• Home
 • »
 • News
 • »
 • state
 • »
 • Boy Death: ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು! ಕೊನೆಗೂ ಫಲಿಸಲೇ ಇಲ್ಲ ಪ್ರಾರ್ಥನೆ

Boy Death: ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು! ಕೊನೆಗೂ ಫಲಿಸಲೇ ಇಲ್ಲ ಪ್ರಾರ್ಥನೆ

ಮೃತ ಬಾಲಕ

ಮೃತ ಬಾಲಕ

ಡಿಸೆಂಬರ್ 1ನೇ ತಾರೀಖಿನಂದು ಶಾಲೆಯಿಂದ ಮನೆಗೆ ಬಂದಿದ್ದ ಇಬ್ಬರು ಬಾಲಕರು ಪಾರಿವಾಳ ಹಿಡಿಯಲು ಮನೆಯ ಮಹಡಿ ಮೇಲೆ ಹೋಗಿದ್ದರು. ಆಗ ಏಕಾಏಕಿ ಹೈಟೆನ್ಶನ್ ತಂತಿ ಸ್ಪರ್ಶಿಸಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ ಈಗ ಒಬ್ಬ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಮುಂದೆ ಓದಿ ...
 • Share this:

  ಬೆಂಗಳೂರು: ಕಳೆದ ಮೂರು ದಿನಗಳ ಹಿಂದಷ್ಟೇ (Three Days Back) ಹೈಟೆನ್ಶನ್ ತಂತಿ (High-tension wire)  ಸ್ಪರ್ಶ ಮಾಡಿದ ಹಿನ್ನೆಲೆ ಇಬ್ಬರು ಬಾಲಕರು (Two Boys) ಗಂಭೀರವಾಗಿ ಗಾಯಗೊಂಡಿದ್ದರು. ಈಗ ಹೈಟೆನ್ಷನ್ ತಂತಿ ಸ್ಪರ್ಶ ಮಾಡಿದ್ದ ಇಬ್ಬರು ಬಾಲಕರ ಪೈಕಿ ಒಬ್ಬ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಇಂದು (ಭಾನುವಾರ) ಸಾವನ್ನಪ್ಪಿದ್ದಾನೆ (Death) ಎಂದು ತಿಳಿದು ಬಂದಿದೆ. ಹೈಟೆನ್ಷನ್ ವೈರ್ ಸ್ಪರ್ಶ ಮಾಡಿದ್ದ ಹಿನ್ನೆಲೆ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಬಾಲಕರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಬ್ಬರು ಬಾಲಕರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಈಗ ಇಬ್ಬರು ಬಾಲಕರಲ್ಲಿ ಒಬ್ಬ ಮೃತಪಟ್ಟಿದ್ದಾನೆ.


  ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವು


  ಡಿಸೆಂಬರ್ 1ನೇ ತಾರೀಖಿನಂದು ಶಾಲೆಯಿಂದ ಮನೆಗೆ ಬಂದಿದ್ದ ಇಬ್ಬರು ಬಾಲಕರು ಪಾರಿವಾಳ ಹಿಡಿಯಲು ಮನೆಯ ಮಹಡಿ ಮೇಲೆ ಹೋಗಿದ್ದರು. ಆಗ ಏಕಾಏಕಿ ಹೈಟೆನ್ಶನ್ ವಯರ್ ಸ್ಪರ್ಶಿಸಿದ್ದ ಇಬ್ಬರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಬಾಲಕರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ ಈಗ ಒಬ್ಬ ಬಾಲಕ ಸುಪ್ರೀತ್ ಚಿಕಿತ್ಸೆ ಫಲಿಸದೇ ಬೆಳಗ್ಗೆ ಮೃತಪಟ್ಟಿದ್ದಾನೆ.
  ಬಾಲಕ ಸುಪ್ರೀತ್ ದೇಹವು ಸುಮಾರು 90 ಪ್ರತಿಶತ ಸುಟ್ಟಿತ್ತು


  ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ನ ಮನೆಯೊಂದರಲ್ಲಿ ಈ ಘಟನೆ ನಡೆದಿತ್ತು. ಮನೆಯ ಮಹಡಿ ಮೇಲೆ ಪಾರಿವಾಳ ಹಿಡಿಯಲು ಇಬ್ಬರು ಬಾಲಕರು ಹೋಗಿದ್ದರು. ಈ ವೇಳೆ ಕಬ್ಬಿಣದ ರಾಡ್‌ ನಿಂದ ಹೈಟೆನ್ಶನ್ ವಯರ್ ಸ್ಪರ್ಶ ಮಾಡಿದ್ದರು. ಇಬ್ಬರು ಬಾಲಕರು ಹೈಟೆನ್ಶನ್ ವಯರ್ ಸ್ಪರ್ಶ ಮಾಡಿದ್ದರ ತೀವ್ರತೆಯಿಂದ ಮನೆಯಲ್ಲಿದ್ದ ಎಲೆಕ್ಟ್ರಿಕ್ ಉಪಕರಣಗಳು ಎಲ್ಲವೂ ಸ್ಫೋಟ ಗಿದ್ದವು. ಜೊತೆಗೆ ಬಾಲಕ ಸುಪ್ರೀತ್ ದೇಹವು ಸುಮಾರು 90 ಪ್ರತಿಶತದಷ್ಟು ಸುಟ್ಟಿದ್ದು, ಗಾಯಗಳಾಗಿದ್ದವು.
  ಘಟನೆಯಲ್ಲಿ ಇನ್ನೊಬ್ಬ ಬಾಲಕ ಚಂದ್ರು ಎಂಬಾತನು ಸುಮಾರು 70 ಪ್ರತಿಶತದಷ್ಟು ಸುಟ್ಟ ಗಾಯ ಆಗಿದ್ದರಿಂದ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ. ಈ ಘಟನೆ ನಡೆದ ಕೂಡಲೇ ಬಾಲಕರು ಇಬ್ಬರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಸುಪ್ರೀತ್ ಎಂಬ ಬಾಲಕ ಮೃತಪಟ್ಟಿದ್ದಾನೆ.


  ಮಗನನ್ನು ಕಳೆದುಕೊಂಡ ಮನೆಯಲ್ಲಿ ಆಕ್ರಂದನ


  ಇನ್ನು ಬಾಲಕ ಸುಪ್ರೀತ್  ಮಂಜುನಾಥ್ ಹಾಗೂ ತಾಯಿ ಪ್ರೇಮ ದಂಪತಿಗೆ ಒಬ್ಬನೇ ಮಗನಾಗಿದ್ದಾನೆ. ಇದೀಗ ಮಗನನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಬಾಲಕ ಸುಪ್ರೀತ್ ನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಬಾಲಕನ ಮೃತದೇಹವನ್ನು ಕುಟುಂಬಸ್ದರಿಗೆ ನೀಡಲಾಗುತ್ತದೆ. ಇನ್ನೊಬ್ಬ ಬಾಲಕನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


  ಇದನ್ನೂ ಓದಿ: ಕೇರಳ ಶಾಲೆಯ ಈಜುಪಟು ಬೆಂಗಳೂರಿನಲ್ಲಿ ಸಾವು, ಪ್ರ್ಯಾಕ್ಟಿಸ್​ ಮಾಡಿ ಬಂದವನಿಗೆ ವಿದ್ಯುತ್ ಸ್ಪರ್ಶ!


  ಈಜು ಸ್ಪರ್ಧೆಗೆಂದು ಬೆಂಗಳೂರಿಗೆ ಬಂದಿದ್ದ ಕೇರಳದ ವಿದ್ಯಾರ್ಥಿ ಸಾವು


  ಈಜು ಸ್ಪರ್ಧೆಗೆಂದು ಬೆಂಗಳೂರಿಗೆ ಬಂದಿದ್ದ ಕೇರಳದ 12ನೇ ತರಗತಿಯ ವಿದ್ಯಾರ್ಥಿ ರೋಷನ್ ರಶೀದ್ ಡೈವಿಂಗ್ ಬೋರ್ಡ್‌ನ ಸಂಪರ್ಕಕ್ಕೆ ಬಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ಬಾಲಕನ ಚಿಕ್ಕಮ್ಮ ಕಾರ್ಯಕ್ರಮವನ್ನು ಆಯೋಜಿಸಿದ್ದ ಅಗರದ ಎನ್‌ಪಿಎಸ್ ಅಧಿಕಾರಿಗಳು ಮತ್ತು ಇತರರ ವಿರುದ್ಧ ನಿರ್ಲಕ್ಷ್ಯ ವಹಿಸಿರುವುದಾಗಿ ದೂರು ದಾಖಲಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಈಜು ಸ್ಪರ್ಧೆಯ ವೇಳೆ ನಿಗೂಢವಾಗಿ ಸಾವನ್ನಪ್ಪಿದ ಕೇರಳ ಮೂಲದ 17 ವರ್ಷದ ವಿದ್ಯಾರ್ಥಿಯ ಚಿಕ್ಕಮ್ಮ, ಈ ಸಾವಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಅಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅಧಿಕಾರಿಗಳೇ ಹೊಣೆ ಎಂದು ದೂಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರು ರಸ್ತೆಯ ರಾಜರಾಜೇಶ್ವರಿನಗರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು