. ಅದರಲ್ಲೂ ಈ ವರ್ಷದ 10 ತಿಂಗಳಲ್ಲೇ ಬರೋಬ್ಬರಿ 232 ನಾಪತ್ತೆ ಪ್ರಕರಣಗಳು ದಾಖಲಾಗಿವೆ‌. ಈ ಪೈಕಿ ಮಹಿಳೆಯರು, ಯುವತಿಯರು ಹೆಚ್ಚಾಗಿದ್ದಾರೆನ್ನುವುದು ಆತಂಕದ ಸಂಗತಿಯಾಗಿದೆ.

Fishing: ಕರಾವಳಿಯಲ್ಲಿ ಮತ್ಸ್ಯ ಕ್ಷಾಮ ಆತಂಕ; ಏಷ್ಯಾದ ಅತೀ ದೊಡ್ಡ ಸರ್ವಋತು ಬಂದರು ಸ್ಥಬ್ಧ

ಜಿಲ್ಲೆಯಲ್ಲಿ ಕೋವಿಡ್​ಗೂ ಮುಂಚೆ, ಅಂದರೆ 2019ರಲ್ಲಿ 257 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 236 ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕಿದ್ದರೆ, 21 ಇನ್ನೂ ತನಿಖೆಯಲ್ಲಿದ್ದವು. ಕೋವಿಡ್ ಸಮಯದಲ್ಲಿ ಲಾಕ್ ಡೌನ್ ಇದ್ದರೂ ಕೂಡ, ಅಂದರೆ 2020ರಲ್ಲಿ 212 ನಾಪತ್ತೆ ಪ್ರಕರಣ ದಾಖಲಾಗಿ, 197 ಮಂದಿ ಪತ್ತೆಯಾಗಿದ್ದಾರೆ. 15 ಮಂದಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ. ಈ ಎರಡು ವರ್ಷದಲ್ಲಿ ನಾಪತ್ತೆ ಪ್ರಕರಣದ ಅಂಕಿ- ಅಂಶ ಸಾಧಾರಣವಾಗಿತ್ತೆಂದು ಪರಿಗಣಿಸಿದರೆ, 2021, ಅಂದರೆ ಪ್ರಸ್ತುತ ವರ್ಷದ ಅಂಕಿ- ಅಂಶ ಗಾಬರಿ ಹುಟ್ಟಿಸುವಂಥದ್ದು!!
Published by:ಪಾವನ ಎಚ್ ಎಸ್
First published: