• Home
  • »
  • News
  • »
  • state
  • »
  • Children Missing: ಬೆಂಗಳೂರಿನಲ್ಲಿ ಮೂವರು ಮಕ್ಕಳು ನಾಪತ್ತೆ; ಪೊಲೀಸರಿಂದ ಹುಡುಕಾಟ

Children Missing: ಬೆಂಗಳೂರಿನಲ್ಲಿ ಮೂವರು ಮಕ್ಕಳು ನಾಪತ್ತೆ; ಪೊಲೀಸರಿಂದ ಹುಡುಕಾಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳನ್ನು ಕರೆದುಕೊಂಡಲು ಹೊರಗೆ ಹೋಗಿದ್ದ ನಗೀನಗೆ ಮತ್ತೆ ವಾಪಸ್ ಮನೆಗೆ ಹೋಗುವ ದಾರಿ ಗೊತ್ತಾಗದೆ ಎಲ್ಲಾ ಕಡೆ ಹುಡುಕಾಡಿದ್ದಾಳೆ. 5 ವರ್ಷದ ಮಗು ಜೊತೆ ಒಂದು ವರ್ಷದ ಮಗುವನ್ನ ಎತ್ತಿಕೊಂಡು ಹೋಗುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ.  

  • Share this:

ಬೆಂಗಳೂರಿನಲ್ಲಿ ಮೂವರು ಮಕ್ಕಳು (Childern) ನಾಪತ್ತೆಯಾಗಿರುವ ಘಟನೆ ಕಲಾಸಿಪಾಳ್ಯದ ಆರ್ ವಿ ರಸ್ತೆಯಲ್ಲಿ ನಡೆದಿದೆ. ಇದೇ ತಿಂಗಳ ಮೂರರಂದು ಮಕ್ಕಳು ನಾಪತ್ತೆಯಾಗಿದ್ದು (Children Missing), ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. 15 ವರ್ಷದ ನಗೀನ, 5 ವರ್ಷದ ರುಕ್ಸಾರ್, 1 ವರ್ಷದ ಹಸನ್ ನಾಪತ್ತೆಯಾದ ಮಕ್ಕಳು. ಬಿಹಾರದಿಂದ ಬಂದು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಿದ್ದ ನಿಜಾಮ್ ಮನ್ಸೂರಿ (Nizam Mansoori) ಎಂಬಾತ ಇಬ್ಬರು ಮಕ್ಕಳನ್ನ ನೋಡಿಕೊಳ್ಳಲು ತಂಗಿ ನಗೀನಳನ್ನ ಬಿಹಾರದಿಂದ ಕರೆತಂದಿದ್ದ. ಮಕ್ಕಳನ್ನ ನೋಡಿಕೊಳ್ಳುವಂತೆ ಹೇಳಿ ಕೆಲಸಕ್ಕೆ ಹೋಗಿದ್ದ ಈ ವೇಳೆ ಮಕ್ಕಳ ಜೊತೆ ಮನೆಯಿಂದ ಹೊರಗೆ ಬಂದಿದ್ದ ನಗೀನ ದಾರಿ ತಿಳಿಯದೇ ನಾಪತ್ತೆಯಾಗಿದ್ದಾರೆ.


ಮನೆ ದಾರಿ ಕಾಣದೆ ಮಕ್ಕಳ ಹುಡುಕಾಟ


ಮಕ್ಕಳನ್ನು ಕರೆದುಕೊಂಡಲು ಹೊರಗೆ ಹೋಗಿದ್ದ ನಗೀನಗೆ ಮತ್ತೆ ವಾಪಸ್ ಮನೆಗೆ ಹೋಗುವ ದಾರಿ ಗೊತ್ತಾಗದೆ ಎಲ್ಲಾ ಕಡೆ ಹುಡುಕಾಡಿದ್ದಾಳೆ. 5 ವರ್ಷದ ಮಗು ಜೊತೆ ಒಂದು ವರ್ಷದ ಮಗುವನ್ನ ಎತ್ತಿಕೊಂಡು ಹೋಗುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ.


ಕಲಾಸಿಪಾಳ್ಯ ಪೊಲೀಸರಿಂದ ಮಕ್ಕಳಿಗಾಗಿ ಹುಡುಕಾಟ


ಮನೆ ಹುಡುಕುತ್ತಾ ಶ್ರೀನಗರದವರೆಗೆ ಮಕ್ಕಳು ಹೋಗಿದ್ದಾರೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ತಪಾಸಣೆ ಮಾಡುತ್ತಿದ್ದಾರೆ. ಮಕ್ಕಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಮಕ್ಕಳು ಕಂಡು ಬಂದಲ್ಲಿ ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: S.C, S.T ಮೀಸಲಾತಿ ಹೆಚ್ಚಳ ಫಿಕ್ಸ್​; ಸರ್ವಪಕ್ಷಗಳ ಸಮ್ಮತದಿಂದ ನಿರ್ಧಾರ- ಸಿಎಂ ಬೊಮ್ಮಾಯಿ


ನಾಪತ್ತೆಯಾಗಿದ್ದವರು ಚೆನ್ನೈನಲ್ಲಿ ಪತ್ತೆ


ಬೆಂಗಳೂರಿನ ಪುಲಕೇಶಿ ನಗರದ (Pulakeshinagara, Bengaluru) ಶಾಲಾ ವಸತಿ ನಿಲಯದಿಂದ (Hostel Girls Missing) ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದರು. ಇದೀಗ ಪ್ರಕರಣದ ಒಂದೊಂದು ಮಾಹಿತಿ ಹೊರ ಬಂದಿದ್ದು, ಬಾಲಕಿಯರ ಕಥೆ ಕಣ್ಣೀರಿನ ಜೊತೆಗೆ ಆಶ್ಚರ್ಯ ತರಿಸುತ್ತಿದೆ. ಬಾಲಕಿಯರು ಹೇಗೆ ಚೆನ್ನೈ (Chennai) ತಲುಪಿದ್ರು? ಅಲ್ಲಿ ಉಳಿದುಕೊಂಡಿದ್ದು ಎಲ್ಲಿ? ವಸತಿ ನಿಲಯದಿಂದ (Hostel) ಹೊರ ಬಂದಿದ್ಯಾಕೆ ಎಂಬುದರ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೂವರ ಪೈಕಿ ಇಬ್ಬರು ಪರಸ್ಪರ ಮದುವೆಯಾಗಲು (Marriage) ನಿರ್ಧರಿಸಿದ್ರು ಎಂದು ವರದಿಯಾಗಿದೆ. ಚೆನ್ನೈನಲ್ಲಿಯೇ ಉಳಿದುಕೊಂಡು ಜೀವನ ಕಟ್ಟಿಕೊಳ್ಳಲು ಮೂವರು ನಿರ್ಧರಿಸಿದ್ದರು ಎಂದು ವರದಿ ಬಂದಿದೆ.


ಬಾಲಮಂದಿರಗಳಿಂದ 484 ಮಕ್ಕಳು ನಾಪತ್ತೆ


ರಾಜ್ಯದಲ್ಲಿನ ವಿವಿಧ ಬಾಲಮಂದಿರಗಳಿಂದ ಈವರೆಗೆ 484 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತು ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ  ವಿಚಾರಣೆ ನಡೆಸಿತು.


ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಅನುಪಾಲನಾ ವರದಿ ನೀಡಿದರು. ವರದಿ ದಾಖಲಿಸಿಕೊಂಡ ನ್ಯಾಯಪೀಠ, ‘ಈ ವರದಿಯ ನಂತರ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿಯನ್ನು 4 ವಾರಗಳಲ್ಲಿ ಸಲ್ಲಿಸಿ’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ವಾದ ಮಂಡಿಸಿದರು.


ಇದನ್ನೂ ಓದಿ: Population Control: ಕೋಳಿ ಕೇಳಿ ಮಸಾಲೆ ಅರೆಯಲ್ಲ, ಸಂಜಯ್ ಗಾಂಧಿ ಬ್ರಿಗೇಡ್​ ಮಾದರಿಯಲ್ಲೂ ಜಾರಿಗೆ ತರಲ್ಲ-ಸಿ ಟಿ ರವಿ


2022ರ ಫೆ. 22 ರಂದು ನ್ಯಾಯಪೀಠ ಆದೇಶ


ಸರ್ಕಾರದ ಅಧೀನದಲ್ಲಿರುವ ಬಾಲ ಮಂದಿರಗಳಿಂದ ಕೆಲ ವರ್ಷಗಳಲ್ಲಿ 141 ಮಕ್ಕಳು ನಾಪತ್ತೆಯಾಗಿದ್ದಾರೆ‘ ಎಂದು ಅರ್ಜಿದಾರರು ಆರೋಪಿಸಿದ್ದರು. ‘ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ಕ್ರಮಗಳ ವರದಿ ಸಲ್ಲಿಸಿ’ ಎಂದು 2022ರ ಫೆ. 22ರಂದು ನ್ಯಾಯಪೀಠ ಆದೇಶಿಸಿತ್ತು.

Published by:ಪಾವನ ಎಚ್ ಎಸ್
First published: