• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Vijayapura: ಬೈಕ್-ಟ್ಯಾಂಕರ್ ನಡುವೆ ಡಿಕ್ಕಿ, ಮೂವರ ದುರ್ಮರಣ; ಚೆಲ್ಲಾಪಿಲ್ಲಿಯಾದ ಮೃತದೇಹಗಳು

Vijayapura: ಬೈಕ್-ಟ್ಯಾಂಕರ್ ನಡುವೆ ಡಿಕ್ಕಿ, ಮೂವರ ದುರ್ಮರಣ; ಚೆಲ್ಲಾಪಿಲ್ಲಿಯಾದ ಮೃತದೇಹಗಳು

ಬೈಕ್-ಟ್ಯಾಂಕರ್ ನಡುವೆ ಡಿಕ್ಕಿ (ಸಾಂದರ್ಭಿಕ ಚಿತ್ರ)

ಬೈಕ್-ಟ್ಯಾಂಕರ್ ನಡುವೆ ಡಿಕ್ಕಿ (ಸಾಂದರ್ಭಿಕ ಚಿತ್ರ)

ಟ್ಯಾಂಕರ್ ಜೇವರ್ಗಿಯತ್ತ ಮತ್ತು ಬೈಕ್ ಸಿಂದಗಿಯತ್ತ ಸಾಗುತ್ತಿತ್ತು. ಈ ವೇಳೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಮೇಲಿದ್ದ ಮೂವರು ಸವಾರರು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಆಗಿದ್ದಾರೆ.

  • News18 Kannada
  • 2-MIN READ
  • Last Updated :
  • Bijapur, India
  • Share this:

ವಿಜಯಪುರ: ಮಂಗಳವಾರ ಯುಗಾದಿ ಅಮವಾಸ್ಯೆ (Ugadi Amavase) ಹಿನ್ನೆಲೆ ಅಫಜಲಪೂರ ತಾಲೂಕಿನ ಘತ್ತರಗಿ ಶ್ರೀ ಭಾಗ್ಶವಂತಿದೇವಿ (Bhagyavanti Temple) ದರ್ಶನ ಪಡೆದು ವಾಪಸ್ ಆಗುತ್ತಿದ್ದ ಮೂವರು ದುರ್ಮರಣಕ್ಕೀಡಾಗಿದ್ದಾರೆ.  ವಿಜಯಪುರ ಜಿಲ್ಲೆಯ ಯರಗಲ್ ಬಳಿಯ ರಸ್ತೆಯಲ್ಲಿ ಅಪಘಾತ (Accident) ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ವಿಜಯಪುರ - ಕಲಬುರಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ (National Highway 50) ಸಿಂದಗಿ ತಾಲೂಕಿನ ಯರಗಲ್ ಬಿ.ಕೆ.ಗ್ರಾಮದ ಕಾಲುವೆ ಬಳಿ ಟ್ಯಾಂಕರ್ (Tanker) ಹಾಗೂ ಬೈಕ್ (Bike) ಮಧ್ಯೆ ಅಪಘಾತ ಸಂಭವಿಸಿತ್ತು.


ಮೃತ ದ್ವಿಚಕ್ರ ವಾಹನ ಸವಾರರನ್ನು ದೇವರ ಹಿಪ್ಪರಗಿ ತಾಲೂಕಿನ ಬಿ.ಬಿ ಇಂಗಳಗಿ ಗ್ರಾಮದ ಮಹಾಂತೇಶ್ ಕಾಸಣ್ಣ ಹಡಪದ (27), ಸದ್ದಾಂ ಬಂದಗಿಸಾಬ್ ನಾಯ್ಕೋಡಿ (27) ಮತ್ತು ಹಂಚಲಿ ಗ್ರಾಮದ ಮಂಜುನಾಥ್ ದೇವಪ್ಪ ದೊಡ್ಡಮನಿ (24) ಎಂದು ಗುರುತಿಸಲಾಗಿದೆ.


ಟ್ಯಾಂಕರ್ ಜೇವರ್ಗಿಯತ್ತ ಮತ್ತು ಬೈಕ್ ಸಿಂದಗಿಯತ್ತ ಸಾಗುತ್ತಿತ್ತು. ಈ ವೇಳೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಮೇಲಿದ್ದ ಮೂವರು ಸವಾರರು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಆಗಿದ್ದಾರೆ.




ಸ್ಥಳದಲ್ಲೇ ಇಬ್ಬರ ಸಾವು


ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.


ಬೈಕ್ ಸವಾರರು ಯುಗಾದಿ ಅಮವಾಸ್ಯೆ ನಿಮಿತ್ತ ಅಫಜಲಪೂರ ತಾಲೂಕಿನ ಘತ್ತರಗಿ ಶ್ರೀ ಭಾಗ್ಶವಂತಿದೇವಿ ದರ್ಶನ ಪಡೆದು ನಂತರ ಮರಳಿ ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.


ತ್ರಿಬಲ್ ರೈಡಿಂಗ್!


ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರಾಗಿರುವ ಮೂವರಯ ಗೆಳೆಯರು ಎಂದು ತಿಳಿದು ಬಂದಿದೆ. ಮೂವರು ಒಂದೇ ಬೈಕ್​ನಲ್ಲಿ ಹೆಲ್ಮೆಟ್ ಸಹ ಧರಿಸದೇ ಪ್ರಯಾಣಿಸತ್ತಿದ್ದರು.

ಇದನ್ನೂ ಓದಿ:  Bengaluru: ಪ್ರಿಯಕರನ ಜೊತೆ ಸೇರಿ ತಮ್ಮನನ್ನೇ ಕೊಂದ ಅಕ್ಕ: 8 ವರ್ಷಗಳ ಬಳಿಕ ಖಾಕಿ ಬಲೆಗೆ ಬಿದ್ದ ಹಂತಕರು


 ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

top videos
    First published: