ನಾಳೆಯಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ; ಮೆರವಣಿಗೆ, ಪ್ರತಿಭಟನೆಗೆ ಇಲ್ಲ ಅವಕಾಶ

ನಿಷೇಧಾಜ್ಞೆಯಿಂದ ಸಾರ್ವಜನಿಕರ ದಿನನಿತ್ಯದ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶಾಲಾ- ಕಾಲೇಜು.‌ ಕಮರ್ಷಿಯಲ್ ಸ್ಟ್ರೀಟ್,  ಸಿಟಿ ಮಾರ್ಕೇಟ್ ಹೂವಿನ ಮಾರ್ಕೇಟ್. ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣ.‌ ಓಲಾ, ಆಟೋಗಳಿಗೆ ಇದು ಅನ್ವಯಿಸಲ್ಲ. ಇದರಿಂದ ಸಾರ್ವಜನಿಕರು ಭಯ ಪಡುವ ಅಗತ್ಯ ಇಲ್ಲ. ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಆಗಬಾರದು ಅಂತ ಈ ನಿರ್ಧಾರಕ್ಕೆ ಬಂದಿದ್ದೇವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲೂ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆಯಿಂದ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ನಾಳೆ ಬೆಳಗ್ಗೆ ಆರು ಗಂಟೆಯಿಂದ ನಿಷೇಧಾಜ್ಞೆ ಜಾರಿಯಾಗಲಿದ್ದು, ಡಿ.21ರ  ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಮೂರು ದಿನಗಳ ಅವಧಿಯಲ್ಲಿ  ಮೆರವಣಿಗೆ, ಪ್ರತಿಭಟನೆ ಮಾಡುವಂತಿಲ್ಲ. ಶಾಲಾ- ಕಾಲೇಜು, ಹೂ ಮಾರುಕಟ್ಟೆ, ಹಣ್ಣು ತರಕಾರಿ ಮಾರುಕಟ್ಟೆ, ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ಆಟೋಗಳಿಗೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ, ಹೀಗಾಗಿ ಅವುಗಳು ಎಂದಿನಂತೆ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆ ಮುಂದುವರೆಯಲಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರ ಅಥವಾ ವಿರೋಧ ಪ್ರತಿಭಟನೆ ನಡೆಸಲು ಯಾವುದಕ್ಕೂ ಅವಕಾಶವಿಲ್ಲ ಎಂದು ತುರ್ತು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಸಿಎಎ ಪರ ಅಥವಾ ವಿರೋಧ ಪ್ರತಿಭಟನೆ ಮಾಡಲು ನಾವು ಅವಕಾಶ ನೀಡಿಲ್ಲ. ಇವತ್ತು ಪರ ಮಾಡ್ತಿವಿ ಅಂತ ಕೆಲವರು ಕೇಳುತ್ತಿದ್ದಾರೆ, ಕ್ಯಾಂಡಲ್ ಹಚ್ಚೋದು. ಮೆರವಣಿಗೆ ಇವಕ್ಕೆಲ್ಲ ಅವಕಾಶ ಕೊಟ್ಟಿಲ್ಲ.  ದೇಶದಲ್ಲಿ ಈ ಬಗ್ಗೆ ಏನಾಗ್ತಿದೆ ಅನ್ನೋದು ನಿಮಗೆಲ್ಲ ಗೊತ್ತಿದೆ. ಈ ಉದ್ದೇಶದಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.

ನಿಷೇಧಾಜ್ಞೆಯಿಂದ ಸಾರ್ವಜನಿಕರ ದಿನನಿತ್ಯದ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶಾಲಾ- ಕಾಲೇಜು.‌ ಕಮರ್ಷಿಯಲ್ ಸ್ಟ್ರೀಟ್,  ಸಿಟಿ ಮಾರ್ಕೇಟ್ ಹೂವಿನ ಮಾರ್ಕೇಟ್. ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣ.‌ ಓಲಾ, ಆಟೋಗಳಿಗೆ ಇದು ಅನ್ವಯಿಸಲ್ಲ. ಇದರಿಂದ ಸಾರ್ವಜನಿಕರು ಭಯ ಪಡುವ ಅಗತ್ಯ ಇಲ್ಲ. ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಆಗಬಾರದು ಅಂತ ಈ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಅಧಿಕಾರಿಗಳು ಸಾರ್ವಜನಿಕರ ಹತ್ತಿರ ಸಭ್ಯರಾಗಿ ಇರುವಂತೆ ಸೂಚಿಸಿದ್ದೇವೆ. ನಿಷೇಧಾಜ್ಞೆಯನ್ನು ಯಾರಾದ್ರು ಉಲ್ಲಂಘನೆ ಮಾಡಿದ್ರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಕೆಎಸ್​ಆರ್​ಪಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
Published by:HR Ramesh
First published: