HOME » NEWS » State » THREE BOYS DROWNED IN LAKE DEAD RAICHUR HK

ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ನೀರು ಪಾಲು

ರೌಡಕುಂದದ ಶೇಖರಪ್ಪ ಗದುಗಿನ ಎಂಬುವವರ ಮೊಮ್ಮಕ್ಕಳಾದ ರವಿಕುಮಾರ(12), ನಾಗರಾಜ (09) ಹಾ ಕಾರ್ತಿಕ( 06) ವರ್ಷದ ಬಾಲಕರು ನೀರು ಪಾಲಾಗಿದ್ದಾರೆ.

news18-kannada
Updated:April 9, 2020, 3:48 PM IST
ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ನೀರು ಪಾಲು
ಸಾಂದರ್ಭಿಕ ಚಿತ್ರ
  • Share this:
ರಾಯಚೂರು(ಏ.09):ಕೆರೆಯಲ್ಲಿ ನೀರು ತರಲು ಹೋಗಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದದಲ್ಲಿ ನಡೆದಿದೆ.

ರೌಡಕುಂದದ ಶೇಖರಪ್ಪ ಗದುಗಿನ ಎಂಬುವವರ ಮೊಮ್ಮಕ್ಕಳಾದ ರವಿಕುಮಾರ(12), ನಾಗರಾಜ (09) ಹಾ ಕಾರ್ತಿಕ( 06) ವರ್ಷದ ಬಾಲಕರು ನೀರು ಪಾಲಾಗಿದ್ದಾರೆ. ಇದರಲ್ಲಿ ಇದರಲ್ಲಿ ರವಿಕುಮಾರ ಹಾಗು ನಾಗಾರಾಜ ಶೇಖರಪ್ಪನವರ ಮಗ ವೀರೇಶ ಎಂಬುವವರ ಮಕ್ಕಳಾಗಿದ್ದು ಶೇಖರಪ್ಪನವರ ಮಗಳು ಮಂಜುಳಾ ಮಲ್ಲೇಶ ಎಂಬುವವರ ಮಗ ಕಾರ್ತಿಕ ಸಾವನ್ನಪ್ಪಿದ್ದಾರೆ.

ಈ ಭಾಗದಲ್ಲಿ ತುಂಗಭದ್ರಾ ಎಡದಂಡೆ ನಾಲೆಯಿಂದ ಕೆರೆಗಳಿಗೆ ನೀರು ತುಂಬಿಸಿಕೊಂಡು ಇದೇ ನೀರನ್ನು ಕುಡಿಯಲು ಬಳಸುತ್ತಾರೆ, ಎಲ್ಲರಂತೆ ಈ ಮೂರು ಬಾಲಕರು ನೀರಲು ತರಲು ಹೋಗಿ ನೀರು ಪಾಲಾಗಿದ್ದಾರೆ.

ಮನೆಯಿಂದ ನಾಲ್ಕು ಕೊಡಗಳನ್ನು ಇಟ್ಟುಕೊಂಡು ತಳ್ಳು ಗಾಡಿಯೊಂದಿಗೆ ಹೋಗಿದ್ದ ಬಾಲಕರಲ್ಲಿ ನಾಗರಾಜ ಏಕಾಎಕಿ ಕಾಲು ಜಾರಿ ಬಿದ್ದಿದ್ದಾನೆ, ಆತನನ್ನು ಉಳಿಸಲು ತಾವು ಕೈ ನೀಡಿ ಎಳೆದುಕೊಳ್ಳಲು ಹೋಗಿ ಮೂವರು ಅಸುನೀಗಿದ್ದಾರೆ.

ಇದನ್ನೂ ಓದಿ : ಕೊರೋನಾ ಸೋಂಕಿನಿಂದ ವ್ಯಕ್ತಿ ಸಾವು ; ಮೃತನ ಚಿಕಿತ್ಸೆ ಬಗ್ಗೆ ಮಾಹಿತಿ ನೀಡದ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲು

ಮಾಹಿತಿ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Youtube Video
First published: April 9, 2020, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories