ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರ ಸಾವು

ವಿದ್ಯಾರ್ಥಿಗಳ ಸಾವು ತಿಳಿದ ಅಧಿಕಾರಿಗಳು ಭೇಟಿ ನೀಡಿ ಪರಿಶಿಲಿಸಿದ್ದಾರೆ. ಜಿಪಂ ಸಿಇಒ ಶುಭಕಲ್ಯಾಣ್, ಹಾಸ್ಟೆಲ್ ವಾರ್ಡನ್ ಹಾಗೂ ಶಾಲಾ ಮುಖ್ಯಸ್ಥರನ್ನು ತೀವ್ರವಾಗಿ ವಿಚಾರಿಸಿದ್ದಾರೆ. ಮಕ್ಕಳು ಯಾಕೆ ಬರಲಿಲ್ಲ ಅಂತಾ ವಿಚಾರಿಸಿದ್ದಿರಾ, ಈ ರೀತಿ ಆದ್ರೆ ಹೇಗೆ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ. 

news18-kannada
Updated:February 12, 2020, 8:11 PM IST
ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರ ಸಾವು
ಬಾಲಕರು ಈಜಲು ಇಳಿದಿದ್ದ ಕೆರೆ.
  • Share this:
ತುಮಕೂರು: ಕೆರೆಯಲ್ಲಿ ಈಜಲು ನೀರಿಗೆ ಇಳಿದಿದ್ದೆ ಮೂವರು ಶಾಲಾ ಬಾಲಕರು ಈಜು ಬಾರದೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಕೆರೆಯಲ್ಲಿ ನಡೆದಿದೆ.

ಎಂದಿನಂತೆ ಹಾಸ್ಟೆಲ್ ನಲ್ಲಿ ಶಾಲೆಗೆಂದು ಸಿದ್ಧರಾದ ದರ್ಶನ್, ನಂದನ್ ಹಾಗೂ ಶ್ರೀನಿವಾಸ್ ಶಾಲೆಗೆ ಹೋಗಲಿಲ್ಲ. ಬದಲಾಗಿ ಗುಬ್ಬಿಯ ಕೆರೆಗೆ ಈಜಲು ತೆರಳಿದ್ದಾರೆ. ಇವರ ಜೊತೆಗೆ ಇನ್ನಿಬ್ಬರು ಕೂಡ ಹೋಗಿದ್ದರಂತೆ. ಆದರೆ ಅವರು ನೀರಿಗೆ ಇಳಿಯದೇ ಸುಮ್ಮನೇ ಕುಳಿತಿದ್ದಾರೆ‌. ಈ ಮೂವರು ಈಜಲು ಕೆರೆಗೆ ಇಳಿದು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಬೆಳ್ಳಿಗ್ಗೆ 10.30 ಕ್ಕೆ ನೀರಿಗೆ ಇಳಿದ ಮೂವರು ವಿದ್ಯಾರ್ಥಿಗಳು ಈಜು ಬಾರದೇ, ಬಾರದ ಲೋಕಕ್ಕೆ ಪಯಣಿಸಿದ್ದಾರೆ‌. ರಸ್ತೆ ಬದಿ ಹೋಗುತ್ತಿದ್ದವರು ನೋಡಿ ಪೋಲಿಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ಪೊಲೀಸರು ಅಗ್ನಿ ಶಾಮಕ ದಳ ಸಹಾಯದ ಮೂಲಕ ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ದರ್ಶನ್ ಇದೇ ಗುಬ್ಬಿ ತಾಲೂಕಿನ ಎನ್ ರಾಂಪುರದವನು ಹಾಗೂ ನಂದನ್, ಕಲ್ಲೇನಹಳ್ಳಿ ನಿವಾಸಿಯಾಗಿದ್ದು, ಶ್ರೀನಿವಾಸ್ ಬೆಂಗಳೂರಿನ ಜಯಮಾರುತಿ ನಗರದವ ಎನ್ನಲಾಗಿದೆ. ದರ್ಶನ್, ನಂದನ್ ಗುಬ್ಬಿ ಯ ಚಿದಂಬರ ಆಶ್ರಮದ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಯಲ್ಲಿ, ಹಾಗೂ ಶ್ರೀನಿವಾಸ್ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದರಂತೆ. ವಿಚಾರ ತಿಳಿದ ಜಿಪಂ ಸಿಇಓ ಶುಭಕಲ್ಯಾಣ್, ತಹಶಿಲ್ದಾರ್ ಮಮತ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ: ಅಂದು ಹರಿಹರ ಶ್ರೀಗಳಿಂದ ಸಚಿವ ಸ್ಥಾನಕ್ಕೆ ಬೇಡಿಕೆ, ಇಂದು ಕೂಡಲಸಂಗಮ ಶ್ರೀಗಳಿಂದ ಸಿಎಂ ಸ್ಥಾನಕ್ಕೆ ಬೇಡಿಕೆ!

ವಿದ್ಯಾರ್ಥಿಗಳ ಸಾವು ತಿಳಿದ ಅಧಿಕಾರಿಗಳು ಭೇಟಿ ನೀಡಿ ಪರಿಶಿಲಿಸಿದ್ದಾರೆ. ಜಿಪಂ ಸಿಇಒ ಶುಭಕಲ್ಯಾಣ್, ಹಾಸ್ಟೆಲ್ ವಾರ್ಡನ್ ಹಾಗೂ ಶಾಲಾ ಮುಖ್ಯಸ್ಥರನ್ನು ತೀವ್ರವಾಗಿ ವಿಚಾರಿಸಿದ್ದಾರೆ. ಮಕ್ಕಳು ಯಾಕೆ ಬರಲಿಲ್ಲ ಅಂತಾ ವಿಚಾರಿಸಿದ್ದಿರಾ, ಈ ರೀತಿ ಆದ್ರೆ ಹೇಗೆ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.
First published: February 12, 2020, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading