• Home
  • »
  • News
  • »
  • state
  • »
  • Belagavi Crime News: 10 ಬಾರಿ ದೃಶ್ಯ ಸಿನಿಮಾ ನೋಡಿ ಕೊಲೆ; ಹೆಂಡ್ತಿ, ಮಗಳು, ಆಕೆಯ ಇನಿಯ ಅರೆಸ್ಟ್

Belagavi Crime News: 10 ಬಾರಿ ದೃಶ್ಯ ಸಿನಿಮಾ ನೋಡಿ ಕೊಲೆ; ಹೆಂಡ್ತಿ, ಮಗಳು, ಆಕೆಯ ಇನಿಯ ಅರೆಸ್ಟ್

ಕೊಲೆಯ ಕೇಸ್

ಕೊಲೆಯ ಕೇಸ್

ಸೆಪ್ಟೆಂಬರ್ 17ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆ ಬಳಿ ಬಂದಿದ್ದ ಅಕ್ಷಯ್‌ನ್ನು ಹಿಂಬದಿ ಬಾಗಿಲು ಓಪನ್ ಮಾಡಿ ಮನೆಯೊಳಗೆ ಕರೆಸಿಕೊಂಡಿರುತ್ತಾಳೆ ರೋಹಿಣಿ‌. ಬಳಿಕ ಮನೆಗೆ ನುಗ್ಗಿ ಮೇಲ್ಮಹಡಿಗೆ ತೆರಳಿ ಸುಧೀರ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗ ಸುಧೀರ್ ತೀವ್ರ ಪ್ರತಿರೋಧವೊಡ್ಡಿರುತ್ತಾನೆ.

ಮುಂದೆ ಓದಿ ...
  • Share this:

ಬೆಳಗಾವಿಯಲ್ಲಿ (Belagavi) ನಡೆದ ಭೀಕರ ಕೊಲೆ ಪ್ರಕರಣ (Murder Case) ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅನೈತಿಕ ಸಂಬಂಧ (Illicit Relationship), ಲವ್ವಿ ಡೌವ್ವಿಗೆ (Love) ಅಡ್ಡಿಯಾಗಿದ್ದ ವ್ಯಕ್ತಿಗೆ ಸ್ಕೆಚ್ ಹಾಕಿದ್ದು ಪತ್ನಿ (Wife), ಮಗಳು (Daughter) ಎಂಬ ಸತ್ಯ ಬಹಿರಂಗವಾಗಿದೆ. ಪತಿಯ ಕೊಲೆ (Husband Murder) ಮಾಡಲು ಕನ್ನಡ ಪ್ರಖ್ಯಾತ ದೃಶ್ಯ (Drishya Cinema) ಸಿನಿಮಾ 10 ಸಲ ನೋಡಿದ್ರು. ಬಳಿಕ ತಡರಾತ್ರಿ ಹೆಂಡತಿ, ಮಗಳು, ಮಗಳ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಸ್ಕೆಚ್​ ರೋಚಕವಾಗಿದ್ದು ಮೂರು ಜನ ಸೇರಿ ಆಡಿದ ನಾಟಕ  ಪೊಲೀಸ್ ತನಿಖೆಯಿಂದ (Police Investigation) ಬಹಿರಂಗವಾಗಿದೆ.


ಸೆಪ್ಟೆಂಬರ್ 17ರಂದು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಬರ್ಬರ ಹತ್ಯೆಯಾಗಿತ್ತು. 57 ವರ್ಷದ ಸುಧೀರ್ ಕಾಂಬಳೆ ಕತ್ತು, ಹೊಟ್ಟೆ, ಕೈ, ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಇರಿದು ಹತ್ಯೆಗೈಯ್ಯಲಾಗಿತ್ತು.


ಕೊಲೆಯಾಗಿದ್ದ ಗೊತ್ತಿಲ್ಲ ಅಂದಿದ್ರು


ಬೆಳಗಾವಿಯ ಕ್ಯಾಂಪ್ ಪ್ರದೇಶದ ಮದ್ರಾಸ್ ಸ್ಟ್ರೀಟ್‌ನಲ್ಲಿರುವ ಮನೆಯ ಮೇಲ್ಮಹಡಿಯ ಕೋಣೆಯಲ್ಲಿ ಸುಧೀರ್ ಕಾಂಬಳೆ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು. ಸ್ಥಳಕ್ಕೆ ಕ್ಯಾಂಪ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಕುಟುಂಬಸ್ಥರನ್ನು ವಿಚಾರಿಸಿದಾಗ ತಾವು ಕೆಳಮಹಡಿಯಲ್ಲಿ ಮಲಗಿದ್ದಾಗಿ ಪತ್ನಿ ಇಬ್ಬರು ಮಕ್ಕಳು ಹೇಳಿದ್ದರು.


Three arrested in belagavi man murder case csb mrq
ಕೊಲೆಯಾದ ಸುಧೀರ್ ಕಾಂಬಳೆ


ಲಿಂಕ್ ಶೇರ್ ಮಾಡಿ ದೃಶ್ಯ ಸಿನಿಮಾ ವೀಕ್ಷಣೆ


ಕೊಲೆಯಾದ ಸುಧೀರ್ ಪತ್ನಿ ರೋಹಿಣಿ ಕಾಂಬಳೆ, ಪುತ್ರಿ ಸ್ನೇಹಾ ಕಾಂಬಳೆ, ಪುತ್ರಿಯ ಪ್ರಿಯಕರ ಅಕ್ಷಯ್‌ನನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸುತ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಕೊಲೆಗೂ ಮುನ್ನ ಮೊಬೈಲ್‌ನಲ್ಲಿ ಲಿಂಕ್ ಶೇರ್ ಮಾಡಿ ಮೂವರು ದೃಶ್ಯ ಸಿನಿಮಾ ನೋಡಿರುತ್ತಾರೆ. ದೃಶ್ಯ ಸಿನಿಮಾ ಮಾದರಿಯಲ್ಲಿ ಸಾಕ್ಷ್ಯಗಳ ನಾಶಕ್ಕೆ ಯತ್ನಿಸಿರುತ್ತಾರೆ.


ಮಹಾರಾಷ್ಟ್ರದ ಪುಣೆಯಲ್ಲಿ ಹೋಟೆಲ್‌ವೊಂದರಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡ್ತಿದ್ದ ಆರೋಪಿ ಅಕ್ಯ್ಯ ವಿಠಕರ್‌ಗೆ ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡ್ತಿದ್ದ ಸುಧೀರ್ ಪುತ್ರಿ ಸ್ನೇಹಾ ಪರಿಚಯ ಆಗಿರುತ್ತೆ. ತನಗೆ ಮದುವೆಯಾಗಿ ಒಂದು ಮಗು ಇದ್ದರೂ ಸ್ನೇಹಾ ಜೊತೆ ಅಕ್ಷಯ್ ಲವ್ವಿಡವ್ವಿ ಶುರುವಿಟ್ಟುಕೊಂಡಿರುತ್ತಾನೆ.


Three arrested in belagavi man murder case csb mrq
ಸುಧೀರ್ ಪತ್ನಿ ರೋಹಿಣಿ ಕಾಂಬಳೆ


ಪತಿ, ಮಗಳಿಗೆ ಕಿರುಕುಳ ನೀಡ್ತಿದ್ದನಂತೆ!


ಕಳೆದ ಹಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡ್ತಿದ್ದ ಕೊಲೆಯಾದ ಸುಧೀರ್ ಕಾಂಬಳೆ ಕೋವಿಡ್ ಮೊದಲನೇ ಅಲೆ ವೇಳೆ ಮರಳಿ ತವರೂರಿಗೆ ಬಂದು ನೆಲೆಸಿರುತ್ತಾರೆ. ಬಳಿಕ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಸೇರಿ ಇತರೆ ಕೆಲಸ ಮಾಡ್ತಿದ್ದ ಸುಧೀರ್ ಕಳೆದ ಎರಡು ವರ್ಷಗಳಿಂದ ಪತ್ನಿ, ಪುತ್ರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ.


ಇದನ್ನೂ ಓದಿ: Snake Dance Video: ಹಾವು ಹಿಡಿಯಲು ಬಂದವರ ಮುಂದೆ ಮಹಿಳೆಯರ ನಾಗನೃತ್ಯ! ಇದು ದೇವಿ ಪವಾಡ ಎಂದ ಜನ!


ಪ್ರಿಯಕರನ ಜೊತೆಗೂಡಿ ಕೊಲೆಗೆ ಸ್ಕೆಚ್


ಯಾವುದೇ ಕೆಲಸ ಮಾಡಬೇಕಿದ್ದರೂ ಅಡ್ಡಿ ಬರುತ್ತಿದ್ದ ಎಂದು ಕೊಲೆಗೆ ಸ್ಕೆಚ್ ಹಾಕಿದ್ವಿ ಎಂದು ಕೊಲೆಯಾದ ಸುಧೀರ್ ಪತ್ನಿ ರೋಹಿಣಿ, ಪುತ್ರಿ ಸ್ನೇಹಾ ಹೇಳಿದ್ದಾರೆ. ಕೊಲೆ ಮಾಡಿದ ಬಳಿಕ ಯಾವುದೇ ಸಾಕ್ಷ್ಯ ಸಿಗಬಾರದೆಂದು ಪ್ಲ್ಯಾನ್ ಮಾಡಿದ್ದ ಮೂವರು ಪುಣೆಯಲ್ಲೇ ಪ್ರಿಯಕರನ ಜೊತೆಗೂಡಿ ತಂದೆಯ ಹತ್ಯೆಗೆ ಸ್ಕೆಚ್ ಹಾಕಿರುತ್ತಾಳೆ.


Three arrested in belagavi man murder case csb mrq
ಸುಧೀರ್ ಪುತ್ರಿ ಸ್ನೇಹಾ


ಸೆಪ್ಟೆಂಬರ್ 17ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆ ಬಳಿ ಬಂದಿದ್ದ ಅಕ್ಷಯ್‌ನ್ನು ಹಿಂಬದಿ ಬಾಗಿಲು ಓಪನ್ ಮಾಡಿ ಮನೆಯೊಳಗೆ ಕರೆಸಿಕೊಂಡಿರುತ್ತಾಳೆ ರೋಹಿಣಿ‌. ಬಳಿಕ ಮನೆಗೆ ನುಗ್ಗಿ ಮೇಲ್ಮಹಡಿಗೆ ತೆರಳಿ ಸುಧೀರ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗ ಸುಧೀರ್ ತೀವ್ರ ಪ್ರತಿರೋಧವೊಡ್ಡಿರುತ್ತಾನೆ.


ಹಂತಕನ ಬೆರಳು ಕಟ್


ಈ ವೇಳೆ ಹಂತಕ ಅಕ್ಷಯ್‌ನ ಕೈ ಬೆರಳುಗಳು ಕಟ್ ಆಗಿ ಗಾಯವಾಗುತ್ತೆ‌‌. ಆದರೂ ಬಿಡದೇ ಅದೇ ಚಾಕುವಿನಿಂದ ಹೊಟ್ಟೆ, ಕತ್ತು ಭಾಗಕ್ಕೆ ಇರಿದು ಸುಧೀರ್ ಹತ್ಯೆ ಮಾಡಿರುತ್ತಾನೆ. ಸುಧೀರ್ ಹತ್ಯಗೈದು ಲಾಡ್ಜ್‌ಗೆ ಮರಳಿ ಚೆಕ್‌ಔಟ್ ಮಾಡಿ ಪುಣೆಗೆ ತೆರಳಿ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾನೆ.


ಇದನ್ನೂ ಓದಿ:  Hubballi: ಗಂಡನ ಕೊಲೆ, ಹೆಂಡತಿಯ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು; ಪ್ರೇಮಿಗಳ ದುರಂತ ಅಂತ್ಯ


ಮಗಳಿಗೆ ಅಮ್ಮನ ಸಾಥ್


ಈ ವೇಳೆ ಬೆರಳುಗಳಿಗೆ ಗಂಭೀರ ಗಾಯವಾಗಿದ್ದು ಶಸ್ತ್ರಚಿಕಿತ್ಸೆ ಮಾಡಬೇಕೆಂದಾಗ ಪುಣೆಯ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗ್ತಾನೆ. ತಂದೆ ಸುಧೀರ್ ಕೊಲೆಯಾಗಿದ್ದು ಕನ್ಫರ್ಮ್ ಆಗುತ್ತಿದ್ದಂತೆ ಪುಣೆಯಿಂದ ಬೆಳಗಾವಿಗೆ ಬಂದಿದ್ದ ಪುತ್ರಿ ಸ್ನೇಹಾ ಬಳಿಕ ಏನೂ ಗೊತ್ತೆ ಇಲ್ಲದ ರೀತಿ ತಾಯಿ ಜೊತೆ ನಾಟಕವಾಡಿರುತ್ತಾರೆ.


Three arrested in belagavi man murder case csb mrq
ಸ್ನೇಹಾ ಗೆಳೆಯ ಅಕ್ಷಯ್


ತನಿಖೆಯಲ್ಲಿ ಕೊಲೆಯ ರಹಸ್ಯ ಬಯಲು


ಆದ್ರೆ ಈ ವಿಷಯ ಸುಧೀರ್‌ನ ಮತ್ತೋರ್ವ ಪುತ್ರಿ, ಪುತ್ರನಿಗೆ ಗೊತ್ತೇ ಇರಲ್ಲ. ಯಾರೋ ಹಿಂಬದಿ ಬಾಗಿಲಿನಿಂದ ನುಗ್ಗಿ ಗಂಡನ ಕೊಲೆ ಮಾಡಿದ್ದಾಗಿ ನಾಟಕವಾಡುತ್ತಿದ್ದ ತಾಯಿ ಮಗಳು, ಮಗಳ ಪ್ರಿಯಕರನ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು ಕೊಲೆ ರಹಸ್ಯ ಬಯಲಾಗಿದೆ.

Published by:Mahmadrafik K
First published: