HOME » NEWS » State » THREE DAYS HOLIDAYS TO KALBURGI SCHOOLS AND COLLEGES FOR SAHITHYA SAMMELANA HK

ಅಕ್ಷರ ಜಾತ್ರೆಗೆ ಸಾರಿಗೆ ಇಲಾಖೆಯಿಂದ ಬಂಪರ್​ ಕೊಡುಗೆ - ಎಲ್ಲೆ ಸಂಚರಿಸಿದ್ರೂ ಕೇವಲ 5 ರೂ ಮಾತ್ರ

ಮೂರು ದಿನಗಳ ಕಾಲ ನಗರದಲ್ಲಿ ಪ್ರಮುಖ ಸ್ಥಳಗಳಿಗೆ ಕೇವಲ 5 ರೂಪಾಯಿ ದರದಲ್ಲಿ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ. ಸಮ್ಮೇಳನಕ್ಕಾಗಿ ಈಶಾನ್ಯ ರಸ್ತೆ ಸಾರಿಗೆ ನಿಗಮದ ಕೊಡುಗೆ ನೀಡಿದೆ. ನಗರ ಸಾರಿಗೆ ಬಸ್ ಗೆ ಮಾತ್ರ ಈ ಆಫರ್ ಸೀಮಿತವಾಗಿರೋದು ವಿಶೇಷ.

G Hareeshkumar | news18-kannada
Updated:February 4, 2020, 10:29 PM IST
ಅಕ್ಷರ ಜಾತ್ರೆಗೆ ಸಾರಿಗೆ ಇಲಾಖೆಯಿಂದ ಬಂಪರ್​ ಕೊಡುಗೆ -  ಎಲ್ಲೆ ಸಂಚರಿಸಿದ್ರೂ ಕೇವಲ 5 ರೂ ಮಾತ್ರ
ಕಲಬುರ್ಗಿ
  • Share this:
ಕಲಬುರ್ಗಿ (ಫೆ. 04) :  ಕಲಬುರ್ಗಿ ನಗರದಲ್ಲಿ ಎಲ್ಲಿಯೇ ಹತ್ತಿರಿ. ಎಲ್ಲಿಯೇ ಇಳಿಯಿರಿ ನೀವು ಕೊಡಬೇಕಾಗಿರೋದು ಕೇವಲ ಐದು ರೂಪಾಯಿ. ಹೀಗೊಂದು ಆಫರ್ ನೀಡಿರೋದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಗರ ಸಾರಿಗೆ ಬಸ್ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗಿದೆ. ಸಾರಿಗೆ ಬಸ್ ದರ ಕೇವಲ 5 ರೂಪಾಯಿ ನಿಗದಿ ಮಾಡಲಾಗಿದೆ. 

ಕಲಬುರ್ಗಿ ನಗರದ ಯಾವುದೇ ಪ್ರದೇಶದಲ್ಲಿ ಹತ್ತಿ, ಯಾವುದೇ ಪ್ರದೇಶದಲ್ಲಿ ಇಳಿದರೂ ಈ ದರ ಅನ್ವಯವಾಗಲಿದೆ. ಮೂರು ದಿನಗಳ ಕಾಲ ನಗರದಲ್ಲಿ ಪ್ರಮುಖ ಸ್ಥಳಗಳಿಗೆ ಕೇವಲ 5 ರೂಪಾಯಿ ದರದಲ್ಲಿ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ. ಸಮ್ಮೇಳನಕ್ಕಾಗಿ ಈಶಾನ್ಯ ರಸ್ತೆ ಸಾರಿಗೆ ನಿಗಮದ ಕೊಡುಗೆ ನೀಡಿದೆ. ನಗರ ಸಾರಿಗೆ ಬಸ್ ಗೆ ಮಾತ್ರ ಈ ಆಫರ್ ಸೀಮಿತವಾಗಿರೋದು ವಿಶೇಷ.

ಇನ್ನು ತಾಲೂಕು ಕೇಂದ್ರಗಳಿಂದ ಬರುವವರಿಗೆ ಉಚಿತ ಪ್ರಯಾಣಕ್ಕಾಗಿ ಎರಡು ಬಸ್ ವ್ಯವಸ್ಥೆ ಕಲ್ಪಿಸುತ್ತಿರುವುದಾಗಿ ಈಗಾಗಲೇ ಸಾರಿಗೆ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಪ್ರಕಟಿಸಿದ್ದಾರೆ. ಪ್ರತಿ ತಾಲೂಕು ಕೇಂದ್ರದಿಂದ ಬೆಳಿಗ್ಗೆ ಎರಡು ಸಾರಿಗೆ ಬಸ್ ಗಳನ್ನು ಬಿಡಲಾಗುತ್ತಿದ್ದು, ಸಮ್ಮೇಳನಕ್ಕೆ ಬರುವವರನ್ನು ಉಚಿತವಾಗಿ ಕರೆ ತರಲಾಗುತ್ತಿದೆ. ಕಲಬುರ್ಗಿ ಕೇಂದ್ರ ಸ್ಥಾನ ಹೊರತುಪಡಿಸಿ, ಜಿಲ್ಲೆಯಲ್ಲಿ 10 ತಾಲೂಕು ಕೇಂದ್ರಗಳಿದ್ದು, 10 ಕಡೆಯಿಂದಲೇ ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಶಾಲಾ-ಕಾಲೇಜುಗಳಿಗೆ ರಜೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಮ್ಮೇಳನ ನಡೆಯಲಿರುವ ಫೆಬ್ರವರಿ 5, 6 ಹಾಗೂ 7 ರಂದು ಮೂರು ದಿನಗಳ ಕಾಲ ರಜೆ ಘೋಷಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

ಶಾಲಾ-ಕಾಲೇಜು ರಜೆ ಆದೇಶ


ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸಕರು ಸಮ್ಮೇಳನದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಉಪನ್ಯಾಸಕರಿಗೆ ಸಮ್ಮೇಳನದಲ್ಲಿ ಭಾಗಿಯಾಗಲು ಜಿಲ್ಲಾಡಳಿತ ಅವಕಾಶ ನೀಡಿದೆ.ಸಾಹಿತ್ಯ ಸಮ್ಮೇಳನಕ್ಕೆ ಸಂಪುಟ ಗ್ರಹಣ - ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಶಾಸಕರು
Youtube Video
First published: February 4, 2020, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories