• Home
  • »
  • News
  • »
  • state
  • »
  • Shivamogga: ಕಾರ್​, ಬೈಕ್ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಮೂವರು ಸಾವು

Shivamogga: ಕಾರ್​, ಬೈಕ್ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಮೂವರು ಸಾವು

ಬೈಕ್ ಅಪಘಾತ

ಬೈಕ್ ಅಪಘಾತ

ಆಸ್ಪತ್ರೆಯಲ್ಲಿ ಗಂಗಮ್ಮ ನಿಧನರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಅಸುನೀಗಿದ್ದಾರೆ. ಮಲ್ಲಿಕಾರ್ಜುನ್ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

  • News18 Kannada
  • Last Updated :
  • Shimoga, India
  • Share this:

Car-Bike Accident: ಕಾರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ನಾಲ್ಕು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗದ (Shivamogga Accident) ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಮಂಚಿನಕೊಪ್ಪದಲ್ಲಿ (Manchinakoppa, Shikaripura) ಅಪಘಾತ ನಡೆದಿದೆ. ಹಲುಗಿನಕೊಪ್ಪ ಮೂಲದ ಜ್ಯೋತಿ (30), ಗಂಗಮ್ಮ (50) ಮತ್ತು ಸೌಜನ್ಯ (4) ಮೃತರು. ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಮಲ್ಲಿಕಾರ್ಜುನ್ ಎಂಬವರು ಮಗಳು ಸೌಜನ್ಯ, ತಾಯಿ ಜ್ಯೋತಿ, ಅವರ ತಾಯಿ ಗಂಗಮ್ಮ ಬೈಕಿನಲ್ಲಿ ಶಿರಾಳಕೊಪ್ಪದಿಂದ ಹಲುಗಿನಕೊಪ್ಪದಲ್ಲಿರುವ ಮನೆಗೆ ತೆರಳುತ್ತಿದ್ದರು.


ಕಾರ್​ ಹಿರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿತ್ತು. ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಲ್ಲಿಕಾರ್ಜುನ್, ಜ್ಯೋತಿ, ಗಂಗಮ್ಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಳುಗಳನ್ನು ಶಿಕಾರಿಪುರದ ಆಸ್ಪತ್ರೆಗೆ ರವಾನಿಸಲಾಯಿತು.


ಮಲ್ಲಿಕಾರ್ಜುನ್ ಸ್ಥಿತಿ ಗಂಭೀರ


ಆಸ್ಪತ್ರೆಯಲ್ಲಿ ಗಂಗಮ್ಮ ನಿಧನರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಅಸುನೀಗಿದ್ದಾರೆ. ಮಲ್ಲಿಕಾರ್ಜುನ್ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.


ಘಟನೆಯಲ್ಲಿ ಬೈಕ್ ನುಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಜಖಂ ಆಗಿದೆ. ಶಿರಾಳಕೊಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:  Tumakuru: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಅವಳಿ ಶಿಶು, ಬಾಣಂತಿ ಸಾವು; ಡಾಕ್ಟರ್​, ನರ್ಸ್​ ಸಸ್ಪೆಂಡ್​


ಶವವಾಗಿ ಪತ್ತೆಯಾದ ಮಹಿಳೆ


ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆ ಇಟ್ಟಕ್ಕಿ‌ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ಬಿಳ್ಳೋಡಿಯ ಮತ್ತಿಗ ಗ್ರಾಮದಲ್ಲಿ ನಡೆದಿದೆ.


shivamogga accident, car bike accident, people died in accident, kannada news, karnartaka news, ಶಿವಮೊಗ್ಗ ಅಪಘಾತ, ಕಾರ್ ಬೈಕ್ ಅಪಘಾತ
ಸಾಂದರ್ಭಿಕ ಚಿತ್ರ


ಮತ್ತಿಗ ನಿವಾಸಿ ಮಂಗಳ (36) ಮೃತ ಮಹಿಳೆ. ಮಂಗಳ ಅವರನ್ನು ಎನ್.ಆರ್ ಪುರ ತಾಲ್ಲೂಕಿನ ಬಿ.ಹೆಚ್ ಕೈಮರಕ್ಕೆ ಮದು‌ವೆ ಮಾಡಿ ಕೊಡಲಾಗಿತ್ತು. ಗಂಡನೊಂದಿಗೆ ಕಳೆದ ಎರಡ್ಮೂರು ವರ್ಷಗಳಿಂದ ತಾಯಿ ಮನೆ ಮತ್ತಿಗದಲ್ಲಿ ವಾಸವಾಗಿದ್ದರು.


ನವೆಂಬರ್ 3ರಿಂದ ಕಾಣೆಯಾಗಿದ್ದ ಮಹಿಳೆ


ಮಾನಸಿಕವಾಗಿ ದುರ್ಬಲರಾಗಿದ್ದ ಮಂಗಳ ನವೆಂಬರ್ 3 ರಂದು ಮಧ್ಯಾಹ್ನ 2:30ರ ಸುಮಾರಿಗೆ ಬಿಳ್ಳೋಡಿ ಗ್ರಾಮದಿಂದ ಕಾಣೆಯಾಗಿದ್ದರು. ಹೊಸನಗರ ಠಾಣೆಯಲ್ಲಿ ಮೃತಳ ಪತಿ ನಾಗರಾಜ್ ನಾಪತ್ತೆ ಪ್ರಕರಣ ದಾಖಲಿಸಿದ್ದರು.


ಇದನ್ನೂ ಓದಿ: Murugha Swamy Case: ಚಾರ್ಜ್​​ಶೀಟ್​ ಸಲ್ಲಿಕೆ, ಔಷಧಿ ಬೆರೆಸಿದ ಸೇಬು ನೀಡಿ ದೌರ್ಜನ್ಯ; ಮಕ್ಕಳಿಗೆ ಕೊಲೆ ಬೆದರಿಕೆ


ಇಂದು ಮನೆಯಿಂದ 3 ಕಿ.ಮೀ. ದೂರದಲ್ಲಿರುವ ಇಟ್ಟಕ್ಕಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗಳ ಶವ ಪತ್ತೆಯಾಗಿದೆ. ಹೊಸನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


4ನೇ ಮಗು ಹೆಣ್ಣೆಂದು ಆತ್ಮಹತ್ಯೆ


ಕೇವಲ ಹೆಣ್ಣು ಮಕ್ಕಳೇ ಆಯಿತು ಎಂದು ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.  ಹೆಣ್ಣು ಮಗು ಹುಟ್ಟಿದೆ ಎಂದು ಬೇಸತ್ತು ಮಗುವಿನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ 38 ವರ್ಷದ ಲೋಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಂದೆ.


shivamogga accident, car bike accident, people died in accident, kannada news, karnartaka news, ಶಿವಮೊಗ್ಗ ಅಪಘಾತ, ಕಾರ್ ಬೈಕ್ ಅಪಘಾತ
ಸಾಂದರ್ಭಿಕ ಚಿತ್ರ


ಕೆಲ ದಿನಗಳ ಹಿಂದಷ್ಟೇ ಪತ್ನಿಗೆ ಹೆರಿಗೆಯಾಗಿತ್ತು. ಈಗಾಗಲೇ ಇದ್ದ 3 ಹೆಣ್ಣು ಮಕ್ಕಳ ನಂತರ 4 ನೇ ಮಗು ಸಹ ಹೆಣ್ಣು ಮಗುವಾದ ಹಿನ್ನಲೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಕೆಲ ಮೂಲಗಳ ಪ್ರಕಾರ 4 ಹೆಣ್ಣು ಮಕ್ಕಳೆಂದು ಕೆಲ ಸ್ನೇಹಿತರು ಚುಡಾಯಿಸಿದ್ದರು ಎಂದು ಲೋಕೇಶ್​ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.


ಈ ಮೊದಲು ಸಹ ಆತ್ಮಹತ್ಯೆಗೆ ಯತ್ನ


ಮೂರನೇಯ ಬಾರಿ ಹೆಣ್ಣು ಮಗುವಾದಾಗಲೇ ಲೋಕೇಶ್​ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನುವ ಮಾಹಿತಿ ಸಹ ಇದ್ದು, ಗಂಡು ಮಗುವಿನ ನಿರೀಕ್ಷೆ ಹುಸಿಯಾದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published by:Mahmadrafik K
First published: