• Home
  • »
  • News
  • »
  • state
  • »
  • Vijayapura: ತಾಯಿ ಜೊತೆ ಮಲಗಿದ್ದವನನ್ನ ಕೊಂದ ಮಕ್ಕಳು; ತಲೆಗೆ ಕೊಡಲಿಯಿಂದ ಹೊಡೆದು ಹತ್ಯೆ

Vijayapura: ತಾಯಿ ಜೊತೆ ಮಲಗಿದ್ದವನನ್ನ ಕೊಂದ ಮಕ್ಕಳು; ತಲೆಗೆ ಕೊಡಲಿಯಿಂದ ಹೊಡೆದು ಹತ್ಯೆ

ಆರೋಪಿಗಳು

ಆರೋಪಿಗಳು

Vijayapura Crime News: ತಲೆಮರೆಸಿಕೊಂಡಿರೋ ತಂಗೆವ್ವ ಬಂಗಾರತಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Share this:

Illicit Relationship: ತಾಯಿ ಜೊತೆ ಮಲಗಿದ್ದ ವ್ಯಕ್ತಿಯನ್ನು ಮಹಿಳೆಯ ಮಕ್ಕಳು (Woman Children) ಬರ್ಬರವಾಗಿ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ (Chadachana, Vijayapura) ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಮಕ್ಕಳನ್ನು ಬಂಧಿಸಿದ್ದಾರೆ. ಮಹಿಳೆ (Woman Absconding) ನಾಪತ್ತೆಯಾಗಿದ್ದು, ಆಕೆಯ ಬಂಧನಕ್ಕಾಗಿ ಪೊಲೀಸರು (Vijayapura Police) ಬಲೆ ಬೀಸಿದ್ದಾರೆ. 60 ವರ್ಷದ ತುಕಾರಾಮ್ ಚವ್ಹಾಣ್ ಕೊಲೆಯಾದ ವ್ಯಕ್ತಿ. ತುಕಾರಾಮ್ ಚವ್ಹಾಣ್​ಗೆ 45 ವರ್ಷದ ತಂಗೆವ್ವ ಮಹಿಳೆ ಅಕ್ರಮ ಸಂಬಂಧ (Illicit Relationship) ಇತ್ತು. ಶುಕ್ರವಾರ ತಡರಾತ್ರಿ ತಂಗೆವ್ವಳ ಜೊತೆ ಏಕಾಂತದಲ್ಲಿದ್ದಾಗ ಆಕೆಯ ಮಕ್ಕಳ ಕೈಗೆ ತಗ್ಲಾಕೊಂಡಿದ್ದಾನೆ. ತಾಯಿ ಜೊತೆ ವೃದ್ಧನನ್ನ ನೋಡಿದ ಮಕ್ಕಳು ಕೊಡಲಿಯಿಂದ ತಲೆಗೆ ಹೊಡೆದು ಅಮ್ಮನೊಂದಿಗೆ ಮಕ್ಕಳು ಎಸ್ಕೇಪ್ (Eloped) ಆಗಿದ್ದರು.


ಕೊಲೆ ಬಳಿಕ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅವಿತುಕೊಂಡಿದ್ದ ಸದಾಶಿವ್ ಬಂಗಾರತಳಿ, ಚಿಕ್ಕು ಬಂಗಾರತಳಿ ಮತ್ತು ಸಿದ್ದು ಬಂಗಾರತಳಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಡಚಣ ಪೊಲೀಸ್ ಠಾಣೆ ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಮೂವರ ಆರೋಪಿಗಳನ್ನು ಬಂಧನ ಮಾಡಲಾಗಿದೆ.


three arrested in murder case chadachana vijayapura mrq
ಕೊಲೆಯಾದ ತುಕಾರಾಮ್


ತಲೆಮರೆಸಿಕೊಂಡಿರೋ ತಂಗೆವ್ವ ಬಂಗಾರತಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಂದ ದಾಂಧಲೆ, ಕಲ್ಲೆಸೆತ


ಪ್ರತಿ ಟನ್ ಕಬ್ಬಿಗೆ ಎಫ್​ಆರ್​ಪಿ ದರ (SugarCane FRP Price) ಹೆಚ್ಚಳ ಮಾಡುವಂತೆ ಆಗ್ರಹಿಸಿ ಮುದ್ದೇಬಿಹಾಳ, ತಾಳಿಕೋಟೆ, ಬಸವನ ಬಾಗೇವಾಡಿ ತಾಲೂಕುಗಳ ಸಾವಿರಾರು ರೈತರು (Farmers) ಯರಗಲ್ಲ-ಮದರಿ ಬಳಿ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ (Sri Balaji Sugar Factory) ಮುತ್ತಿಗೆ ಹಾಕಿ, ಕಲ್ಲೆಸೆದು, ದಾಂಧಲೆ ನಡೆಸಿದ್ದಾರೆ.


ಅಪಾರ ಸಂಖ್ಯೆಯಲ್ಲಿದ್ದ ರೊಚ್ಚಿಗೆದ್ದಿದ್ದ ಕಬ್ಬು ಬೆಳೆಗಾರ ರೈತರನ್ನು (Sugarcane farmers) ತಡೆಯಲು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಹರಸಾಹಸ ಪಟ್ಟರು ಪ್ರಯೋಜನ ಆಗಲಿಲ್ಲ.


vijayapura crime news, vijayapura news, farmers protest, sugarcane frp price, kannada news, karnataka news, ವಿಜಯಪುರ ಕ್ರೈಂ ನ್ಯೂಸ್, ವಿಜಯಪುರ ನ್ಯೂಸ್, ರೈತರ ಪ್ರತಿಭಟನೆ
ರೈತರ ಗಲಾಟೆ


ಇದನ್ನೂ ಓದಿ: SriRamulu: ನಿನ್ನ ಅಹಂಕಾರ ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ


ಕೊಠಡಿಯ ಗಾಜುಗಳು ಪುಡಿ ಪುಡಿ


ಪೊಲೀಸರ ಕೋಟೆ ಭೇದಿಸಿ ಕಾರ್ಖಾನೆ ಒಳಗೆ ನುಗ್ಗಿದ ರೈತರು ನೇರವಾಗಿ ಕಬ್ಬು ನುರಿಸುವ ಘಟಕದ ಬಳಿ ಹೋಗಿ ಅದನ್ನು ಬಂದ್ ಮಾಡುವಂತೆ ಆಗ್ರಹಿಸಿದರು. ಒಂದು ಹಂತದಲ್ಲಿ ಕಬ್ಬಿನ ಗಣಿಕೆ ಮತ್ತು ಕಲ್ಲುಗಳನ್ನು ಯಂತ್ರದ ಕೊಠಡಿಯತ್ತ ಎಸೆದಾಗ ಕೊಠಡಿಯ ಗಾಜುಗಳು ಪುಡಿಯಾದವು. ಕೆಲವು ರೈತರು ಕಬ್ಬು ಸಾಗಿಸುವ ಕ್ಯಾನಲಗೆ ಧುಮುಕಿ ಅಪಾಯ ಮೈಮೇಲೆಳೆದುಕೊಳ್ಳಲು ಯತ್ನಿಸಿದರು.


vijayapura crime news, vijayapura news, farmers protest, sugarcane frp price, kannada news, karnataka news, ವಿಜಯಪುರ ಕ್ರೈಂ ನ್ಯೂಸ್, ವಿಜಯಪುರ ನ್ಯೂಸ್, ರೈತರ ಪ್ರತಿಭಟನೆ
ರೈತರ ಗಲಾಟೆ


ರೈತರ ಆಕ್ರೋಶ ಅರಿತ ಸಿಬ್ಬಂದಿ ಕೂಡಲೇ ಕಬ್ಬು ನುರಿಸುವ ಯಂತ್ರ ಬಂದ್ ಮಾಡಿ ಸಂಭವನೀಯ ಅನಾಹುತ ತಪ್ಪಿಸಿದರು. ಕೆಲ ರೈತರು ಕಾರ್ಖಾನೆ ಆವರಣದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಆಯ್ದು ಕಬ್ಬು ತುಂಬಿಕೊಂಡು ನಿಂತಿದ್ದ ವಾಹನ ಮತ್ತು ಕಾರ್ಖಾನೆಯ ಕಟ್ಟಡಗಳತ್ತ ಎಸೆದು ಆಕ್ರೋಶ ಹೊರ ಹಾಕಿದರು.


vijayapura crime news, vijayapura news, farmers protest, sugarcane frp price, kannada news, karnataka news, ವಿಜಯಪುರ ಕ್ರೈಂ ನ್ಯೂಸ್, ವಿಜಯಪುರ ನ್ಯೂಸ್, ರೈತರ ಪ್ರತಿಭಟನೆ
ರೈತರ ಗಲಾಟೆ


ಏನಿದು ಗಲಾಟೆ? ರೈತರ ಬೇಡಿಕೆ ಏನು?


ಡಿವೈಎಸ್​ಪಿ ಅರುಣಕುಮಾರ ಕೋಳೂರ, ಸಿಪಿಐ ಆನಂದ್ ವಾಘ್ಮೋಡೆ ನೇತೃತ್ವದಲ್ಲಿ ಮುದ್ದೇಬಿಹಾಳ, ತಾಳಿಕೋಟೆ ಮತ್ತು ಡಿಆರ್ ಪೊಲೀಸರು ಭದ್ರತೆ ಒದಗಿಸಲು ಹರಸಾಹಸ ಪಟ್ಟರು. ಸರ್ಕಾರ ಟನ್ ಕಬ್ಬಿಗೆ 3,200 ದರ ನಿಗದಿ ಪಡಿಸಿದೆ. ಬಾಲಾಜಿಯವರು ಕಟಾವು ಮತ್ತು ಸಾಗಣೆ ವೆಚ್ಚ ಮುರಿದುಕೊಂಡು 2,502 ರೂ ಕೊಡುತ್ತಾರೆ. 3,800 ರೂ ಕೊಡಬೇಕು ಅನ್ನೋದು ರೈತರ ಬೇಡಿಕೆಯಾಗಿದೆ.


vijayapura crime news, vijayapura news, farmers protest, sugarcane frp price, kannada news, karnataka news, ವಿಜಯಪುರ ಕ್ರೈಂ ನ್ಯೂಸ್, ವಿಜಯಪುರ ನ್ಯೂಸ್, ರೈತರ ಪ್ರತಿಭಟನೆ
ರೈತರ ಗಲಾಟೆ


ಇದನ್ನೂ ಓದಿ:  Crime News: ಗಂಡನ ಕೊಲೆ ಮಾಡಿಸಿದ್ದ ಹೆಂಡತಿಗಿದ್ದರು ಬಾಯ್‌ ಫ್ರೆಂಡ್ಸ್! ಪತಿ ಮರ್ಮಾಂಗ ಕತ್ತರಿಸಿದವಳ ಹಿಸ್ಟರಿಯೇ ಭಯಾನಕ!

 ಆದರೆ ಎಫ್ಆರ್​ಪಿ ದರ ನಿಗದಿ ಪಡಿಸುವುದು ಸರ್ಕಾರವೇ ಹೊರತು ಕಾರ್ಖಾನೆಯವರಲ್ಲ ಈ ವಿಷಯದಲ್ಲಿ ನಾವು ಅಸಹಾಯಕರು ಎಂದು ಕಾರ್ಖಾನೆಯವರು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.


ವರದಿ: ಗುರುರಾಜ್ ಗದ್ದನಕೇರಿ

Published by:Mahmadrafik K
First published: