Bengaluru Tech Summit 2021: IT-BT, ತಂತ್ರಜ್ಞಾನ, ವಿಜ್ಞಾನ, ಕೃಷಿ, ರಕ್ಷಣೆ ವಿಚಾರದಲ್ಲಿ ಸರ್ಕಾರ ಸಿದ್ಧ - ಸಿಎಂ ಬಸವರಾಜ ಬೊಮ್ಮಾಯಿ

ಸಮಾವೇಶ ಉದ್ಘಾಟಿಸಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಮೊದಲಿಗೆ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿದ ಉಪ ರಾಷ್ಟ್ರಪತಿ, ಅಪ್ಪು ಕೇವಲ ನಟ ಮಾತ್ರನಲ್ಲ. ಅವರು ಉತ್ತಮ ವ್ಯಕ್ತಿ. ಪುನೀತ್ ತೀರಿಕೊಂಡಿರುವುದು ತುಂಬಾ ನೋವಿನ ಸಂಗತಿ ಎಂದು ಹೇಳಿದರು.

ಬೆಂಗಳೂರು ಟೆಕ್ ಸಮ್ಮಿಟ್

ಬೆಂಗಳೂರು ಟೆಕ್ ಸಮ್ಮಿಟ್

 • Share this:
  ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ (Technology) ಬೆಂಗಳೂರು ನಗರ ಎಲ್ಲವನ್ನು ಸಾಧ್ಯ ಮಾಡುತ್ತಿದೆ. ಇಕೋ ಫ್ರೆಂಡ್ಲಿ ನಗರ ಬೆಂಗಳೂರಿಗೆ (Eco Friendly Bengaluru City) ಐಟಿ ಸಾಧಿಕರಿಗೆ ಸ್ವಾಗತಿಸುತ್ತೇನೆ. ಇನೋವೆಟರ್ ಗೆ ನನ್ನ ಪ್ರೀತಿಯ ಆಹ್ವಾನ. ನಿಮ್ಮ ಸಾಧನೆಗೆ ಬೆಂಗಳೂರು ಯಾವಾಗಲೂ ರೆಡಿಯಾಗಿರುತ್ತೆ. ಇಂಥವರಿಗೆ ಬೆಂಬಲಿಸಲು ನಮ್ಮ ಸರ್ಕಾರ ಯಾವಾಗಲೂ ಸಿದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಹೇಳಿದರು.

  ಇಂದಿನಿಂದ ಮೂರು ದಿನಗಳ ಕಾಲ‌ ಬೆಂಗಳೂರಿನ ತಾಜ್​ ವೆಸ್ಟ್​ ಎಂಡ್ ಹೋಟೆಲ್​ನಲ್ಲಿ ಟೆಕ್ ಸಮ್ಮೀಟ್ ಸಮಾವೇಶ (Bengaluru Tech Summit 2021) ನಡೆಯಲಿದೆ. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರು ಟೆಕ್ ಸಮಿಟ್ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ. ಇಂಥ ಸಮ್ಮಿಟ್ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಜರುಗಬೇಕು. ಇಲ್ಲಾಗುವ ಚರ್ಚೆ, ನಿರ್ಣಯ ನವ ಭಾರತ ನಿರ್ಮಾಣಕ್ಕೆ ಅನುಕೂಲವಾಗಬೇಕು. ತಂತ್ರಜ್ಞಾನ ಪ್ರತಿಯೊಬ್ಬ ಮನುಕುಲಕ್ಕೆ ಒಳಿತು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

  ತಂತ್ರಜ್ಞಾನ ಕ್ಷೇತ್ರದಲ್ಲಿ ಕಿರಣ್ ಮಜುಂದೂರ್ ಷಾ, ಕ್ರಿಷ್ ಕೃಷ್ಣಮೂರ್ತಿ ಅಂತಹವರು ಸಾಕಷ್ಟು ಸಾಧಕರಿದ್ದಾರೆ. ಇಂಥ ಸಾಧಕರು ನಮ್ಮ ಕರ್ನಾಟಕದ‌ವರು ಎಂಬ ಹೆಮ್ಮೆ ನಮಗಿದೆ. ವಿಶ್ವದಲ್ಲಿಯೇ ಐಟಿ ಕ್ಷೇತ್ರದಲ್ಲಿ ನಮ್ಮ ಕರ್ನಾಟಕ ಸಾಕಷ್ಟು ಅಭಿವೃದ್ದಿಯತ್ತ ದಾಪುಗಾಲು ಇಡುತ್ತಿದೆ. ಐಟಿ, ಬಿಟಿ, ತಂತ್ರಜ್ಞಾನ, ವಿಜ್ಞಾನ, ಕೃಷಿ, ರಕ್ಷಣೆ, ಕೃತಕ ಬುದ್ದಿಮತ್ತೆ ಎಲ್ಲ ವಿಷಯದಲ್ಲಿ ನಾವು ತೆರೆದುಕೊಳ್ಳಲು ಸರ್ಕಾರ ಸಿದ್ಧವಿದೆ. ಸಾಧಕರಿಗೆ ನಮ್ಮ ಸರಕಾರ ಯಾವಾಗಲೂ ಸಹಕಾರಿ, ಬೆಂಬಲವಾಗಿ ನಿಲ್ಲುತ್ತದೆ. ನವ ಭಾರತ ನಿರ್ಮಾಣಕ್ಕೆ ನಮ್ಮ ಸರ್ಕಾರ ಯಾವಾಗಲೂ ಸಿದ್ಧವಾಗಿದೆ. ಮೇಕ್ ಇನ್ ಇಂಡಿಯಾ ಮೂಲಕ ಐಟಿ ಬಿಟಿ ಕ್ಷೇತ್ರದಲ್ಲಿ ಅಭಿವೃದ್ದಿಗೆ ಇನ್ನಷ್ಟು ಮುಂದಡಿ ಇಡುತ್ತಿದ್ದೇವೆ ಎಂದು ಹೇಳಿದರು.

  ಕನ್ನಡದಲ್ಲಿ ಭಾಷಣ ಮಾಡಿದ ವೆಂಕಯ್ಯ ನಾಯ್ಡು

  ಸಮಾವೇಶ ಉದ್ಘಾಟಿಸಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಮೊದಲಿಗೆ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿದ ಉಪ ರಾಷ್ಟ್ರಪತಿ, ಅಪ್ಪು ಕೇವಲ ನಟ ಮಾತ್ರನಲ್ಲ. ಅವರು ಉತ್ತಮ ವ್ಯಕ್ತಿ. ಪುನೀತ್ ತೀರಿಕೊಂಡಿರುವುದು ತುಂಬಾ ನೋವಿನ ಸಂಗತಿ ಎಂದು ಹೇಳಿದರು.

  ಮೂರು ದಿನ ಟೆಕ್​ ಸಮ್ಮಿಟ್

  ಇಂದಿನಿಂದ ಮೂರು ದಿನಗಳ ಕಾಲ‌ ಬೆಂಗಳೂರಿನಲ್ಲಿ ಟೆಕ್ ಸಮ್ಮೀಟ್ ನಡೆಯಲಿದೆ. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಹೈಬ್ರೀಡ್ ಸಮ್ಮಿಟ್ ಸಮಾವೇಶ ನಡೆಯುತ್ತಿದೆ. ರಾಜ್ಯದ ಐಟಿ ಬಿಟಿ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿರುವ 24ನೇ ಆವೃತ್ತಿಯ ಟೆಕ್ ಸಮ್ಮೀಟ್​ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಿದರು. ಟೆಕ್ ಸಮ್ಮೇಳನದಲ್ಲಿ ರಾಜ್ಯಪಾಲರು ಥಾವರ್​ ಚಂದ್​ ಗೆಹ್ಲೊಟ್​, ಐಟಿಬಿಟಿ ಸಚಿವ ಅಶ್ವಥ್ ನಾರಾಯಣ, ಸಚಿವ ಮುರುಗೇಶ್ ನಿರಾಣಿ, ಹಾಗೂ ಬಯೋಕಾನ್ ಸಂಸ್ಥೆ ಅಧ್ಯಕ್ಷರಾದ ಕಿರಣ್ ಮುಂಜುಮ್ದಾರ್ ಷಾ ಸೇರಿ ಇತರೆ ಗಣ್ಯರು ಪಾಲ್ಗೊಂಡಿದ್ದಾರೆ.

  ಇದನ್ನು ಓದಿ: Viral Video: ಬಾಗಿಲು ತೆಗೆದರೆ ಮೈಮೇಲೇ ಹಾರುತ್ತೆ ದೈತ್ಯ ಜೇಡ, ಗಾಬರಿಬಿದ್ದು ಓಡಿ ಹೋಗ್ತಿದ್ದಾರೆ ಜನ!

  ಸಭಾಂಗಣ-1 (ವಿಚಾರ ಗೋಷ್ಠಿಗಳು)

  ಮಧ್ಯಾಹ್ನ 1: ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ ನಾವೀನ್ಯತೆಯ ಬೆಳವಣಿಗೆ.
  ಉಪಸ್ಥಿತಿ: ದತ್ತಾತ್ರಿ ಸಾಲಗಾಮೆ, ಸಿಇಒ, ಬಾಷ್, ಡೈಸಿ ಚಿತ್ತಲಪಲ್ಲಿ, ಸಿಇಒ, ಸಿಸ್ಕೋ ಇಂಡಿಯಾ ಮತ್ತಿತರರು.

  ಮಧ್ಯಾಹ್ನ 2: ಹೈಬ್ರಿಡ್ ಮಲ್ಟಿ ಕ್ರೌಡ್ ವರ್ಲ್ಡ್
  ಉಪಸ್ಥಿತಿ: ಶ್ರೀಕೃಷ್ಣನ್ ವೆಂಕಟೇಶ್ವರನ್, ಸಿಟಿಒ, ಕಿಂಡ್ರೆಲ್ ಇಂಡಿಯಾ, ಅಮನ್ ದೀಪ್ ಸರ್ನಾ, ಲೀಲಾ ಪ್ಯಾಲೇಸ್ ಹೋಟೆಲ್ & ರೆಸಾರ್ಟ್ಸ್ ಮತ್ತಿತರರು.

  ಸಂಜೆ 4: ಎಡ್ಜ್ ಕಂಪ್ಯೂಟಿಂಗ್ ಮತ್ತು 5ಜಿ ತಂತ್ರಜ್ಞಾನ
  ಉಪಸ್ಥಿತಿ: ಸಂಜಯ್ ಸಾಹ್ನಿ, ಹಿರಿಯ ಪಾಲುದಾರರು, ಕಿಂಡ್ರೆಲ್ ಇಂಡಿಯಾ, ವಿನೋದ್ ಭಟ್, ಸಿಐಒ, ವಿಸ್ತಾರ-ಟಾಟಾ ಎಸ್ಐಎ ಏರ್ ಲೈನ್ಸ್ ಮತ್ತಿತರರು.

  ಸಭಾಂಗಣ-2

  ಮಧ್ಯಾಹ್ನ 1: ಮಹಿಳಾ ಉದ್ಯಮಶೀಲತೆ: ಸವಾಲುಗಳು ಮತ್ತು ಪರಿಹಾರೋಪಾಯಗಳು
  ಉಪಸ್ಥಿತಿ: ಮೀನಾ ಗಣೇಶ್, ಸಂಸ್ಥಾಪಕಿ, ಪೋರ್ಟಿಯಾ ಮೆಡಿಕಲ್, ವಿನೀತಾ ಸಿಂಗ್, ಸಂಸ್ಥಾಪಕಿ, ಶುಗರ್ ಕಾಸ್ಮೆಟಿಕ್ಸ್ ಮತ್ತಿತರರು.

  ಮಧ್ಯಾಹ್ನ 2: ಫಿನ್-ಟೆಕ್ ಭವಿಷ್ಯ
  ಉಪಸ್ಥಿತಿ: ಹರ್ಷಿಲ್ ಮಾಥೂರ್, ಸಿಇಒ, ರೇಜರ್-ಪೇ, ಸಂಜೀವ್ ಗುಪ್ತ, ಸಿಇಒ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮತ್ತಿತರರು.

  ಮಧ್ಯಾಹ್ನ 3: ವೆಂಚರ್ ಕ್ಯಾಪಿಟಲ್ ನ ಆಚೆಗೆ: ಬಂಡವಾಳ ಪೂರೈಕೆ, ಸುಸ್ಥಿರತೆ ಮತ್ತು ಬೆಳವಣಿಗೆ
  ಉಪಸ್ಥಿತಿ: ಅಪೂರ್ವ ಶರ್ಮ, ಪಾಲುದಾರ, ಸ್ಟ್ರೈಡ್ ವೆಂಚರ್ಸ್ ಮತ್ತಿತರರು.

  ಸಂಜೆ 4: ಎಜುಟೆಕ್: ಉತ್ಪ್ರೇಕ್ಷೆಯೋ ಅಥವಾ ವಾಸ್ತವವೋ?
  ಉಪಸ್ಥಿತಿ: ಕೃಷ್ಣಕುಮಾರ್, ಸಿಇಒ, ಸಿಂಪ್ಲಿಲರ್ನ್, ಪ್ರಿಯಾ ಮೋಹನ್, ವೆಂಚರ್ ಹೈವೇ ಎಲ್ಎಲ್ ಪಿ
  Published by:HR Ramesh
  First published: