ನೆರೆಪೀಡಿತ ಬೆಳಗಾವಿಯಲ್ಲಿ ಮಗುವಿನ ಮೇಲೆ ದಾಳಿ ಮಾಡಿದ ಬೀದಿನಾಯಿಗಳು

ಗಂಭೀರ ಗಾಯಗೊಂಡ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Latha CG | news18
Updated:August 13, 2019, 11:10 AM IST
ನೆರೆಪೀಡಿತ ಬೆಳಗಾವಿಯಲ್ಲಿ ಮಗುವಿನ ಮೇಲೆ ದಾಳಿ ಮಾಡಿದ ಬೀದಿನಾಯಿಗಳು
ಗಂಭೀರ ಗಾಯಗೊಂಡ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
  • News18
  • Last Updated: August 13, 2019, 11:10 AM IST
  • Share this:
ಬೆಳಗಾವಿ,(ಆ.13): ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ಬದುಕು ಬೀದಿಪಾಲಾಗಿದೆ. ಇರಲು ಮನೆಯಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ಬೀದಿನಾಯಿಗಳ ಕಾಟ ಒಂದು ಕಡೆ. ಹಸಿವಿನಿಂದ ತತ್ತರಿಸಿರುವ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಲು ಶುರುವಾಗಿವೆ. ಹೌದು, ಬೆಳಗಾವಿಯ ಟಿಳಕವಾಡಿಯ ಲೇಲೆ ಮೈದಾನದಲ್ಲಿ ಮೂರು ಬೀದಿ ನಾಯಿಗಳು 5 ವರ್ಷದ ಮಗುವನ್ನು ಕಚ್ಚಿ ಗಾಯಗೊಳಿಸಿವೆ.

ಪಾರ್ಥ ಪರಶುರಾಮ್​ ಗಾಯಕವಾಡ್​(5) ನಾಯಿಗಳ ದಾಳಿಗೆ ಒಳಗಾದ ಬಾಲಕ. ನಾಯಿಗಳು ಮಗುವಿನ ಮುಖ ಸೇರಿ ಎಲ್ಲೆಂದರಲ್ಲಿ ಕಚ್ಚಿ ತೀವ್ರ ಗಾಯಗೊಳಿಸಿವೆ. ಗಂಭೀರ ಗಾಯಗೊಂಡ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ 3 ತಿಂಗಳು ಜಲಕಂಟಕ; ಜಗತ್ತು ಕಂಡರಿಯದ ವಾಯು ಆಘಾತ: ಕೋಡಿ ಮಠ ಶ್ರೀಗಳ ಬೆಚ್ಚಿಬೀಳಿಸುವ ಭವಿಷ್ಯ

ಪದೇ ಪದೇ ನಾಯಿಗಳು ದಾಳಿ ಮಾಡುತ್ತಿರುವ ಕಾರಣದಿಂದ ಪೋಷಕರಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಬೆಳಗಾವಿ ಟಿಳಕವಾಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರವಾಹದಿಂದ ನಲುಗಿರುವ ಜನರು ಮತ್ತೆ ಚೇತರಿಸಿಕೊಳ್ಳುವ ಹಾದಿ ನೋಡುತ್ತಿದ್ದಾರೆ. ಪ್ರಾಣಿಗಳು ಸಹ ಪ್ರವಾಹದ ಹೊಡೆತಕ್ಕೆ ನಲುಗಿದ್ದು, ಹಸಿವಿನಿಂದ ಕಂಗಾಲಾಗಿವೆ ಎನ್ನಲಾಗಿದೆ.

Published by: Latha CG
First published: August 13, 2019, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading