• Home
  • »
  • News
  • »
  • state
  • »
  • Raichur: ಕಲುಷಿತ ನೀರು ಕುಡಿದು ಮೂವರು ಸಾವು, ರಾಯಚೂರು ಬಂದ್; 5 ಲಕ್ಷ ಪರಿಹಾರಕ್ಕೆ ಸಿಎಂ ಸೂಚನೆ

Raichur: ಕಲುಷಿತ ನೀರು ಕುಡಿದು ಮೂವರು ಸಾವು, ರಾಯಚೂರು ಬಂದ್; 5 ಲಕ್ಷ ಪರಿಹಾರಕ್ಕೆ ಸಿಎಂ ಸೂಚನೆ

ರಾಯಚೂರು ನಗರಸಭೆ

ರಾಯಚೂರು ನಗರಸಭೆ

ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕೆಂಬ ನಿಯಮವಿದೆ. ಆದರೆ ರಾಯಚೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ನೀರಿನ ಘಟಕವನ್ನು ಕಳೆದ 16 ವರ್ಷಗಳಿಂದ ಸ್ವಚ್ಛಗೊಳಿಸಿರಲಿಲ್ಲ ಎಂದು ಟಿವಿ 9 ಕನ್ನಡ ವರದಿ ಮಾಡಿದೆ. ರಾಂಪುರ ಬಳಿಯಲ್ಲಿ ಈ ಶುದ್ಧ ನೀರಿನ ಘಟಕವಿದೆ.

ಮುಂದೆ ಓದಿ ...
  • Share this:

ರಾಯಚೂರು ನಗರದಲ್ಲಿ ಕಲುಷಿತ ನೀರು (Contaminated Water) ಸೇವಿಸಿದ ಪ್ರಕರಣದಲ್ಲಿ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸೂಚನೆ ನೀಡಿದ್ದಾರೆ. ಇತ್ತ ನಗರಸಭೆ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದು, ರಾಯಚೂರು ಬಂದ್ ಗೆ (Raichur Bund) ನಾಗರಿಕ ಹೋರಾಟ ವೇದಿಕೆ ಕರೆ ನೀಡಿದೆ. ಇನ್ನೂ ಕಲುಷಿತ ನೀರು ಕುಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸಾ ವೆಚ್ಚ (Treatment Expenses) ಭರಿಸಬೇಕೆಂದು ನಾಗರಿಕ ಹೋರಾಟ ವೇದಿಕೆ ಆಗ್ರಹಿಸಿದೆ. ಕಲುಷಿತ ನೀರು ಸೇವಿಸಿ ಅಬ್ದುಲ್ ಗಫಾರ್, ಮಹಮ್ಮದ್ ನೂರ್ ಮತ್ತು ಮಲ್ಲಮ್ಮ ಎಂಬವರು ಸಾವನ್ನಪ್ಪಿದ್ದು, ನೂರಾರು ಜನರು ಅಸ್ವಸ್ಥಗೊಂಡಿದ್ದರು. ಆದ್ರೆ ಇಷ್ಟೆಲ್ಲ ನಡೆದರೂ ರಾಯಚೂರು ನಗರಸಭೆ ಮಾತ್ರ ಮೌನಕ್ಕೆ ಶರಣಾಗಿರೋದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.


ಇಂದು ಬೆಳಗ್ಗೆ ಈ ಘಟನೆ ಕುರಿತು ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಸತ್ತಿರುವ ಘಟನೆಯನ್ನು ಸರ್ಕಾರ ಗಂಭೀರವಾಗಿ  ಪರಿಗಿಣಿಸಿದೆ. ಜಿಲ್ಲಾಧಿಕಾರಿಗಳಿಗೆ ರಾಯಚೂರಿನ ಎಲ್ಲಾ ವಾರ್ಡ್‌ ಗಳ ನೀರು ಪರಿಶೀಲಿಸಲು ಸೂಚಿಸಿದ್ದೇನೆ. ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದೇನೆ. ಅಧಿಕಾರಿಗಳ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದರು.


ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಸಾಬೀತು


ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕೆಂಬ ನಿಯಮವಿದೆ. ಆದರೆ ರಾಯಚೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ನೀರಿನ ಘಟಕವನ್ನು ಕಳೆದ 16 ವರ್ಷಗಳಿಂದ ಸ್ವಚ್ಛಗೊಳಿಸಿರಲಿಲ್ಲ ಎಂದು ಟಿವಿ 9 ಕನ್ನಡ ವರದಿ ಮಾಡಿದೆ. ರಾಂಪುರ ಬಳಿಯಲ್ಲಿ ಈ ಶುದ್ಧ ನೀರಿನ ಘಟಕವಿದೆ.


ಇದನ್ನೂ ಓದಿ:  Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ


ನೀರಿನ ಟ್ಯಾಂಕಿನಲ್ಲಿ ಮಣ್ಣು ಶೇಖರಣೆ


ವಾಟರ್​ ಕ್ವಾಲಿಟಿ ಟೆಸ್ಟ್ ವೇಳೆ ಅಧಿಕಾರಿಗಳ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಅಧಿಕಾರಿಗಳು 50 ವಿವಿಧ ಸ್ಥಳಗಳಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, 20 ಕಡೆಯ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ ಎಂದು ಟಿವಿ 9 ಕನ್ನಡ ವರದಿ ಬಿತ್ತರಿಸಿದೆ. ಇದೇ ಕಾರಣಕ್ಕೆ ಈ ನೀರು ಕುಡಿದ ಜನರಲ್ಲಿ ವಾಂತಿ ಭೇದಿ ಸೇರಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದೆ. ನೀರಿನ ಟ್ಯಾಂಕ್ ನಲ್ಲಿ ಓರ್ವ ವ್ಯಕ್ತಿ ಮುಳುಗುವಷ್ಟು ಮಣ್ಣು ಶೇಖರಣೆಯಾಗಿದೆ.


ಕಳೆದ 15 ದಿನಗಳಿಂದ ಕುಡಿಯುವ ನೀರಿನ ಘಟಕದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಸೆಕೆಂಡ್ ಲೆವಲ್ ಫಿಲ್ಟರೇಶನ್ ನಲ್ಲಿ ಮಣ್ಣು ಶೇಖರಣೆಯಾಗಿದ್ದು, ಫಿಲ್ಟರೇಶನ್ ಕೆಮಿಕಲ್ ಬಳಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ವರದಿಯಾಗಿದೆ.


ಅವ್ಯವಹಾರ ಶಂಕೆ


ಇನ್ನು ರಾಂಪುರ ಘಟಕಕ್ಕೆ ಸಮೀಪದ ಕೆರೆಯ ನೀರನ್ನು ಪೂರೈಸಲಾಗತ್ತಿತ್ತು. ಆದ್ರೆ ಕೆರೆಯ ನೀರು ಗಬ್ಬೆದ್ದು ವಾಸನೆ ಬರುತ್ತಿದೆ ಎಂದು ಆರೋಪ ಮಾಡಲಾಗಿದೆ. ಕಳೆದ 16 ವರ್ಷಗಳಿಂದ ದುರಸ್ತಿ ಅನುದಾನದಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಇನ್ನು ಆಸ್ಪತ್ರೆಗೆ ದಾಖಲಾಗಿರುವ ಬಹುತೇಕ ಜನರು ಬಡವರಾಗಿದ್ದಾರೆ. ಪ್ರತಿಯೊಬ್ಬರ ಚಿಕಿತ್ಸೆಗೆ ಸುಮಾರು 20 ರಿಂದ 40 ಸಾವಿರ ರೂ. ಖರ್ಚು ಆಗಲಿದೆ. ಹಾಗಾಗಿ ಸರ್ಕಾರ ಬಡವರ ಸಹಾಯಕ್ಕೆ ಮುಂದಾಗಬೇಕಿದೆ. ರಾಯಚೂರು ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಇದನ್ನೂ ಓದಿ:  Covid19: 2-3 ವಾರಗಳಲ್ಲಿ ರಾಜ್ಯಕ್ಕೆ ಕೋವಿಡ್ 4ನೇ ಅಲೆ ಎಂಟ್ರಿ!? ಕೊರೊನಾ ರೂಲ್ಸ್​ ಮರೆಯದಿರಿ


ಇಂದು ನಡೆಯುವ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಪ್ರತಿಭಟನಾನಿರತರು ನಗರಸಭೆಗೆ ಮುತ್ತಿಗೆ ಹಾಕುವ ಸಾಧ್ಯತೆಗಳಿವೆ.

Published by:Mahmadrafik K
First published: